Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಆತಂಕ

ಮನಸು
ಮನಸು
ಒಂದಾದರೆ ಬಾಳ್
ಹೊನ್ನಿನ ತೇರು !
ಭಾವನೆಯೋಳು
ಮುನಿಸು ಬೆರೆತರೆ
ಬಾಳ್ ಏರುಪೇರು !!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

10 Feb 2016, 10:31 am

ತ್ಯಾಗ

ಗೆಳತಿ
ನೀ ನನ್ನ
ಎದೆಯಂಗಳದಿ
ಪ್ರೇಮದ ರಂಗೋಲಿ ಬಿಡಿಸಿದ
ಸುಹಾಸಿನಿ !
ಆದರೆ ಎನ್ಮಾಡಲಿ
ನನಗಗಲಿ ನೀನಾದೆ
ಸುವಾಸಿನಿ !
ಶುಭವಾಗಲೆಂದು ಹರಸಿ
ನಾನಾಗಿನೀಗ
ಮೌನಿ !!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

10 Feb 2016, 10:28 am

ಆಶಯ

ನೀ ಎನ್ನ
ಮನದ
ಗೆಳತಿ !
ನಾ ನಿನ್ನ
ಬಾಳ
ಸಂಗಾತಿ !
ಒಲುಮೆಯ
ಸೇತುವೆಯಲಿ !
ಕಾರ್ಮೋಡದ
ಛಾಯೆ
ಬಾರದಿರಲಿ !!


- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

10 Feb 2016, 09:32 am

ರೈತ !

ಸರ್ಕಾರದಿಂದ
ನೆರೆಬರಕ್ಕೆ
ನೂರಾರು
ನೆರವು !
ಪಳೆಯುಳಿಕೆಗಲಾದೆವು
ಸಿಗದಿದ್ದಕ್ಕೆ
ಕಾದು ಕಾದು
ನಾವು !!!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

10 Feb 2016, 09:22 am

ಅಪ್ಪಣೆ

ಗೆಳತಿ
ನೀನೆತಾನೆ
ಕೊಟ್ಟಿದ್ದು
ಮುತ್ತಿಡಲು
ಅಪ್ಪಣೆ !!
ಕಾರಣ
ನಾ ಬರೆವ
ಹನಿಗವನಗಳೆಲ್ಲ
ನಿನಗೆಯೇ
ಅರ್ಪಣೆ !!!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

10 Feb 2016, 09:09 am

ವಿಪರ್ಯಾಸ

ದೇವಾನುದೇವತೆಗಳೇ
ಮಾಡುವಂತಿದ್ದಿದದರೆ
ಭಹಿರ್ದೇಶೆ !
ಅನ್ನಕ್ಕಾಗಿ ಪರದಾಡುವ
ಜೀವಗಳು ತೆಗೆಯುತ್ತಿದ್ದವು
ನೈವೆಧ್ಯ ಬೇಡವೆಂಬ
ವರಸೆ !
ಆಗ ದೇವತೆಗಳೇ
ಹೋಗಬೇಕಾಗುತ್ತಿತ್ತು
ವಲಸೆ !!!!!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

10 Feb 2016, 08:51 am

ಜ್ಞಾನ

ಅಂತರಂಗದ
ತಿಪ್ಪೆಯಲ್ಲಿ
ಬೆಳಕಿನ
ಪೊರಕೆ !

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

10 Feb 2016, 07:40 am

ಪ್ರೀತಿ

ಆಸರೆಗಾಗಿ
ಪೋರೆದವನು
ಹೊಲಿದು ಕೊಟ್ಟ
ದೀರಿಸು!!!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

10 Feb 2016, 06:10 am

ಬದುಕು

ಹುಟ್ಟು ಸಾವು
ಅವಳಿ ಜವಳಿ
ಒಬ್ಬರಿಗೊಬ್ಬರು
ಭೇಟಿಯಾಗಿದ್ದರೇನು ಕೇಳಿ !?
ಇವುಗಳ ಮದ್ಯೆಯೇ
ಹುಡುಕು ಹುಡುಕು
ಹುಡುಕುವುದೇ
ಬದುಕು !!!

- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

10 Feb 2016, 05:53 am

ದುರಂತ ೨

ಉಸಿರಾಗಿ ನಿಲ್ಲುವ ಪ್ರೀತಿ
ಉಸಿರು ನಿಲ್ಲಿಸಿದರೆ !
ಸೇವಿಸುವ ಅಮೃತವೇ
ಸೇವಿಸಿದೊಡನೆ ವಿಷವಾದರೆ !
ಕರುಣಿಸಿದ ಕೈಗಳೇ
ಕೈಎತ್ತಿ ಕೊಂದರೆ !
ಪೋಷಿಸುವ ಪಂಚಭೂತಗಲೆ
ಫಲಾಪೇಕ್ಷೆ ಬೇಡಿದರೆ !
ಓ ಎನ್ನ ದೈವ ಗುರುವೇ
ಸ್ವಿಕರಿಸುವರ್ಯಾರು ನಾ ದುರಿತ್ತರೆ!!!!


- ಜ್ಯೋತಿ ನಾಯ್ಕ (ಶಿಕ್ಷಕರು).ಬಳ್ಳಾರಿ

10 Feb 2016, 05:47 am