Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
- Shridevi
27 Apr 2026, 01:10 pm
ನೇಸರಾ ನೋಡು
ಮೂಡಣದಂಗಣ ಥಣಥಣ ಹೊಳೆದಿದೆ /
ಮೂಡಿದೆ ನೇಸರ ಹೊಂಗಿರಣ //
ಮೋಡದ ಅಂಚೊಳು ಚೆಲ್ಲಿದೆ ನೆತ್ತರ/
ಮೂಡಿದೆ ಭಾಸ್ಕರನವತರಣ //
ಸುಂದರ ತಿಲಕವು ತಾಯಿಯ ಹಣೆಗಿದು /
ಕುಂದದ ನೇಸರ ತಿಲಕದೊಲು //
ಬಂದನು ಚಿಲಿಪಿಲಿ ಜೋಗಳ ಕೇಳುತ /
ಮಿಂದಿಹ ಸಾಗರ ಹಂಡೆಯೊಲು //
ಬಿಂಬಕೆ ಥಳಥಳ ಕಡಲಲೆ ಮಿಂಚಿದೆ //
ಬಿಂಬಿತ ಭಾನುವ ವೈಭವವು //
ನಂಬಿಹ ದೈವವು ನಿಜಕೂ ನೀನೇ /
ಗೊಂಬೆಯಲೇನದು ಸಂಭವವು //
ಸುಮಗಳ ಫಕಳೆಯ ಸವರಿದೆ ಮುದ್ದಿಸಿ /
ಗಮನವ ಸೆಳೆದಿದೆ ಜಗದಲ್ಲಿ //
ಸಮರಿಹರಾರೀ ಜಗದೊಳ್ ದೇವರು /
ತಮವಾ ನೀಗುವ ನಡೆಯಲ್ಲಿ //
ಚಿಗುರೆಲೆ ಕುಣಿತವು ಖಗಮಿಗ ಪುಳಕವು /
ನಗುವಿನ ಬಗೆಬಗೆ ನೋಟಗಳು //
ಗಗನದ ದೊರೆಯಿವ ಮೋಡವೆ ನರ್ತಕಿ /
ಬಗೆಬಗೆ ಚುಂಬಿಸಿ ಕೂಟಗಳು //
ಕಪ್ಪನೆ ಸುಂದರಿ ಮೋಡಿಣಿ ಮಿಲನದಿ /
ದೊಪ್ಪನೆ ಜನನವು ವರುಣನವ //
ಬೆಪ್ಪೊಳು ಬೆವರಿಸಿ ಚಾಟಿಯ ಬಾರಿಸಿ /
ತಪ್ಪಿಗೆ ಶಿಕ್ಷೆಯು ಕರುಣನಿವ //
ಶಿವಪ್ರಸಾದ್ ಆರಾಧ್ಯ ಮಲ್ಲರಬಾಣವಾಡಿ ನೆಲಮಂಗಲ
- shivaprasad aradhya
14 Apr 2026, 05:15 pm
ತಾಯಿಯ ನುಡಿ
ಮಗುವಿನ ಮೊಗದೊಳ್ ನಗುವಿನ ಕುಡಿಯಿದು /
ಸೊಗಸಿನ ಮಮತೆಯ ಕೂಗಿನ ನುಡಿಯಿದು //
ಅಮ್ಮನು ಬಾಚುತ್ತಲಿಟ್ಟ ಮುತ್ತಿದು /
ನಮ್ಮಯ ಹೊಣೆಯಿದು ತುತ್ತಿನ ಗತ್ತಿದು //
ಚಂದನ ವನವಿದು ಮಂದಿರವದರಲೆ /
ಸುಂದರ ಮನವಿಹ ಕಂದರ ನುಡಿಯಲೆ //
