ಅವಳು ನೋಡದಿದ್ದರೆ,
ನಾನು ಮೋಹಿತನಾಗುತಿರಲಿಲ್ಲ
ಅವಳು ನಗದಿದ್ದರೆ
ನಾನು ಹುಚ್ಚ ಪ್ರೇಮಿ ಆಗುತಿರಲಿಲ್ಲ
ಅವಳು ನಾ ನಿನ್ನ ಪ್ರೀತಿಸುವೆ ಎನ್ನದಿದ್ದರೆ
ನಾನು ನಿನ್ನ ಬಿಡಲಾರೆ ಎನ್ನುತಿರಲಿಲ್ಲ
ಅವಳು ಈ ಹೃದಯ ನಿನಗಾಗಿಯೇ ಎನ್ನದಿದ್ದರೆ
ನಾನು ನಿನ್ನ ಮರೆಯಲಾರೆ ಎನ್ನುತಿದ್ದೆ
ಆದರೀಗ ನನಗೂ ಅವಳಿಗೂ ನಾನೊಂದು ತೀರಾ
ನೀನೊಂದು ತೀರವಾಗಿ ಬಾಡದ ಹೂವಾಗಿದೆ
ಬದುಕಿನಲ್ಲಿ ಏರುಪೇರು ಸಾವಿರಾರು
ಅದ ಎದುರಿಸಿ ನಡೆಯುವಂತೆ ನೀನಾಗಿರು
ಬಿದ್ದಾಗ ಕೈ ಹಿಡಿಯುವುದಿಲ್ಲ ಯಾವ ಜನರು
ಗೆದ್ದಾಗ ಕೈ ಕುಲುಕುವರು ಕೆಲ ಜಲ್ಪಕರು
ನಿನ್ನ ಗೆಲುವಿಗೆ ನೀನೇ ಆಗಿರು ದಾರಿ
ಆ ದಾರಿಗೆ ದಾರಿದೀಪವಾಗಿ ಬರುವನು ಶ್ರೀಹರಿ
ಕಡಲಾಗಿ ಕೂಡಿ ಬಾಳಿದ ಸ್ನೇಹ
ಬತ್ತಿ ಹೋದ ಕೆರೆ ಕುಂಟೆಗಳಂತಾಗಿದೆ
ಕನ್ನಡಿಯಂತೆ ಫಳಫಳನೆ ಹೊಳೆಯುವ
ನನ್ನ ಸ್ನೇಹ ಒಡೆದ ಕನ್ನಡಿಯ ಚೂರುಗಳಂತಾಗಿದೇ
ಗುಲಾಬಿಯ ಹೂವಿನಂತಿದ್ದ ನಮ್ಮ ಸ್ನೇಹ
ಬಾಡಿದ ಮಲ್ಲಿಗೆ ಸಂಪಿಗೆಯಂತಾಗಿದೆ
ಆಕಾಶದ ನಕ್ಷತ್ರದಂತಿದ್ದ ನಮ್ಮ ಸ್ನೇಹ ಕಲ್ಲು ಗುಡ್ಡೆಗಳಂತಾಗಿದೆ
ಸ್ನೇಹಕ್ಕಾಗಿ ಪ್ರಾಣ ಕೊಡುವ ಸ್ನೇಹವ ನಂಬಲೇ ಇಲ್ಲಾ ಹಣದ ಆಸೇಗೆ ಗೆಳೆತನ ಮಾಡುವ ಸ್ನೇಹವನ್ನೇ ನಂಬಲಿ ನೀವೇ ಹೇಳಿ ಎಂತಹ ಸ್ನೇಹವನ್ನು ಮಾಡಲಿ ?