Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮುಂಜಾನೆ ಕವನ

ಇರುಳು ತುಂಬಿದ ಲೋಕದಲ್ಲಿ
ಆ ರವಿಯ ಆಗಮನ!!
ಮುಂಜಾವಿನ ಉಷೆ ಕಿರಣ
ಬೆಳ್ಳಕ್ಕಿ ಬರೆದ ಕವನ!!

ಉದಯಿಸುವ ರವಿಯ
ಉದರದಲಿ ಉರಿವ
ಆ ಜ್ವಾಲೆ ತಂದ ಕಿರಣ
ಪ್ರಕೃತಿಯು ಅಂದ ನಮನ!!

ನಾಚುತ್ತ ನಿಂತ ಆ ಸೂರ್ಯಕಾಂತಿ
ಸ್ಪರ್ಶಿಸಿದ ಸೂರ್ಯ ಕಿರಣ!!
ಹೊಳೆಯುತ್ತ ನಿಂತ ಇಬ್ಬನಿಯ ಸಾಲು
ಸೆಳೆದಿತ್ತು ನನ್ನ ಗಮನ!!

ಕೆರೆ ಏರಿ ಮೇಲೆ ಎಳೆ ಹುಲ್ಲು ಹಾಸಿ
ಚಿಗುರೊಡೆದ ಹಸಿರು ಪ್ರೀತಿ!!
ಓದುತ್ತ ಕುಳಿತೆ ನೀ ನನ್ನ ಪಯಣ
ಮುಗಿದೋಯ್ತು ಈ ಕವನ!!

- ಪಿ.ಜಿ.ಜ್ಯೋತಿ

26 Aug 2016, 08:26 am

ಹಬ್ಬ


ಎಲ್ಲೆಲ್ಲೂ ರಂಗು-ರಂಗು
ಬಟ್ಟೆ-ಬರೆಗಳು
ಉಡುಗೆ-ತೊಡುಗೆಗಳು
ಆಹಾರ-ಪದಾರ್ಥಗಳು
ಪಾಯಸ-ಪಾನೀಯಗಳು
ರಂಗು-ರಂಗಿಗೆ (ಜನ)
ಮಂಕು-ಮರುಳಾಗಿ
ಮನವ ಕೆರೆಯುವದು
ಕಣ್ಣ ಮೆರೆಯುವದು
ತಂಪನ್ನೀಯುವುದು

- ಶಾಹಿದ್ ಉಪ್ಪಿನಂಗಡಿ

25 Aug 2016, 05:22 pm

ಆಧುನಿಕ ಜಗತ್ತು



ನೈಸರ್ಗಿಕ ಪ್ರೀತಿಯಿತ್ತು
ಅಂದು
ಶಾಂತಿಯೂ ಮನೆ ಮಾಡಿತ್ತು
ಮನೆಗಳು ದೂರವಿದ್ದರೂ
ಮನಗಳು ಹತ್ತಿರವಾಗಿತ್ತು
ಸಂದರ್ಶಿಸಲು ಸಮಯವಿತ್ತು..
ಸೌಕರ್ಯಗಳು ಮಿತಿಮೀರಿದ್ದರೂ
ಇಂದು
ಕೃತಕ ನಗೆ ದರ್ಶನವಾಗುತಿದೆ.
ಅಶಾಂತಿ ತಲೆದೋರುತ್ತಿದೆ.
ಮೊಬೈಲ್ ಹತ್ತಿರವಿದ್ದರೂ
ಸಮಯ ಪೋಲಾಗುತ್ತಿದೆ
ಪ್ರಿಯರ, ಕುಟುಂಬಿಕರ ಸಂದರ್ಶನವೂ‌ ಅಸಾಧ್ಯವಾಗುತಿದೆ...

- ಶಾಹಿದ್ ಉಪ್ಪಿನಂಗಡಿ

25 Aug 2016, 05:00 pm

ಕಲ್ಲು ಹೃದಯ

ಹಲ್ಲೆಯಂತೆ
ತೀರಿ ಹೋದರಂತೆ !
ಕೊಲೆಯಂತೆ
ಸತ್ತು ಹೋದರಂತೆ !
ಭೂಕಂಪವಂತೆ
ಅಸು ನೀಗಿದರಂತೆ !
ಜ್ವಾಲಾಮುಖಿಯಂತೆ
ಇಹಲೋಕ ತ್ಯಜಿಸಿದರಂತೆ !
ಮುಖಾಮುಖಿ ಡಿಕ್ಕಿಯಂತೆ
ಹಲವರು ಗುಡ್ ಬೈ ಹೇಳಿದರಂತೆ !
ಹಲವಾರು ವಾರ್ತೆಗಳು ಕೇಳುತ್ತವಂತೆ
ಆದರೂ
ನನ್ನ ಮನ ಕರಗಲ್ಲವಂತೆ (!)