ಚೆಂದದಿ ಕನ್ನಡ ಕುಂದದೆ ಕಲಿವರು /
ಹಂದರ ಲತೆಯೊಳ್ ಸುಮಗಳು ನಲಿವರು //
ನುಡಿಯೊಳ್ ಮುತ್ತಿನ ಹಾರವ ಹಾಕುವ/
ದುಡಿಯುವ ಬೆವರಿನ ಹನಿಗಳ ಹರಿಸುವ//
ಜಾಣರ ಜನಪದ ಸುಲಿದಿಹ ಫಲದೊಳ್ /
ವಾಣಿಯು ನಾಟ್ಯವು ಒಲಿದಿಹ ಛಲದೊಳ್ //
ಕಗ್ಗದ ಸಗ್ಗಕೆ ಕರೆಯುತಲೋಗರ
ಹಿಗ್ಗಲಿಯನುಭವ ಸಾರದ ಸಾಗರ //
ಮಗ್ಗದಿ ನೇಯುತ ಪತ್ತಲ ಮಾತೆಗೆ /
ಸುಗ್ಗಿಯ ಫಸಲಿದೆ ನುಡಿಯುವ ಮಾತಿಗೆ / /
ಹಳ್ಳಿಯ ಜನಗಳವೊಳ್ಳೆಯ ನುಡಿಗಳು /
ಬಳ್ಳಿಯ ಕಂಪಿನ ಭಾವದ ಹೂಗಳು //
ಕುಡಿಯಿರಿ ತಂಪಿಗೆ ಪಾನಕ ಬಿಸಿಲಿಗೆ /
ನುಡಿಯಿರಿ ಕನ್ನಡ ತಿಲಕವು ನೊಸಲಿಗೆ //
ಚಿಣ್ಣರು ತೊದಲುತಲಮ್ಮಾ ಯೆನ್ನಲು /
ಬಣ್ಣಿಸಲಾಗದು ಕನ್ನಡ ನನ್ನಲು //
ರಾಗದಿ ಗಾನದಿ ಹೊಗಳುವ ಹಾಡುವ /
ಬಾಗುತ ನಮಿಸುತ ರಕ್ಚಿಸಲೋಡುವ //
ನಮ್ಮೆದೆ ತುಂಬಲಿ ನಮ್ಮದೆ ತಾಯ್ನುಡಿ/
ಹೊಮ್ಮಲಿ ಚಿಮ್ಮಲಿ ಭಾವವು ಯಿವಳಡಿ //
ಹೆಮ್ಮೆಯ ನಮ್ಮಯ ಕನ್ನಡ ಬೆಳೆಯಲಿ /
ತಮ್ಮಯ ಮನವನು ನೀಡಿರಿವುಳಿಯಲಿ //
ಶಿವಪ್ರಸಾದ್ ಆರಾಧ್ಯ
- shivaprasad aradhya
14 Apr 2026, 05:12 pm
ಲಲಿತ ಲಯ ಛಂದೋಬದ್ಧ ರಚನೆ
ಹೊಂಗೆಯಾ ನೆರಳಲ್ಲಿ
ಹೊಂಗೆಯಾ ನೆರಳಲ್ಲಿ ತುಂಗೆನೀ ಬಂದಾಗ /
ರಂಗಿನಾ ಹೂವುಗಳು ಕುಣಿದಾಡಿವೆ//
ಅಂಗುಲಂಗುಲದಲ್ಲು ರಂಗಿನೀ ತಂಗುತ್ತ/
ಕಂಗಳಿವು ಹೊಸಗಾನ ತಾಹಾಡಿವೆ //
ಮರದಡಿಯ ಹೂವುದುರಿ ಕರದಲ್ಲಿ ನೀಸುರಿದು /
ಸರಸದೊಳು ಹೂಮುತ್ತು ನೀನೀಡಿದೆ //
ಮರಬಾಗಿ ಪಿಸುಮಾತ ಸರಸರನೆ ಕೇಳುತ್ತ/
ನೆರವಾಗಿ ತಂಗಾಳಿ ತಾಸವರಿದೆ //
ಅಳಿಲೊಂದು ಚೆಲುವೆಯಾ ಬಳಿಯಲ್ಲಿ ಸುಳಿದಾಡಿ /.
