Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮೋಡದ ಮರೆಯಲಿ

ಏನೆಂದು ಬರೆಯಲಿ ಈ ಖಾಲಿ ಹಾಳೆಯಲಿ..
ಪದಗಳ ಪೋಣಿಸಿ ಬರೆಯೋಕೆ ನನಗೆ ಗೊತ್ತಿಲ್ಲ ...
ಬರೆಯಬೇಕೆಂದು ಹೊರಟಾಗ ನೆನಪಾಗುವುದು ನೀನು ಮಾತ್ರ ...
ನಾ ಏನೇ ಬರೆದರೂ ಅದು ನಿನಗೆ ಮಾತ್ರ ಅರ್ಥವಾಗಲ್ಲ...
ಮೋಡದ ಮರೆಯಲಿ ಚಂದ್ರ ಅಡಗಿದ ಹಾಗೆ ....
ಕಾಣದ ಈ ಪದಗಳ ಹಿಂದೆ ನನ್ನ ನೋವಿದೆ..
-ಇಂತಿ ನಿನ್ನ ಪ್ರೀತಿಯ

- ನಮಿತ ಗಟ್ಟಿ

17 Jul 2016, 05:40 pm

ನೆನಪು ಮಾತ್ರ...

ಕಟ್ಲು ಮೇಲೆ ಕುಂತು ಕಾಫಿ ಕುಡಿವ ಅಪ್ಪ
ಕುಡುಗೋಲು ಹಿಡಿದು ಹಸಿಹುಲ್ಲು ಕೊಯ್ವ ಅವ್ವ
ಜಾರುವ ಪೇರಳೆ ಮರ ಹತ್ತಿ ಹಣ್ಣು ಕಿತ್ತು
ತಮ್ಮಗೆ ಕೊಡುವ ಅಣ್ಣ
ಎಲ್ಲಾ ನೆನಪು ಮಾತ್ರ ||

ಸುರಿವ ಮಳೆಯಲಿ ಹೂಟೀ ಹೊಡೆವ ಅಪ್ಪ
ಕಳಲೆ ಹೆಚ್ಚಿ ಸಾರು, ಪಲ್ಯ ಮಾಡುವ ಅವ್ವ
ಹೊಳೆ ಗೋರಿ ಹತ್ ಮೀನ್ ಹಿಡಿದು
ಹೊತ್ತು ತರೊ ಅಣ್ಣ
ಎಲ್ಲಾ ನೆನಪು ಮಾತ್ರ ||

ಉತ್ತು ಬಿತ್ತು ಕಣಜ ಕಟ್ಟಿ ತುತ್ತು ಕೊಡೋ ಅಪ್ಪ
ಹೊತ್ತು ಗೊತ್ತಿಲ್ಲದೆ ಹೊಗೆಯಲಿ ಸತ್ತು ಪ್ರೀತಿಯ ಕೂಳು ಬಡಿಸೊ ಅವ್ವ
ಎತ್ತಿಕೊಂಡು, ಹೊತ್ತುಕೊಂಡು ಪೇಟೆ ಸುತ್ತಿಸಿ
ಐಸ್ ಕ್ಯಾಂಡಿ ಚಾಕ್ಲೆಟ್ ಕೊಡಿಸಿ ನಗಿಸಿದ ಅಣ್ಣ
ಎಲ್ಲಾ ನೆನಪು ಮಾತ್ರ ||

- ಶ್ರೀಗೋ.

17 Jul 2016, 05:33 pm

ಪ್ರೇಮದ ಪುಷ್ಪ

ನನ್ನ ಪ್ರೇಮದ ಪುಷ್ಪವು ನೀನು....
ಪರಿಮಳ ಘಮಘಮ ಸುಸಿದೆ ಎಲ್ಲೆಲ್ಲೂ...
ಎಲ್ಲಿರುವೆ ಗೆಳತಿ..
ಕಾಯಿಸಿ ಕಾಡಿಸಿ ನನ್ನ..
ಕಾಯುವೆನು ಗೆಳತಿ ಪ್ರತಿ ಜನ್ಮದಲ್ಲು

- Sumanth Hegde

17 Jul 2016, 05:24 pm

ಹಣ್ಣು,ಹೆಣ್ಣು

ಹಣ್ಣು ಇದ್ದ ಮರಕ್ಕೇ ಕಲ್ಲು ಹೊಡಿ
ಆದರೆ,
ಹೊಳ್ಳಿ ನೋಡದ ಹೆಣ್ಣಿಗೆ
ಕಣ್ಣು ಹೊಡೆಯಬೇಡ.

