Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮೊದಲ ನೋಟ ಚೆನ್ನಾ
ಅರಳಿರುವ ಹೂಗಳಿಗಿನ್ನ
ಮರೆಯಲಾರೆ ಗೆಳತಿ
ನಿನ್ನಯ ನಗು ಮೋಗವನ್ನˌˌˌˌˌˌ
- ಪುನೀತ್ ಸಿ
29 Jun 2016, 07:34 pm
ಮುಚ್ಚಿಟ್ಟ ಪ್ರೀತಿ
ಭಗ್ನವಾಗುವುದೆಂಬ ಭೀತಿ
ಕೂಡಿಟ್ಟ ಕನಸು
ಕಮರಿಹೋಗುವುದೆಂಬ ಮನಸು
ತಿಳಿಯಲಿಲ್ಲ ಆಕೆಗಿದು
ತಿಳಿಸದೆ ನಾನಾದೆ ಒಬ್ಬೊಂಟಿ ಇಂದು
ಒಮ್ಮೆ ಮನಸಿಟ್ಟು ಓದು ನನ್ನ ಮನದ ಭಾವನೆ
ನಿನಗಾಗಿ ಮುಡಿಪಾಗಿಸಿವೆ ನನ್ನ ಬದುಕನ್ನೆ.
- ಸಾಗರ್ ಸಿದ್ದು
29 Jun 2016, 12:04 pm
ಮರೆಯಲಾಗದ ನೆನಪುಗಳ ಮರೆತಂತೆ
ನಾ ನಟಿಸಿದರು
ನನ್ನ
ಮನಸ್ಸು ನಿನ್ನದೇ ನೆನಪಲ್ಲಿ
ಅಳುತ್ತಿದೆ ಗೆಳತಿ
- ವಿನಯ ಸೋಗೋಡು(ಹೊಸನಗರ)
28 Jun 2016, 04:22 pm
ಓ ಮನವೇ,
ನೀ ಮೌನಿ ಯಾಕಿಂದು?
ವ್ಯಥೆ ಕಾಡುತಿದೆಯೋ,
ನಿನಗೆ ನೋವಾಗಿದೆಯೋ?
ನನಗಂತೂ ಅರಿಯಲಾಗುತ್ತಿಲ್ಲವೇ..
ನಿನ್ನ ಭಾವಗಳೆಲ್ಲಾ ಮರೆಯಾಗಿಹುದೋ,
ಅಲ್ಲ ಮುನಿದುಕೊಂಡಿವೆಯೋ?
ನನಗೊಂದೂ ಅರ್ಥೈಸಲಾಗುತ್ತಿಲ್ಲವೇ..
ಅರೆ! ಕಂಬನಿಯೇಕೆ ಹನಿಯಲು
ಈ ಪರಿ ರೋಧಿಸುತಿಹುದು
ಯಾಕೆಂದು ತಿಳಿಯಲಾಗುತ್ತಿಲ್ಲವೇ..
ನನಗೋದಲಾಗದ ನಿನ್ನ
ಅಕ್ಷಿಗಳರಿತುಕೊಂಡವೇ
ಇದು ನ್ಯಾಯವೇ ಮನವೇ?
ಇದು ನ್ಯಾಯವೇ?
ಇದೇನು ಸುರಿಯುತಿರುವವಲ್ಲ
ಈ ಸಮನೆ 'ಸೋ' ಎಂದು
ಮೋಡಗಳು ಮುರಿದು-ಹರಿದು
ನಾ ಮಾತ್ರ ಪರನಾದೆನಾ ನಿನಗೆ
ನಾ ಮಾತ್ರ ಪರನಾದೆನಾ ನಿನಗೆ?
ಎನಗಿಲ್ಲವೇ ಹಕ್ಕು-ಹೊಣೆಗಾರಿಕೆ ನಿನ್ನದು
ಮುರಿಯೇ ಮೌನವ ಮನವೇ
ಹಂಚು ಭಾವಗಳ ಮನವೇ
ಮುರಿಯೇ ಮೌನವ ಓ ನನ್ನ ಮನವೇ ...
