Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಏಕಾಂಗಿ ಪಯಣ

ಹುಟ್ಟಿದ ಊರನ್ನು ಬಿಟ್ಟು
ಬದುಕಿನ ಬಂಡಿ ಕಟ್ಟಿ ನೆಡದೆಲ್ಲೋ ನೀನು !!ಪ!!

ತಂದೆ ತಾಯಿಯ ಬಿಟ್ಟು
ಅಕ್ಕ ತಂಗಿ ಅಣ್ಣ ತಮ್ಮನ ಅಗಲಿ ನೀ ಇಂದು ನಡದೆಲ್ಲೋ
ಆಡಿದ ಆ ಆಟ ಗೆಳೆಯರ ಮೋಜಿನಾಟ
ಅಳಿಯದ ನೆನಪುಗಳ ಗಂಟು ಹೊತ್ತೆ ನೀನು

ಒಂದೆಜ್ಜೆ ಮುಂದೆ ಸಾಗಿ ಮುಂದೊಂದು ಹೆಜ್ಜೆ ಇಟ್ಟು
ಹೆಜ್ಜೆ ಗುರುತನ್ನು ನೀನು ಕಾಣದಾದೆಯೊ
ಸಾವಿರ ಕನಸು ಕಟ್ಟಿ ನನಸಾಗಿಸೊ ಆಸೆ ಇಟ್ಟು
ಅರಿಯದ ಊರಿಗೆ ಹೊಂಟು ನಿಂತೆಯಲ್ಲೊ ನೀನು

ಬೆಳಗುವ ಸೂರ್ಯ ಕೋಳಿಯ ಕೂಗು ಕಿವಿಯ ನಾದ ತುಂಬಿ ನೆನಪಾಯಿತಲ್ಲೊ ನಿನಗೆ
ಬೆಳದಿಂಗಳೂಟ ಅಮ್ಮನ ಪ್ರೀತಿ ಮಾತು
ನಿನ್ನ ಕಣ್ಮುಂದೆ ಕಟ್ಟಿದಂತಾಯಿತು

ಅಪ್ಪ ಕಲಿಸಿದ ಸೈಕಲ್ ಗೆಳೆಯರ ಜೊತೆಗಿನ
ಈಜು ಕಲಿಯುವಾಗ ನೀರು ಕುಡಿದ ನೆನಪಾಯಿತು ನಿನಗೆ
ಕದ್ದು ಮುಚ್ಚಿನ ಆಟ ಆಡುವಾಗ ನೀ ಕಳೆದೆ
ಗೆಳೆಯರ ಆಶ್ಚರ್ಯ ಬೆರಗುಗೊಳಿಸಿದೆ ನೀನು

ಜಾತಿ ಧರ್ಮ ಇಲ್ಲ ನಿನಗೆ
ಕೂಡಿ ಬಾಳ್ವೆ ಹಿರಿಮೆಯೊಂದೆ
ಒಂದೆ ತಟ್ಟೆಯೊಳಗೆ ಗೆಳೆಯರ ಜೊತೆಯೂಟ
ಮರೆಯದಾಯಿತು ನಿನಗೆ ಮರೆಯದಾಯಿತು ನಿನಗೆ

ಜೇನುಗೂಡಿನ ಹಾಗೆ ಇದ್ದ ನಿನ್ನ ಬಂಧುಗಳ
ಪೊರೆಯನ್ನು ಕಳಚಿ ಒಂಟಿಯಾಗಿ ನೀ ನಡೆದೆ
ಹೊಸ ಗೂಡು ಹೊಸ ತಾಣ ಹೊಸ ಜನ ಹೊಸ ಮನ
ತುಂಬಿತೊ ಎದೆಯೊಳಗೆ ಅಂಜಿಕೆಯಾ ಅಳಕು

ಬೆರೆಯಲು ಹೋದೆ ಬೆರೆತು ಬಾಳಿದೆ ಕೊನೆಯಲಿ
ಉಳಿಯಿತು ನಿನ್ನವರ ನೆನಪು ನಿನಗೆ.....