- ಶಾಹಿದ್ ಉಪ್ಪಿನಂಗಡಿ

25 Aug 2016, 04:48 pm

ಗುರುತು

...
ಯಾರಿಗೋ ಜನಿಸಿ...
ಎಲ್ಲೋ ಜೀವಿಸಿ..
ಯಾರಿಗಾಗಿಯೋ ದುಡಿದು..
ಸಮಯ ಮುಗಿದಾಗ (!)
ಯಾರೋ ಹೊತ್ತುಕೊಂಡು ಹೋಗಿ..
ಹೂಳಿ ಬಿಡುವುದೇ ಜೀವನ ?
ನಾನಿಲ್ಲಿದ್ದೆ ಎಂಬುದಕ್ಕೆ...
ನಾನು ಲೋಕ ಕಂಡಿದ್ದೆ ಎಂಬುದಕ್ಕೆ...
ನಾನಿಲ್ಲಿ ಜೀವಿಸಿದ್ದೆ ಎಂಬುದಕ್ಕೆ...
ಸಾಧನೆ ಎಂಬ ಗುರುತು ಇದೆಯೇ ?

- ಶಾಹಿದ್ ಉಪ್ಪಿನಂಗಡಿ

25 Aug 2016, 04:39 pm

ಸಂಕೇತ

ಕೃಷ್ಣನ ಶಿರದಲ್ಲಿರೋ ನವಿಲುಗರಿ
ಪ್ರೀತಿ, ಪಾವಿತ್ರ್ಯತೆಯ ಸಂಕೇತ
ನಮ್ಮಿಬ್ಬರ ಸ್ನೇಹ ಸಂಜೀವಿನಿಯೇ
ಪ್ರೀತಿ,ಪಾವಿತ್ರ್ಯತೆಯ ಸಂಕೇತ

- ಸಾ.ರಾ.ಜ್ಞಾ

25 Aug 2016, 08:40 pm

ನೀನಿರುವೆ ನನ್ನಲ್ಲೇ

ಇರುಳಲ್ಲಿ ಬಂದು
ಬೆಳಕನ್ನು ಚಲ್ಲೋ
ಬೆಳದಿಂಗಳಂತ ನಲ್ಲೇ!!

ಬೆಳಕಲ್ಲಿ ನಿನ್ನ
ಹುಡುಕಿದರೂ ಕಾಣೆ
ನೀನಿರುವೆ ನನ್ನಲ್ಲೇ!!

ಆ ಚುಕ್ಕಿ ಚಂದ್ರ
ನಸು ನಾಚಿ ನಿಂತ
ನನ್ನೊಳಗೆ ನಿನ್ನ ಕಂಡು!!

ಬೆಳದಿಂಗಳಾಟ
ಈ ತಂಪು ಗಾಳಿ
ಜೊತೆಯಲ್ಲಿ ನಿನ್ನ ನೆನಪು!!

ಇರುಳಲ್ಲಿ ನನ್ನ
ಹೊಂಗನಸಿನಲ್ಲಿ
ಎಂದೆಂದೂ ನಿನ್ನ ಧ್ಯಾನ!!

ಇರು ಹೀಗೆ ಎಂದೂ
ನನ್ನ ಮನಸಿನಲ್ಲಿ
ಅದು ನಮ್ಮ ಪ್ರೇಮ ತಾಣ!!

- ಪಿ.ಜಿ.ಜ್ಯೋತಿ

25 Aug 2016, 08:40 am

ಮುಂಜಾವ ತಂಗಾಳಿ

ತಂಪು ತಂಪು ತಂಪಾದ
ತಂಪಾದ ತಂಗಾಳಿ
ತಾನನಾನ ಹಾಡಿ
ತನ್ನೂರಿಗೆ ಸಾಗಿ !!