- ಅರ್ಪಣ್
28 Jun 2016, 11:30 am
ನಿನ್ನ ಕಾಣೊದು ತಾನೆ ನನ್ನ ಕನಸು...
ನಿನ್ನ ಪಡೆಯೊದು ತಾನೆ ನನ್ನ ನನಸು...
ಇನಿಯ ಹೇಳು ಯಾಕೆ ಈ ಮುನಿಸು...
ಇಬ್ಬರು ಒಂದಾದರೆ ಆಹ್ಹಾ ಎಂಥಾ
ಸೊಗಸು...
- Priyanka Tuppad
27 Jun 2016, 11:43 pm
ಯಾಕೇ ಚಿನ್ನ ನನ್ನ ಮುಂದೆ ಬಂದೆ
ನಾನು ತುಂಬ ಒಳ್ಳೆಯವನಾಗಿದ್ದೇ
ನಿನ್ನ ಮುದ್ದಾದ ನಗುವನು ಕಂಡು
ನಾ ಇಂದು ಪ್ರೀತೀಲಿ ಬಿದ್ದೆ
ನಿನಗಾಗಿಯೇ ಎಂದೂ ನಾನಿರಲು
ನನ್ನೊಳಗೆ ಎಂದೂ ನೀನಿರಲು
ಆ ಹೂವು ಕೂಡ ನಾಚುತಿಹುದು
ನಿನ್ನ ಮುಖದಲೋಂದು ನಗುವಿರಲು
- ಚಂದ್ರು ಕುಮಟಾ
27 Jun 2016, 11:16 pm
ಹಾರುವಾಗ ಹಕ್ಕಿಯಾದೆ
ಈಜುವಾಗ ಮಿನಾದೆ
ಕವಿಯ ಕೈಯಲ್ಲಿ ಕವಿತೆಯಾದೆ
ಪ್ರೀತಿಯ ಕೈಗೆ ಸಿಕ್ಕಿನಾನು ಪ್ರೇಮಿಯಾದೆ.
- sagar
27 Jun 2016, 09:22 am
ಜೀವನ ವೆಂಬ ಗಣಿತ ಶಾಸ್ತ್ರ ದಲ್ಲಿ
ಕೆಟ್ಟದನ್ನು ಕಳೆದು
ಒಳ್ಳಯದನ್ನು ಕುಡಿಸಿ
ಪ್ರೀತಿಯಿಂದ ಭಾಗಿಸಿ
ಸ್ನೇಹ ದಿಂದಾ ಗುಣಿಸಿದಾಗ ಬರುವ ಮೊತ್ತವೇ
ನಮ್ಮಬದುಕಿನ ಸಾಧನೆ.
- sagar
27 Jun 2016, 09:15 am
ಸುಂದರ ರಾತ್ರಿಯಲ್ಲಿ
ಸೊಗಸಾದ ನಿದ್ದೆ ಬಂದು
ನಿಮಱಲ ಮನಸ್ಸಿನಲ್ಲಿ
ನಾಳೆಯ ನಯನದಲಿ
ಸವಿಸುಂದರ ಕನಸು ಮೂಡಿ ಬರಲಿ
- Mareppa manegar
26 Jun 2016, 11:42 pm
ಉಸಿರ ಸೆಳೆತಕೆ ಸಿಕ್ಕ
ಪುಟ್ಟ ನೆನಪು ಮೆಲ್ಲ
ಮಾತನಾಡಿತು ಮೊನ್ನೆ..
ಪ್ರೇಮ ಪಲ್ಲವಿಸಿದ ಆ
ಮರುಗಳಿಗೆ ನಾ ನಿನ್ನ
ಎದೆಯ ಸೇರಿದೆನೆಂದು..
ಮಂಜುನಾಥ್ ಹಂದೆ
- Manjunath
26 Jun 2016, 10:32 pm