Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪೋನ್ ಸುಚ್ಚಾಪ್

ರಾತ್ರಿ ಹಗಲು ಎನ್ನದೆ ಪೋನಲ್ಲ ಹರಟೆ ಮಾತಾಡಿ ಪೋನಲ್ಲ ಕರನ್ಸಿ ಕಾಲಿಯಾಗುವವರೆಗೂ ಮಾತೇ ಮಾತು ಅದೇನು ಲವ್ ಸ್ಟೋರಿನ ಇಲ್ಲಾ ಲೀವ್ ಸ್ಟೋರಿನೋ. ಕಾಮಡಿನೋ
ಆದರೆ ಅವಳು ಪ್ರೀತಿಯ ಬೆಚ್ಚಗಿನ ಹೃದಯದಲ್ಲಿ ಬೆಚ್ಚಗಿತ್ತು ನನ್ನ ಮನಸ್ಸು
ಪೋನಲ್ಲಿ ಕರನ್ಸಿ ಖಾಲಿಯಾದಂತೆ ಅವಳಿಗೆ ಚಾಡಿ ಹೇಳುವ ನೆಟವರ್ಕ ಮಾತ್ರ ಎಲ್ಲಂದರಲ್ಲಿ ಬಿಜಿಯಾಗಿದ್ದ ಅವಳ ಮನಸ್ಸಗೆ ನನ್ನ ಪ್ಯಾಕೇಜ್ ಕಾಲಿಯಾಗಿ ಅವಳು ಹೊಸ ಸಿಮ್ ಕಾರ್ಡೀಗೆ ಅರ್ಜಿ ಹಾಕಿ ನನ್ನ ಸಿಮ್ ಕಾರ್ಡನ್ನು ಲಾಕ್ ಮಾಡಿಸಿದಳು ಅಂದಿನಿಂದ ನನ್ನ ಮನಸ್ಸಿನ ಕಾರ್ಡಿಂದ ಡಿಲಿಟ ಮಾಡೇ ಬೀಟ್ಟೆ

- gtr

15 Aug 2016, 11:13 pm

ನನ್ನ ಚಿಂತೆ

ಹಲವರನ್ನು ನೋಡಿದೆ
ಕೆಲವರನ್ನು ಇಷ್ಟಪಟ್ಟೆ
ಒಬ್ಬಳನ್ನು ಪ್ರೀತಿಸಿದೆ

ಕೆಲವೊಮ್ಮೆ ಬೇಡವೆಂದು
ಕೆಲವೊಮ್ಮೆ ಬೇಕೆಂದು
ಕೆಲವೊಮ್ಮೆ ಇದೆಲ್ಲ ಯಾಕೆಂದು
ಅನಿಸುವುದು

ಅನುಭವದ ಕೊರತೆ
ಮುಳುಗುವ ಭಯ
ಈಜು ಬರದ ಚಿಂತೆ
ಕಾಡುವುದು

ಕೆಲವೊಮ್ಮೆ ಕನಸಿನಲ್ಲಿ
ಕೆಲವೊಮ್ಮೆ ಮನಸ್ಸಿನಲ್ಲಿ
ಬಂದು ಹೋಗುವಳು
ಆಗುವುದೇ ನನಸು......?


ಕೆಲವರು ಪ್ರೀತಿಸಬೇಕೆನ್ನುವರು
ಕೆಲವರು ಪ್ರೀತಿಯಾಕೆನ್ನುವರು
ತೋಚದಾಗಿದೆ ಯಾವುದನ್ನು
ಆರಿಸಲೀ ಎಂದು....

ಪ್ರೀತಿಸಿದವರ ನೋಡಿ ನಕ್ಕಿದ್ದೆ
ಪ್ರೀತಿಯನ್ನು ದೂರಿದ್ದೆ
ಎಲ್ಲವೂ ವ್ಯರ್ಥ ಅನ್ನುತ್ತಿದ್ದೆ
ಈಗ .....ಈಗ....ಈಗ...
ಇಲ್ಲದಾಗಿದೆ ನನಗೆ ನಿದ್ದೆ...

- AsiddeeqN

15 Aug 2016, 09:35 pm

ಶೂನ್ಯ

ಕೊರಗದಿರು
'ಶೂನ್ಯ' ಭಾರತದ
ಕೊಡುಗೆ ಎಂದು
ಹೆಮ್ಮೆಯ ಪಡು
ಶೂನ್ಯದಿಂದಲೇ
"ಭಗವಂತನ"ಪಡೆಯಲು
ಸಾಧ್ಯವೆಂದು.

- ಸಾ.ರಾ.ಜ್ಞಾ

15 Aug 2016, 05:32 pm

ಕುಂಚ

ನಿನ್ನ ಮುಗುಳುನಗೆಯಿಂದ
ಕೊಂಚ ಕೊಂಚವೇ ಕದ್ದ
ಕನಸುಗಳು ಕುಂಚ ಹಿಡಿದು
ಬಣ್ಣಗಳೊಂದಿಗೆ ಆಡುತಿರಲು
ಅನುರಾಗದ ಕಾಮನಬಿಲ್ಲು
ಮೂಡುತಿದೆ

- mahesh gowdru

14 Aug 2016, 11:37 pm

ನನ್ನ ಜೊತೆ ಇರುವೆಯಾ ಗೆಳತಿ.

