Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಮೀನ್ ಅಮ್ಮಿ

ಅಮ್ಮ ಅನ್ನೋ ನಿಜ ದೈವ ಇರುವಾಗ ಇಲ್ಲಿ
ನೀ ಗುಡಿ ಗೋಪುರ ಗಿರಿ ಶಿಖರ ಅಲೆಯೋದ್ಯಾಕ್ ಅಲ್ಲಿ....

ಹೆತ್ತೋಳ ಕಾಲಡಿಯಲಿ ಪ್ರತಿ ದೇವರು ಉಂಟು
ಕೈ ಮುಗಿದು ತಲೆ ಬಾಗು ಸ್ವರ್ಗ ನಿನಗುಂಟು....

- ameen

23 Jun 2016, 11:00 pm

ಕವನ

ಕವನ
ಅದೊಂದು ನಯನ
ಭಾವನಾ ಲೋಕದಲ್ಲಿ
ರಾಜನಾಗುವುದು ಕವನ

ನಗೆ - ಮುನಿಸಿಗೂ
ದುಃಖ - ದುಮ್ಮಾನಗಳಿಗೂ
ಸಂತೋಷ ವೇಳೆಯೂ
ಹಾಜರಾಗುವುದು ಕವನ

ಪ್ರಾಚೀನ ಇತಿಹಾಸ,
ನವಯುಗದ ಪರಿಸರ,
ಭವಿಷ್ಯದ ವಾಣಿಯನ್ನೂ
ನುಡಿಯುವುದು ಕವನ

ಕವನದ ಮನನ
ಯಶಸ್ವಿಗೆ ಜನನ

- ಶಾಹಿದ್ ಉಪ್ಪಿನಂಗಡಿ

23 Jun 2016, 02:58 pm

ಸುಂದರ ಬದುಕು

ಸುಂದರ ಬದುಕಿದು
ಕಲ್ಪನೆಗೆ ಎಟುಕದು

ನಗುವಿದೆ-ಅಳುವಿದೆ
ಪ್ರೀತಿಯ ಜೀವಗಳ ಸ್ವರ್ಗವಿದೆ

ಬಣ್ಣ-ಬಣ್ಣದ ಭಾವನೆಗಳ
ಮುಗ್ದ ಮನಸುಗಳ ಅಂತರಾಳ

- ಸಾಗರ್ ಸಿದ್ದು

23 Jun 2016, 01:37 pm

ಕಣ್ಣ ಸನ್ನೆ...ಕೆಂಪಾಗಿಸಿತ್ತ

ಕಣ್ಣ ಸನ್ನೆಯಿಂದ ಪರಿಚಿತರಾದೆವು ನಾನು-ನೀನು...
ಆಗ ನಿನ್ನ ಹೆಸರು ಬಿಟ್ಟು ಗೊತ್ತಿರಲ್ಲಿಲ್ಲ ಬೆರೇನು...
ಈಗ ಇಬ್ಬರ ಉಸಿರು ಬೆರೆತಂತ್ತಾಗಿದೆ ಹಾಲು-ಜೇನು...
ಇನಿಯ ನೀನಿಲ್ಲದೆ ನಾನು ನೀರಿಲ್ಲದ ಮೀನು...

- Priyanka Tuppad

22 Jun 2016, 11:24 pm

ಕನಸಿನ ರಾಯಭಾರಿ...,

ಸಿದಾ-ಸಾದಾ ಕನಸಿನಲ್ಲಿ...
ನಿನ್ನದೆ ರಾಯಭಾರ ಅಲ್ಲಿ...
ಓಡಿ ಹೋಗಲು ಅತ್ತ-ಇತ್ತ ಇಣಕುವೆ ಎಲ್ಲಿ...
ನಿನ್ನನ್ನು ಬಿಗಿಯಾಗಿ ಅಪ್ಪಿಕೊಂಡಿರುವೆ ನನ್ನ ಮನದಲ್ಲಿ ...

- Priyanka Tuppad

21 Jun 2016, 06:48 pm

ನನ್ನೊಲುಮೆಯ ಇನಿಯ...

ಹೇಳದೆ ಹೊದೆಯ ನನ್ನೊಲುಮೆಯ ಇನಿಯ...
ಕೇಳುತ್ತಿಲ್ಲವೆ ನಿನ್ನಗೆ ನನ್ನ ಪ್ರೀತಿಯ ದನಿಯ...
ಒಮ್ಮೆ ಆದರು ಒರಿಸುಬಾ ಈ ಕಂಬನಿ ಹನಿಯ...
ಮನಸಲ್ಲೆ ಇರಿಸಿರುವೆ ನಿನ್ನನ್ನು ಕಟ್ಟಿ ಮನೆಯ...

- Priyanka Tuppad

21 Jun 2016, 02:42 pm

ಈ ಜೀವನ..

ಜೀವನ ಒಂದು ಸುಂದರ ಪಯಣ
ಆ ಪಯಣದಲಿ ನಮ್ಮ ಹಲವಾರು ಹಗರಣ
ಬದುಕಿರಲು ನಾವಿಲ್ಲಿ ನೂರೆಂಟು ಕಾರಣ
ಮರೆಯಬೇಡ ನೀ ತಂದೆತಾಯಿಯರ ಋಣ

- ಚಂದ್ರು ಕುಮಟಾ

21 Jun 2016, 01:03 pm

ಪಿಸು ಮಾತು...

