Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಅವಳ ಒಂದು ಕಿರುನಗೆ ಸಾಕು
ನಾ ಜಗವನ್ನೆ ಜಯಿಸಿಬಿಡುವೆನು.
ಅವಳ ಕೈತುತ್ತಿಟ್ಟರೆ ಸಾಕು ರಾಗಿ ಅಂಬ್ಲಿ ನನಗೆ ಮೃಷ್ಟಾನ್ನ ಭೋಜನ.
ಅವಳು ಜೊತೆಗಿದ್ದರೆ ಸಾಕು ಗರಿಮನೆ ನನಗದು ಅರಮನೆ..
- ರವಿಕುಮಾರ
26 Mar 2016, 12:14 pm
ಪ್ರಿಯ!
ನಿನ್ನ ನಗುವಿನ ಕ್ಷಣಗಳನ್ನು !
ನನ್ನ ಹೃದಯದಲ್ಲಿ ಶೇಕರಿಸಿದ್ದೆ ,
ಇಂದು ಎಲ್ಲವೂ ಕಣ್ಣೀರಾಗಿ ಹೊರಬರುತ್ತಿದೆ...
ಆ ಕಣ್ಣೀರಿನ ಹನಿಗಳಿಂದ
ಮತ್ತಷ್ಟು ಎತ್ತರಕ್ಕೆ ನನ್ನ ಪ್ರೀತಿ ಬೆಳೆಯುತಿದೆ !
- ವಿನುತ ಕಿರಣ್ ಗೌಡ
25 Mar 2016, 02:19 am
ಹಳೆಯ ನೆನಪು ಮರೆತು
ಹೊಸ ರೀತಿಯ ನೆನಪೊದಿಗೆ
ಬಣ್ಣದ ಹಚ್ಚಿವುದೇ ಹೋಳಿ....
- Basayya Hiremath
23 Mar 2016, 05:08 pm
ನಾನೊಂದು ತೀರ
ನೀನೊಂದು ತೀರ
ನಮ್ಮಿಬ್ಬರ ನಡುವೆ ನೆನಪುಗಳೆ ಸಾಗರ
ತೀರಿಸುಬಾರ ಮನಸಿನ ಭಾರ
ಇರದಿರಲಿ ನಮ್ಮಿರನಡುವೆ ಯವುದೇ ಅಂತರ
ಒಂದಾಗೋಣ ಬಾ ಹತ್ತಿರ
ಹಾರೋಣ ಬಾ ಪ್ರೇಮದ ಹಕ್ಕಿಗಳಾಗಿ ಬಾನೆತ್ತರ...
- ವಿನುತ ಕಿರಣ್ ಗೌಡ
23 Mar 2016, 09:06 am
ನೀನು ನನ್ನಿಂದ ಎಷ್ಟೇ ದೂರ ಹೋಗ ಬಯಸಿದರು
ನಿನ್ನ ನೆನಪುಗಳು ನನ್ನಿಂದ ದೂರವಾಗುತ್ತಿಲ್ಲ ಗೆಳಯ.,
ನೆನಪಲ್ಲೇ ಕಟ್ಟುವೇ ಪುಟ್ಟದೊಂದು ಅರಮನೆಯ ...
ಒಮ್ಮೆಯಾದರೂ ನನ್ನ ನೆನಪಾದರೆ ತಪ್ಪದೆ ಬಂದು ಬಿಡು ಗೆಳಯ.,
ನಾ ಕಾಯುವೇ ನೀ ಬರುವ ದಾರಿಯನ್ನು.
ನಿನ್ನ ಪ್ರೀತಿಗಾಗಿ ..
- ವಿನುತ ಕಿರಣ್ ಗೌಡ
23 Mar 2016, 03:12 am
ಕಾಡು ಹುಡುಗಿ,ಮಧುರ ಪಯಣ...
ನೀಲಿ ಹೂವು, ಹಸಿರು ಪ್ರೀತಿ..
ಬಯಕೆ ಚಿಗುರಿ ಮೋಡ ಮುಸುಕಿ..
ಅರಸಿ ಬ0ದೆ...
ಮೌನ ಹೆಜ್ಜೆ ಮೌನ ಹೆಜ್ಜೆ......
ಶ್ವೇತ ಕನಸು,ಶಬ್ಧ ಗೀತೆ..
ಹೂವ ಬೆಳಕು,ಮಳೆಯ ನೆನಪು..
ಚಿಗುರು ಪಾದ,ಬಯಕೆ ಸ್ನೇಹ..
ಬಟ್ಟ ಬಯಲು,ಚಕ್ರ ವ್ಯೂಹ..
ಹುಡುಕಿ ನಿ0ತೆ..
ಮೌನ ಹೆಜ್ಜೆ ಮೌನ ಹೆಜ್ಜೆ.......