- Irayya Mathad

25 Feb 2016, 08:17 am

ನಾನೊಬ್ಬ ಸ್ನೇಹ ಜೀವಿ

ನಾನು ಎಂಬುವೂದು ನನ್ನೋಲಗಿರಲ್ಲಿ
ನಾವು ಎನ್ನುವೂದು ಎಲ್ಲರಿಗೂ ಬರಲಿ
ಸತ್ತ ಮೇಲೆ ಆತ್ಮಕೆ ಶಾಂತಿ ಸಿಗಲಿ
ಇರುವಷ್ಟು ದಿನ ಸಂತೋಷದಿಂದ
ಸ್ನೇಹ ಜೀವಿಗಳಾಗಿ ಇರಲಿ
ನಾನೊಬ್ಬ ಸ್ನೇಹ ಜೀವಿ

- ನವೀನ ಸ್ ಇಟ್ನಾಳ

25 Feb 2016, 04:26 am

ಪ್ರೀತಿ

ಅಗೋ ಅಲ್ಲಿ ಕಾಣುತಿಹುದು ಬೆಟ್ಟ
ಬಲು ನುಣ್ಣಗೆ,
ಕೈಲಿಡಿಯಬೇಕೆಂಬ ಆಸೆಯಲಿ ಓಡಿದೆ,
ತಿಳಿಯಿತು ಎನಗೆ ಪ್ರೀತಿ ಎಂಬ ಶಿಖರ
ಏರಿದಷ್ಟೂ ಎತ್ತರ..

- ಬಿಂದು

21 Feb 2016, 08:56 am

ಯುವ ಸೈನ್ಯದ ಹುಲಿಮರಿಗಳು ನಾ

ಕಿಡಿಗೇಡಿಗೆ ಸಿಡಿಗುಂಡು,
ಕಾಯುತಿದೆ ನಮ್ಮ ದೇಶದ ಸೈನ್ಯದ ಹಿಂಡು, ನಮ್ಮಲ್ಲಿಯ ಪ್ರೀತಿಯ ಕಂಡು
ವಿದೇಶಿಯರ ಒಡಲಲ್ಲಿ ಬೆಂಕಿಯ ಚೆಂಡು,
ದೇಶಕ್ಕೋಸ್ಕರ ಶ್ರಮಿಸುವೆವು ನಾವು,
ದೇಶಕ್ಕೋಸ್ಕರ ಪ್ರಾಣ ಬಿಡುವೆವು ನಾವು,
ಈ ಮಣ್ಣಿನ ಹೆಮ್ಮೆಯ ಮಕ್ಕಳು ನಾವು,
ಯುವ ಸೈನ್ಯದ ಹುಲಿಮರಿಗಳು..
ಪರಿಸ್ಥಿತಿಗೆ ಅಂಜದೆ ಮುನ್ನುಗ್ವೆವು,
ನಾವು ಸಮುದ್ರದ ಅಲೆಗಳು,
ಗಾಳಿ ವೇಗದಿಂದ ನಡೆದೆವು,
ಒಗ್ಗಟ್ತಿನಲ್ಲಿ ಶ್ರಮ ಪಡುವೆವು,
ಶಿಸ್ತಿನಲ್ಲಿ ಸುಖ ಕಾಣ್ವೆವು,,,,,,,

- ಬಿಂದು

20 Feb 2016, 10:12 am

ಎದೆಯ ಮಹಲು

ಎದೆಯ ಮಹಲೊಳಗೆ
ಮೂಡಿದ ನಿನ್ನ ಪ್ರೀತಿಯ ಗಜಲುಗಳಲ್ಲಿ ಎದೆ ಬಿರಿಯ ನೋವು.
ಸುಮ್ಮನೆ ನಿನ್ನ ಹೆಸರು ಹೇಳಿ
ಆಕಾಶದ ಅಂಗಳದಲ್ಲಿ ಕಣ್ಣಾಡಿಸಿದರೆ
ಅಲ್ಲಿ ಚಂದ್ರಮನಿಲ್ಲ.
ನಿನ್ನ ಹೆಸರಿಟ್ಟು ಕರೆಯುತ್ತಿದ್ದ ಅಷ್ಟು ಚುಕ್ಕಿಗಳೇಕೆ
ದೂರ ಹೋದವು ಗೆಳಯ?
ಈಗಂತು ಕಣ್ಣುಗಳಲ್ಲಿ ಕತ್ತಲೆಯ ರಾತ್ರಿಗಳ ಮೆರವಣಿಗೆ.

