Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಓ...ಕಣ್ಣುಗಳೇ
ಇನ್ನೂ ಹುಡುಕಾಟವೇನು
ಬರಲಾರಳು ಅವಳು
ಕೈ ತಪ್ಪಿದ ಕನಸೊಂದಿದೆ ಎನಗೆ
ಅದನಾದರು ಹುಡುಕಿ ಕೊಡಿ..
ಓ...ಕೈಗಳೇ ಕೇಳಿರಿ ನೀವು
ಚಾಚುವಿರೇನು ಇನ್ನೂ
ಸಿಗಲಾರಳು ನಿಮಗೆ
ಚೆಲ್ಲಾಪಿಲ್ಲಿಯಾದ
ಬದುಕೊಂದಿದೆ ಎನಗೆ
ಅದನಾದರು ಹೆಕ್ಕಿ ಕೊಡಿ ...
ಓ...ಕಾಲುಗಳೇ
ನಿಮಗೂ ಧಾವಂತವೇನು
ತಲುಪಲಾಗದು ಅವಳ
ಅರ್ಧ ದಾರಿಯಲಿ ಬಿಟ್ಟ
ನೆಮ್ಮದಿಯಿದೆ ಎನಗೆ ..
ಹಿಂತಿರುಗಿ ಬಿಡಿ ..
ಸೇರಬೇಕು ಅದರ ಕಡೆ ...
ಓ...ಹೃದಯವೇ
ಜೋರಾಗಿ ಬಡಿಯುತಿರು
ಕಿವಿಗಳೂ ಕೇಳುವಂತೆ
ತಿಳಿಯಲಿ ಅವಳು
ನಾನಿನ್ನೂ ಬದುಕಿರುವೆನೆಂದು .
ಓ...ನಿದಿರೆಯೇ
ಇವರಾರು ಕೇಳರು
ನನ್ನಯ ಮನವಿಗಳ
ನೀನಾದರು ಬಂದು ಬಿಡು
ಬಳಲಿ ಹೋಗಿರುವೆ
ವಿಶ್ರಾಂತಿ ಬೇಕೆನಗೆ ...!!!
✒ಸಿರಾಜ್ ಗಡಿಯಾರ್
- ಸಿರಾಜ್
03 Sep 2015, 09:17 pm
ಯಾರಾದ್ರೂ ನಿಮಗೆ ಕಲ್ಲು ಬಿಸಾಡಿದರೆ....
ನೀವು ಅವರಿಗೆ ಹೂವು ಬಿಸಾಡಿ....
ಆದರೆ ಅವರು ಪುನಃ ಕಲ್ಲು ಬಿಸಾಡಿದರೆ ಆಗ ಯೋಚಿಸಬೇಡಿ....
ನೀವು ಹೂವಿನ ಚಟ್ಟಿ ಬಿಸಾಡಿ !
- ಶಾಕೀರ್ ಅಕ್ಕರಂಗಡಿ
02 Sep 2015, 09:41 am
ಹಿಂದಿನ ದಿನಗಳಲ್ಲೇ ಇರುವುದೇಕೆ? ಪ್ರತಿ ದಿನವೂ ಹೊಸ ಅಧ್ಯಾಯವೇ.ಅಧ್ಯಯನ ಮಾಡುತ್ತಲೇ ಅಂದಿನ ಕೆಲಸ ಅಂದೇ ಪಯೂರೈಸೋಣ.
- Kanakareddy
30 Aug 2015, 03:56 am
೧+೧=೨ ನಿನ್ನ ನೋಡುವ ಕಣ್ಣುಗಳು,
೩+೩=೬ ಅರ್ಥದಲ್ಲಿ ಭಾವನೆ ನೀವು,
೧೨+೧೨=೨೪ ಗಂಟೆಗಳು ನಿಮ್ಮ ಸಂದೇಶಕ್ಕಾಗಿ ಕಾಯುವುದು,
೫೦%+೫೦%=೧೦೦% ನಿಮ್ಮ ಬಗ್ಗೆ ಚಿಂತೆ,
೧೮೨.೫+೧೮೨.೫=೩೬೫ ದಿನಗಳು ನಿಮ್ಮನ್ನ
ತಂಬಾ ಮಿಸ್
ಮಾಡ್ಕೊತಿದ್ದೀನಿ ಅಂತಾ ಅನ್ನಿಸ್ತಿದೆ ಕಣ್ರೀ.
