Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀನಿರಲು ನನ್ನ ಸನಿಹ

ನೀನಿರಲು ನನ್ನ ಸನಿಹ
ಇನ್ಯಾರು ಬೇಡ ನಿನ್ನ ವಿನಹ
ಒಮ್ಮೆ ನನ್ನ ಸಮೀಪಿಸಿ ನೋಡು
ನನ್ನದೆಯ ತುಂಬಾ ನಿನ್ನದೆ ಹಾಡು.....

ನಿನ್ನದು ಕೊನೆಯಿರದ ಮೌನದ ಪ್ರಲಾಪ
ಎಂದಿಗೆ ತೋರುವೆ ನಿನ್ನ ಮಾತಿನ ಸಲ್ಲಾಪ
ನಿನ್ನ ಮಾತೆ ಆಗಲಿ ನನಗೆ ಕೊನೆಯಿರದ‌ ಆಲಾಪ
ತಿರುಗಿ ನೋಡು ಒಮ್ಮೆ ನನ್ನ ಮನಸಿನ ವಿಲಾಪ
ನೀನೆನೆ ನನ್ನ ಎಂದಿಗೂ ಮುಗಿಯದ‌ ಪ್ರೀತಿಯ ರೂಪ....

ನೀನೆದುರು ಬಂದರೆ ಏನೊ ಪುಳಕ‌
ಕನಸಿನೂರಲು ನಿನ್ನ ನೋಡಲು ನಿಲ್ಲದು ತವಕ
ನೀ ನನಗೆ ಕಾಣದಿದ್ದರೆ ನಾನಗುವೆ ಭಾವುಕ
ನಿನ್ನ ಜೊತೆಯಲಿ ಕಳೆಯುವ ಘಳಿಗೆಗಳೆ ನನಗೆ ರೋಚಕ
ಏತಕೆ‌‌ ನಾನೆಂದರೆ‌ ನಿನಗೆ ಇಂತ ಕುಹಕ‌
ನಿನ್ನ ನಗುವೆ ನನ್ನ‌ ಉಸಿರಾಟಕೆ ವಾಹಕ

ನಿನ್ನ ಒಲವಿನ ಹಾಡಿಗೆ ಆಗಲೇನು ವಾದಕ
ಒಪ್ಪಿ ಬಿಡಿಸು ನೀನಿರದ ನೋವು ನೀಡುವ ಬಾದಕ
ಬಂದರೆ ನೀನು ನಾನೆ ಆ ಖುಷಿಗೆ ಧನಿಕ
ನಾನು ನಿನ್ನ ಪ್ರೀತಿ‌ ಪೂಜಿಸೊ‌ ಆರಾಧಕ
ಇನ್ನ‌ೂ ನೋಡಬೇಡ ಒಪ್ಪಿ ಬರಲು ಜಾತಕ

- Shankru Badiger

03 Aug 2023, 10:38 pm

ಕಾರ್ಗತ್ತಲು ತುಂಬಿದ ಕನಸಿನಲ್ಲಿ ನೀ ಬಂದೆ ಬೆಳಕಾಗಿ.....
ಸುರಿವ ಮಂಜಿನಡಿಯಲ್ಲಿ ಕಂಡೆ ನಿನ್ನನ್ನು ರವಿಯ ಹೊಂಗಿರಣವಾಗಿ.....
ಕತ್ತಲೆ ತುಂಬಿದ ಕಾನನದಲ್ಲಿ ಕಂಡೆ ನಿನ್ನನ್ನು ಹೊಳೆವ ಮಲ್ಲಿಗೆಯಾಗಿ.....
ಹದಗೆಟ್ಟ ಹೃದಯವು ಹಿಡಿತವ ಸಾಧಿಸುತ್ತಿದೆ ನೀ ಇರಲು ಜೊತೆಯಾಗಿ....
ಓ ಕಣ್ಣಂಚಿನ ಚಿಲುಮೆಯೆ ಕಾಣಸಿಗು ಪ್ರತಿದಿನ ನನಗಾಗಿಯೆ....
-KP