ಬಳಿಸಾರಿ ಚುಂಬನವ ತಾನೀಡಿದೆ //
ನಳನಳಿಸಿ ನಳಿನಮುಖಿ ಕಳೆಗೊಂಡು ಮಿಂಚುತ್ತ /
ಫಳಪಳನೆ ಮುಗುಳುನಗೆ ಹೊರಚೆಲ್ಲಿದೆ //
ಅಲ್ಲೆಲ್ಲೊ ಕೋಗಿಲೆಯು ಮಲ್ಲೀನ ಕರೆಯುತ್ತ /
ಬಿಲ್ಲಿನಾ ಹುಬ್ಬಿನೊಳು ಸುಮಬಾಣವು //
ಎಲ್ಲೆಲ್ಕು ನೋಡಿದರು ಚೆಲ್ಲಿನೀ ಕುಳಿತಿರುವೆ /
ಮೆಲ್ಲುಸಿರು ಸಂಗೀತದಾತಾಣವು //
ಎಳೆನೀರೆ ಕುಡಿಯುತ್ತಲಾನೀರೆ ಹೊರಚೆಲ್ಲಿ /
ಜಳಕದಲಿ ಕಂಚುಕವು ನಲಿದಾಡಿದೆ //
ಪುಳಕದೊಳ್ ನೀನಕ್ಕು ಕಳೆಯೇರಿ ವದನದೊಳ್ /
ದಳಬಿರಿದು ಜೇನುಕ್ಕಿ ಕುಣಿದಾಡಿದೆ //
ಕಲ್ಲೆಸೆದು ಕೊಳದೆಡೆಗೆ ಚೆಲ್ಲುತ್ತ ನಿನ್ನಮನ /
ಜಲ್ಲೆಂಬ ಭಾವಗಳು ಸುತ್ತುತ್ತಿವೆ //
ಮಲ್ಲಿಗೆಯ ಮಾಲೆನೀ ಮುಡಿಸೇರಿ ಸಾರ್ಥಕವು /
ಮಲ್ಲಿಯಾ ಕನಸುಗಳು ಕತ್ತೆತ್ತಿವೆ//
ಶಿವಪ್ರಸಾದ್ ಆರಾಧ್ಯ ಮಲ್ಲರಬಾಣವಾಡಿ ನೆಲಮಂಗಲ
- shivaprasad aradhya
11 Apr 2026, 10:48 am
ಕಾಯ ಮಾಯ
ಕಾಯುತಿರುವೆ ಕಾಯವನ್ನು /
ನಾಶವಾಗಿ ಬಿಡುವುದು //
ಸಾಯದಂತೆ ಮಾಡಲಾರೆ /
ನಶಿಸಿಜೀವ ಬಿಡುವುದು//
ಹೊಕ್ಕ ಕಳ್ಳ ಮನೆಯ ಒಳಗೆ/
ನೆಕ್ಕಿ ರುಚಿಯ ತಿನಿಸನು //
ಸಿಕ್ಕು ಬಿದ್ದು ಧರ್ಮದೇಟು /
ಬಿಕ್ಕಿಬಿಕ್ಕಿ ಅತ್ತನು //
ಕೂಪದೊಳಗೆ ಸೇರಿಬಿಟ್ಟ /
ಕಪ್ಪೆತೆರದಿ ವಟವಟ /
ಕೋಪ ತಾಪ ಎಲ್ಲ ಕೊನೆಗೆ /
ಸುಟ್ಟು ಹೋಗಿ ಚಟಪಟ //
ಹುಚ್ಚು ಕದುರೆ ಚೋರ ಮನವ /
ಹಿಡಿದು ಕಲಿಸು ಯತ್ನದಿ //
ಕೆಚ್ಚಿನಿಂದ ಗುರಿಯ ಕಡೆಗೆ /
ಹತ್ತು ಸಾಗು ವೇಗದಿ //
ವಿಹರಿಸುತ್ತ ಚೆಲುವ ಜಗದಿ /
ಮನದ ರಾಣಿ ಜೊತೆಯಲಿ /
ಸಹಿಸು ಕಷ್ಟ ನಷ್ಟ ಜೊತೆಗೆ /
ಭವ್ಯ ಯಾತ್ರೆ ಮತಿಯಲಿ //
ಶಿವಪ್ರಸಾದ್
- shivaprasad aradhya
10 Apr 2026, 07:47 pm
