Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಯಾರು? ಶಾಶ್ವತ

* ಯಾರು? ಶಾಶ್ವತ *

ಅರಮನೆ ಕಟ್ಟಿ ಅರಸ ಆರಾಮಗಿಲ್ಲ
ಜಗದ ಯಾವ ಜಾಗದಲೂ.
ಅದಕ್ಕೆ ನಾವು ನೀವು ಇಡಲಿಲ್ಲ ಸಿಂಬೆ
ಇಂದು ನೋಡುವವರಿಗೆ ಬೊಂಬೆ.

ಸಾಧು ಪ್ರಾಣಿಗೆ ಪ್ರಾಣ ಹೆಚ್ಚು ದಿನ ಇರಲ್ಲ
ಸದ್ಯದ ಪ್ರಕಾರ ಅಲ್ಲ
ಜೀವಿಗಳ ಹುಟ್ಟಿನಿಂದ
ಬಲಿತವರ ಬಡಿಯಲ್ಲ ಸಿಟ್ಟಿನಿಂದ.

ಬ್ರಹ್ಮ ಬರೆದ ಮೊಲೆಹಾಲು ಹಸುಳೆಗೆ
ಅರಿಯದ ಕಂದನ ಬಾಯಿ ಎದೆಗೆ
ರಕ್ತವನ್ನೆಲ್ಲ ಹಾಲಾಗಿಸಿ ತುಟಿಗಿಟ್ಟು
ಆಕಾರವಾಗಿಸುವಳು ತಾಯಿ.

ಹುಟ್ಟಿದವರೆಲ್ಲ ಉಳಿಯಲ್ಲ ಭೂಮಿಗೆ
ಅರಸ, ಸಾಧು, ಮಗು ಎಲ್ಲರೂ
ಕೊಟ್ಟಳೆಲ್ಲ ತಾಯಿ ಕೋರಿಕೆ
ಕೊಟ್ಟವರಷ್ಟೇ ಉಳಿವರು ಉತ್ತರಕ್ಕೆ.......

-ಈಶ, ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

30 Nov 2014, 05:14 am

ಕವಿತೆ

ಹಸಿ ಹಸಿ ಮನಸುಗಳ
ಬಿಸಿ ಬಿಸಿ ಬಯಕೆಗಳ
ಮೊಗ್ಗು ಹೂವುಗಳ
ಬೆಳಗು ಬೈಗುಗಳ
ತವಕ ತಲ್ಲಣಗಳ
ಪದಪದರ ಕವಿತೆ
ಹೃದಯಾಂತರಾಳದ ಭಾವಗೀತೆ.
ಮೌನೇಶ್ .ಬಿ .ಶಿಕ್ಷಕರು .ಗದ್ದಿಕೇರಿ.

- Arun Kumar B

30 Nov 2014, 03:41 am

ದಿವ್ಯಜ್ಯೋತಿ

ನಂಬಿದ ಪ್ರೀತಿ...ಮೋಹದ ಹಾಸಿಗೆಯಲ್ಲಿ
ಹೊರಳೆದ್ದು ಬಂದಾಗ..
ಎನೂ ಆಗಿಯೇ ಇಲ್ಲವೆಂಬಂತೆ
ಸುಮ್ಮನೆ ಬೆಳಗಿ....
ಅಣಕಿಸಿದಂತಾಯಿತು...
ಮಮತೆಯ ದಿವ್ಯಜ್ಯೋತಿ....

- ನಿಮ್ಮಿ

29 Nov 2014, 04:45 pm

ನೀ.....

ನೀ......ಇಲ್ಲವೆಂದು ನಾ ಅತ್ತಿಲ್ಲ
ನೀ.....ಬರಲ್ಲಿಲವೆಂದು ನಾ ಕೊರಗಲಿಲ್ಲ
ನಿನ್ನ ಮಾತಿಲ್ಲದೆ ನಾ ಮೂಕಿಯಾಗಿಲ್ಲ
ನಿನ್ನೊಲುಮೆಯಿಲ್ಲದೆ ನಾ ಕರಗಲಿಲ
ನಿನ್ನ ಸ್ನೇಹವಿಲ್ಲದೆ....ನಾ ಬದುಕಿಲ್ಲ..ನಾ ಸತ್ತಿಲ್ಲ...


- ನಿಮ್ಮಿ

29 Nov 2014, 04:36 pm

ಕರುನಾಡು

ಕರುಣಾಳುಗಳ ಬೀಡು ನಮ್ಮ ಕನ್ನಡನಾಡು
ಶಾಂತಿ ಸೌಹಾರ್ದತೆಯು ತುಂಬಿತುಳುಕಿದೆ ನೋಡು
ಚೆಲುವು - ಒಲವುಗಳ ದಿವ್ಯ ಸಮ್ಮಿಲನ
ಜನುಮ ಜನುಮವೂ ಸಿಗಲಿ ನನಗಿಲ್ಲಿ ಜನನ

- ವಿಜಯ್ ಹೆರಗು

28 Nov 2014, 05:59 pm

ಗುಂಡಾಯಣ

ಬೆಳಿಗ್ಗೆ , ಮಧ್ಯಾಹ್ನ, ರಾತ್ರಿ
ಅವನು ಕುಡಿಯೋದಂತೂ ಖಾತ್ರಿ
ದಿನವೆಲ್ಲಾ ಕುಡಿದು ಆಗುತ್ತಾನೆ ಟೈಟು
ಗುಂಡ್ ಮಾರ್ನಿಂಗು , ಗುಂಡ್ ಆಫ್ಟರ್ ನೂನು , ಗುಂಡ್ ನೈಟು :-)

- ವಿಜಯ್ ಹೆರಗು

26 Nov 2014, 09:55 am

ನೋಟ

ನಿನ್ನ ನಯನ
ನನ್ನನ್ನೇ ನೋಡುತಿವೆ
ಮೆಳ್ಳಗಣ್ಣೇನು ??

- ವಿಜಯ್ ಹೆರಗು

25 Nov 2014, 10:32 am

ಮುತ್ತು

ಕಡಲಾಳದ
ಮುತ್ತಿಗಿಂಥ ಅದ್ಭುತ
ನೀ ಕೊಟ್ಟ ಮುತ್ತು

- ವಿಜಯ್ ಹೆರಗು

25 Nov 2014, 10:28 am

ಜೀವನ

ಬಲ್ರು ವಿಚಿತ ಈ ಜೀವನದ ಗುಟ್ಟು..
ಉಸಿರಿನಿಂದ ಆರಂಭ ಈ ಹುಟ್ಟು ..
ಉಸಿರು ನಿಂತಾಗ ಹೊರಡುವರು..
ಈ ಲೋಕವ ಬಿಟ್ಟು!

- Mohammad Hassan

23 Nov 2014, 08:47 am

ಪ್ರಾಣರ್ಪಣೆ

ದುಂಬಿಗಾಗಿ ಹೂವು
ಭೂಮಿಗಾಗಿ ಸೂರ್ಯ
ಪ್ರಾಣಿಗಳಿಗಾಗಿಯೇ ಕಾಡು
ಹೆತ್ತವರಿಗಾಗಿ ಈ ಪ್ರಾಣ
ಮಣ್ಣಿಗಾಗಿ ಈ ದೇಹ
ಗೆಳತಿ ನಿನಗಾಗಿ ಈ ಪುಟ್ಟ ಹೃದಯ

@ಮನುಕವಿ@

- manu

23 Nov 2014, 07:18 am