Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಲಾವಿದ

ಕಲೆಗಾರ ನಾನಲ್ಲ
ಸಕಲ ಕಲೆಗಳು ತಿಳಿದಿಲ್ಲಾ

ಕಿರಿದಾದ ಕುಂಚವನ್ನಿಡಿದು
ಭಾವನೆಗಳ ವ್ಯಕ್ತ ಪಡಿಸುವೆ

ಬಣ್ಣವ ಬಳಿದು
ಈ ಖಾಲಿ ಕಾಗದದ ಮೇಲೆ.
- ಕಲಾವಿದ

- ಚೇತು ಕಲಾವಿದ

25 Jan 2016, 06:45 pm

ಹೆಜ್ಜೆ ಗುರುತು

ಬೆಳದಿಂಗಳ ರಾತ್ರಿಯಲಿ,
ಆ ಸುಂದರ ಕಡಲಂಚಿನಲಿ...
ನೀ ಸಾಗುವ ಹಾದಿಯ....
ಹೆಜ್ಜೆಗುರುತನರಸಿ ಹೊರಟಿರುವೆ ನಾನು....
ಆದರೆ ಅಲೆಗಳೆ ಅಣಕಿಸಿ ಹೇಳುತ್ತಿವೆ
ಅವಳೆಂದು ಸಿಗುವುದಿಲ್ಲ ನಿನಗಿನ್ನು...

- ಅವಿನಾಶ್ ಚಕ್ರಸಾಲಿ

25 Jan 2016, 04:51 pm

ಬಲೂನು

ನನ್ನ ತುಟಿಗೆ
ನಿನ್ನ ತುಟಿಯ ಸೇರಿಸಿ
ಉಸಿರನು ಊದಿದೆ
ನಾ ಉಬ್ಬಿ ಉಬ್ಬಿ ದಪ್ಪನಾದೆ
ನನ್ನ ಬಾಯೊಳಗೆ ನಾಲ್ಕು ಕಾಳು ಹಾಕಿ
ಎಳೆದು ಸುತ್ತಿ ಗಂಟು ಹಾಕಿದೆ
ಗಂಟನು ತುರುಕಿ ಹೊಟ್ಟೆಯೊಳಗೆ ಸೇರಿಸಿ
ನುಲಿದು ರಬ್ಬರ್ ತುಂಡು ಕಟ್ಟಿದೆ
ಸೇಬು ಹಣ್ಣಿನಂತೆ ಕಾಣುವ ನನ್ನನು
ಜಾತ್ರೆಗೆ ಬಂದ ಹುಡುಗನೊಬ್ಬ ಕೊಂಡ
ನನ್ನ ಬಣ್ಣ ನೋಡಿ ಆಕಾರ ನೋಡಿ ಸಂತೋಸಗೊಂಡ
ರಬ್ಬರ್ ಹಿಡಿದುಕೊಂಡು ಎಳೆದು ಎಸೆದು
ಹೊಡೆದು ಬಡಿದು ಕೊನೆಗೆ ನನ್ನ ಜೀವ ತೆಗೆದ

- ಚೇತನ್ ಬಿ ಸಿ

24 Jan 2016, 02:36 pm

ಚಿಟ್ಟೆ

ಚಿಟ್ಟೆ ಚಿಟ್ಟೆ ಚಿಟ್ಟೆ
ಹಿಡುಕೊ ಹಿಡುಕೊ ಹಿಡುಕೊ
ಕೆಂಪುಬಣ್ಣದ ರೆಕ್ಕೆ
ರೆಕ್ಕೆ ಮೇಲೆ ಕಪ್ಚುಚುಕ್ಕೆ
ಹೂವಿಂದ ಹೂವಿಗೆ
ಗಿಡದಿಂದ ಗಿಡಕ್ಕೆ
ಹಾರುತಿಹುದು


- ಚೇತನ್ ಬಿ ಸಿ

23 Jan 2016, 05:33 pm

ಕೃತಿ..


ಕೆ0ದಾವರೆ ಕುಸುಮದ ತು0ಬ..
ಕರಿಮೋಡದ ಬಿಗುಮಾನ..
ಕಟುವಾದ ಮನದಲ್ಲೆಲ್ಲಾ ಸ್ಮ್ರುತಿಯೆ0ಬ ಸಿಹಿಗಾನ..
ಕುಸುಮಾ0ಕರಿ ಉಸಿರಲೆಲ್ಲಾ ಬಿಳಿ ಛಾಯೆ ಕರೆದಿಹುದು
..