ಶರ ಷಟ್ಪದಿಯಲ್ಲಿ
ಗದಾಯುದ್ಧ ಸ್ವ ಪ್ರಯತ್ನದ ಒಂದು ಯತ್ನ
ಗಡಗಡ ನಡುಗಿತು
ಗುಡುಗುವ ಕಲಿಗಳ
ಹೊಡೆತಕೆ ಧರಣಿಯು ಬಿರುಕಾಗಿ/
ಗಡಸಿನ ದನಿಯಲಿ
ಗುಡುಗನು ಮೀರಿಸಿ
ಸಿಡಿಲಿನ ಹೊಡೆತವು ಬಿರುಸಾಗಿ // /
ಚೆಲ್ಲಿದೆ ಬೆವರಂ
ಯೆಲ್ಲೆಡೆ ಕೇಶವು
ಸಲ್ಲದ ಬಿರುನುಡಿಯೆದೆಸೀಳಿ/
ಮಲ್ಲರು ಬಲ್ಲರು
ಕಲ್ಲಿನಯೆದೆಯೊಳ್
ಮಣಿಸಲು ಹೊಡೆತದಿಯೆದುರಾಳಿ /
ಬಿರಿಯುವ ಭೂಮಿಯ /
ಲುರಿಯುವ ನೇಸರ/
ತೆರದೊಳ್ ಹೊಡೆತದ ಸಮಬಲರು/
ಸರಿಸಮ ಕಾದುತ
ಸರಿಯುತಲೆಗರುತ
ವರಸೆಯಲಿಕ್ಕುತ ಭುಜಬಲರು/
ಪುಟಿದಿಹ ಮೊನಚಿನ
ಹಠದಲಿ ನೋಟವು
ಪಟಪಟ ಹೊಡೆತವ ಹಾಕುತಲಿ/
ಕಟಕಟ ಕಡಿದುಂ /
ಭಟರಾ ಹಲ್ಗಳು
ಸೆಟೆದುಂ ರೋಮಗಳೇಳುತ್ತ/
ಚಕಮಕಿ ಚಳಕವು
ತಕತಕ ಕುದಿತದಿ
ಯಕಟಕಟಾಹರಿ ಕಾಯುತಂ//
ಲಕಲಕ ಹೊಳೆಯುವ
ತಕಥೈ ಗದೆಯೊಳ್
ಚಕಚಕ ಹೊಡೆತದಿ ಹಾಯುತಂ //
ಗಧೆಗಳ ತಿರುಗಿಸಿ
ವಧೆಗಳ ಧಣಿಗಳು
ಸದೆಬಡಿಯುತ್ತಲಿ ಪಟ್ಟುಗಳು//
ಮದಿರೆಯ ಕುಡಿದಿಹ
ಮದಿಸಿದ ಗಜಗಳ
ವಿಧವಿಧ ತಾಡನ ಪೆಟ್ಟುಗಳು //
ಪಟ್ಟಿನಪೆಟ್ಟುಗ /
ಳಿಟ್ಟಿರುಸಿಟ್ಟಿನ /
ಗಟ್ಟಿಯ ತೋಳುಗಳುಕ್ಕಿನೊಲು//
ಜಟ್ಟಿಗಳಲ್ಲಿವೆ/
ಮಟ್ಟವಹಾಕುವ
ತೊಟ್ಟಿಹಬಟ್ಟೆಯು ತೊಪ್ಪೆಯೊಲು///
ಪೆಟ್ಟುಗಳಾಟವ
ಕೆಟ್ಟನು ನೋಡಿಂ
ಬಿಟ್ಟೋಡಿದನವ ರವಿಮನೆಗೆ/
ಗುಟ್ಟನೆಯರಿಯದೆ
ಪೆಟ್ಟಿಗೆ ಸೋತನು
ದಟ್ಟನೆ ಹೊಡೆತವು ಭೀಮನಿಗೆ/
ದಿಗ್ಗಜರಾಟಕೆ
ಸಗ್ಗದ ದೇವರು
ನುಗ್ಗುತ ಬಂದರು ನೋಡಿದರು/
ಕುಗ್ಗದೆ ಬಡಿದುಂ
ಬಗ್ಗುಬಡಿಯುವರ
ಜಗ್ಗದೆ ನೋಡಿದ ಪುರಜನರು/
ಕಿಡಿಗಳು ಚಿಮ್ಮಿವೆ
ನುಡಿಗಳುವುದುರಿವೆ
ಗಡಿಯಿಂದಾಚೆಗೆ ಮಿಂಚಾಗಿ/
ಸಿಡಿಲಾಗಿಂ ಸುರಿ
ಜಡಿಮಳೆ ಪಟಪಟ
ಗುಡುಗುವ ಗಧೆಗಳು ಹೊಂಚಾಗಿ /
ಹೊಡೆತದ ಸದ್ದಿಗೆ
