Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಒಂದಷ್ಟು ಮಾತುಗಳನು ಮರೆತಿದ್ದೇನೆ
ನಾನು ಮಾತನಾಡಲಾಗದೆ..
ತಾಯಿಯೊಬ್ಬಳು ಮಗುವಿಗೆ ಹಾಲುಣಿಸುವ
ಅನುರಾಗದ ತನ್ಮಯತೆಯಲ್ಲಿ..
ಒಂದಷ್ಟು ಮಾತುಗಳನು ಮರೆತಿದ್ದೇನೆ
ನಾನು ಮಾತನಾಡಲಾಗದೆ..
ಮರಿಮೊಮ್ಮಕ್ಕಳನು ಮುದ್ದಿಸುವ ಶತಾಯುಶಿ ಮುದುಕಿಯ ಸಂತೃಪ್ತಿಯ ನಗುವ ನೋಡಿ..
ಒಂದಷ್ಟು ಮಾತುಗಳನು ಮರೆತಿದ್ದೇನೆ
ನಾನು ಮಾತನಾಡಲಾಗದೆ..
ಕೈಯೊಡ್ಡಿ ಬೇಡಿದ ಕುರುಡ ಬಿಕ್ಷುಕನೊಬ್ಬನ
ದೈನ್ಯತೆಯ ಯಾಚನೆಯ ಕಂಡು..
ಒಂದಷ್ಟು ಮಾತುಗಳನು ಮರೆತಿದ್ದೇನೆ
ನಾನು ಮಾತನಾಡಲಾಗದೆ..
ಲೆಕ್ಕ ತಲೆಗೆ ಹತ್ತಿಸಿಕೊಳ್ಳಲಾಗದ ದಡ್ಡ
ವಿದ್ಯಾರ್ಥಿಯೊಬ್ಬನ ಚಡಪಡಿಕೆಯಲ್ಲಿ..
ಒಂದಷ್ಟು ಮಾತುಗಳನು ಮರೆತಿದ್ದೇನೆ
ನಾನು ಮಾತನಾಡಲಾಗದೆ..
ಬೀದಿನಾಯಿಯೊಂದಿಗೆ ತಿರುಗುವ ಕೆದುರುಕೂದಲ ಅಲೆಮಾರಿಯ ನೋಡಿ..
ಒಂದಷ್ಟು ಮಾತುಗಳನು ಮರೆತಿದ್ದೇನೆ
ನಾನು ಮಾತನಾಡಲಾಗದೆ..
ನಿಲುವುಗನ್ನಡಿಯೆದುರು ನಿಂತು
ಸ್ವತಃ ನನ್ನದೇ ಬಿಂಬವನು ಕಂಡು..
- Manjunath
30 Aug 2016, 05:30 pm
ನೀ ಬರುವೆಯೆಂಬ
ಭರವಸೆಯ ಮೇಲೆ
ಉಸಿರಾಡುತ್ತಿದ್ದೇನೆ
ನಿನ್ನ
ಹೆಸರನ್ನೇ
ಕಣ್ಣು
ಹಾಯಿಸಿದೆಡೆಯೆಲ್ಲ
ನಿನ್ನ ರೂಪವೇ.
ಕೇಳಿಸದು
ನಿನ್ನ
ದನಿಯ ಹೊರತು
ಯಾವ ಕಲರವ.
ಬೆಲೆ ಕಟ್ಟಲು
ಸಾಧ್ಯವೆ
ನಿನ್ನ ಪ್ರೀತಿಗೆ
ಸರಿಸಮನುಂಟೆ
ನಿನ್ನ
ನಿಷ್ಕಲ್ಮಷ
ನಗುವಿಗೆ..........
- ಶಿಖರಸೂರ್ಯ
30 Aug 2016, 03:38 pm
ಒರೆಸಲು ಒರೆಸಲಾಗದು
ಕೇಳಲು ಮನಸಾಗದು
ಮಾತಾಡಲು ಮೂಡ್ ಇರದು
ನೆಗಡಿ ಮಹಾರಾಯ
ಮೈ-ಮನವ ನಲುಗಿಸಿಹನು,
ತಲೆಯ ತಗ್ಗಿಸಿಹನು.
- ಸಾ.ರಾ.ಜ್ಞಾ
30 Aug 2016, 02:51 pm
ಮೇನಕೆ ಭುಜವ
ಹಿಡಿದಳೆಂದು
ಕಣ್ತೆರೆದು ನೋಡಿದರೆ
ಮೇಕೆಯು ಹಿಡಿದಿತ್ತು
ಕೊಳಪಟ್ಟಿಯ.