- AVI.NA.YASH

17 Jul 2016, 10:04 am

ಸಾಧನೆ

ಸಿಗಬೇಕು ಅಂತ ಪ್ರಯತ್ನ ಮಾಡೋದು
ಜೀವನˌ
ಸಿಗಲೇಬೇಕು ಅಂತಾ ಪ್ರಯತ್ನ ಮಾಡೋದು
ಹೋರಾಟˌ
ಸಿಗಲ್ಲಾ ಅಂತಾ ಗೊತ್ತಿದ್ದು ಹೋರಾಟ ಮಾಡಿ ಪಡೆಯೋದು
ನಿಜವಾದ ..ಸಾಧನೆ..

- Faruk

17 Jul 2016, 09:07 am

ಪ್ರೀತಿಯ ದೀಪ

ಮನದ ಮ೦ದಿರದಲ್ಲಿ ಬೆಳಗಿದ ಪ್ರೀತಿಯ ದೀಪ ನೀನು..
ಹೃದಯ ಸಮುದ್ರದಲ್ಲಿ ಸಿಕ್ಕ ಪ್ರೀತಿಯ ಮುತ್ತು ನೀನು...
ಕಣ್ಣ ಕೊಳದಲ್ಲಿ ಅರಳಿದ ಪ್ರೀತಿಯ ಪುಷ್ಪ ನೀನು...
ನೆನಪಿರಲಿ....
ದೀಪ ಆರದಿರಲಿ,ಮುತ್ತು ಒಡೆಯದಿರಲಿ,ಪುಷ್ಪ ಬಾಡದಿರಲಿ.....!!!

- Arun S. S.

16 Jul 2016, 11:09 pm

ನೆನಪು

ಹೆಜ್ಜೆಹೆಜ್ಜೆಗೂ
ಆ -
ದಿನಗಳ
ನೆನಪು
ನೆರಳಾಗಿ
ನಡೆದಿದೆ
ಈ-
ದಿನಗಳ
ಕಡು
ಬಿಸಿಲಿನ
ಕ್ಷಣಕ್ಷಣಕೂ !

- ashfaq peerzade

16 Jul 2016, 09:25 pm

ದಾಸ್ಯ

ಸ್ವಾತಂತ್ರ‍್ಯವಾಗಿ ಉಸಿರಾಡಿದ ಕೇಲವೇ ಕೆಲವು ಕ್ಷಣಗಳ ನೆನಪು
ನನ್ನದೆನ್ನುವುದು ಬಿಟ್ಟರೆ
ಉಳಿದೆಲ್ಲ ದಿನಗಳು ನಿನ್ನ ದಾಸ್ಯದಲ್ಲಿ ಕರಗಿ ಹೋದ ಬೆವರಹನಿ ಸಾಲುಗಳು!!

- ashfaq peerzade

16 Jul 2016, 09:23 pm

ಅರಳುವ ನಗು

ಗುಲಾಬಿ ಗಿಡದಲ್ಲಿ ಎಷ್ಟೆ ಮುಳ್ಳಿದ್ದರು
ಅದರಲ್ಲಿ ಹೂವು ಅರಳಲೆಬೇಕುˌ
ಮನಸ್ಸಿನಲ್ಲಿ ಎಷ್ಟೆ ನೋವುಗಳಿದ್ದರು
ಮುಖದಲ್ಲಿ ನಗು ತುಂಬಿರಬೇಕು.

- Faruk

16 Jul 2016, 01:00 pm

ಬಂದುಬಿಡು

ನೀನಿರದ ಬರಿ ಸಂಜೆ
ಆಗಬಹುದು ಬಂಜೆ
ಬಾನ ಬಿಗುವಿನ ಆ ಮೌನ
ನಗುವಿಲ್ಲದ ನನ್ನ ಧ್ಯಾನ

ನೆನಪುಗಳು ಮರಳಲಾರವು
ನೀನಿರದ ಈ ಗೂಡಿಗೆ
ಕನಸುಗಳು ನನಸಾಗಲಾರವು
ಭಾವವಿರದ ಹಾಡಿಗೆ

ಒಲವಿನಾಗಸದಿ ಮೆಲ್ಲ
ವಿರಹ ಕತ್ತಲೆ ಕವಿಯುತಿದೆ
ಸರಿಯಿಲ್ಲದ ನಿನ್ನ ಸರಸವ
ನಿರ್ದಯಿಯಾಗಿ ಕವಿಯುತಿದೆ

ಏಕೆ ಈ ದೂರ
ಬಾಳೇ ನಿಸ್ಸಾರ
ನೀನಿಲ್ಲದ ಈ ವೇಳೆ
ನಿತ್ಯ ನೂರಾರು ರಗಳೆ

ಬಂದುಬಿಡು ನಲ್ಲ
ನೀ ಬೆಳದಿಂಗಳಾಗಿ
ಉಕ್ಕಿ ಬಿಡುವೆ ನಾನಾಗಲೇ
ಸಾಗರದ ಅಲೆಮಾರಿ, ,,,,,,,

- ಅಮುಭಾವಜೀವಿ (ಅಪ್ಪಾಜಿ ಎ ಮುಸ್ಟೂರು )

14 Jul 2016, 10:54 pm