ಸವಿಸಂಜೆಯೊಂದಿಗೆ ಕನ್ನಡಿಗ ರವಿಕುಮಾರ

- ರವಿಕುಮಾರ

19 Feb 2016, 01:50 am

ಮಲೆನಾಡು

ಭೂರಮೆಯ ಹಸಿರಸಿರ
ಕೋಮಲತೆಯ ಬೀಡು
ಗಿರಿ ಶೃಂಗಾರದ ಭವ್ಯತೆ
ತಂಪೆರಚುವ ತಂಗಾಳಿಯ ದಿವ್ಯತೆ
ಕಣ್ಣರಳಿಸಿ ನೋಡುವಷ್ಟು
ಚೆಲುವಿನ ಶ್ರೀಮಂತೆ ಮಲೆನಾಡು...


- ಕ.ಲ.ರಘು

16 Feb 2016, 06:09 am

ದೂರವೇ ನಿಂತು...

ದೂರವೇ ನಿಂತು ನೋಡುವೆ ನಿನ್ನನ್ನು
ನಿನ್ನಯ ಜೀವನ ಸುಖವಾಗಿರಲಿ

ನನ್ನೊಡನಾಡಿದ ಮಾತುಗಳನ್ನು
ನನ್ನೊಡನೆ ಕಳೆದ ನೆನಪುಗಳನ್ನು
ನನ್ನಿಂದ ಪಡೆದ ಮುತ್ತುಗಳನ್ನು
ಮರೆತುಬಿಡು ಮರೆತುಬಿಡು/ದೂರವೇ/

ನಿನ್ನಯ ಮುಂದೆ ಕಾಣೆನು ನಾನು
ನಿನ್ನಯ ಹಿಂದೆ ಬಾರೆನು ನಾನು
ನಿನ್ನಿಂದ ದೂರ ಹೋಗುವೆನು
ಮರೆತುಬಿಡು ಮರೆತುಬಿಡು/ದೂರವೇ/

ನಿನ್ನಯ ಜೀವನ ನಿನಗೇ ಇರಲೀ
ನನ್ನಯ ಜೀವನ ನನಗೇ ಇರಲೀ
ಎಂದಿಗೂ ನನ್ನನೆನಪು ಬಾರದಿರಲೀ
ಮರೆತುಬಿಡು ಮರೆತುಬಿಡು/ದೂರವೇ/

- ಚೇತನ್ ಬಿ ಸಿ

14 Feb 2016, 02:33 pm

ಪ್ರೇಮಲೋಕದ ಪಾರಿವಾಳಗಳೆ..!!!

ಪ್ರೇಮಿ ನಾನೆನ್ನಲು ತಾಜಮಹಲ್ ಕಟ್ಟಬೇಕಿಲ್ಲ
ಪ್ರೀತಿ ಶಾಶ್ವತವೆನ್ನಲು ಜೀವ ನೀಡಬೇಕಿಲ್ಲ
ಪ್ರೇಮದೋಲೆಯ ಬರೆಯಲು ರಕ್ತ ಸುರಿಸಬೇಕಿಲ್ಲ
ಅಮರ ಪ್ರೇಮಿಗಳೆನ್ನಲು ಜಗತ್ತಿಗೆ ಸಾರಬೇಕಿಲ್ಲ
ಎರಡು ಹೃದಯಗಳ ಬಡಿತದ ಹೊಸ ಶೃತಿಯು ಒಂದಾಗಲು ಪ್ರತಿದಿನವು ಪ್ರೇಮಿಗಳ ದಿನವೆನ್ನಲು ಶಬ್ದಕೋಶವ ಹುಡುಕಬೇಕಿಲ್ಲ...