ಗಡಿಯಾ ವನಚರ
ಗಡಿಬಿಡಿ ಬೆರಗೊಳ್ ನಿಲ್ಲುತಲಿ/
ಪುಡಿಪುಡಿ ಮರಗಳು
ತಡೆಯಿರದಂತಿರೆ
ಕಡೆಗೀ ಶಾಮನು ಸಂಚಿನೊಳು /
ಶಕ್ತಿಯತೋರುವ
ಯುಕ್ತಿಯಲಿಕ್ಕಲು
ಮುಕ್ತಿಯಧಾಯಕ ಕಪಟನಟ/
ಭಕ್ತಿಗವೊಲಿದಿಹ
ಶಕ್ತಿಯಪಡಿಸಲ್
ರಕ್ತವವುಕ್ಕಿಸಿ ವೈರಿತಟ/
ಅಂಕಕೆ ಪರದೆಯು
ಶಂಕೆಯುಯೇತಕೆ
ಬಂಕದಿ ಬಿದ್ದಿಹ ಕೌರವನು//
ಅಂಕವ ಮುರಿದನು /
ಲಂಕಿಣಿ ಮೋಸದಿ /
ಕಿಂಕರ ಯಮನಿವ ಗೌರವನು //
ಮೋಸಕೆ ಮೋಸವು
ಸಾಸದ ವಿಜಯವು
ಭಾಸವು ತಂತ್ರವು ಯುದ್ಧದೊಳು //
ಹಾಸವು ವದನದಿ
ದಾಸನ ರಕ್ಷಿಸಿ
ಘಾಸಿಯು ವೈರಿಗೆ ಸೋಲಿನೊಳು /
ಶಿವಪ್ರಸಾದ್ ಆರಾಧ್ಯ ಮಲ್ಲರಬಾಣವಾಡಿ
- shivaprasad aradhya
09 Apr 2026, 06:26 am
ನವ್ಯ ಕಾವ್ಯ / ಛಂದೋಬದ್ಧ ಕಾವ್ಯ
ಎರಡಕ್ಕೂ ತಪಸ್ಸು ಮುಖ್ಯ
ಒಂದು ಒಗಟಾಗಿ ಕಾಡುತ್ತದೆ ಕೆಲವೊಮ್ಮೆ ದಿಡೀರ್ ಬೀಳುವ ಮಳೆಯಂತೆ
ರೂಪಕ ಪ್ರತಿಮೆಗಳ ಒಳಗುಟ್ಟು
ಕೆಲವೊಮ್ಮೆ ಸಾಮಾನ್ಯರಿಗೆ ನಿಲುಕದ ಗುಪ್ತ
ಆದರೂ ಹಲವರ ಸರಳ ನಿರರ್ಗಳ ಮುಕ್ತ
ಮಳೆ ಕೊಚ್ಚುತೆಲ್ಲಾ ಕೊಳೆ
ಹಲವರ ಮಹಾಪೂರ
ಕೆಲವರ ತುಂತುರು ಬೆರಳೆಣಿಕೆಯ ಜೇನ ಹುಟ್ಟು ಗಳು ಸುರಿಸುವ ಹನಿಗಳು ಛಂದ ಮೀರಿದ ಚೆಂದ
ಶಾಸ್ತ್ರೀಯ ಕಲಿಕೆ ಗಮಾರ
ಅಕ್ಷರ ಕಲಿತಂತೆ
ತಾಳಗತಿಯ ಸರಿಗಮ
ಸ್ವರವೊಂದು ಸುಸ್ವರ
ಹಿರಿಯ ಕವಿಗಳ ತಪಸ್ಸು
ಪಡ್ಡೆ ಕವಿಗಳ ಕಡೆನೋಟ
ಕುಮಾರಿಯರ ಕುಡಿನೋಟ
ನವ್ಯವು ಛಂದಸ್ಸು ಜಗಳ ವಾಡದೇ ಪರಸ್ಪರ ನಮಸ್ಕಾರ. ವಿಭಿನ್ನ ಸಂಸ್ಕಾರ
ಪ್ರಕಾರ
ಶಿವಪ್ರಸಾದ
- shivaprasad aradhya
08 Apr 2026, 06:29 am
ಸ್ನೇಹ ಒಂದು ಸುಂದರ ಕವನ
ಬರೆದರು ಮುಗಿಯದ ಮಂಥನ
ಮರೆತರು ಮರೆಯಲಾಗದ ಸ್ಪಂದನ
ಬಿಟ್ಟರು ಬಿಡಲಾಗದ ಬಂಧನ
ಅದುವೇ ಗೆಳೆತನ ?
