Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಹೊಸಬರು ನಾವು ಪ್ರೀತಿಯಲ್ಲಿ
ಹಳೆ ಉಡುಗೆ ಸಂಪ್ರದಾಯ
ದೇವರ ನಾಡಿನಲ್ಲಿ
ಒಲವಿನ ಹಾಯಿ ದೋಣಿಗೆ
ದೇವರೇ ಸಾಕ್ಷಿ
ಹಳ್ಳಿಯಾ ಹಸಿರಲ್ಲಿ ನಗರದ ವಿಷವಿಲ್ಲ
ದೇಹದಾಸೆಯ ಲಾಲಸೆ ಪ್ರೀತಿ ಅಲ್ಲ
ಕಣ್ಣೋಟ ಮಾತುಗಳೇ ಮುನ್ನುಡಿಯ ಸಾಲು
ಚುಂಬನವು ಅಪ್ಪುವಿಕೆ ಇಲ್ಲ ನಮ್ಮೊಳಗೆ
ನಮ್ಮ ಪ್ರೀತಿ ಪರಿಶುದ್ಧ ಹಾಲಿನ ಹಾಗೆ
ಮದುವೆಯಲಿ ಬೆರೆತಾಗ ಪರಿಪೂರ್ಣ ಕವಿತೆ
ಮೈಮುಟ್ಟುವಾ ಸರಸ ಚೆಲ್ಲಾಟವಿಲ್ಲ
ಪ್ರಣಯ ಬೆಸುಗೆಯ ಮಬ್ಬು ಮಸುಕಿಲ್ಲ
ನಾವು ಹೊಸಬರು ಈ ಕಾಲದಲ್ಲಿ
ಹಳಬರು ಗುಣ ಸಂಪ್ರದಾಯದಲಿ
ಹಿರಿಯರ ಮಾತಿಗೆ ತಲೆ ಬಾಗುತ್ತೇವೆ
ಧರ್ಮ ಹಾದಿಯ ಬೆಳಗಿ ಬೆಳೆಯುತೇವೆ
#ಮಣಿರಾಜ್_ಮಂಗಳೂರು
- mani RAJ
14 Aug 2023, 06:40 pm
ಮಾಧವನ ಮಧುರ ಮುರಳಿಯ ನಾದಕೆ
ನಾನು ತನ್ಮಯಳಾಗಿ ತಲೆದೂಗುವ ರಾಧಿಕೆ
- Priyanka Haranal
14 Aug 2023, 12:59 pm
ಬುದ್ಧ ಅಂಬೇಡ್ಕರರ ನೆಲದಲ್ಲಿ
ನಾನೊಬ್ಬ ಸ್ವಾತಂತ್ರ್ಯ ಪಕ್ಷಿ
ಇಲ್ಲಿ ಎಲ್ಲರು ಸಮಾನರು
ಇಲ್ಲಿ ಎಲ್ಲರು ಮನುಷ್ಯರು
ಇಲ್ಲಿದೆ ನ್ಯಾಯ ಪಶು ಪಕ್ಷಿಗೂ
ಗಿಡ ಮರ ಬಳ್ಳಿಗೂ.
ನಮ್ಮ ಶಾಂತಿಯ ನೆಲದಲ್ಲಿ
ಅಶಾಂತಿಯ ಆತ್ಮಗಳು
ಬಂದವರೆಲ್ಲರು ಹೊರಗಿನವರು
ಪ್ರಶಾಂತ ನೀರಿನಲ್ಲಿ ಕಲ್ಲು ಎಸೆದು
ಅಲೆಗಳು ಸೃಷ್ಟಿಸಿದಂತೆ
ಇವರ ಕೆಲಸಗಳು.
ನಮ್ಮ ಅರಿವು ನಮಗಿದೆ
ನಾವು ಯಾರು? ನಮ್ಮವರು ಯಾರು?
ತಿಳಿದವರು ನಾವು
ಮನುಷ್ಯರು ನೀವು
ನಮ್ಮಂತೆ ಮನುಷ್ಯರಾಗಿ ಬಾಳಿ
ನಮ್ಮ ನೆಲದಲ್ಲಿ ನಮಗೆ
ನೆಮ್ಮದಿಯಾಗಿ ಬದುಕಲು ಬಿಡಿ
ನಿಮ್ಮ ದ್ವೇಷ ನಿಮ್ಮ ಕೀಚ್ಚು ನಿಮ್ಮಲ್ಲಿರಲಿ
ದ್ವೇಷ ಕಿಚ್ಚಿಲ್ಲದ ಸ್ವಾತಂತ್ರ್ಯ ನಮ್ಮದಾಗಲಿ.
- vamu gavada
13 Aug 2023, 11:44 pm
ಬೇಸರದ ಸಂಜೆ ಇದು
ನೀನಿರದೆ ನೊಂದು ಕಂಬನಿ ಮೂಡಿಹುದು..