- Irayya Mathad

14 Feb 2016, 12:20 pm

ಗೋಕುಲ ಕೃಷ್ಣ

ನನ್ನ ಮುದ್ದು ಕಂದನೆ ನಗುತಿರು ನೀನು
ನಿನ್ನ ನಗುವಿನಲಿ ಕಾಣುವೆ ನನ್ನನೆ || ಪ ||

ಚಂದಿರನ ತಂದು ಕೊರಳಲಿ ಹಾಕುವೆ
ತಾರೆಗಳ ತಂದು ಗೆಳೆಯರ ಮಾಡುವೆ
ನಲಿಯುತ ನೀನು ಮಡಿಲಲಿ ಬಂದೆ ನನ್ನ
ಬಾಳಿಗೆ ನೀನು ಬೆಳಕಾಗಿ ನಿಂದೆ

ನಿನ್ನ ಪುಟ್ಟ ಹೆಜ್ಜೆಯಲಿ ನಗುವನು ಕಂಡೆನಾ
ಮರೆತೊದೆನು ನಾ ಕಹಿ ನೆನಪನ್ನ
ಸೂರ್ಯನ ಕಂಗಳು ತುಂಬಿಹೆ ನಿನ್ನಲಿ
ಸಂತೋಷದ ನಗೆ ಕಡಲು ನಿನ್ನಲಿ ಬೆರೆತಿಹೆ

ಆಡುವ ಮಾತಿನಲಿ ಕೇಳುವ ನುಡಿಯು
ಅಮ್ಮ ಎಂದರೆ ಸಾಕು ನನ್ನ ಜನ್ಮ ಧನ್ಯವು
ಗೋಕುಲ ಕೃಷ್ಣನಂತೆ ಬಂದೆ ನೀ ನನ್ನ ಬಳಿಗೆ
ಬೆಣ್ಣೆಯ ಕದ್ದ ಕೃಷ್ಣ ಕಳ್ಳನೊ ಕಳ್ಳನೊ

ಯಾರು ಇಲ್ಲದ ಜೀವನ ತುಂಬಿದೆ ನನ್ನ ಮಡಿಲ
ಜೀವಕ್ಕೆ ಜೀವ ನೀಡೊ ಜೀವನ ತಂದೆ ನೀ....

- Irayya Mathad

13 Feb 2016, 08:15 pm

ಗೆಲ್ಲಬೇಕಿತ್ತು ಸಾವ

ನೀ ಹೋರಾಡಿದೆಯಣ್ಣ
ಜೀವವ ಪಣಕ್ಕಿಟ್ಟು
ಕಾಡು ಕೊತ್ತಲಲ್ಲಿ
ಮಂಜು ಬೆಟ್ಟದಲ್ಲಿ
ಅರೆ ಹೊಟ್ಟೆಯಲ್ಲಿ
ಕಿರು ನಿದ್ದೆಯಲ್ಲಿ.

ನೀ ಹೋರಾಡಿದೆಯಣ್ಣ
ಜೀವವ ಪಣಕ್ಕಿಟ್ಟು
ದೇಶ ಗಡಿಯಲ್ಲಿ
ಭಾಷೆ ಬಾರದೆಡೆಯಲ್ಲಿ
ರೋಷದ ಮಡುವಲ್ಲಿ
ಧೈರ್ಯದ ಸಿಡಿಯಲ್ಲಿ

ಕೊನೆವರೆಗೂ
ನೀ ಹೋರಾಡಿದೆಯಣ್ಣ
ಜೀವವ ಪಣಕ್ಕಿಟ್ಟು
ಮಂಜಿನಡಿಯಲ್ಲಿ
ರಕ್ಕಸ ಚಳಿಯಲ್ಲಿ
ಹಿಂಜಿದ ನರಗಳಲಿ
ಕುಂದಿದ ಅಂಗಗಳಲಿ

ಆದರೂ ನೀ ಗೆಲ್ಲಬೇಕಿತ್ತು ಸಾವ
ಮರೆಸಬೇಕಿತ್ತು ನಿನ್ನವರ ನೋವ!

(ಮರೆಯಾದ ವೀರ ಯೋಧನ ಹನುಮಂತಪ್ಪ ಕೊಪ್ಪದ ಅವರನ್ನು ನೆನೆದು)

- ಶ್ರೀಗೋ.

11 Feb 2016, 11:45 am