ಅವ್ವ ...........
ಅವ್ವ ನೀ ಚಿಂದಿ ಬಟ್ಟೆ ಉಟ್ಟು
ನನಗೆ ಹೊಸ ಅಂಗಿಯ ತೊಡಿಸಿದೆ
ಅವ್ವ ನೀ ತಂಗಳನ್ನ ತಿಂದ್ದು
ನನಗೆ ಬಿಸಿ ಅನ್ನವ ಉಣಿಸಿದೆ
ಅವ್ವ ನೀ ಓದು ಬರಹ ಬಾರದ ದಡ್ಡಿಯಾಗೆ
ನನಗೆ ಓದು ಬರಹ ಕಲಿಸಿದೆ
ಗೋವಿನ ಮುಗ್ದತೆ ನಿನ್ನ ಮುಖದಲ್ಲಿ
ಜಗನ್ಮಾತೆಯ ಕರುಣೆ ನಿನ್ನ ಕಂಗಳಲಿ
ನನ್ನ ಪಾಲಿನ ದೇವರು ನೀ
ನನ್ನ ಪಾಲಿನ ಆದರ್ಶ ಮೂರ್ತಿ ನೀ ಅವ್ವ .............
ಬಾವನೆಗಳ ಸಂಗಮಕ್ಕೆ ಅತೊರಿಯುತ್ತಿದೆ ನನ್ನ ಮನಸ್ಸು
ಇನ್ನು ಕರುಣೆ ಬಾರದೆ ? ಏಕೆ ಇಂಥ ಮುನಿಸು
ಕಮರಿಯೋದ ಕನಸೊಂದು ಮತ್ತೆ ಚಿಗುರುತ್ಹಿದೆ ನಿನ್ನ ಒಲುಮಿಯಿಂದ
ಬಾವಸಂಗಮದ ಚಿಲುಮೆ ಮತ್ತೆ ನಿನ್ನಿಂದ
ಸಪ್ನ ಸುಂದರಿಯ ಕನಸು ನನಸಾಗಲಿ ಇಂದು ನಿನ್ನಿಂದ ..........
:-ಸಂತೋಷ್