Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೆನಪು

ಹಾಡ ಬಯಸಿದೆ ಹೃದಯದ ಹಾಡೊಂದನ
ಬರೆಯ ಬಯಸಿದೆ ಬಾಲ್ಹ ಭಾವವೊಂದನ
ಬಿಡಿಸ ಬಯಸಿದೆ ಬದುಕಿನ ಚಿತ್ರವೊಂದನ
ನೆನೆಯ ಬಯಸಿದೆ ನಿನ್ನ ನೆನಪೊಂದನ

- ರಮೇಶ್ ತೀರ್ಥ

12 Nov 2014, 10:10 am

ಒಡೆದ ಮನಸ್ಸಿನ ಮಾತು.......

ನಾ ಕೊಟ್ಟ ಪ್ರೇಮ ಪತ್ರದಿಂದ ಅವಳು ,ದೋಣಿ ಮಾಡಿ ಆಡುತ್ತಿರುವಳು
ನೀರಿನಲ್ಲಲ್ಲ......
ನನ್ನ ಕನ್ನೀರಿನಲ್ಲಿ..........


《 ಮಂಜುನಾಥ ರವಿ ಭೋವಿ》

- ಕನಸು ಮಂಜು....

11 Nov 2014, 05:29 pm

ಅನುಪಾತ

ಸೌರವ್ಯೂಹದಲ್ಲೂ
ಹೆಣ್ಣುಗಳಿಬ್ಬರೇ...
ದೂರದಲ್ಲಿರುವಳು ಮಂಗಳೆ.
ಉಳಿದಂತೆ ಇನ್ನೊಬ್ಬಳು
ನಮ್ಮ ಇಳೆ.

- ಶ್ರೀಗೋ.

11 Nov 2014, 04:59 pm

ಒಡೆದ ಮನಸ್ಸುಗಳ ಮಾತು.......

ಅವಳು ಕಂಡಳು ಕನಸಿನಲ್ಲಿ....
ಪುಳಕವಾಯಿತು ಮನಸಿನಲ್ಲಿ..
ನೋಡಿ ನಕ್ಕಳು ಕ್ಲಾಸಿನಲ್ಲಿ...
ಕೊನೆಗೆ ಬಿಟ್ಟು ಹೋದಳು ಬಾರಿನಲ್ಲಿ.......


《 ಮಂಜುನಾಥ ರವಿ ಭೋವಿ》

- ಕನಸು ಮಂಜು....

11 Nov 2014, 09:23 am

ಹನಿಗವನ


ನನ್ನಜ್ಜನಿಗೆ ಪ್ರತಿ
ರಾತ್ರಿಯಿಡೀ ಕೆಮ್ಮು
ಎಷ್ಟು ಹೇಳಿದರೂ ಕೇಳಲಾರನು
ಹೊಡೆಯಬೇಡವೆಂದರೂ ಧಮ್ಮು
...........................................................................................................
ಸಾಹಿತ್ಯ ಸಮ್ಮೇಳನದಲ್ಲಿ
ಕೊಡ್ತಾರಂತೆ ಭಾರಿ ಭೋಜನ
ಮೊದಲ ದಿನವೇ ಸೇರಿದ್ದಾರೆ
ಭಾರೀ ಜನ!!!

- ವಿನಯ್

10 Nov 2014, 05:28 pm

ಪ್ಲೀಸ್ ಸ್ವಲ್ಪ ಓದಿ...

ನನಗೂ
ಕವಿಯಾಗುವ
ಆಸೆಯಿಂದ
ಕುಂತು ನಿಂತು ಮಲಗಿ
ಆತರ ಈತರ ಎಲ್ಲಾತರ
ಯೋಚಿಸಿ ಚಿಂತಿಸಿ ವಿಶ್ಲೇಷಿಸಿ
ಬರೆದೆ ಒಂದು ಕವನ
" ಕ ತೆಗೆದರೆ ವನ
ವ ತೆಗೆದರೆ ಕನ
ನ ತೆಗೆದರೆ ಕವ "
ಇದುವೆ ನಾನು ಬರೆದ ಕವನ
ನನ್ನ ಮೊದಲ ಕವನ
ಇಷ್ಟವಾದರೆ ಇಷ್ಟಪಡಿ
ಕಷ್ಟವಾದರೆ ಬಿಟ್ಟುಬಿಡಿ

- ಚೇತನ್ ಬಿ ಸಿ

05 Nov 2014, 03:55 pm

ಮಳೆ ಜಿನುಗು

ಮಳೆ ಜಿನುಗೆ,
ತೊಟ್ಟಿಕ್ಕಿ ತೊಟ್ಟಿಕ್ಕಿ
ತಟ್ಟಿ ತಟ್ಟಿ ನನ್ನ ನೆನಪ
ಮೇಲೆಬ್ಬಿಸಿದೆಯಾ ?

ಕಲ್ಲು ಕಟ್ಟಿ
ಮನದ ಪಾಳು ಬಾವಿಯಲಿ
ಮುಳುಗಿಸಿದ
ಮುಳ್ಳು ಹೂಗಿಡಳ
ಅರಳಿಸಿದೆಯಾ ?

