Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಕದಡಿದ ಕೆಸರಿನಲ್ಲಿ
ಕಮಲವು ಅರಳಿದಂತೆ
ಕಮರಿದೆಎಂದು ಕರುಬಿದರು
ಹಿತವೆಂಬ ಮೆಹಕಿನ
ಎಸಳುಗಳು ಅಲ್ಲಲ್ಲಿ
ಕಾಣುವುದು ನೋಡ.
- ಸಾ.ರಾ.ಜ್ಞಾ
29 Aug 2016, 04:43 pm
ನಿನ್ನ ಪ್ರೀತಿಗೆ
ಯಾವ ಎಲ್ಲೆ
ಎಲ್ಲ ನೋವ ಮರೆಸುವ
ಬದುಕಿನ ಸ್ಪೂರ್ತಿ
ಚಿಲುಮೆ
ಬತ್ತಲಾರದ ಗಂಗೆ
ನಿನ್ನ
ಸನಿಹ ಸುಳಿವ ಆಸೆ
ಇದೆ ಇನ್ನು ಭರವಸೆ
ಪ್ರೀತಿ ಮಾಮರದಿ
ಕುಳಿತ
ಕೋಗಿಲೆಗೆ
ಹೇಳು ಒಮ್ಮೆ
ನನ್ನ
ಕರೆಯಲು
- ಶಿಖರಸೂರ್ಯ
29 Aug 2016, 03:08 pm
ಯಾರ ಆಚರಣೆ
ಪೂಜಿಸಲು ಯೋಗ್ಯವೋ
ಅವರ ಚರಣಗಳು
ಪೂಜಿಸಲು ಯೋಗ್ಯ.
- ಸಾ.ರಾ.ಜ್ಞಾ
29 Aug 2016, 02:43 pm
ಎಷ್ಟು ಸಾಂತ್ವನ
ಹೇಳಲಿ
ಕಣ್ಣ ಹನಿಗಳಿಗೆ
ನೀ
ಬರುವೆಯೆಂದು
ಎದೆಯೊಳಗಿನ
ನೂರು
ಪ್ರಶ್ನೆಗಳಿಗೆ
ಉತ್ತರ
ಹೇಳುವೆಯೆಂದು.
ಒಲವಿನ
ಹೊತ್ತಿಗೆಯ
ಮುಖಪುಟದಲಿ
ಬಿಡಿಸಿದ ನಿನ್ನ
ರೂಪರೇಕೆಗೆ
ಮುಕ್ತಿ
ಎಂದು....
- ಶಿಖರಸೂರ್ಯ
29 Aug 2016, 02:01 pm
ಜೀವನದಿ ಸುಖ-ದುಃಖದ
ಪರಿಧಿಯೊಳಗೆ
ನನ್ನ-ನಿನ್ನ ಪ್ರೀತಿಯ
ಅನುಭೂತಿಯು
ದಿಗಂತದೆಡೆಗೆ.
- ಸಾ.ರಾ.ಜ್ಞಾ
28 Aug 2016, 08:38 pm
ಒಲವಿನ ಹೊತ್ತಿಗೆಗೆ ಯಾವ ಹೆಸರಿಡಲಿ
ಗೆಳತಿ?
ಅನನ್ಯ ,ಅಪೂರ್ವ...
ನಿನ್ನ ನುಡಿಯ ವಿಸ್ಮಯಕೆ ಯಾವ
ಬೆಲೆಯನು ತೆರಲಿ
ನಿನ್ನ ನಗುವೆ ಇಂಧನ
ನನ್ನ ಬಾಳ ಬಂಡಿಗೆ..
ನಿನ್ನ ಒಲವೆ ಸ್ಪೂರ್ತಿ
ನನ್ನ
ಹೃದಯ
ಬಡಿತಕೆ..
ಎಷ್ಟು ಜನ್ಮ
ಸವೆಸಲಿ ಹೇಳು
ಬರಲು
ನಿನ್ನ ಸನಿಹಕೆ.....?!
- ಶಿಖರಸೂರ್ಯ
28 Aug 2016, 05:41 pm
ನನ್ನ ಒಲುಮೆ ಗೂಡಿಗೆ
ನೀ ಪಟ್ಟದರಸಿ ಎಂದು
ಹೇಳಲೇಬೇಕೆ?
ನಿನ್ನ ರೂಪರಂಗಿಗೆ ಹೋಲುವ
ಬಣ್ಣ ಇನ್ನು ಇದೆ ಎಂದು ನಂಬಲೆಬೇಕೆ?
ಯಾವ ಹೋಲಿಕೆಗೂ ನಿಲುಕದ ನಿನ್ನ
ರೂಪಕೆ ಬೇರೆ
ಉಪಮೆ ಬೇಕೆ!
- ಶಿಖರಸೂರ್ಯ
28 Aug 2016, 11:14 am
ಪರ ಪ್ರಶಂಸೆಯ
ಸಹಿಸದ ಈ ಮನ
ಪರ ನಿಂದನೆಯ
ಸ್ವಾಗತಿಸುವುದು.
- ಸಾ.ರಾ.ಜ್ಞಾ
28 Aug 2016, 10:29 am
ಎಲ್ಲ ಕಂಡು
ಸುಮ್ಮನಿರುವ ಹಾಗೆ
ನಟಿಸುವ
ನನ್ನ ಎಲ್ಲ ನೋವಿಗೂ
ಕನ್ನಡಿ ನೀನು
ನನ್ನ ಎಚ್ಚರಿಸುವ
ಬೆಳಕಿನೆಡೆಗೆ ನನ್ನ ಕರೆದೊಯ್ಯುವ
ನಿನಗೆ ನಮಸ್ಕಾರ
ಓ ಅಂತರಾತ್ಮ......
- ಶಿಖರಸೂರ್ಯ
27 Aug 2016, 09:46 pm
ಕಾದಳು ಶಬರಿ ಉದ್ಧರಿಸಲು
ರಾಮ ಬರುವನೆಂದು.
ಕಾಯುವಳು ಈಕೆ ಬರಿ
ರಮಣ ಮಣ-ಹಣ ತರಲೆಂದು.
- ಸಾ.ರಾ.ಜ್ಞಾ
27 Aug 2016, 09:34 pm