- ಸಾ.ರಾ.ಜ್ಞಾ
30 Aug 2016, 02:15 pm
ನೂರು
ಕನಸುಗಳಿಗೆ
ಅಡ್ಡಲಾಗಿ
ಸೋಲಿನ
ಅಣೆಕಟ್ಟೆ
ನಿನ್ನ ಪ್ರೀತಿಯ
ಪ್ರವಾಹವ
ಹರಿಸಲಾರೆಯ
ಗೆಳತಿ.
ಸುಳಿದು ಬಾ
ಒಮ್ಮೆಯಾದರೂ
ನನ್ನ
ಸನಿಹಕೆ
ಉಸಿರು
ನಿಲ್ಲುವ
ಮೊದಲು
ಒಂದು
ಸರತಿ.....
- ಶಿಖರಸೂರ್ಯ
30 Aug 2016, 11:46 am
ನೀ ಒಲವಿನ
ಧಾರೆಯ
ಹರಿಸದೆ
ಬದುಕೆ
ನಿಶ್ಚಲ
ನೀ ಎದುರು
ಬಾರದೆ
ಕಿರು ನಗೆಯ
ಬೀರದೆ
ಕಣ್ಣ
ತುಂಬ.
ನಿನ್ನ ಬಿಂಬ
ಹಾಗೆಯೆ
ನಿಂತಿದೆ
ನೀ ಬರುವೆಎಂದು
ನೀ ಸಿಗುವೆಯೆಂದು
ಉತ್ತರ ಸಿಗದ ಪ್ರಶ್ನೆಯಾಗಿಯೆ
ಉಳಿವುದೆ?
- ಶಿಖರಸೂರ್ಯ
30 Aug 2016, 11:30 am
ಒಲವಿನ ದೀವಿಗೆಯ
ಹಚ್ಚಿರುವ
ಗೆಳತಿ
ನಿನ್ನ
ದಾರಿಗೆ
ನಾ ಹೂವಾಗಲೆ.
ಕಣ್ಣ ನದಿಪಾತ್ರದಲಿ
ಸುಳಿಮಿಂಚಾಗಿ
ಸುಳಿವವಳೆ
ನಿನ್ನ
ಕನಸಿಗೆ ನಾನು
ಬರಲೆ...
- ಶಿಖರಸೂರ್ಯ
30 Aug 2016, 11:11 am
ಜೀವನ ಜೋಕಾಲಿಯ
ಜೀಕು-ಜೀಕುತಲಿ
ಹಳತನ್ನು ಕೆದರಿ
ಕಂಗೆಡೆವುದಕ್ಕಿಂತ
ಹೊಸತಿನ ಸ್ವಾದವ
ಸವಿಯೋಣ.
- ಸಾ.ರಾ.ಜ್ಞಾ
30 Aug 2016, 07:48 am
ಎದೆಯೊಳಗಿನ ನೂರು
ಪ್ರಶ್ನೆಗೆ
ಉತ್ತರ
ಹೇಳುವೆಯ
ಗೆಳತಿ
ಕಣ್ಣ
ನದಿ ಪಾತ್ರದಲ್ಲೀಗ
ನಿನ್ನ
ಒಲವಿನ
ಪ್ರವಾಹ
ನೂರು
ನೆನಪಿನ
ಪುಟಗಳಲ್ಲೂ
ನಿನ್ನ
ರೂಪಚಂದಿರ
ಕಾಯುವೆ
ನಿನಗಾಗಿ
ನೀ ಸಿಗುವುದಾದರೆ
ಬರಲಿ
ಜನ್ಮ
ಸಾವಿರ.....
- ಶಿಖರಸೂರ್ಯ
29 Aug 2016, 08:42 pm
ಎದೆಯೊಳಗಿನ ನೂರು
ಪ್ರಶ್ನೆಗೆ
ಉತ್ತರ
ಹೇಳುವೆಯ
ಗೆಳತಿ
ಕಣ್ಣ
ನದಿ ಪಾತ್ರದಲ್ಲೀಗ
ನಿನ್ನ
ಒಲವಿನ
ಪ್ರವಾಹ
ನೂರು
ನೆನಪಿನ
ಪುಟಗಳಲ್ಲೂ
ನಿನ್ನ
ರೂಪಚಂದಿರ
ಕಾಯುವೆ
ನಿನಗಾಗಿ
ನೀ ಸಿಗುವುದಾದರೆ
ಬರಲಿ
ಜನ್ಮ
ಸಾವಿರ.....
- ಶಿಖರಸೂರ್ಯ
29 Aug 2016, 08:41 pm