ಕಡಲೊಳಗಿನ ಈ ಸುಂದರ ಮುತ್ತು
ಕೊರಳಿನ ಅಲಂಕಾರದ ಸೊಬಗಲ್ಲಿತ್ತು
ಬೆಳಗಿಂದ ಸಂಜೆವರೆಗಿನ ಕಾಲಹರಣದ ಹೊತ್ತು
ಜೀವನದ ಹಣೆಬರಹ ಬರಹ ಬರೆದಿತ್ತು
ಪ್ರೀತಿ ಇಂದ ಅಮ್ಮ ಕೊಟ್ಟ ಕೈ ತುತ್ತು
ಪ್ರತಿ ಜನ್ಮದಲ್ಲು ಬೆಲೆ ಕಟ್ಟಲಾಗದ ಮುತ್ತು
ತಿಳಿಯದೆ ಪರಿಚಯವೂ ಮೊಳಕೆಯಂತೆ ಮೂಡಿದೆ,
ಅರಿಯದೆ ಸ್ನೇಹವು ತಾನಾಗಿಯೇ ಚಿಗುರಿದೆ.
ಹೊಸ ಹೊಸ ಮಾತುಗಳು ದಿನ ದಿನವೂ ಸಾಗಿದೆ,
ಆದಿ ಇಲ್ಲಿ ಅಂತ್ಯವೆಲ್ಲಿ ತಿಳಿಯದೆಯೇ ನಡೆದಿದೆ,
ಮೌನವಿಲ್ಲದೆ ಮಾತು ಹೂವಿನಂತೆ ಅರಳಿದೆ,
ಮರದಂತೆ ಬೆಳೆಯುತಿದೆ ಜಾತಿ ಭೇದವಿಲ್ಲದೆ,
ಬಾಳ ಪಯಣದಲ್ಲಿ ಹೀಗೆ ಸಾಗಲಿ ಸ್ನೇಹ ಕೊನೆಗಾಣದೆ,
ಮನಸ್ಸಿದ್ದರೆ ಮಾತ್ರ ಪ್ರೀತಿಸೋದು,
ಬಯಕೆಯ ಪ್ರೀತಿ;
ಮನಸ್ಸಿಲ್ಲದಿದ್ದರೂ ಪ್ರೀತಿಸೋದು,
ತೋರಿಕೆಯ ಪ್ರೀತಿ;
ಎಲ್ಲರನ್ನೂ ಎಲ್ಲವನ್ನೂ ಪ್ರೀತಿಸೋದು,
ನೈಸರ್ಗಿಕ ಪ್ರೀತಿ;
ಸಾವಿನ ಕೊನೆಗಳಿಗೆಯಲ್ಲೂ ಪ್ರೀತಿಸೋದೆ
ನಿಜವಾದ ಪ್ರೀತಿ
ಮನದೊಳಗಿನ ಅಂತರಾಳದ ಪ್ರೀತಿ
ಏಳೇಳು ಜನುಮದ ಪ್ರೀತಿ
ಅದು ತಾಯಿಯ ಪ್ರೀತಿ
ತಾಯಿ ತ್ಯಾಗದ ಮೂರ್ತಿ
ಆಕೆ ಕಾಮಧೇನುವಿನ ಪ್ರತಿ