Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಜನುಮದಿನದ ಶುಭಾಶಯ

ಶುಭಾಶಯ ಶುಭಾಶಯ
ಶುಭಾಶಯ ನಿನಗೆ!!

ನೀ ಜನಿಸಿದ‌ ಈ ದಿನವು
ನವ ಚೇತನದಾ ತನುವು!!

ಹರಸಲೀ ನಿನ್ನ
ಆ ದೇವರಿಲ್ಲಿ ಬಂದು!!

ಕರುಣಿಸಲೀ ವರವಾ
ನೂರ್ ಕಾಲ ಬಾಳೆಂದು!!

ನಿನ್ನೊಲವಿನ ಹೂ ನಗೆಗೆ
ಅನುರಾಗವೇ ಉಡುಗೊರೆಯು!!

ನೀ ಬಯಸಿದ ನನ್ನೊಲವು
ನಿನಗಾಗಿಯೇ ಅನುಕ್ಷಣವು!!

- ಪಿ.ಜಿ.ಜ್ಯೋತಿ

08 Sep 2016, 06:54 am

ಯವ್ವನ

ಕನಸುಗಳು ಗರಿ ಬಿಚ್ಚಿ
ನೆನಪುಗಳು ಮರುಕಳಿಸಿ
ಬಯಕೆಗಳು ಬಯಸುತಿವೆ ನಿನ್ನ!!

ನೀನಿರದ ಈ ಬಾಳು
ಬದುಕಲ್ಲಿ ಬೇಸರವು
ಒಂಟಿತನ ಎನಿಸುತಿದೆ ದಿನವೂ!!

ದಿನವೆಲ್ಲ ನಿನ್ನ ನೆನೆದು
ತಿರು ತಿರುಗಿ ನಾ ಅಲೆದು
ಕುಸಿದಿಹುದು ಈ ನನ್ನ ಬಲವು!!

ನಿನಗಾಗಿ ಕಾಯುತಲೆ
ಕಳೆದಿಹುದು ಯವ್ವನವು
ಬಯಸಿದರೆ ಮರಳುವುದೇ ಆ ದಿನವು!!

- ಪಿ.ಜಿ.ಜ್ಯೋತಿ

07 Sep 2016, 07:11 pm

ನಾ ನೆಟ್ಟ ಬಳ್ಳಿ

ನಾ ನೆಟ್ಟ ಬಳ್ಳಿಗೆ
ಹೂವೊಂದು ಆಗದೇ
ಬಿಸಿಲಿನ ಬೇಗೆಗೆ
ಆ ಬಳ್ಳಿ ಬಾಡಿದೆ!!

ಮಳೆಯಂತೆ ನಾನಿಂದು
ಕಣ್ಣೀರ ಸುರಿಸಿದರೂ
ಚಿಗುರೊಡೆದು ಬಾರದು
ಆ ಪ್ರೀತಿ ಬಳ್ಳಿಯು!!

ಕನಸುಗಳ ನಾ ಹೆಣೆದು
ನನ್ನ ನೆರಳ ಕರೆತಂದು
ತಂಪೆರೆದು ಬಿಸಿಲ ತಡೆವೆ
ಹಿಂತಿರುಗಬಾರದೇ!!

ನಿನಗಾಗಿ ಸೊಂಪು ಗಾಳಿ
ನನ್ನುಸಿರಿನಿಂದ ಕೊಡುವೆ
ನನಗೂನೂ ನಿನ್ನ ಉಸಿರ ಗಾಳಿ
ನೀಡೆಂದು ಕಾಯುವೆ!!

- ಪಿ.ಜಿ.ಜ್ಯೋತಿ

07 Sep 2016, 06:59 pm

ನೀನಿರದ...

ನೀನಿರದ ನೋಟಗಳು,

ನೊಂದಿಹವು ಕಣ್ಣುಗಳು,

ಬೇಸರವೆ ನಿದಿರೆ ಕನಸುಗಳು.

ಬದುಕು ಕನಸಾಗಿಸದೆ,

ಕನಸು ಬರಿದಾಗಿಸದೆ,

ಬಾರೆಯ ಎನ್ನ ಕಣ್ಣ ಮುಂದೆ

- mariswami bp

07 Sep 2016, 06:15 pm

ಹೋಗುಮೆ

ಹೊಗುಮೆ ಎಂಗಾರ ಹೊಗುಮೆ...
ನೊಡ್ಬೀಡು ವಯ್ಸ್ ನಮ್ಮದು...
ಕಾಡ್ಬುಡೊ ನ್ವಾಟ ನಿಮೊದ್....
ಪರಪಂಚ ಎಲಾ ನಿಂದಿ ಕಣಮ...

