Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಡಲಾದ ದೇವತೆ

ಕಡಲಿನ ತೀರದ ಬಳಿ
ತಿಳಿಯದ ಸಮಯ
ಅಲೆಗಳು ಅಪ್ಪಳಿಸಿ ಬಂದಾಗ
ತಿಳಿಯಲಿಲ್ಲ ಅದುವೇ ನೀನೆಂದು
ಅಂದು ತಿಳಿದಿದ್ದರೆ. ಕಡಲಿನ ತೀರದ ಬಳಿಯ ಮರಳಾಗುತ್ತಿದ್ದೆ. ನನ್ನನ್ನು ಸೋಕಿಹೋಗು ಎಂದು. ಕ್ಷಮಿಸು ನನ್ನ
ಎಂದೂ ಅರಿಯದ ನದಿ ಅಂದು ಅಲೆಗಳು ಅಪ್ಪಳಿಸಿದರು ಸಹ ತಿಳಿಯಲಿಲ್ಲ ಈ ಹುಚ್ಚು ಮನಕ್ಕೆ...

- ಶಿವಾ ಬಳಿಚಕ್ರ

10 Sep 2016, 10:11 pm

ಪ್ರೀತಿಯ ಗುಲಾಮ

ಅಳಿಸಿ ಹೋಗುವ ಪ್ರೀತಿಗೆ
ಗುಲಾಮನಾಗುವ ಬದಲು
ಅರಸಿ ಬರುವ ಪ್ರೀತಿಗೆ
ಗುಲಾಬಿಯಾಗು..

- ಶಿವಾ ಬಳಿಚಕ್ರ

10 Sep 2016, 09:50 pm

ಪ್ರೀತಿಯ ತೊಟ್ಟಿಲು

ಅಂದು ಆ ಬೆಳದಿಂಗಳ ಬೆಳಕಿನಲ್ಲಿ
ನೀನಿಟ್ಟ ದೀಪಗಳು ನಿನ್ನ ಅಂದಕ್ಕೆ ನಾಚಿ
ಸದಾ ಬೆಳಗುತ್ತಿವೆ...
ಆ ಬಾನಿನ ಚಂದಮಾಮ
ನಿನ್ನ ಅಂದಕ್ಕೆ ನಾಚಿ ಮರುನೋಡ
ಬಯಸಿ ಕೆಳಗಿಳಿದು ಬರುತ್ತೇನೆಂದು
ಆ ನಕ್ಷತ್ರಗಳಿಗೆ ಸೂಚನೆ ನೀಡಿದ್ದಾನೆ
ನಿನ್ನ ಪ್ರೀತಿಯ ತೊಟ್ಟಿಲಲ್ಲಿ ಮಲಗಿರುವ
ಕಂದಮ್ಮ ನಾನು...
ಯೋಚಿಸದೆ ಸಾಯಿಸಬೇಡ ಕರುಣೆ ತೋರು
ಈ ಬಡ ಪ್ರೇಮಿಯಮೇಲೆ
ಈ ಜೀವಾ ನಿನ್ನ ಸ್ವಂತದ್ದಾಗಿದೆ...

- ಶಿವಾ ಬಳಿಚಕ್ರ

10 Sep 2016, 06:12 pm

ಪ್ರೀತಿ

" ಕಣೆಂಬ " ಆಗಸದಲ್ಲಿ

" ಕನಸೆಂಬ " ಮೋಡ ಕವಿದು

" ಮನಸೆಂಬ " ಭೂಮಿ ಮೇಲೆ

ಮಳೆಯಾಗಿ " ಸುರಿದಾಗ "

" ಹೃದಯದಲ್ಲಿ " ಮೊಳಕೆ

ಒಡೆಯುವುದು " ಪ್ರೀತಿ "

- ಯಲ್ಲು ಅರವಳ್ಳಿ !

10 Sep 2016, 06:08 am

ಕೋರಿಕೆ

ಅನು ದಿನವು ಅರಸುತಿಹೆ
ಆದರದಿ ನಿನ್ನ.
ದೀನನೆನ್ನದೇ ಅರಸನಂತೆ
ಪ್ರೀತಿಸೇ ನನ್ನ.

- ಸಾ.ರಾ.ಜ್ಞಾ

09 Sep 2016, 09:00 pm

ಜೀವನದ ನೀತಿ

ಎಲೆ ಮರೆಯ ಕಾಯಂತೆ
ಮೆರೆಯದೇ ಮರೆಯಾಗೊ ರೀತಿ
ಬಳಕು - ಬಳ್ಳಿಯ ಫಲದಂತೆ
ಬಾಗುತಿರಲಿ ಜೀವನದ ನೀತಿ.

