Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಿನ್ನ ನೆನಪಲ್ಲೇ ಕವನ ಬರೆಯೊಕೆ
ನಾನು ಕವಿ ಅಲ್ಲ ಕಣೇ....
ನಿನ್ನ ನೆನಪಲೇ ಸತ್ತು ಬದುಕಿರುವ
ನಾನೊಬ್ಬ ಪ್ರೇಮಿ ಕಣೇ....
- Veeresh Biredar Jalahalli (Raichur)
16 Mar 2016, 03:33 pm
ಹೊರೆಯಾಗದ ಒಲವು ಮರೆಯಾಗದ ಮನವು
ಸಾವಿಲ್ಲದ ಸವಿ ನೆನಪುಗಳ ಹೊತ್ತು
ನಿನ್ನ ನೆನಪಲ್ಲೆ ಸಾಗುತಿದೆ ಈ ಹೃದಯ ದಿಕ್ಕಿಲ್ಲದಕಡೆಗೆ
- sanju Nayaka jalahalli (Raichur)
16 Mar 2016, 02:57 pm
ಬೆಳದಿಂಗಳ ಬಾಲೆ ಎತ್ತ ಸುಳಿದೆ
ಕನಸಿನ ಚಂದಿರ ಆಗಸದ ತುಂಬೆಲ್ಲ
ನಸುನಗುತ್ತ ಹರಡಿದನು
ಮಲ್ಲಿಗೆಯ ಪರಿಮಳದೊಡನೆ ಮೆಲ್ಲಗೆ
ಬೆಳದಿಂಗಳ ನಡುವೆ ಕಾವ್ಯ ಚಂದ್ರಿಕೆಯಾಗಿ ಎದೆಗಿಳಿದೆ
ಸಾಗರದ ಕಡಲಂಚಿನಿಂದ ದೂರಾದ ಚಂದಿರನು
ನಕ್ಷತ್ರಗಳ ಚುಮ್ಮಿಸಿ ಕಡಲಲ್ಲಿ ಲೀನವಾದನು.
ಬೆಳದಿಂಗಳಿಗೆ ಕೊರತೆಯಿತ್ತು
ನಕ್ಷತ್ರಗಳ ಚುಂಬಿಸೋ ಆಸೆಯ ತುಟಿಗಿಳಿಯಿತು...
-ಕನ್ನಡಿಗ ರವಿಕುಮಾರ
- ರವಿಕುಮಾರ
14 Mar 2016, 06:08 pm
ಕಡಲೊಳಗಿನ ಈ ಸುಂದರ ಮುತ್ತು
ಕೊರಳಿನ ಅಲಂಕಾರದ ಸೊಬಗಲ್ಲಿತ್ತು
ಬೆಳಗಿಂದ ಸಂಜೆವರೆಗಿನ ಕಾಲಹರಣದ ಹೊತ್ತು
ಜೀವನದ ಹಣೆಬರಹ ಬರಹ ಬರೆದಿತ್ತು
ಪ್ರೀತಿ ಇಂದ ಅಮ್ಮ ಕೊಟ್ಟ ಕೈ ತುತ್ತು
ಪ್ರತಿ ಜನ್ಮದಲ್ಲು ಬೆಲೆ ಕಟ್ಟಲಾಗದ ಮುತ್ತು
ನಾಗರಾಜ ಎಸ್ ಎಲ್
- ನಾಗರಾಜ ಎಸ್ ಎಲ್ ಸಂತೆಕೊಪ್ಪ
14 Mar 2016, 06:01 pm
ಸವಿಯೋ ಜೇನಿಗೆ ಹೂವಿನ ಆಸೆ
ನಲಿಯೋ ಹೂವಿಗೆ ಹೆಣ್ಣಿನ ಆಸೆ
ನಗುವ ಹೆಣ್ಣಿಗೆ ಶೃಂಗಾರದ ಆಸೆ
ಈ ಶೃಂಗಾರದ ಹೆಣ್ಣು ಪ್ರಿತ್ಸೋ ಹೃದಯಕೆ ಆಸೆ
ನಾಗರಾಜ ಎಸ್ ಎಲ್
- ನಾಗರಾಜ ಎಸ್ ಎಲ್ ಸಂತೆಕೊಪ್ಪ
14 Mar 2016, 05:10 pm
ಕಾಣದ ದೇವರಿಗೆ ಕರ್ಮದ
ಕಾಣಿಕೆ ಕೊಡುವುದು ಅಧರ್ಮವಯ್ಯ
ನೋಡುವುದ ತೋರಿಸಿದ ಹೆತ್ತ ತಾಯಿಗೆ
ತಾಯಿನಾಡಿನ ಋಣ ತೀರಿಸುವುದೇ ಧರ್ಮವಯ್ಯ
- ನಾಗರಾಜ ಎಸ್ ಎಲ್ ಸಂತೆಕೊಪ್ಪ
14 Mar 2016, 04:03 pm
ನಾನು ನಾನಾಗೀಲ್ಲ ನನಗೇನೂ ಆಗಿಲ್ಲ
ಮನದೋಳು ಮಾತಿಲ್ಲ ಮೌನವೇ ಮನದತುಂಬೇಲ್ಲ,
ಜಾರುತ್ತಿರುವ ಕಂಬನಿಗೆ ಕಾರಣವಿಲ್ಲ ಉಡುಕಲೋರಟರೆ ಪ್ರಶ್ನೇಗೆ ಪ್ರಶ್ನೆಯೇ ಹೂರತು ಉತ್ತರದ ಸುಳಿವಿಲ್ಲ........?
