Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೇಯಸಿಗಾಗಿ

ನಿನ್ನ ನೆನಪಾದರೆ... ಬಿಸಿಲಲ್ಲೂ ತಂಗಾಳಿಯ ತಂಪು...
ನೀ ಜೊತೆಯಿದ್ದರೆ... ಮರುಭೂಮಿಯಲ್ಲೂ ಮಲ್ಲಿಗೆಯ ಕಂಪು...

- ಬಾಲುಮಹೇಂದರ್

13 Sep 2016, 01:58 am

ಪ್ರೇಮ ಬರಹ

ಕಣ್ಣಿರಿನ ಹನಿಯೂ
ಕಡಲ ಸೇರಿ ಉಪ್ಪಾಯಿತು,
ನನ್ನ ಹೃದಯದೊಳಗಿನ
ನಂದಾದೀಪವು ಹಾರುವ ಒತ್ತಾಯಿತು ಅದರೆ ನಿನ್ನ ನೆನಪುಗಳಿಗೆ
ಮುಪ್ಪಾಗಲೇ ಇಲ್ಲ ಗೆಳತಿ....

- ಬಾಲುಮಹೇಂದರ್

13 Sep 2016, 01:41 am

ಭಾವನೆಗಳ ಪಿಸುಮಾತು

ಕನಸೊಂದು ಕಾಡುತ್ತಿದೆ ನಿನ್ನ
ನೆನಪುಗಳ ಸಾಲಿನಲ್ಲಿ
ಮನಸ್ಸಿಂದು ಚಡಪಡಿಸುತ್ತಿದೆ ಪ್ರೀತಿಯ
ಒಲವಿನಲಿ
ಹೂವೂಂದು ಅರಳಿದೆ ದುಂಬಿಯ ಬಳಿ
ಸೆಳೆಯುತಲಿ
ನಿನ್ನ ಹೂ ನಗೆಯೊಂದು ಹೇಳುತ್ತಿದೆ
ನೀನಂದ್ರೆ ಇಷ್ಟ ಅಂತ ಮೌನದಲ್ಲಿ
ನೆನಪಿರಲಿ ಇದು ಮನಸ್ಸಿನ ಭಾವನೆಗಳ
ಪಿಸುಮಾತು

- ಬಾಲುಮಹೇಂದರ್

13 Sep 2016, 01:24 am

ಸಾಗರದ ಮೀನು

ಸಾಗರದಲ್ಲಿ ಮೀನಾದೆ
ಆಕಾಶದಲ್ಲಿ ಚುಕ್ಕಿಯಾದೆ
ನೀ ನನ್ನ ಕಣ್ಮುಂದೆ ಬಂದು
ನಿಂತು ನನ್ನ ಹೃದಯದ
ಒಳಗಿಳಿದಾಗ
ನಾನು ಪ್ರೇಮಿಯಾದೆ

- ಶಿವಾ ಬಳಿಚಕ್ರ

12 Sep 2016, 06:36 pm

ಸವಿ ನೆನಪುಗಳ ಸಾಲು

ನಿನ್ನ ಕಾಡುತ್ತಿರುವ ಕನಸಲ್ಲಿ.
ಹಚ್ಚುವೆ ಸವಿ ನೆನಪುಗಳ ಸಾಲು ದೀಪವ.
ಚಡಪಡಿಸುತ್ತಿರುವ ಪ್ರೀತಿಯ ಮನಸ್ಸನ್ನು.
ಒಲವಿನಲಿ ಸಂತೈಸುವೆ ಅಪ್ಪಿ.
ಹೂವೊಂದು ದುಂಬಿಯ ಸೆಳೆಯುವ ಹಾಗೇ....
ನೀ ಸೇಳೆದೆ ನನ್ನ ಮುದ್ದು ಕಣ್ಣಲ್ಲಿ.
ನೀ ಎಷ್ಟೇ ಮೌನವಾಗಿದ್ದರು .....
ನಿನ್ನ ಹೂನಗೆಯೇ ಹೇಳುವದು.
ನಿನ್ನ ಭಾವನೆಯ ಪಿಸುಮಾತನ್ನು.

- ಬಾಲುಮಹೇಂದರ್

12 Sep 2016, 02:12 pm

ಅವಳು ಯಾಕೆ ? ಹೀಗೆ !