- Prashanth KP

03 Aug 2023, 01:09 am

ಅಪ್ಪ

ಅಪ್ಪನೆಂದರೆ,,,,ವರ್ಣಿಸಲು ಪದಗಳೇ ಸಿಗದು......
ಆ ಪದಗಳ ಹುಡುಕಲು ಹೊರಟರೆ ಈ ಜನ್ಮ ಸಾಲದು ...!!!!!! ❤

M.... ✍️

- Megha

02 Aug 2023, 11:13 am

ಅರಿವು

ಸೋಲುತಿದೆ ಮನವು ಬೇಗುದಿಗೆ ಸಿಕ್ಕು ಏನೆಂಬುದು ಅರಿಯನು ನನ್ನೊಳಗೆ ಹೊಕ್ಕು,ಸಾಗುವ ಪಯಣ ಸಾಗುತಿದೆ ಬಂದನಕೆ ಸಿಕ್ಕು ಹರಿದು ತಿನ್ನುವ ಮನದ ಅರಿವಿಲ್ಲದ ಭಾವದ ಬಿಕ್ಕು ಬರದ ಛಾಯೆ ಮನದ ಮಾಯೆ ಅರಿವಿಗೆ ಅರಿವಾಗಲು ಬೇಗುದಿಗೆ ಸಿಲುಕಿ ಮನ ಕಲಕಿತು ಕಾಣದ ಹದ್ದಿನ ಹಕ್ಕಿ

- Kumaraswami Salimarh

02 Aug 2023, 07:46 am

ಹುಡುಗಿ

ಚೆಲುವೆಯ ನೋಟಕೆ ಬೆರಗಾದನು ಜಿಂಕೆಯ ಕಣ್ಣಿನ ಕಣ್ಣೋಟ ಮೀನಿನ ಹೆಜ್ಜೆಯ ಮೈಮಾಟ ಕಲ್ಪನೆಗೆ ಮಿಗಿಲಾರುವ ಸೌಂದರ್ಯದ ಗಣಿ ದೇವಲೋಕದ ಮುದ್ದಿನ ಅರಗಿಣಿ ನಿನಗೆ ಶರಣಾಗಿ ನಾ ಕಟ್ಟುವೆ ಕರಿಮಣಿ ನೀ ಅಲ್ಲವೆ ನನ್ನ ಮನದ ನಾರಿಮಣಿ. . . ..... .. ..

- Kumaraswami Salimarh

01 Aug 2023, 10:50 pm

ಬದುಕು


ಕಡಲಲೊಂದು ಸಾಗುತಿರುವ ದೋಣಿಯೊಂದು,
ದಡ ದಾಟುವ ಹಾಗೆ ಬದುಕಲಿ,
ವಿಚಿತ್ರ ಅಲೆಗಳು, ದುಮುಕುವ ಗಾಳಿಯು, ದಾಟಿಸುವ ನಾವಿಕ ನೀನೇ ಬದುಕಲ್ಲಿ,

ನೀಲಾಕಾಶ ತಾಗಿಕೊಂಡು, ಸದ್ದಿಲ್ಲದೆ
ಅಡಗಿಕೊಂಡ ಹಾಡಗು ಗಲು ಅದೆಷ್ಟೋ,
ಬದುಕು ಬಾಳಿ, ತಳುಪುವೆ ಕೊನೆ ಎಂಬ,
ಬರವಸೆಯ ಕಂಡ ಮನಸುಗಳು ಅದೆಷ್ಟೋ,

- Latheef Abdul

29 Jul 2023, 07:14 pm

ಮಾಧ್ಯಮ- ಅಂದು ಇಂದು



ಹಿಂದೆ ಇದ್ದ
ನಾರದನೊಬ್ಬ
ಘಟನೆಯ ಸಾಕ್ಷಿದಾರ.
ವಿಸ್ತಾರವೇನು?
ವರ್ಣನೆವೇನು?
ವಿಷಯ ಏನೇ ಇರಲಿ
ಒಪ್ಪಲೇ ಬೇಕು.
ಘಟನೆಯ ಸಾಕ್ಷಿದಾರ
ಆತನೊಬ್ಬನೇ....