ಸಂತಸಕ್ಕೇ ಹರ್ಷವಿಲ್ಲ, ದುಖ್ಖಕ್ಕೆ ಕಂಬನಿಯಿಲ್ಲ ಆದರೊ ಸಮಜದೊಳು ನಾ ಆಪಸಾಮನ್ಯೇನಲ್ಲ
ಕಾರಣ ಇದು ನನ್ನೋವರ್ವನ ವ್ಯತೆಯಲ್ಲ.
ಮೊಂಡಜನರು ಮೇಲೆಳುತ್ತಿಲ್ಲ ಭಂಡಜನರ ಹೂಡೆದುರುಳಿಸುತ್ತಿಲ್ಲ, ಆಡಂಭರತೆಯ ಆಮೀಷಾ ಬಿಸಿಯ ನೇತ್ತರ ಬಿರುಸು ಕೂಂಡೂಯ್ಯುತ್ತಿದೆ ವೀರರ ಬಂಡತನದೆಡೇಗೆ,
ಬದುಕೇಂಬುದೀಲ್ಲಿ ಬಣ್ಣವಿರದ ಬಯಲಾಟ.
ನಾನು ನಾನಾಗಿಲ್ಲ ನನಗೇನು ಆಗಿಲ್ಲ
- ಪುರುಷೋತ್ತಮ್ ತೀರ್ಥಪುರ
13 Mar 2016, 06:05 pm
ಮೋದಲ ಬಾರಿಯ ತೋದಲ ಮಾತಿಗೆ ಮೌನವಾದವಳು,
ತಪ್ಪುಮಾಡಿ ಬೇಪ್ಪಾದಾಗ ನಮ್ಮ ಮೌನಕ್ಕೆ ಮಾತಾದವಳು
ನೋಂದು ನೇಲಕ್ಕೂರಗಿದಾಗ ತಲೆಯ ನೇವರಿಸಿ
ಮತ್ತೋಮ್ಮೆ ಹೂಸ ಜನ್ಮವನಿತ್ತವಳು,
ಮಕ್ಕಳ ಹೀತಕ್ಕಾಗಿ ಸರ್ವಸ್ವವನು ಹೂತ್ತೆ ಹಿಟ್ಟವಳು
ಕೋಟಿ ಜನ್ಮಸಾಲದೆ ನೀನ್ನ ಋಣವ ತೀರಿಸಲು,,,,,,,
- ಪುರುಷೋತ್ತಮ್ ತೀರ್ಥಪುರ
13 Mar 2016, 05:31 pm
ಅಂಚಿನ ತಾವರೆ ಕೊಡವ ಚೆಲ್ಲಿದಳು ಮುತ್ತು ಮಲ್ಲಿಗೆಯ
ಚಂದದಿ ತೋಟದಲ್ಲಿ ಶೃಂಗಾರ ರಸ ಹೂಗಳ ನಡುವಲ್ಲಿ
ರಸಮಲ್ಲಿಗೆಯ ನಡುಬಳಸಿ ಬಿಸಿಉಸಿರಿನ ಸ್ನಾನಕ್ಕೆ ಸ್ನಾಯುಗಳ ಬಂಧಿಸಿ ತೋಳುಗಳ ಬಿಗಿ ತೆಕ್ಕೆಗೆ ಮುತ್ತುಗಳ ರಾಶಿ ಹೂ ಮಳೆಯಾಯಿತು
ಕಂಗಳು ನಾಟಿದವು ಎದೆಯಾಳದ ವಿರಹ ಕೆದಕುತ್ತಾ
ನಾಚಿಕೆಯ ಕೆನ್ನೆಗುಳಿಯು ಕೆಂಪಾಗಿ ಮಂಕಾಯಿತು ಮುತ್ತಿನ ಮತ್ತಿನಲ್ಲಿ...
ಕನ್ನಡಿಗ ರವಿಕುಮಾರ.
- ರವಿಕುಮಾರ
13 Mar 2016, 06:25 am
ತಿಳಿಯದೆ ಪರಿಚಯವೂ ಮೊಳಕೆಯಂತೆ ಮೂಡಿದೆ,
ಅರಿಯದೆ ಸ್ನೇಹವು ತಾನಾಗಿಯೇ ಚಿಗುರಿದೆ.
ಹೊಸ ಹೊಸ ಮಾತುಗಳು ದಿನ ದಿನವೂ ಸಾಗಿದೆ,
ಆದಿ ಇಲ್ಲಿ ಅಂತ್ಯವೆಲ್ಲಿ ತಿಳಿಯದೆಯೇ ನಡೆದಿದೆ,
ಮೌನವಿಲ್ಲದೆ ಮಾತು ಹೂವಿನಂತೆ ಅರಳಿದೆ,
ಮರದಂತೆ ಬೆಳೆಯುತಿದೆ ಜಾತಿ ಭೇದವಿಲ್ಲದೆ,
ಬಾಳ ಪಯಣದಲ್ಲಿ ಹೀಗೆ ಸಾಗಲಿ ಸ್ನೇಹ ಕೊನೆಗಾಣದೆ,
- ಬಿಂದು
13 Mar 2016, 06:01 am