Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕನಸು.

ಕನಸುಗಳ ಲೋಕದಲಿ ಬಿಡದೆ ಸೆಳೆಯುತಿರೋ ನಿನ್ನ ಹುಚ್ಚು ಭ್ರಮೆಯಲಿ ಕೆಸರಿಗಿಳಿದು ನಡೆಯುತಿರಲು ರವಿಯ ರಶ್ಮಿ ನಯನಗಳಿಗೆ ರಾಚಿ ವಾಸ್ತವದ ಬೆಳಕಿಗೆ ಕಣ್ಣು ತೆರೆದಿರುವೆ.

- rashmi

23 Jul 2016, 01:15 pm

ಚೈತ್ರ ಸಂಭ್ರಮ

ವರ್ಷಧಾರೆ 
ಹೊರಗಷ್ಟೆಯಲ್ಲ
ಅಂತರಂಗದಲ್ಲೂ !

ಕನಸು ಕಾಮನಬಿಲ್ಲು
ಕಣ್ಣಿಗಷ್ಟೆಯಲ್ಲ
ಹೃನ್ಮನಕೂ !

ಚಿಗುರು ಹಸಿರು
ಭೂರಮೆಗಷ್ಟೆಯಲ್ಲ
ಸಂಗಾತಿ ಒಲುಮೆಗೂ !

ಚೈತ್ರ ಸಂಭ್ರಮ
ಕೋಗಿಲೆಗಷ್ಟೆಯಲ್ಲ
ನನ್ನೊಳಗಿನ ಕವಿಗೂ !!

- ashfaq peerzade

22 Jul 2016, 09:35 am

ಸಮ್ಮತಿ

ಸಮ್ಮತಿಯೇ ಕೇಳದೆ ಜಾರುತಿದೆ ಕಂಬನಿ
ಮಾತೆನೆ ಬಾರದೇ ಮುಖಾಗಿದೆ ಈ ಧನಿ

- ಶಿವು

21 Jul 2016, 10:15 pm

ಬದುಕಿಸುವ

ನೀನಿರದ ಬರಿ ಸಂಜೆ
ಆಗಬಹುದು ಬಂಜೆ
ಬಾನ ಬಿಗುವಿನ ಆ ಮೌನ
ನಗುವಿಲ್ಲದ ನನ್ನ ಧ್ಯಾನ

ನೆನಪುಗಳು ಮರಳಲಾರವು
ನೀನಿರದ ಈ ಗೂಡಿಗೆ
ಕನಸುಗಳು ನನಸಾಗಲಾರವು
ಭಾವವಿರದ ಹಾಡಿಗೆ

ಒಲವಿನಾಗಸದಿ ಮೆಲ್ಲ
ವಿರಹ ಕತ್ತಲೆ ಕವಿಯುತಿದೆ
ಸರಿಯಿಲ್ಲದ ನಿನ್ನ ಸರಸವ
ನಿರ್ದಯಿಯಾಗಿ ಕವಿಯುತಿದೆ.

- ಅಮುಭಾವಜೀವಿ (ಅಪ್ಪಾಜಿ ಎ ಮುಸ್ಟೂರು )

21 Jul 2016, 01:41 pm

ಹಳ್ಳಿ ಹುಡುಗಿ ಪ್ರೀತಿ

ಅವಳಿಗಾಗಿ ನಾನು ನನ್ನ ಸ್ವಚ್ಙವಾದ ಮನಸ್ಸನ್ನು ಕೊಟ್ಟೆ ಅವಳ ಅಲೆಯಾದ ಪ್ರೀತಿಯ ಸೆರೆ ಮನೆಯಲ್ಲಿ ಸಿಲುಕಿ
ಕಾಡು ಮೇಡು ಬೆಟ್ಟ ಗುಡ್ಡವನ್ನೆಲ್ಲ ಸುತ್ತಿದೆ
ಅವಳಿಗಾಗಿ ಬಂಧು ಬಳಗದವರಿಂದ ದೂರವಾದೆ
ಅವಳೇ ನನ್ನ ಜೀವ ಎಂದು ಅವಳನ್ನ ನನ್ನ ಹೃದಯದೊಳಗೆ ಮುತ್ತಿನಂತೆ ಮುಚ್ಚಿಟ್ಟು ಪೋಶಿಸಿದೆ
ನನ್ನ ನಂಬಿ ಬಂದಿರುವ ನನ್ನ ಹೂ ಮಲ್ಲಿಗೆಯನ್ನು ಬಾಡದಂತೆ ಇಡಬೇಕೆಂದು
ಹಗಲು ಇರುಳು ಎನ್ನದೆ ಮಣ್ಣು ಕಲ್ಲೆನ್ನದೆ
ಬಿಸಿಲಲ್ಲಿ ಮಳೆಯಲ್ಲಿ ನೊಂದು ಬೆಂದೆ
ಆದರೆ ಅವಳ ಆಸೆಯ ಗೋಪುರವನ್ನು
ಕಟ್ಟಿದ ಮೇಲೆ ನನ್ನ ಬಾಳಿನ ಪ್ರೀತಿಯ ಪ್ರೇಮಲೋಕವೇ ಕಳಚಿಹೋಯಿತು.

