Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಿಜವಾದ ಪ್ರೀತಿ

ಪ್ರೀತಿಯ ನೋಟಕೆ ಸಾವಿಲ್ಲ
ನೋಡುವ ನೋಟಕೆ ನೀನಿಲ್ಲ
ನಿನ್ನ ನೋಡದೆ ಇದ್ರೆ
ಈ ಜೀವ ಇನ್ನಿಲ್ಲ.

- ಕೀರ್ಥನ್ ಗೌಡ

18 Jan 2016, 07:36 am

ಆ ಒಂದು ಕ್ಷಣ....

ನಿನ್ನ ನೋಡಿದ ಆ ಕ್ಷಣ....
ನಾ ಕಳೆದು ಹೋದೆ ಒಂದು ಕ್ಷಣ....
ನೀ ನೆನಪಾಗಿ ಕಾಡುತ್ತಿರುವೆ ಪ್ರತಿ ಕ್ಷಣ...
ನೀ ಎದುರಾದರೆ ನನಗೇನು ತೋಚದು ತಕ್ಷಣ.....

- ಅವಿನಾಶ್ ಚಕ್ರಸಾಲಿ

17 Jan 2016, 08:15 am

ಬೇವು-ಬೆಲ್ಲ

ಬದುಕು ಬೇವು ಬೆಲ್ಲದ ಪಯಣ,
ಕಹಿಯಿಲ್ಲದ ಬೇವು
ಸಿಹಿಯಿಲ್ಲದ ಮಾವು
ಇರಲಾರವು
ಏಳುಬೀಳುಗಳ ನಡುವೆ ಸಾಗುತಲಿರಲಿ
ನಮ್ಮ ಈ ಪಯಣ,
ಕಹಿ ನೆನಪುಗಳ ಮರೆತು
ಸಿಹಿ ನೆನಪುಗಳ ಸವಿಯುತ
ಸಾಗುವ ಎಂದೆಂದು
ನಮ್ಮ ಗುರಿಯ ತನಕ...

- Irayya Mathad

16 Jan 2016, 02:28 pm

ಓ ಪ್ರಾಣಸಖಿ

ಮೂಖ ಮುಗ್ದನ ಮಾಡಿದೆ ನೀ ಪ್ರೀತಿಯ ಹಚ್ಚೆ ಹಾಕಿ
ಅಲೆಯುವ ಅಲೆಮಾರಿಗೆ ಮೇಲೆರಗಲು ರೆಕ್ಕೆ ನೀಡಿದೆ
ಸಿಡುಕಿನ ಹುಂಬಗೆ ಸಹನೆ ಕಲಿಸಿ ಸಾಹುಕಾರ ಮಾಡಿದೆ ನೀ
ಗುರಿಯಿಲ್ಲದ ಗೂಳಿಗೆ ಗುರಿ ತೋರಿ ಗುರುವಾದೆ ನೀ
ಓ ಗೆಳತಿ ಓ ಗೆಳತಿ

- Irayya Mathad

13 Jan 2016, 04:51 pm

ಬೆಸೆಯುತ್ತಾ, ಹುಡುಕುತ್ತಾ...

ತುಂಬಾ ದೂರ ಸಾಗಿದೆ
ನನ್ನ ಪಯಣ, ಬಂಧಗಳನ್ನು
ಬೆಸೆಯುತ್ತಾ ಬೆಸೆಯುತ್ತಾ....
ಎಲ್ಲಿ ಕಳೆದುಹೋದೆನೋ
ತಿಳಿದಿಲ್ಲ, ನನ್ನವರನ್ನು
ಹುಡುಕುತ್ತಾ ಹುಡುಕುತ್ತಾ....
ಜನರು ಹೇಳುತ್ತಾರೆ ನಾನು
ತುಂಬಾ ನಗುತ್ತೇನೆ ಎಂದು....
ಆದರೆ ತುಂಬಾ ಬಳಿಲಿದ್ದೇನೆ
ಆ ನಗುವಿನ ಹಿಂದೆ ನನ್ನ ನೋವ
ಬಚ್ಚಿಡುತ್ತಾ ಬಚ್ಚಿಡುತ್ತಾ........

- ನಿಶಾ ರೂಪ

13 Jan 2016, 05:59 am

ಅಮಲು

ಅಮಲು ನಂಗೆ ನಿನ್ನ ಪ್ರೀತಿಯ ಅಮಲು.....
ಆಕಾಶ ಭೂಮಿ ಒಂದಾಗಲು,
ಯಾರೆ ಬಂದರು ಬೇರ್ಪಡಿಸಲು .....
ನಾನಿರುವೆ ನಿಂಗೆ ಕೊನೆಯತನ ಕಾವಲು...❤

