Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಅಪರೂಪಕ್ಕೊಮ್ಮೆ
ನೀ ಮುಡಿವ ಮಲ್ಲಿಗೆಯರಳು
ಮನದಿ ನಿಂತು ಮುದವೀಯಲು ,
ನನಗೆ ಅಮಲೋ ಅಮಲು.
ಮಲ್ಲಿಗೆ ಸರದ
ತುದಿಯ ತುಂಟ ಹೂವೊಂದು
ಎಡೆಬಿಡದೆ ನಿನ್ನ ಕೆನ್ನೆ ಚುಂಬಿಸುವಾಗ
ಹೂವಿಗೇ ಖಟ್ಲೆ ಹಾಕುವ ಹುನ್ನಾರ ನನಗೆ.
ಈ ಹುನ್ನಾರವರಿತ ಎಲ್ಲ ಹೂಗಳು
ಒಟ್ಟಾಗಿ...
ಘೋಷಣೆ ಕೂಗಿ....
ಇದು ತಮ್ಮ ಆಜನ್ಮಸಿದ್ಧ ಹಕ್ಕೆಂದು
ಪ್ರತಿಭಟಿಸಲು,
ನಾನು ಐಲುಪೈಲು.
ಸರಿ, ಸಂಧಾನದ ಮಾತಿಗೆ
ದಿನ ಗೊತ್ತಾಗಿ,
ಒಟ್ಟಾಗಿ ಸೇರಿರಲು,
ಹೂಗಳೆ ತಮ್ಮ ತೀರ್ಮಾನ
ನನ್ನ ಮೇಲೆ ಹೇರುವುದೇ.....!?
ತೀರ್ಮಾನ ಇಂತಿತ್ತು -
ನಿನ್ನವಳು ಮಲ್ಲಿಗೆ ಮುಡಿದಂದು
ನೀನವಳನ್ನ ನೋಡೋದು ನಿಷಿದ್ಧ .
ತೀರ್ಮಾನ ಪಾಲಿಸ್ದೇ ಇದ್ರೆ
ಇರು ಎಲ್ಲದಕೂ ಸಿದ್ಧ .
ಮಲ್ಲಿಗೆ ಸಾವಾಸ ಅಲ್ಲ ಮಾರಾಯ್ರೆ...
ಮಲ್ಲಿಗೆ ಮಾತಂದ್ರೆ ಮಾತು,
ಮೈಮೇಲೇ ಬರ್ತವೆ.....!!!!
ಅಂದಿನಿಂದ ಮಾರ್ಕೆಟಲ್ಲಿ ಮಲ್ಲಿಗೆ ಕಂಡ್ರೆ
ವಾರೆಗಣ್ಣಲ್ಲಿ ನೋಡತಾ, ಸೈಲೆಂಟಾಗಿ ಸೈಡಿಗ್ಹೋಗಿಬಿಡ್ತೀನಿ....
ಹೆಣ್ತಿ ಹೂ ತಂದಿಲ್ಲ ಅಂತ ಬೈದ್ರೂ ಪರ್ವಾಗಿಲ್ಲ .
- ಡಾ. ರವೀಂದ್ರ ಅಂಗಡಿ
05 Feb 2015, 05:04 am
ಮನಸ್ಸೆಂಬ ಗೂಡಿನಲಿ
ಬಚ್ಚಿಟ್ಟ ಸ್ನೇಹ
ಪಂಜರದೊಳು ಕೂಡಿಟ್ಟ
ಪಕ್ಷಿಯ ಹಾಗೆ
ಮನಸ್ಸೆಂಬ ಗೂಡಿನಲಿ
ಬಚ್ಚಿಟ್ಟ ಸ್ನೇಹ
ನೀರ ಹೊರಬಂದ ಮೀನಿನ
ಹಾಗೆ
ಎಂ.ಐ.ಕೆ
- ishak
05 Feb 2015, 03:30 am
ನೀನು ಹೇಳಬೇಕಾದದ್ದನ್ನು
ನಾನು ಕೇಳಬೇಕಾದದ್ದನ್ನು
ಹೇಳಿ ಮುಜುಗರ ಪಡಿಸದಿದ್ದಕ್ಕೆ,
ಹೇಳುವ ಮಾತುಗಳಿಗಿಂತ
ಹೇಳದ ಮೌನದ
ಮೊರೆ ಹೋಗಿದ್ದಕ್ಕೆ
ಧನ್ಯವಾದಗಳು ......
- Kiran Kumar R
04 Feb 2015, 08:54 pm
ಮಕ್ಕಳಿಗೆ ಪ್ರೀತಿಯ ಕೊಡಿ
ಇಲ್ಲದಿದ್ದರೆ........................
......................................