- gtr

20 Jul 2016, 03:10 pm

ತುಡಿತ

ನಾನೆಂಬುದು ನಾನಲ್ಲ ...
ನನ್ನದು ಎಂಬುದು ಅದೂ ನನ್ನದಲ್ಲ...
ಸ್ವಾರ್ಥ ಬದುಕಿನ ಜಂಜಾಟದಲ್ಲಿ ನಾ ಬಂಧಿಯಾಗಿರುವೆ...
ಬೆಳಕಲ್ಲಿ ಇದ್ದು ಕಾಣದ ಪ್ರೀತಿಗೆ ಹಂಬಲಿಸುತ್ತಿರುವೆ....
ನಾಳೆಯ ಬದುಕಿಗಾಗಿ ಇಂದು ಕಾಯುತ್ತಿರುವೆ....
ವಾಸ್ತವ ಗೊತ್ತಿದ್ದೂ ಭ್ರಮೆಯಲ್ಲಿ ಜೀವಿಸುತ್ತಿರುವೆ...

- ನಮಿತ ಗಟ್ಟಿ

20 Jul 2016, 10:27 am

ಕಡಲಿನ ಮುತ್ತು

ಧರಿತ್ರಿ
ನಿನ್ನೋಡಲಿನ ನೋವುಗಳೆಲ್ಲ
ವರುಣನ ಸಿಂಚನಕ್ಕೆ ಕರಗಿ,
ಸುಮಧುರ ಮಂಜುಳಗಾನದಿ
ಮೈಮರೆತು ,ಕಡಲಿನಲ್ಲಿ ಲೀನವಾಗಿ,
ಸ್ವಾತಿಯ ಸಿಂಚನಕ್ಕೆ
ಕಡಲಿನ ಮುತ್ತುಗಳಾಗಿವೆಯೇ?

- ಅರುಣಕುಮಾರ ಮ ಜೇವರಗಿ

19 Jul 2016, 09:48 pm

ಮೌನ ಮಾತಾದಾಗ

" ಕಾಣದ ಕಡಲಿಗೆ ಹಂಬಲಿಸಿದೇ ಮನ

ಕೇಳ ಬಯಸುವೇ ನಿನ್ನಿ ಮಧುರಗಾನ

ಕಾಣ ಬಯಸುವೇ ಎಲ್ಲಿರುವೇ ಚಿನ್ನ

ಕಾತುರೇಯುತ್ತಿದೇ ನನ್ನ ಈ ಮನ

ಕೊಲ್ಲಬೇಡ ನೀ ನನ್ನಿ ಹ್ರುದಯಾನ "

- uday kumar V.G

18 Jul 2016, 03:19 pm

ಕೇಳು ಮನವೇ......

ಬಾಳೊಂದು ಸುಂದರ ಪಯಣ..
ಪ್ರೀತಿಸುವ ಹೃದಯ ಜೊತೆಗಿದ್ದರೆ ಬಾಳೆಷ್ಟು ಸುಂದರ ಅಲ್ವಾ...
ನನ್ನ ಕವಿತೆಗಳನ್ನು ನೀ ಓದಲೇಬೇಕೆಂದಲ್ಲ..
ಹೃದಯಕ್ಕೆ ತಟ್ಟದ್ದು ಮನಸ್ಸಿಗೆ ನಾಟಿತೇ...
ಬದುಕಿಗೊಂದು ಆಸರೆಬೇಕು,ಆ ಆಸರೆ ನೀನಾಗಿರಬೇಕು ಅಷ್ಟೇ ...
ಪದಗಳು ಹಾಡಯಿತು ಆದರೆ ಹಾಡು ಮನಸ್ಸಿಗೆ ನಾಟಲೇ ಇಲ್ಲ ..
ತಪ್ಪು ನನ್ನದಲ್ಲ....ಕ್ಷಮಿಸುವಂತ ವಿಶಾಲ ಹೃದಯ ನಿನಗಿಲ್ಲವಷ್ಟೆ...
ಹಕ್ಕಿಯಂತೆ ಹಾರಾಡುತ್ತಿದ್ದೆ.. ಆದರೆ ನೀ ರೆಕ್ಕೆಯನ್ನೇ ಮುರಿದುಬಿಟ್ಟೆ...

- ನಮಿತ ಗಟ್ಟಿ

17 Jul 2016, 08:05 pm

ಅವಳು ನನ್ನವಳು.....

ಬೆಳ್ಳಿಯ ಕಾಲ್ಗೆಜ್ಜೆ,ಬಣ್ಣದ ಸೀರೆ....
ಉದ್ದನೆಯ ಜೆಡೆ ,ಕಿವಿಗೊಂದು ಓಲೆ.....
ಆಕೆ ನಡೆದರೆ ಸಾಕು....ದಾರಿಯುದ್ದಕ್ಕೂ ಹೂವಿನ ಮಳೆ ...
ಆಕೆ ನಕ್ಕರೆ ಸಾಕು ...ಚಂದ್ರನೂ ನಾಚಿ ನೀರಾಗುವನು....
ಕಣ್ಣಿಲ್ಲೇ ಎಲ್ಲರ ಹೃದಯ ಕದಿಯುವಳು...

- ನಮಿತ ಗಟ್ಟಿ

17 Jul 2016, 07:41 pm