ಸಾವಿರಾರು ಮೈಲಿ ದೂರ ಕಳುಹಿಸಿದೆ ನೀ ನನ್ನ
ಹಾಗಿದ್ದರು ಸಾವಿರಾರು ಕ್ಷಣಗಳು ನಾ ನೆನೆಯುವೆ ನಿನ್ನ
ನಿನ್ನ ಪ್ರೀತಿಯು ಆಕಾಶದಲ್ಲಿರುವ ತಾರೆಗಲಿಗಿಂಥ ಚೆನ್ನ
ಆದರಿಂದ ನೀನೆ ನನ್ನ ಮುದ್ದಿನ ರನ್ನ
ಓ ನನ್ನ ದೇವರೇ ನಿನ್ನ ವಾಕ್ಯವು..
ಸುಡುವ ಬಿಸಿಲಿನಲ್ಲಿ ತಂಪಾದ ನೆರಳಂತೆ
ಕಡು ಭೈಗುಳ ನಡುವೆ ಸಮಾಧಾನದ ಮಾತಿನಂತೆ
ಗಾಡಾಂಧಕಾರದಲ್ಲಿ ನಂಬಿಕೆಯ ಬೆಳಕಿನಂತೆ
ದಾಹದ ಸಮಯದಲ್ಲಿ ಜೀವ ಜಲದ ಬುಗ್ಗೆಯಂತೆಯು ಇದೆ.
ಬರೆಯುವುದಕ್ಕೆ ಸಾಲುಗಳಿಲ್ಲ ಆದರು ಅವಳೆ ನಾಯಕಿ
ಕನಸುಗಳು ಸ್ಪಷ್ಟವಾಗಿಲ್ಲ ಆದರು ಅವಳೆ ಅಲ್ಲು
ನೆನಪುಗಳು ಮಾಸಿಲ್ಲ ಅವಳಿಲ್ಲದೆ
ಮೊದಲ ಪುಟವೆ ಖಾಲಿಹಾಳೆ
ಮುನ್ನುಡಿಯು ಅವಳೆ ಖಾಲಿಯಾಗಿಯೆ
ಎಲ್ಲವು ಅಸ್ಪಷ್ಟ ಅವಳ ನಗುವೊಂದಿಗೆ
ಏನು ಹೊಳೆಯದು ಬರೆಯಲು ಆದರು ಬರೆಯೊ ಚಪಲ
ಎಲ್ಲವೂ ಅವಳಿಂದಾನೆ ಬರೆದೆ ಬರೆದೆ ಅಂತ್ಯವೇ ಇಲ್ಲ
ಗೀಚಿದೆ ಬಿಳಿಯ ಹಾಳೆಯ ಮೇಲೆ
ಅದು ಬಣ್ಣ ಬಳಿದೊಡನೆ ಕುಣಿದಾಡಿತು
ಮುನ್ನುಡಿ ಖಾಲಿ ಹಾಳೆಯಾದರು
ಕಥೆಗೆ ಅಂತ್ಯ ಕಾಣಲಿಲ್ಲ...
ಕವಿತೆಯ ಪದಗಳೆಲ್ಲವು ಖಾಲಿಯಾದವು
ಅವಳ ವರ್ಣನೆಯ ವಾಕ್ಯಗಳೆಲ್ಲವು ಮುಗಿದುಹೋದವು
ಇನ್ನು ಮುಂದೆ ಅವಳು ಮತ್ತು ನಾನೆ
ಖಾಲಿ ಹಾಳೆಗಳೆ ಸಂಭಾಷಣೆ
ಉಳಿದಿದ್ದ ಪದಗಳ ಹುಡುಕಾಟ
ಬಿಳಿ ಹಾಳೆಯು ಬಣ್ಣ ಬಳಿದುಕೊಳ್ಳುತ್ತಿತ್ತು
ನನ್ನ ಲೇಖನಿ ನಿಂತು ನೋಡುತ್ತಿತ್ತು
ಬರೆಯಲು ಕೈ ಚಾಚಲಿಲ್ಲ
ಅವಳು ಮೌನವಾಗಿದ್ದಳು...