ಕಷ್ಟಕಷ್ಟಗಳ ಕಾರ್ಮೋಡ ಹರಿದಾವ
ಸುಖಗಳು ಆ ಮೋಡದಲಿ ಮುಚ್ಚ್ಯಾವ
ಭಾವನೆಗಳಿಗೆ ತೆರೆಎಳೆದಾವ
ಆಸೆಗಳು ಕಮರಿ ಹೊಗ್ಯಾವ ಬದುಕುವ ಆಸೆಗಳು ಕೈ ಬಿಟ್ಟಾವ
ನಿನಾದರು ನನ್ನ ಜೊತೆ ಇರುವೆಯಾ ಗೆಳತಿ. ?

- ಅನಂತನಾಗ ಚಿತ್ತಾಪೂರ ಕಲಬುರಗಿ

14 Aug 2016, 11:31 pm

ನನ್ನ ನಿಂಗಿಗೇ......

ಕಾಮದ ರಸ ಹಿಂಗಿ ಮೋಹದ ಸದ್ದಡಗಿ
ಇನ್ನೂ ನಿನಗೆ ನಾ ಬೇಕೆಂದರೆ ಅದುವೇ
ಪ್ರೇಮ ಕಣೇ ನಿಂಗಿ!!!

- ಕೊಟ್ರೇಶ T A M

14 Aug 2016, 08:52 pm

ವೃದ್ಧಾಶ್ರಮ

ಮಗುವನು 'ಡೇ-ಕೇರ್' ವಶಕ್ಕೊಪ್ಪಿಸಿ
ಹೆತ್ತವರು ಪಡೆದರು ಆರಾಮ।
ಸೀಟು ಕಾದಿರಿಸಿ ಎದುರು ನೋಡುತಿದೆ
ಇವರಿಗಾಗಿ " ವೃದ್ಧಾಶ್ರಮ"।।

- ಮಲ್ಲಿಭಾಗವತ್ ಗುಡಿಬಂಡೆ

14 Aug 2016, 08:06 pm

"ಜೀವನ"

"ಜೀವನ"

ಅಮ್ಮನಿಂದ ಶುರುವಾದ-ಬದುಕಿನಾಟ
ಗೆಳೆಯರೊಂದಿಗೆ-ಆಟ/ತುಂಟಾಟ
ಮೇಷ್ಟ್ರುಗಳಿಂದ-ಪಾಠ
ಬೇಕು/ಬೇಡದವುಗಳ - ಚಟ
ವೃತ್ತಿ/ಪ್ರವೃತ್ತಿಗಳ - ಹುಡುಕಾಟ
ಸಾಂಸಾರಿಕ ಲೋಕದ - ಜಂಜಾಟ
ಹುಟ್ಟೋ ಮಕ್ಕಳ ಬದುಕಿಗೆ - ಪರದಾಟ
ಮಾನಸಿಕ ಭಾವನೆಗಳ -ಸಂಕಟ
ವೃದ್ಧಾಪ್ಯ ಜೀವನದ - ಹೋರಾಟ
ಕೊನೆಯ ಪಯಣಕೆ ಸಿದ್ಧವಾದ - ಚಟ್ಟ

- ಸಾಗರ್ ಸಿದ್ದು

14 Aug 2016, 06:10 pm

ಕೊಲೆಯಾದೇ ನಾ...!

ಓ ಚೆಲುವೇ
ನಿನ್ನನ್ನು ನೋಡಿ
ನಾನು ಮಾಡಿದೇ ಪ್ರೀತಿ ವಿಹಾರ
ಕೆಲವು ದಿನಗಳ ನ೦ತರ
ನಾನಾದೇ ಸಜೀವ ಸ೦ಹಾರ
ಇದಕ್ಕೆಲ ಕಾರಣ
ಆ ಚೆಲುವೇಯ ಅಣ್ಣ ಕೊಲೆಗಾರ..!

- ವಲ್ಲಭ..

14 Aug 2016, 04:04 pm

ವ್ಯಾಮೋಹವು ಸರಿಯಲ್ಲ.....

ಪ್ರೀತಿ ವಿಶ್ವಾಸಕೆ ಕೊನೆಯಿಲ್ಲ ಆಸೆ ನಂಬಿಕೆಗಳಿಗೆ ಸಾವಿಲ್ಲ......
ತಿಪ್ಪೆ ಗುಂಡಿಗಳ ವಾಸನೆಯು ಸುವಾಸನೆಯಲ್ಲ....
ತಿಪ್ಪೆಯ ಮೇಲಿರುವ ಕಾಳುಗಳನ್ನು ಹೇಕ್ಕಿ ತಿನ್ನುವ ಕೋಳಿಯ ಮೇಲಿರುವ .....
ವ್ಯಾಮೋಹವು ಸರಿಯಲ್ಲ
ಹಾಗೆನಾದರು ವ್ಯಾಮೋಹ ವಿದ್ದರು ಕೋಳಿ ಜ್ವರದ ಭಯವು ತಪ್ಪಿದಲ್ಲ.....

- ಅನಂತನಾಗ ಚಿತ್ತಾಪೂರ ಕಲಬುರಗಿ

14 Aug 2016, 12:05 am