ಕೆ0ಗಾಲಿನ ಕೊರಳಲ್ಲೆಲ್ಲಾ ಹಸಿರಾದ ಸೆರೆಮಾಲೆ..
ಕೆ0ಗಾಲಿಗೆ ಕನಸನು ಕೊಡುವ ಸ0ಗಾತಿಯ ಇ0ಷೌಧ....

- Shreepadh

22 Jan 2016, 08:33 pm

ನಾ ಅರಿಯೇ

ನೀ ಹೀಗೇಕೆ ನಾಚಿ ನಿಂತಿರುವೆ ಗೆಳತಿ,
ನೀ ನಾಚಿ ನಿಂತರೆ ನನ್ನ ಉಸಿರಿನಿಂದ
ನಿನ್ನ ಹೇಗೆ ಬನ್ನಿಸಲಿ.
ಬನ್ನಿಸಿದರು ಅದು ನಿನ್ನ ನೆನಪುಗಳನ್ನು
ಕುರಿತು ಬನ್ನಿಸಬೇಕು.
ನೀ ನಿಂತೆ ಹೀಗೇಕೆ ನಾಚಿ
ನನ್ನ ಕನಸುಗಳ ಮೇಲೆ ಕಲ್ಲನ್ನೆರಿ...
ನನ್ನ ಪ್ರೀತಿಯಾ ಕುಸುರಿ ನಾಚುತಿದೆ ಏಕೆ ....?
ನನ್ನ ಮೇಲಿನ ಕೋಪಕೋ
ಪ್ರೀತಿಗೋ ನಾ ಅರಿಯೇ.........

- Kiran

22 Jan 2016, 02:22 pm

ಕೆತ್ತನೆ

ಓ ಜೀವನ ಶಿಲ್ಪಿಯೇ...
ನಿನಗೆ ಕೊಡೆನು ಅವಕಾಶ..
ನನ್ನ ಪ್ರತಿಯೊಂದು ತಪ್ಪಿಗೂ
ನನ್ನಿಂದಲೇ ಉಳಿಯೇಟು...
ಒಂದೊಂದು ಏಟು
ನನ್ನ ತಪ್ಪಿಗೆ ನೀತಿಪಾಠ....
ಪಾಠ ಕಲಿತಾಗೆಲ್ಲ ಮೂಡುವ
ನನ್ನ ಸುಂದರ ಆಕೃತಿ...
ನೀನೇ ಬೆರಗಾಗುವೆ
ಸುಂದರ ಕೆತ್ತನೆ ನೋಡಿ...

- ನಿಶಾ ರೂಪ

19 Jan 2016, 12:34 pm

ನಿಜವಾದ ಪ್ರೀತಿ

ಪ್ರೀತಿಯ ನೋಟಕೆ ಸಾವಿಲ್ಲ
ನೋಡುವ ನೋಟಕೆ ನೀನಿಲ್ಲ
ನಿನ್ನ ನೋಡದೆ ಇದ್ರೆ
ಈ ಜೀವ ಇನ್ನಿಲ್ಲ.

- ಕೀರ್ಥನ್ ಗೌಡ

18 Jan 2016, 07:36 am

ಆ ಒಂದು ಕ್ಷಣ....

ನಿನ್ನ ನೋಡಿದ ಆ ಕ್ಷಣ....
ನಾ ಕಳೆದು ಹೋದೆ ಒಂದು ಕ್ಷಣ....
ನೀ ನೆನಪಾಗಿ ಕಾಡುತ್ತಿರುವೆ ಪ್ರತಿ ಕ್ಷಣ...
ನೀ ಎದುರಾದರೆ ನನಗೇನು ತೋಚದು ತಕ್ಷಣ.....

- ಅವಿನಾಶ್ ಚಕ್ರಸಾಲಿ

17 Jan 2016, 08:15 am

ಬೇವು-ಬೆಲ್ಲ

ಬದುಕು ಬೇವು ಬೆಲ್ಲದ ಪಯಣ,
ಕಹಿಯಿಲ್ಲದ ಬೇವು
ಸಿಹಿಯಿಲ್ಲದ ಮಾವು
ಇರಲಾರವು
ಏಳುಬೀಳುಗಳ ನಡುವೆ ಸಾಗುತಲಿರಲಿ
ನಮ್ಮ ಈ ಪಯಣ,
ಕಹಿ ನೆನಪುಗಳ ಮರೆತು
ಸಿಹಿ ನೆನಪುಗಳ ಸವಿಯುತ
ಸಾಗುವ ಎಂದೆಂದು
ನಮ್ಮ ಗುರಿಯ ತನಕ...

- Irayya Mathad

16 Jan 2016, 02:28 pm