ಕೆಂಪು ಕೆಂಪು ಕೆಂಪಾದ
ಕೆಂಪಾದ ಆ ಕಿರಣ
ತೋರಿಸಿತು ಸೂರ್ಯನಿಗೆ
ನಮ್ಮೂರ ದಾರಿ !!

ಇಳೆಯ ಮೇಲೆ ಕಂಡ
ಮುತ್ತಿನ ಇಬ್ಬನಿಯು
ಇರಿಸಿದೆ ಇಳೆಯಲ್ಲಿ
ಸುಂದರ ರಂಗೋಲಿ!!

ಮೊಗ್ಗರಳಿ ಹೂವಾಗೋ
ಶುಭ ಮುಂಜಾವಿನಲಿ
ಕೇಳಿಸುತಲಿದೆ ಕಿವಿಗೆ
ಹಕ್ಕಿಗಳ ಚಿಲಿಪಿಲಿ !!

ಬೇಗ ಬೇಗನೆ ಎದ್ದು
ನೋಡಿದರೆ ಈ ಬೆಡಗು
ಬೆಳಗಿನ ಹೊತ್ತಲ್ಲಿ
ಮನ ತಣಿಸುವ ಸೊಬಗು!!

- ಪಿ.ಜಿ.ಜ್ಯೋತಿ

25 Aug 2016, 08:19 am

ಎಕ್ಸಾಮು

ಬಂತು ಬಂತು ಎಕ್ಸಾಮು
ತಲೆನೋವಿಗೆ ಬೇಕು ಮುಲಾಮು
ಹೊಡೆದೆ ತುಂಟಾಟಗಳಿಗೆ ಸಲಾಮು
ತಿನ್ನಲು ಶುರುವಿಟ್ಟೆನು ಬಾದಾಮು...

ಬಿತ್ತು ಹೆತ್ತವರಿಂದ ಪೆಟ್ಟು
Horlics,bornvita ಕೊಟ್ಟು
ಹೇಳಿದರು
ಓದ್ಬೇಕು ನಿದ್ದೆ ಬಿಟ್ಟು
ಬರಲೇ ಬೇಕು ಕ್ಲಾಸಿಗೆ ಫಷ್ಟು...

ಎಕ್ಸಾಮು ಹಾಲಿಗೆ ಹೋದಾಗ
ಮೇಲ್ವಿಚಾರಕರು ಬಂದಾಗ
ಪ್ರಶ್ನೆ ಪತ್ರಿಕೆ ಕೊಟ್ಟಾಗ
ಬರೆಯಲು ಬೆಲ್ಲು ಬಡಿದಾಗ...

ಛೇ,ಇದನ್ನು ಓದಿದ್ದೆ
ಅಯ್ಯೋ,ಅದನ್ನು ಬಿಟ್ಟಿದ್ದೆ
ಅಬ್ಬಾ, ಪರವಾಗಿಲ್ಲ ಬದುಕಿದೆ
ಯೋಚಿಸುತ್ತಿರಲು ಬಟ್ಟೆಯೆಲ್ಲ ಬೆವೆತು ಒದ್ದೆ...

ನೋಡಿದೆ ಬರೆಯಲು ಆಗುವುದೇ ಚರ್ಚಿಸಿ
ಮೇಲ್ವಿಚರಕರು ಬೈದರು ಘರ್ಜಿಸಿ
ಬರೆದೆ ಗೊತ್ತಿರುವುದು ಚಿಂತಿಸಿ
ಪುಟವನ್ನು ಆಚೆ-ಈಚೆ ತಿರಿಗಿಸಿ..

ಹುಟ್ಟಿದೆ ನನ್ನಲ್ಲಿ ಭಯ
ಕಣ್ಣುಗಳು ಆಗುತ್ತಿತ್ತು ಮಯಮಯ
ಆಗಾಗ ನೋಡುತ್ತಿದ್ದೆ ಸಮಯ
ಚೆನ್ನಾಗಿ ಓದುತ್ತಿದ್ದರೆ ಜೀವನ ಆಗುತ್ತಿತ್ತು ವೈವಿಧ್ಯಮಯ....

- AsiddeeqN

24 Aug 2016, 11:55 pm

ಮನದನ್ನೆ

ನೀ ಏನೇ ಅನ್ನೆ
ಮನದನ್ನೆ
ಹಿಡಿಯದಾಗಿದೆ
ಮನದ ಸನ್ನೆ

- ಸಾ.ರಾ.ಜ್ಞಾ

24 Aug 2016, 08:43 pm