ಮನಸ್ಸು ತನ್ನೊಳಗೆ ಆಡುತ್ತಿದೆ ಪಿಸು ಮಾತು...
ನಲ್ಲ ಇತ್ತಿಚಿಗೆ ನೀ ಕೊಟ್ಟೆ ಇಲ್ಲ ಸಿಹಿ ಮುತ್ತು...
ನನ್ನ ಮೇಲೆ ಮುನಿಸುಕೊಂಡಿದಿಯಾ ಅಂತ ಗೊತ್ತು...
ಆದರು ನಿನ್ನನ್ನು ನೆನೆದಾಗಲೆಲ್ಲ ನಾಚುತ್ತೆ
ನನ್ನ ಮೂಗಿನ ನತ್ತು...

- Priyanka Tuppad

21 Jun 2016, 10:35 am

ಬದುಕು

ಹುಟ್ಟು ನಮ್ಮದಲ್ಲಾ.
ಸಾವು ನಮ್ಮದಲ್ಲಾ.
ಪ್ರೀತಿ ವಿಶ್ವಾಸ ಅಷ್ಟೆ ನಮ್ಮದು.
ನೆನಪುಗಳ ಸ್ಮರಣೆಯೇ ಜೀವನ ವಾಗಿರುವಾಗ.
ಬದುಕಿನಲ್ಲಿ ಮುನ್ನಡೆದು ಏನಾದರೂ ಸಾಧಿಸು.

ಜಗವು ಸುಂದರ.
ನೋಟವು ಚಂದಿರಾ.
ಜೀವನವು ಹಂದಿರಾ,ಇದರಲ್ಲಿನ
ಪಯಣಿಕರು ನಾವು.
ಮುನ್ನಡೆದು ಹೋಗು, ಸಾಧಿಸು.

ಕಾಲಿಗೆ ಮುಳ್ಳು ಚುಚ್ಚುವ ಮುನ್ನ.
ಆ ಮುಳ್ಳಿಗೆ ಚಪ್ಪಲಿವಾಗು.
ಜಗತ್ತನ್ನು ನೀನೂ ಹೂಡಕುವ ಮೊದಲೇ.
ಜಗತ್ತು ನಿನ್ನ ಹುಡಕಬೇಕು.
ನಡೆ ನಡೆ ಮುನ್ನಡೆ,ಸಾಧಿಸು.

ಬರಗಾಲದ ವಾತಾವರಣದಲ್ಲಿ.
ನೀನೊಂದು ಮಳೆ ಹನಿ ಯಾಗು.
ಕತ್ತಲೆ ತುಂಬಿರುವ ಜಗತ್ತಿಗೆ
ನೀನೊಂದು ಬೆಳಕಾಗು.
......ದೇಶಕ್ಕೆ ದಾರಿದೀಪವಾಗು.
......ನಾಡಿಗೆ ಸಾಧಕನಾಗು.
......ಊರಿಗೆ ಒಳ್ಳೇ ಮಗನಾಗು.
......ತಂದೆ ತಾಯಿಗೆ ಕೀರಿಟವಾಗು.
ನಡೆ ನಡೆ ಮುನ್ನಡೆ,ಸಾಧಿಸು.

- ಉಮೇಶ ಶಿವಪ್ಪ ಲಮಾಣಿ

20 Jun 2016, 02:58 pm

ಭಗ್ನ ಪ್ರೇಮಿ

ನಿನ್ನ ನಗು ಕಂಡು ಮರುಳಾದೆ
ಮುಗ್ದ ಹೃದಯಕೆ ಶರಣಾದೆ

ನಿನ್ನ ಚೆಲುವ ಬಣ್ಣಿಸಲು ಕವಿಯಾದೆ
ಬಾನಂಗಳದ ರವಿಯಾದೆ

ಸೆರೆಹಿಡಿಯಲು ನಿನ್ನ ಹೆಗ್ಗುರುತ ನಾನಿಂದು ಇಳೆಯಾದೆ
ತಣಿಸಲು ನಿನ್ನ ದಾಹ ನಾ ಮುಂಗಾರಿನ ಮಳೆಯಾದೆ

ಗರಿ ಬಿಚ್ಚಿ ನವಿಲಾದೆ
ಕಾಲ್ಗೆಜ್ಜೆ ದನಿಯಾದೆ

ನಿನ್ನ ಮೊಗ ಕಂಡು ಬೆರಗಾಗಿ ಕಲೆಗಾರ ನಾನಾದೆ
ನಿನ್ನ ಸ್ವರದಲ್ಲಿ ಸೆರೆಯಾಗಿ ಇಂಪಾದ ಹಾಡಾದೆ

ಗಿಡವಾಗಿ ಮರವಾದೆ
ಹೂ ಬಿಟ್ಟು ಹಣ್ಣಾದೆ

ನಿನ್ನಂತೆ ನಾನಾದೆ
ನಿನ್ನ ನೆರಳಾಗಿ ನಾ ಕಾದೆ

ಪ್ರೇಮದಲಿ ಸೆರೆಹಿಡಿದು ನೀ ಎಲ್ಲಿ ಮರೆಯಾದೆ ?
ಭಗ್ನ ಪ್ರೇಮಿಗಳ ಸಾಲಿಗೆ ನಾ ಹೊಸದೊಂದು ಹೆಸರಾದೆ !

- pradeep

20 Jun 2016, 02:27 pm