......................................
ಮಕ್ಕಳಿಲ್ಲದವರಿಗೆ ಕೊಡಿ
ಎಂ.ಐ.ಕೆ
- ishak
04 Feb 2015, 11:14 am
ಒಲವೇಂಬ ನವಿಲುಗರಿಯನು
ನಿನ್ನ ಮುಡಿಗೆ ಮುಡಿಸುವೆ,
ಆಸೇ ಎಂಬ ಕಡಲ ಆರಭಟಕೆ
ತಡೆಗೊಡೆಯು ನಿನ್ನ ಮುದ್ದು ಪ್ರೀತಿಯೇ....
ನನ್ನ ಮನದ ಕಷ್ಟದ ಕತ್ತಲೆಗೆ
ನೀ ಬೆಳಕಾಗಿ ಭಾ,
ನಿನ್ನ ಬೇಳಕಿನೊಂದಿಗೆ ನಾ
ನನ್ನಿ ಬಾಳದಿನಗಳನು ದೂಡುವೆ....
D.S.D
- Dharmu.s.m
04 Feb 2015, 10:04 am
ಕತ್ತಲೆಯ ಕೊಣೆಗೆ ಬೆಳದಿಂಗಳು ಬಿದ್ದಾಂಗ
ನನ್ನ ಮನದ ಕಡುಕತ್ತಲೆ ನಿನ್ನಿಂದ ದೂರಾಯಿತು ಗೆಳತಿ...,
ಬಿರುಬಿಸಿಲ ವೇಳೆಯಲಿ ಅರವಟಿಗೆ ಕಂಡಂಗ
ನಿನ್ನ ನಗು ನನ್ನ ಸೊಕಿದೆ ಒಡತಿ.....
ಹಸಿವಾದರೆನು ನಿರಡಿಕೆಯಾದರೆನು
ಬತ್ತದಾ ಬುಗ್ಗೆಯ ನಗೆಯಶಲೆ ನಿನ್ನಲ್ಲಿದೆ..,
ಹಗಲು ಉರಿಳಿದರೆನು ಚಂದ್ರಮೂಡಿದರೆನು
ನಿನ್ನಾಗಮನಕೆ ನಾ ಕಾಯುವೆ ಒಲವೇ....
- Dharmu.s.m
04 Feb 2015, 09:16 am
ಧರ್ಮ ಧರ್ಮವೆಂದು ಹೊಡೆದಾಡಿದೆವು
ಧರ್ಮದ ಮರ್ಮವ ತಿಳಿಯದೆ ಹೋದೆವು
ಧರ್ಮ ಧರ್ಮವೆಂದು ಹೋರಾಡಿದೆವು
ಧರ್ಮದ ತತ್ವವ ಅನುಸರಿಸದೆ ಹೋದೆವು
ಧರ್ಮದ ನಾಮದಿ ನಾವೇ ತುರುಕಿದ ಸಿದ್ಧಾಂತದಿ
ಯಾರನ್ನೋ ಕೊಂದೆವು
ನೈಜ ಧರ್ಮದಿ ತತ್ವವು ಇಂದು
ಬರೀ ಗ್ರಂಥದಿ ಹುದುಗಿಹೋಗಿದೆ
ಹೆಸರ ದುರ್ಬಳಕೆಯ
ನೋಡಿ ಮೌನದಿ ರೋಧಿಸತೊಡಗಿದೆ
ಎಂ.ಐ.ಕೆ
- ishak
04 Feb 2015, 06:20 am
ಜೀವನ ಒಂದು ಪರೀಕ್ಷೆ
ವಿಜಯದ ಹಾದಿ
ಒಂದೇ
ತಾಳ್ಮೆ
ತಾಳಿದವನು ಬಾಳಿಯಾನು
ಎಂ.ಐ.ಕೆ
- ishak
04 Feb 2015, 03:09 am
ಗುಬ್ಬಿ ಗೂಡು ಇಂಚರ ಅವು ನಿನ್ ಇದ್ದಾಗ ಸುಂದರ
ನರಕ ಇಂದು ಗೋಚರ ನನ್ನ ನೀ ಬಿಟ್ಟ್ ಹೋದ ನಂತರ....!
- Vinayprathap
03 Feb 2015, 01:10 pm
ಮನಸಲ್ಲಿ ನೆನಪಾಗಿ
ಹೃದಯದಲ್ಲಿ ಹಾಡಾಗಿ
ಕಣ್ಣಲ್ಲಿ ನೀರಾಗಿ
ಎಂದಿಗೂ ಇರುವೇ ನಿನು
ಎಂದೆಂದಿಗೂ ಇರುವೆ ನಿನು.......
- Vinayprathap
03 Feb 2015, 01:09 pm