- ಸಾ.ರಾ.ಜ್ಞಾ

09 Sep 2016, 08:52 pm

ಓನ್ಲಿ ನಿಕ್ಕರ್-ಶರ್ಟ

ಈಗಿನ ಮಕ್ಕಳು ಹೈಸ್ಕೂಲ್ಗೆ ಸೂಟ್,
ಇವರ ಪಿತಾಮಹರು ಪ್ಯಾಂಟು-ಶರ್ಟ,
ನಮ್ಮ ಕಾಲ ಓನ್ಲಿ ನಿಕ್ಕರ್-ಶರ್ಟ,
ಅಂದರೆ ನಮ್ ತಾತ-ಅಜ್ಜ ..?
ಬರೇ, ಬಿಳೇ ಉದ್ದ ಶರ್ಟ...!!

- ವೀರೇಶ್ ಶಿವರುದ್ರಪ್ಪ

09 Sep 2016, 03:43 pm

ಕನಸು

ಕನಸಲಿ ನೂರು ಬಾರಿ ಕರೆದಂತೆ
ಮನಸಲಿ ಈಗ ನಿನ್ನದೇ ಜಪವು
ನೀ ಇಲ್ಲೇ ಎಲ್ಲೊ ಹೋದಂತೆ ಭಾಸವು
ನನ್ನೀ ಹುಚ್ಚು ಮನಸ್ಸಿಗೆ ಔಷಧಿ ನೀನು
ಎಲ್ಲೆಲ್ಲೂ ನಿನ್ನದೇ ಮಾಯೆ
ನೀ ಹಾಕಿದ ಹೆಜ್ಜೆಯ ಹುಡುಕುತಿದೆ
ನನ್ನೀ ಮನಸು
ಇದಕೆಲ್ಲ ಪರಿಹಾರ ನೀನು ಒಮ್ಮೆ
ಕಣ್ಣೆದುರು ಬಂದರೆ ಸಾಕು
ಸೆರೆಯಾಗುವೆ ನಿನ್ನ ಹೃದಯದಲಿ ..
ಕನಸಲಿ ನೂರು ಬಾರಿ ಕರೆದಂತೆ ||

- suhani.b

09 Sep 2016, 08:09 am

ಮಾಗದ ಗಾಯ

ಮನಸಿಗೆ ಮುದನೀಡುವ ಮಡದಿಯಿಂದಲೇ, ಮಾಗದ ನೋವಿನ ಉಡುಗೊರೆ.......

ನೊಂದ ಮನಸ ಅರ್ಥೈಸಿಕೊಳ್ಳದೆ, ಒಲವೇ ಎಳೆದಿದೆ ಗಾಯದ ಮೇಲೆ ಮತ್ತೆ ಮತ್ತೆ ಸುಡು ಬರೆ.....

ನನ್ನರಿಯದ ನನ್ನವಳು ನನ್ನೊಡನಿದ್ದರೂ, ಜಗವೆಲ್ಲಾ ಶೂನ್ಯವಾಗಿದೆ.......

ಜಗದೂಂದಿಗೆ ನನ್ನವಳಿಗೂ ಬೇಡವಾದ ಈ ಜೀವಕೆ, ಜೀವಿಸುವ ಆಸೆಯೂ ಶೂನ್ಯವೇ ಆಗಿದೆ.....

- shashidhar

08 Sep 2016, 11:25 pm

ನೀರ ಮೇಲಿನ‌ ಗುಳ್ಳೆ

ನೀರ ಮೇಲಿನ ಗುಳ್ಳೆಯೊಂದು
ಚಲಿಸೊ ವೇಗವು ಸುಂದರ!!
ಆಡುತಾಡುತ ತನ್ನ ಲೀಲೆಯ
ತೋರಿ ಚಲಿಸುವಾ ಹಂದರ!!

ನನ್ನ ಅಂದವು ಎಂತ ಚೆಂದವು
ನಾಚಬೇಕಿದೆ ಚಂದಿರ!!
ರತ್ನದುಂಗುರ ಯಾವ ಲೆಕ್ಕಕೆ
ನಾನೇ ಮಿಂಚಿನ ಉಂಗುರ!!

ಊರ ರಾಜನು ನನ್ನ ಕಂಡರೆ
ಮಡದಿಯನ್ನೇ ತೊರೆಯುವ!!
ನನ್ನ ಮೋಹಿಸಿ ಸರಸವಾಡಲು
ಹಿಂದೆ ಮುಂದೆ ಸುತ್ತುವ!!

ಯಾರು ಸಾಟಿಯು ನನ್ನ ನಿಲುವಿಗೆ
ಬರಲಿ ನಾಳೆ ಇಲ್ಲಿಗೆ!!
ಇಲ್ಲಿ ಬಂದರೆ ನನ್ನ ಕಂಡರೆ
ಸೊರಗಿ ಹೋಗುವೆ ಎಚ್ಚರ!!

ತನ್ನ ಭಾವವ ಬೀಗಿ ತೇಗುತ
ನೀರಿನಲ್ಲಿ ಚಲಿಸುತ!!
ಸುಳಿಗೆ ಸಿಲುಕಿ ಒಡೆದು ಹೋಯ್ತು
ನೀರ ಮೇಲಿನ ಗುಳ್ಳೆಯು!!

- ಪಿ.ಜಿ.ಜ್ಯೋತಿ

08 Sep 2016, 08:09 am