- Shreepadh
22 Mar 2016, 03:36 pm
ಸಾಗರದಡಿ ಮುತ್ತು ರತ್ನಗಳನ್ನು
ಕೊಳ್ಳೆ ಹೊಡೆಯುವ ನಿನಗೆ
ಉಕ್ಕೇರುವ (!) ಈ ಅಲೆಗಳ ಚಿಂತೆ
ನಿನಗೇಕಿಲ್ಲ?
- ಕೊಟ್ರೇಶ ಕರಣಂ ಉತ್ತಂಗಿ. ಮಲೇಷಿಯಾ
21 Mar 2016, 01:34 pm
ಗೆಳತಿ ನಿನ್ನ ನೆನಪುಗಳು
ಎಷ್ಟೋ ಕವನಗಳಿಗೆ
ಜನ್ಮ ನೀಡಿದೆ ....
- Veeresh Biredar Jalahalli (Raichur)
20 Mar 2016, 07:23 am
ಹೋಗಬ್ಯಾಡ್ರಿ ಯಾರ್ಯಾರೂ ಅಂದದ ಹಿoದ
ಅದರಾಗ ಇರೋದಿಲ್ಲ ಏನೇನೂ ಗಂಧ
ಈ ವಿಷಯದಲ್ಲಿ ನಾನಿನ್ನೂ ಕಂದ
ತಪ್ಪಿದ್ರೆ ಬೈಬ್ಯಾಡ್ರಿ ನೀವು ಬಂದ !!!
- BIRESH KOTI
20 Mar 2016, 04:20 am
ಈಗೀಗ ತೀರಾ ನೆನಪಾಗ್ತೀಯ ಕಣೇ..
ಅದೆಷ್ಟೇ
ಮುಚ್ಚಿಟ್ಟರೂ ಬಚ್ಚಿಟ್ಟರೂ
ಅದುಮಿಟ್ಟುಕೊಂಡ ನಿನ್ನೊಲವಿನ
ನನ್ನೆದೆಯ ಅಳುವನ್ನು, ಮುಂಜಾನೆ
ಹೊದ್ದ ಹೊದಿಕೆಯ ಮೈಗೆ ನಿನ್ನ
ನೆನೆವ ಭಾವುಕತೆಯಿಂದ ಉಕ್ಕಿಬರುವ
ಕಣ್ಣೀರ ಸ್ಪರ್ಶವ ಕೊಟ್ಟು, ನನಗೆ
ಗೊತ್ತಿಲ್ಲದಂತೆಯೇ ಅದರೊಂದಿಗೆ
ನನ್ನೆಲ್ಲಾ ನೋವನ್ನ ಹೇಳಿಬಿಡುವಷ್ಟು
ಎಷ್ಟೇ ಹಾದಿ ಬದಲಿಸಿ ನಡೆಯಲು
ಪ್ರಯತ್ನಿಸಿದರೂ, ತಿರುಗಿ ಬಂದು
ನನ್ನೆದೆಯ ಕದವನ್ನೇ ಬಡಿಯುವ
ನಿನ್ನ ನೆನಪುಗಳನ್ನು ಅಪ್ಪಿಕೊಳ್ಳದೆ
ತೊರೆಯಲಾಗುತ್ತಿಲ್ಲ ಕಣೇ
ಕರುಣೆಯಿಲ್ಲದ ಕಾಲವು ಕಸಿದುಕೊಂಡ
ನನ್ನೆಲ್ಲಾ ಖುಷಿಯನ್ನು ಬೇಡಲೂ ಆಗುತ್ತಿಲ್ಲ
ಕಂಗೆಡಿಸಿ ಕೊಲ್ಲುವ ನಿನ್ನ ನೆನಪುಗಳು
ನಿನ್ನಷ್ಟೇ ಮೊಂಡು ಕಣೇ
ನಿನ್ನ ಬೆಚ್ಚನೆಯ ಒಲವಿನ ಸಂಗಡವನ್ನಷ್ಷೇ
ಬಯಸಿದ ಈ ಬಡಪಾಯಿ ಜೀವಕ್ಕೆ
ತಬ್ಬಲಿತನದ ಬಿಸಿಮುಟ್ಟಿಸಿದ ಕಾಲವನ್ನು
ಶಪಿಸಲು ಆಗುತ್ತಿಲ್ಲ, ನನ್ನೊಳಗಿನ ನಿನ್ನ
ನಿನ್ನೊಳಗಿನ ನನ್ನ ಮರೆತು
ಜೀವಿಸಲೂ ಆಗುತ್ತಿಲ್ಲ. 'ನಾನ'.
-ಶ್ರೀನಾಥ್ ಪಿ ವಿಜಿ
- ಶ್ರೀನಾಥ್ ಪಿ ವಿಜಿ
18 Mar 2016, 09:45 pm