- Gopi Krishna
05 Apr 2026, 01:58 am
?️ ಕರುನಾಡಿನ ಕಾಮಧೇನು ?️
ಕರುನಾಡಿನ ಜನಕೆಲ್ಲ ಕಾಮಧೇನು ನೀವೇ
ಕಲ್ಪತರು ನಾಡಿನಲ್ಲಿ ನೆಲೆಸಿರುವ ಶ್ರೀ ಗುರುವೇ
ಶಿವಕುಮಾರ ಶ್ರೀ ಗುರುವೇ ಶರಣು ನಿಮ್ಮ ಪದಾಕೆ ||೧||
ನಡೆದಾಡುವ ದೇವರೇನಿಸಿ ಧರೆಯಲ್ಲಿ ನಡೆದಾಡಿದ
ಧರೆಯ ಮೇಲೆ ಧರ್ಮಜ್ಯೋತಿ ಬೆಳಗಿಸಿದ ದೇವ
ಶರಣು ಶರಣು ಶ್ರೀ ಗುರುವೇ ಶರಣು ನಿಮ್ಮ ಪದಾಕೆ ||೨||
ದಾಸೋಹದ ಸಿರಿಯಾದೆ ದಾಸೋಹಂ ಎಂದು ಹೇಳಿ
ಹಸಿದ ಒಡಲಿಗೆ ಅನ್ನವಿಟ್ಟ ಮಹಾಶಿವಯೋಗಿ ನೀ
ಶಿವಕುಮಾರ ಶ್ರೀ ಗುರುವೇ ಶರಣು ನಿಮ್ಮ ಪದಾಕೆ ||೩||
ಕುಲಸೀಮೆ ಜಾತಿ ಎನಿಸದೆ ಸಮಾನತೆ ನೀ ತೋರಿದೆ
ಸಹಬಾಳ್ವೆ ತತ್ವಬೋಧಿಸಿ ಸಮಾನತೆಯ ಹರಿಕಾರನಾದೆ
ಶರಣು ಶರಣು ಶ್ರೀ ಗುರುವೇ ಶರಣು ನಿಮ್ಮ ಪದಾಕೆ ||೪||
ಬಸವಪಥದಿ ಸಾಗಿನಡೆದು ಬಸವತತ್ವ ಜಗಕೆ ಸಾರಿದೆ
ಅಭಿನವ ಬಸವಣ್ಣ ಬಿರುದಾಂಕಿತ ಶ್ರೀ ಗುರುವೇ
ಶಿವಕುಮಾರ ಶ್ರೀ ಗುರುವೇ ಶರಣು ನಿಮ್ಮ ಪದಾಕೆ ||೫||
ವಿದ್ಯೆಯನ್ನು ಹರಸಿಬರುವ ವಿದ್ಯಾರ್ಥಿಸಮೂಹಕ್ಕೆ
ಜ್ಞಾನದಾಹವನ್ನು ಇಂಗಿಸಿದ ಜ್ಞಾನಗಂಗೆ ನೀವು ಗುರುವೇ
ಶರಣು ಶರಣು ಶ್ರೀ ಗುರುವೇ ಶರಣು ನಿಮ್ಮ ಪದಾಕೆ ||೬||
?️ಎಸ್.ಕೆ.ಜಂಬಗಿ
- SRI SHYLA JAMBAGI
29 Mar 2026, 02:40 am
"ಶಾಲೆಯಲ್ಲಿ ಹೇಳಿಕೊಟ್ಟ ಪಾಠಗಳು
ಜೀವನಕ್ಕೆ ಅರ್ಥವನ್ನು ಕೊಟ್ಟರೆ..
ಜೀವನ ಹೇಳಿಕೊಟ್ಟ ಪಾಠಗಳು
ಜೀವನದಲ್ಲಿ ಸಾಕಷ್ಟು ಅನುಭವಗಳನ್ನು
ಕೊಟ್ಟಿವೆ ..
ಅರ್ಥವು ಜೀವನದ ರೀತಿ ಬದಲಿಸಿದರೆ
ಅನುಭವವು ಇಡೀ ಜೀವನವನ್ನೇ
ಬದಲಿಸಿದೆ...
ಶಾಲೆಯಲ್ಲಿ ಏನನ್ನು ಕಲಿತ್ತಿಲ್ಲ
ಆದರೆ ಜೀವನ ಎಲ್ಲಾವನು ಕಲಿಸುತ್ತಿದೆ"...
- ಎ.ಆರ್.ರಾಹುಲ್..
- ?.?.?????.
24 Mar 2026, 10:43 pm