- Gopalsrushtiarts

06 Sep 2016, 06:45 pm

ಮೊದಲ ಪೂಜೆ

ಮೊದಲ ಪೂಜೆಯು ನಿನಗೆ ಗಣನಾಯಕ
ನಮ್ಮನ್ನು ಕಾಪಾಡುವ ನಿಜ ಪಾಲಕ
ವಿದ್ಯೆ ಬುದ್ದಿಯನು ಕೊಡುವ ಸಿದ್ಧಿ ವಿನಾಯಕ
ಅಂಧರ ಕಣ್ಣಲಿ ಬೆಳಕು ಮೂಡಿಸೋ
ದೃಷ್ಠಿ ವಿನಾಯಕ

ಗೌರಿಶಂಕರರ ಪ್ರೇಮದ ಪುತ್ರ
ಜಪಿಸಿದರು ಭಕುತರು ನಿನ್ನ ಸಾವಿರ ಮಂತ್ರ
ಗಣನಾಯಕ ಗಣನಾಯಕ
ಮಾತಪಿತರೇ ದೇವರೆಂದು
ಸುತ್ತಿದೆ ಅವರನು ನೀ ಅಂದು
ಗಣನಾಯಕ ಗಣನಾಯಕ

ವೇಗದಲಿ ನೀ ಬರೆದೆ ಮಹಾಭಾರತ
ರಾಗಗಳ ಗುನುಗಿದ ಮಹಾಮಾಂತ್ರಿಕ
ಗಣನಾಯಕ ಗಣನಾಯಕ
ದೇವಗಣಗಳ ನಾಯಕನಾಗಿ
ಸಲಹಿದೆ ಸರ್ವರ ಪಾಲಕನಾಗಿ
ಗಣನಾಯಕ ಗಣನಾಯಕ

- ಆನಂದ್

05 Sep 2016, 09:40 am

ನನ್ನವಳು

ಚಂದ್ರನ ‌‌‌ಸೋದರಿ ನನ್ನವಳು
ಹುಣ್ಣಿಮೆ ಬೆಳಕಿನ ಕಣ್ಣವಳು
ಹೇಗೆ ಹೋಗಳಲಿ ಅವಳ ಮುಂಗುರುಳು
ಸರಿಸುತಲಿ ಮನವ ಕದ್ದಿಹಳು

- CHETHAN S KUMAR

05 Sep 2016, 07:28 am

ನಿಧಿಯತ್ತ

ಹುದುಗಿಟ್ಟ ನಿಧಿಯು ನೀನು
ಅಗೆಯುತ್ತಿರುವ ಹಾರೆ ನಾನು

ಸಿಕ್ಕರೆ ನನಗೆ ಪ್ರೇಮಗಂಟು
ಸಿಗದಿರೆ ನನ್ನ ಪ್ರೇಮಸಮಾಧಿ

- ಶೋಧನ

04 Sep 2016, 11:05 pm

ಪ್ರೀತಿಯ ಮುಲಾಮು ಪಾಲಿಸಿ

ಓ ಪ್ರೀತಿಯೇ
ನಿನಗೆ ಅನಂತ ಸಲಾಮು

ಚುಚ್ಚದಿರು
ದೇವರಾಣೆ ಕಂಡಿಲ್ಲ ಮುಲಾಮು

- ಶೋಧನ

04 Sep 2016, 10:17 pm

ಮನೆ-ಮನ

ಏಕಾಂಗಿ ನಾನಾದೆ
ನಿ ತೊರೆದ ಆ ಸಂಜೆ
ಎಂದಿನಂತೆ ನಾ ಸರಿದಿದ್ದೆ ನನ್ನ ಮನೆಯ ಬಿಟ್ಟು ತುಸು ಹಿಂದೆ
ಭರವಸೆಯ ಅಲೆಗಳು ತೀರಕ್ಕೆ ಬಡಿದು ಬಡಿದು
ಒದ್ದೆಮರಳ ಮೇಲೆ ನಡೆದೆ ದಿಕ್ಕುತೋಚದೆ
ಹೆಜ್ಜೆ ಹೆಜ್ಜೆಯೂ ಭಾರ ನಿನ್ನ ಹುಸಿಕರೆಯೋಲೆಗಳು ಜಾಸ್ತಿಯಾದಂತೆ
ಹಿಂದಿರುಗಿ ನೋಡಿದೆ...ನೀನಿಲ್ಲ
ಅಲೆಗಳು ಬಡಿದರೂ ಮಾಸದೆ ಹೋದ ಹೆಜ್ಜೆಗಳ ಅಚ್ಚೆಯಷ್ಟೆ ಅಲ್ಲಿ
ಬೇಕುಬೇಡವೆನ್ನುತ ತ್ಯಜಿಸಿದೆ ನಿನ್ನ ನನ್ನ ಮನ
ತ್ಸುನಾಮಿ ನಂತರದ ನೀರಸ ಮೌನ
ನಿನ್ನ ಜೊತೆ ಕಳೆದ ಸಿಹಿಕ್ಷಣಗಳು ನೀನಿತ್ತ ಕಿತ್ತುಬಿಸಾಕುವ ಹುಸಿಗನಸುಗಳು
ಮೆಲುಕುಹಾಕುತ್ತ ಮುಂದೆ ನಡೆದೆ...ಐದೇ ನಿಮಿಷ
ಅಚ್ಚರಿ ಎಂಬಂತೆ ನಾ ನಿಂತಿದ್ದೆ ನಿನ್ನ ಮನೆಯ ಮುಂದೆ
ಈ ಪ್ರೀತಿ ಎಂಥಾ ಹುಚ್ಚು ರೀ...

- ಶೋಧನ

04 Sep 2016, 09:20 pm