ಹೇ ಏಕಾಂತವೇ ದೂರ ಸರಿದು ಬಿಡು..
ನನ್ನವನ ಒಲವಿನಲಿ ಮೀಯಲು ಅನುಮತಿ ನೀಡು
ವಿರಹವೇ ದೂರ ಸರಿಯೇ
ಒಲವಿನೌತಣವ ಉಣಬಡಿಸೇ..
ಪ್ರೀತಿಯ ಅಮಲಿದು..
ಸುಂದರ ಸೋಲಿದು..
ಮೌನದ ಮಾತಿದು...
ಆನಂದದ ನೋವಿದು..
ಎಲ್ಲವೂ ನಿನ್ನಿಂದಲೇ..
ಎಲ್ಲವೂ ನಿನಗಾಗಿಯೇ...
ತನುಮನಸು✍️
- Tanuja.K
13 Aug 2023, 07:27 pm
ನಾ ಒಲವ ಹೇಳ ಬಯಸಿದೆ
ನೀ ಒಲವಿಲ್ಲದೆ ದೂರ ಸರಿದೆ...
ಸುಡುತಿದೆ ಈ ನಿನ್ನ ಮೌನ..
ನರಳುತಿರುವೆ ನಾ ಪ್ರತಿದಿನ, ಪ್ರತಿಕ್ಷಣ
ಕುರುಡು ಪ್ರೇಮವೆಂದು ತಿಳಿದಿದ್ದರೂ ನಾ ಸೋತೆ..
ನನ್ನನ್ನು ನಾ ಗೆಲ್ಲದಂತೆ ಮಾಡಿದೆ ಈ ಚಿಂತೆ..
ಪ್ರೀತಿ ಕಲಿಸಿದ್ದಕ್ಕೆ , ಪ್ರೀತಿಸಿ ಮರೆತಿದ್ದಕ್ಕೆ ಧನ್ಯವಾದ..
ಕಾಯುವುದ ಕಲಿಸಿದ್ದಕ್ಕೆ, ಕಾರಣವಿಲ್ಲದೆ ದೂರಾಗಿದ್ದಕ್ಕೆ ಧನ್ಯವಾದ...
ತನುಮನಸು✍️
- Tanuja.K
13 Aug 2023, 07:09 pm
ಕಾರಣವಿರದೆ ನಿನ್ನ ಪ್ರೀತಿಸಿದೆ
ನಾನಿರಲಾರೆ ನಿನ್ನ ನೆನಪಿಸದೆ..
ಕಾಲವು ಒಲವ ದೂರಾಗಿಸಿತು
ಕವನಗಳು ನಮ್ಮನು ಒಂದಾಗಿಸಿತು..
ಯಾರ ಹಂಗು ಇಲ್ಲ ನನಗೆ
ಕವನದಲಿ ನೀ ಸಂಪೂರ್ಣ ನನಗೆ..
ನಾ ಮೆಚ್ಚಿದಂತೆ ನಿನ್ನ ಬಣ್ಣಿಸುವೆ
ನಿನ್ನ ಕಾಡುತ ಮತ್ತೆ ಮತ್ತೆ ಪ್ರೀತಿಸುವೆ..
ಕರುಣೆಯ ಹೃದಯ ನಿನ್ನದು
ನಿನ್ನ ಕಲ್ಪನೆಯಲೆ ನಾನಿರುವುದು..
ಮೌನಿಯಾಗಿರುವೆ ಏಕೆ ಇನ್ನು
ಬರಬಾರದೆ ನನ್ನೊಲವೆ ನೀನು..
ತನುಮನಸು✍️
- Tanuja.K
13 Aug 2023, 06:36 pm
ಗೆಳೆತಿ.....ನೀ ಕೇಳಿದೆ...ನನ್ನ ಸ್ನೇಹ ಏಕೆ ನಿನಗೆಂದು....??
ಉತ್ತರ ಇರಲಿಲ್ಲ...ಹೌದು ನಾ ಯಾರು...? ನಾ ನಿನಗೇನೂ..ಏನೂ ಅಲ್ಲವೇ...?
ಮತ್ತೇಕೆ....ನಿನ್ನ ಸ್ನೇಹ ನನಗೆ..ಯೋಚಿಸಿದೆ...ಉತ್ತರ ಹುಡುಕಿದೆ …?
ಕೇಳು.....ನನಗೆ ನೀನೊಬ್ಬಳು ಅಮ್ಮನಂತೆ ಅಕ್ಕರೆ ತೋರುವವಳು ...!!
ಅಪ್ಪನಂತೆ...ಪೋಷಿಸುವವಳು....ಅಕ್ಕಳಂತೆ....ಧೈರ್ಯ ನೀಡುವವಳು....!!