ಬೇಡವೆಂದು ಬಿಸುಟ
ಬಳ್ಳಿಯ ಬೇರಿಗೆ
ನೀರಾಗಿ
ಬೇಗುದಿಯ ಕೊನರು
ನೀ ಬರಿಸಿದೆಯಾ ?

ಜಿನುಗದಿರು ಮಳೆಯೆ,
ಜೇನು ಹುಟ್ಟು
ಘಾತಗೊಂಡಂತೆ
ಕೈ-ನಾಲಿಗೆಯೊಡ್ಡಿ
ರುಚಿ ನೋಡುವ ತವಕವಿಲ್ಲದ
ಈ ಭೂಮಿಗೆ !

- ಶ್ರೀಗೋ.

01 Nov 2014, 08:10 am

ಕಣ್ಣುಮುಚ್ಚಿ....

ಅವಳ ಓರೆ ನೋಟದ ಕತ್ತಿಗೆ
ಕುತ್ತಿಗೆ ಕೊಟ್ಟವನು ನಾನೇ...!
ಅವಳ ತುಸು ನಸು ನಗೆಗೆ
ಹೃದಯ ಕೊಟ್ಟವನು ನಾನೇ...!
ಅವಳ ಮುದ್ದು ಪೆದ್ದು ಮಾತಿಗೆ
ಜೀವನವ ಮಾರಿಕೊಂಡವನು ನಾನೇ...!
ಅವಳು ಕನಸಿನಲ್ಲಿ ಬರುವೆನೆಂದುದನ್ನು ನಂಬಿ
ಕಣ್ಣುಗಳ ಮುಚ್ಚಿ ಮಲಗಿರುವವನು ನಾನೇ...!

- ಚೇತನ್ ಬಿ ಸಿ

31 Oct 2014, 03:33 pm

ಸವಿನೆನಪು

ನಿನ್ನದೊಂದು ನೋಟ ಸಾಕೆನಗೆ....
ನಿನ್ನದೊಂದು ನಗು ಸಾಕೆನಗೆ....
ನಿನ್ನದೊಂದು ಮಾತು ಸಾಕೆನಗೆ....
ನಿನ್ನದೊಂದು ಸ್ಪಶ೯ ಸಾಕೆನಗೆ....
ನಿನ್ನದೊಂದು ಮುತ್ತು ಸಾಕೆನಗೆ...
ಉಸಿರಾಡಲು ದೇಹ....
ಮಿಡಿಯಲು ಹೃದಯ....
ನೀನಿಲ್ಲದೆ ಈ ಜನುಮವ ಕಳೆಯಲು
ನಿನ್ನದೊಂದು ಸವಿನೆನಪು ಸಾಕೆನಗೆ.....

- ಚೇತನ್ ಬಿ ಸಿ

31 Oct 2014, 03:40 am

ನೀವೆಂತಾ ಅದೃಷ್ಟವಂತರು

ನನ್ನ ಕವನದ ಹಾವಳಿ ನಿಮ್ಮ ಕಿವಿಗಳಿಗಿಲ್ಲ
ನಾ ಬರೆದ ಕವನಗಳ ಯಾರೂ ಹಾಡುವುದಿಲ್ಲ
ಕರ್ಣ ಕಠೊರವಾಗಿ ಉಚ್ಚರಿಸುವುದಿಲ್ಲ
ಗೊಣಗುವಂತೆ ಯಾರೂ ಗುನುಗುಟ್ಟುವುದಿಲ್ಲ
ಏಕೆಂದರೆ ಮನಕ್ಕೆ ನಾಟುವಂತೆ ನಾ ಬರೆಯುವುದಿಲ್ಲ

ಒಮ್ಮೆ ಓದಿದರೆ ಮತ್ತೊಮ್ಮೆ ಕಣ್ಣು ಹಾಯಿಸುವ
ತವಕ ತರುವುದಿಲ್ಲ
ಮಗದೊಮ್ಮೆ ಓದುವ ಸಂಕಷ್ಟ ನಿಮಗಿಲ್ಲ
ಮರೆತು ಹೋಯಿತೆಂಬ ನೋವ ನಾ ಕೊಡುವುದಿಲ್ಲ
ಏಕೆಂದರೆ ನೆನಪಲ್ಲುಳಿವ ಕವನ ನಾ ಬರೆಯುವುದೇ ಇಲ್ಲ

ಬದುಕಿನ ನೂರು ನೋವ ಅರುಹಿ ತಲ್ಲಣಗೊಳಿಸುವುದಿಲ್ಲ
ಪ್ರೇಮ ಪುರಾಣ ಕೊರೆದು ನಿಮ್ಮ ತಲೆ ತಿನ್ನುವುದಿಲ್ಲ
ಸುಖದ ಸುಪ್ಪತ್ತಿಗೆಯ ಸವಿಗನಸ ಬಿತ್ತುವುದಿಲ್ಲ
ಕಾಮ ಕ್ರೋಧದ ಗಂದ ಗಾಳಿಯ ಕವನಗಳಿಲ್ಲ
ಏಕೆಂದರೆ ನನಗಾವ ಭಾವನೆಗಳೂ ಇಲ್ಲ.

- ಶ್ರೀಗೋ.

27 Oct 2014, 01:06 pm