ಇಂದು ಹಾಗಲ್ಲ...
ಒಂದು ಘಟನೆ
ಹಲವು ಬಾಯಿಗಳು.
ಸತ್ಯ ಎಷ್ಟು?
ಸುಳ್ಳು ಎಷ್ಟು?
ತಿಳಿಯದು ನಮಗೆ.
ಆದರು ಒಪ್ಪುತ್ತೇವೆ
ತಪ್ಪಾದ ವಿಷಯ ತಿದ್ದದೆ.

ಇದ್ದ ಹಾಗೆ ಇದ್ದರೆ
ಮತ್ತೊಬ್ಬನ ಪ್ರಶ್ನೆಯಾಕೆ?
ಮಾಧ್ಯಮಗಳು
ದರ್ಪಣವಾದರೆ,
ದುರ್ಬಲರಿಗೂ
ಬಲಬಂದಂತೆ.

- vamu gavada

28 Jul 2023, 02:58 pm

ನಂಬಿಕೆ

ಬೀಳುವ ಕಣ್ಣೀರು ಹನಿಯೊಂದು ಕೇಳುತ್ತೆ
ಯಾಕೆ
ಯಾವಾಗಲು ನನ್ನ ದೂರ ಮಾಡ್ತಿಯಾ ಅಂತ
ಕಣ್ಣು ಹೇಳುತ್ತೆ ನಾ ಎಷ್ಟೇ
ದೂರ ಮಾಡಿದರು ಮತ್ತೆ ಬರ್ತ್ತಿಯ ಅನ್ನೊ

- Nagaraj Gutti

26 Jul 2023, 06:38 pm

ಬದುಕು

ಬದುಕು ನೀರ ಮೇಲಿನ ಗುಳ್ಳೆ
ನಾನು ನೀನು ಎಲ್ಲರೂ ಬರಿ ಸುಳ್ಳೇ
ಎನಿಲ್ಲವಿದು ಬರಿ ಶೂನ್ಯ ಪೊಳ್ಳೆ
ಹೊಡೆದು ಹೋಗುವುದು ಎಲ್ಲ ಕೊಳ್ಳೆ
ತಿಳಿಯಿತೇ ಈಗ ನಿನಗೆ (ನನಗೆ) ಮಳ್ಳೆ?

ಜೈಮಿನಿ...✍️

- ಜೈಮಿನಿ

24 Jul 2023, 11:41 pm

Miss you

ಪ್ರೀತಿಯು ಒಂದು ಚಕ್ರದಂತಿದೆ: ನೀವು ಪ್ರೀತಿಸಿದಾಗ, ನೀವು ನೋಯಿಸುತ್ತೀರಿ. ನೀವು ಗಾಯಗೊಂಡಾಗ, ನೀವು ದ್ವೇಷಿಸುತ್ತೀರಿ. ನೀವು ದ್ವೇಷಿಸಿದಾಗ, ನೀವು ಮರೆಯಲು ಪ್ರಯತ್ನಿಸುತ್ತೀರಿ. ನೀವು ಮರೆಯಲು ಪ್ರಯತ್ನಿಸಿದಾಗ, ನೀವು ಕಾಣೆಯಾಗಲು ಪ್ರಾರಂಭಿಸುತ್ತೀರಿ. ಮತ್ತು ನೀವು ಕಾಣೆಯಾಗಲು ಪ್ರಾರಂಭಿಸಿದಾಗ, ನೀವು ಅಂತಿಮವಾಗಿ ಮತ್ತೆ ಪ್ರೀತಿಯಲ್ಲಿ ಬೀಳುತ್ತೀರಿ

- Sangeetha Shetty

23 Jul 2023, 12:21 am