- ಅವಿನಾಶ್ ಚಕ್ರಸಾಲಿ

11 Jan 2016, 05:01 pm

ನನ್ನ ಹೊಸ ಕವನ

ಗಿಳಿಯ ಬಣ್ಣ ಹಸಿರು
ಶಶಾಂಕ್ ಅಂತ ನನ್ನ ಹೆಸರು
ಸ್ನೇಹ ಪ್ರೀತಿ ನನ್ನ ಉಸಿರು
ಉಸಿರು ಇರುವವರೆಗೂ
ಮರೆಯೋಲ್ಲ ಕನ್ನಡದ ಹೆಸರು

- Shashank

11 Jan 2016, 04:54 pm

ಕನಸು

ಕನಸನ್ನು ಕಯ್ಯಲ್ಲಿಟ್ಟು ಕಣ್ಣೀರಿಗೆ ಕಡಿವಾಣ..
ಕೆರೆನೀರ ಕೆ0ಪಲ್ಲಿಟ್ಟು ಕಿರುದಾದ ಹೂಬಾಣ..
ಕೊನೆಯಾದ ಮನವ ತೆರೆದು ಹಿನ್ನೀರಲಿ ಮರೆಯಾದೆ..
ಕ್ರುತಿಹಾಡಿನ ಕಲರವದಲ್ಲಿ ಸಿಹಿನೀರಿನ ಸ್ವರವಾದೆ....

- Shreepadh

10 Jan 2016, 08:36 am

ಪೇಸ್ಬುಕ್

ದಿನವಿಡೀ ಪೇಸ್ಬುಕ್
ಇದರಲ್ಲಿ ವಿಶೇಷ ಲುಕ್
ಇದರಿಂದ ದೂರ ಹಲವು ಬುಕ್
ಸ್ಥಾಪನೆಯಾಗುವುದೊಂದು ಗ್ರೂಪ್
ಅದರ ಮೇಲೆ ನಮ್ಮಯ ಹಕ್ಕು
ಗ್ರೂಪಿಗೊಂದು ಲೈಕು
ಲೈಕ್ ನಿಂದ ಸಮಯಕ್ಕೊಂದು ಕಿಕ್.

- ಪರಶುರಾಮ ಅ ಹೊಸಮನಿ

09 Jan 2016, 01:12 pm

ಪ್ರೀತಿ

ಕೆಣಕದಿರು ಕೆದಕದಿರು ಮದುವೆಯ ಸಮಯದಲ್ಲಿ
ಹಾರಿ ಹೋದ ಪ್ರೀತಿಯ ನೆನಪುಗಳ ಮೆಲುಕು
ಹಾಕದೇ ಮರೆತುಬಿಡು
ನಿನ್ನ ಅರಿಯದೇ ನಾನು ಆದೇ
ಪ್ರೀತಿಯಲ್ಲಿ ಅಲೆಮಾರಿ
ಜೀವನದಲಿ ಸೋಮಾರಿ
ಕನಸ್ಸುಗಳ ಬದಿಗಿಟ್ಟು ತೂಗಿದೆ ಜೋಕಾಲಿ
ನೀ ಅಮಾವಾಸ್ಯೆಯಲ್ಲಿ ತೋರಿಸಿದೆ ಚಂದ್ರ
ಬಿಂಬ
ತಮಾಷೆಯಂದು ಕೈ ಕೊಟ್ಟೆ ಚಂಬು
ಕಂಗಳ ನೋಟದಿಂದ ಕಂಗೆಡಿಸಿ
ದಿಕ್ಕು ಅರಿಯದಾಗ ಎಳೆದ ಬರೆ
ಧರೆಯಲ್ಲಿ ಮತ್ತೊಮ್ಮೆ ನಾ ಆಗಬೇmಕು
ಪ್ರೀತಿಯಲ್ಲಿ ದೊರೆ
ಮತ್ತೊಮ್ಮೆ ಹಣಿಯದಿರು ನಿನ್ನ ನಗುವಿನ ಬಲೆ
ಅದು ಎಂದಿಗೂ ನನ್ನ ಮನದಲಿ ಮತ್ತೆ ಅರಳದು
ಪ್ರೀತಿಯ ಅಲೆ
ನಗುವಿನ ಕಿಚ್ಚು ಹಚ್ಚದೇ ಇರು ಸುಮ್ಮನೆ
ನಾ ಕುಳಿತರುವೇ ಹಸಮಣೆಯ ಮೇಲೆ
ಕೊಚ್ಚಿ ಹೋದ ಪ್ರೀತಿ
ಬಿಚ್ಚಿ ಹುಡಕದ ಮನಸ್ಸು
ಹುಚ್ಚು ಹಿಡಿಸದ ಕನಸು
ನಿನ್ನ ಪ್ರೀತಿಯ ನೆನಪಿನ ಸಂಚಿಕೆಯಲ್ಲಿ
ಪುಟ ತಿರುವಲು ಈಗ ನನಗೆ ಅಂಜಿಕೆ
ಇಟ್ಟಿರುವೇ ಸ್ನೇಹದ ಮೇಲೆ ಒಂದಿಷ್ಟು
ನಂಬಿಕೆ..
ಎ ಜಿ ಶರಣ್

- ಎ ಜಿ ಶರಣ್

08 Jan 2016, 10:42 am