ಮಗುವಿನಂತೆ....ಮುದ್ಧಿಸುವವಳು....ಪ್ರಿಯತಮೆಯಂತೆ ಪ್ರೀತಿಸುವವಳು....!!
ಗೆಳೆತಿ.....ತಿಳಿಯಿತೇ ಕಾರಣ...ನಿನ್ನ ಸ್ನೇಹ ಏಕೆ ನನಗೆಂದು...
- Veeresh A Math
11 Aug 2023, 02:58 pm
ಕಾಲ್ಪನಿಕ ಜಗದೊಳು,
ಕಲ್ಪನೆಯ ಸುಳಿಯೊಳು ಸಿಲುಕಿ,
ಗುರುತಿಸಲಾಗದಂತೆ ಸತ್ಯ ಅಸತ್ಯವ,
ಕಾಲ್ಪನಿಕ ಮನದೊಳು
ಮಾತು ಮೌನದ ಕಲಹದೊಳು ಸಿಲುಕಿ,
ಬಲಲುತ್ತಿದೆ ಹೊರ ಇಣುಕಲಾರದೆ ಜೀವ
ಮನದಾಳದಿ ಹುದುಗಿರುಲು,
ಒಮ್ಮೆ ಹೊರ ಬರಲಿ ,
ನೂರೆಂಟು ಭಾವ.
ಕಣ್ಗಳು ಮಂಜಾಗಿರಲು,
ಇನಿಯನ ಹುಡುಕಿ,
ಅವನ ತಬ್ಬಿ ತೊರೆಯಲು ಕಂಬನಿಯ.
ಮೈನ
- myna
ig-@voice_of_.heart__
10 Aug 2023, 09:59 pm
ಮುಸ್ಸಂಜೆ ಏಕಾಂಗಿ ಹೊರಟಿರಲು
ದಿನಕರನು ವಿಶ್ರಾಂತಿಗೆ ತೆರಳಿರಲು
ಬಾನಲ್ಲಿ ಮೋಡಗಳು ಚಿತ್ರಿಸಿರಲು
ಸಂಜೆಗೆಂಪು ಬಣ್ಣಗಳು ತುಂಬಿರಲು
ನೀನು ಎದುರು ನಡೆದು ಬರುತಿರೆ
ಕಿರುನಗೆಯಲಿ ನಿನ್ನತ್ತ ನನ್ನ ಸೆಳೆದಿರೆ
ಪ್ರೀತಿಯಲಿ ಹೃದಯ ಅರಳುವುದು
ಸಂಭ್ರಮ ಸಂತಸದಿ ಅರಳಿದೆ ಮನವಿದು
ಕಂಗಳ ನೋಟ ತನುವೆಲ್ಲ ಸಂಚರಿಸಿ
ಸಿಹಿ ಕಂಪನ ಎದೆಯೊಳಗೆ ನಡುಗಿಸಿ
ಬೇಡುವೆ ಪ್ರೇಮ ನಿವೇದನೆ ಸ್ವೀಕರಿಸಿ
ಜೊತೆಯಾಗಿ ಬರುವೆಯಾ ನನ್ನರಸಿ
ಖಾಲಿ ಇರುವ ಹೃದಯ ಗುಡಿಯಲಿ
ಪ್ರೇಮ ಮೂರ್ತಿಯಾಗಿ ನೀ ನೆಲಸು
ಹೊನ್ನಕಿರಣದಿ ಕತ್ತಲೆಯ ಓಡಿಸು
ಕೈಹಿಡಿದು ನನ್ನ ಬಾಳನ್ನು ಬೆಳಗಿಸು
✍️ನಿಮ್ಮವನೇ ಶಂಕ್ರು
- Shankru Badiger
10 Aug 2023, 05:20 pm
ಪ್ರೀತಿಯ ಅಂಬಾರಿಯೋಳು ಸಾಗಲು ಬಯಸಿಹೆನು,
ಕೈಹಿಡಿದು ಕರೆದೊಯ್ಯುವೆಯ ಅಂಬಾರಿಯೋಳು.
ಪ್ರೀತಿಯಲಿ ಜಗವ ಮರೆಯಲು ಬಯಸಿಹೆನು,
ತೋರುವೆಯ ನನ್ನ ನಿನ್ನ ಜಗದೊಳು.
ನನ್ನವರ ಅಗಲಿ ನಿನ್ನ ಸೇರುತ್ತಿರುವೆನು,
ನಿನ್ನವರ ಪ್ರೀತಿ ನನ್ನೊಂದಿಗೆ ಹಂಚಿಕೊಳ್ಳುವೆಯ.
ನನ್ನದೆಲ್ಲವ ನಿನಗೆ ಅರ್ಪಿಸಿರುವೆನು,
ಆಗಲೇನು ನಿನ್ನ ಅರ್ಧಾಂಗಿಯ .
- ಮೈನ
- myna
ig-@voice_of_.heart__
09 Aug 2023, 11:40 pm