ಇಂತಿ
ಲಾಹುಕುಮಾರ
- Lahukumar
29 Aug 2015, 03:06 pm
ಪೇಟೆಯಲ್ಲಿದ್ದ ಅಪ್ಪನಿಗೆ
ಮನೆಯಿಂದ. ಫೊನು
"ಏನಮ್ಮಾ, ಏನು ತರಲಿ?
ಪಪ್ಪಾ ಮರೆಯದೆ ಬರುವಾಗ ತನ್ನಿ
ಪಿ.ಪಿ(ಪಾನಿ ಪೂರಿ) ಸಾಧ್ಯವಾದರೆ
ಜೊತೆಯಲ್ಲಿ ಜಿ.ಎಮ್.(ಗೋಬಿ ಮಂಚೂರಿ)!!.
- Satyasagar
29 Aug 2015, 10:46 am
ಹರಿಯುವ ನೀರಿನ
ಜುಳು ಜುಳು ನಾದದ ಬೆನ್ನೆರಿ
ಮಿರಿ ಮಿರಿ ಮಿಂಚುವ ಮೀನುಗಳು
ಬಳ. ಬಳ. ನುಗ್ಗಲು ಸಾಲಾಗಿ
ಸೇರಿದವು ರೆ್ಷಮೆಯ. ಬಲೆಯೊಳಗೆ!!
- Satyasagar
29 Aug 2015, 10:36 am
ರೇಟು ಗಗನಕ್ಕೆ ಏರಿದರಿಂದ
ಇಬ್ಬರು ಸೇರಿ ಮಾಡಿದರು ಉಪಾಯ!!
ಹಣ್ಣು ಒಬ್ಬರದು -ಕಾಯಿ ಒಬ್ಬರದು!
ದೇವರಿಗೆ ಆಯಿತು ನೆಯ ವೇದ್ಯ!!
- Satyasagar
29 Aug 2015, 08:54 am
ಚೆಲುವ ಚೆನ್ನಿಗ ರಾಯನನ್ನು
ಹುಡುಕಿ ಮಾಡಿದರು ಮದುವೆ!!
ಅವನ ಬೇಡಿಕೆ ಪೂರೈ್ಸಿದಾಗ ಗೊತ್ತಾಯಿತು
ಆತ ಚಪಲ ಚೆನ್ನಿಗರಾಯ ಅಂತ!!
- Satyasagar
29 Aug 2015, 08:45 am
ವಿಜ್ಞಾನಿಗಳ ಎಚ್ಚರಿಕೆ :
"ಸಮುದ್ರದ ಮಟ್ಟದಲ್ಲಿ ಭಾರೀ ಏರಿಕೆ."
ಚಿಂತೆ ಯಾಕೆ ?
ಜ್ಯೋತಿಷಿ, ಪೂಜಾರಿಗಳಿಗೆ ಹೆಚ್ಚಲಿದೆ ಬೇಡಿಕೆ !
- ಶ್ರೀಗೋ.
29 Aug 2015, 02:19 am
ಪ್ರೀತಿ ಹ್ರದಯದ ಆಸ್ತಿ
ಸಂಬಂಧ ಮನಸ್ಸಿನ ಆಸ್ತಿ
ಜೀವನದ ಆಸ್ತಿ ಭೂಮಿ ಮೇಲೆ
ಪವಿತ್ರವಾದ ಬಡತನ - ಸಿರಿತನ
ಜಾತಿ -ಧರ್ಮಗಳ ಭೇದವಿಲ್ಲದೆ
ಕಷ್ಟ -ಸುಖಗಳಲ್ಲಿ ಜೊತೆಯಾಗಿರುವ
ಒಂದೇ ಒಂದು ಸಂಬಂಧ -ಪ್ರೀತಿ.
ನಾವಿಬ್ಬರೂ ಕೂಡಿ ಕಳೆದ ದಿನಗಳು
ನಾನು ಇಂದಿಗೂ ಮರೆಯಲಾರೆ
ನೀ ನನ್ನ ಕೊನೆಯುಸಿರಿರೋವರೆಗೂ
ನನ್ನೊಂದಿಗೆ ಇರುವಂತೆ ಆ ದೇವರಲ್ಲಿ
ಬೇಡಿಕೊಳ್ಳುತ್ತೇನೆ.
ಇಂತಿ
ಲಾಹುಕುಮಾರ
- Lahukumar
28 Aug 2015, 01:35 pm