ಒಮ್ಮೆ ಮುದ್ದಿಸುತ್ತಾಳೆ.!
ಒಮ್ಮೆ ತಬ್ಬಿಬ್ಬುಗೊಳಿಸುತ್ತಾಳೆ..!
ಒಮ್ಮೊಮ್ಮೆ ತಿದ್ದುತ್ತಾಳೆ..!
ಮಗದೊಮ್ಮೆ
ಮರೆಗುಳಿಯಾಗುತ್ತಾಳೆ..!

ಅವಳು ಯಾಕೆ? ಹೀಗೆ!

ಸಲಿಗೆ ಸಿಕ್ಕೀತೆಂದು
ಹತ್ತಿರ ಹೋದರೆ..
.......ದಬ್ಬುತ್ತಾಳೆ
.......ದೂಡುತ್ತಾಳೆ

ಬರಸೆಳೆಯಲು ಆಡ್ತಾಳೆ ಕುಸ್ತಿ.!
ಮೆಲ್ಲಗೆ ಕಿವಿ ಕಚ್ಚಿ ಕೇಳುತ್ತಾಳೆ..
ತವರಿಗೆ ಯಾವಾಗ ಕಳುಸ್ತಿ..?

‌‌‌‌‌‌

- ವೀರೇಶ್ ಶಿವರುದ್ರಪ್ಪ

12 Sep 2016, 11:32 am

ಮುಳ್ಳಿಲ್ಲದ ಗುಲಾಬಿ...

ಬುದ್ಧಿಗೆ ನೂರು ದಾರಿ
ಹೃದಯಕ್ಕೆ ಒಂದೇ ದಾರಿ
ಅದವೇ ಪ್ರೀತಿ
ಮುಳ್ಳಿಲ್ಲದೆ ಗುಲಾಬಿ
ಬೆಳೆದವರು ಇಲ್ಲ
ನೋವಿಲ್ಲದೆ
ಸಾಧಿಸಿದವನು ಇಲ್ಲ...
ಸಾಧನೆಗಳನ್ನು ಓದುವುಕ್ಕಿಂತ
ಸಾಧಿಸುವವನು ನೀನಾಗು
ಆಗ ಕೀತಿ೯ ಎನ್ನುವುದು
ನಿನ್ನನ್ನು ಹುಡುಕಿಕೊಂಡು
ಬರುತ್ತದೆ....

- ಶಿವಾ ಬಳಿಚಕ್ರ

12 Sep 2016, 10:50 am

ದೀಪ

ಮನದ ಮ೦ದಿರದಲ್ಲಿ ಬೆಳಗಿದ ಪ್ರೀತಿಯ ದೀಪ ನೀನು..
ಹೃದಯ ಸಮುದ್ರದಲ್ಲಿ ಸಿಕ್ಕ ಪ್ರೀತಿಯ ಮುತ್ತು ನೀನು...
ಕಣ್ಣ ಕೊಳದಲ್ಲಿ ಅರಳಿದ ಪ್ರೀತಿಯ ಪುಷ್ಪ ನೀನು...
ನೆನಪಿರಲಿ....
ದೀಪ ಆರದಿರಲಿ,ಮುತ್ತು ಒಡೆಯದಿರಲಿ,
ಪುಷ್ಪ ಬಾಡದಿರಲಿ.....!!!

- Arun S. S.

12 Sep 2016, 10:38 am

ಚಿನ್ನ

ಹೇ ಚಿನ್ನ
ನಿನ್ನ ಪ್ರೀತಿಯ ಮೋಡಿಗೆ
ನಾ
ಬಿದ್ದೆ ಬಲೆಗೆ
ಸಿಲುಕಿದ ಮೀನಿನ ಹಾಗೇ
ಸೋತು ಹೋಯ್ತು
ಚಲುವೇ ನನ್ನ ಮನಸ್ಸು
ನಿನ್ನ ಅಂದ ಕಂಡಾಗ

- Arun S. S.

12 Sep 2016, 10:36 am

ವಣಿ೯ಸಲೇ ನಿನ್ನಾ!!!

ನನ್ನವಳ ಅಂದ ಆ
ಮಯೂರಕ್ಕಿಂತ ಚಂದ
ಕವಿಗಳ ಕಲ್ಪನೆಗೆ
ಎಟುಕದ ಕವಿತೆ ನೀ
ಕವನಗಳ ರಚನೆಗೆ
ಸಿಗದ ಪದ ನೀ...
ಹೇಗೆ ವಣಿ೯ಸಲಿ ನಿನ್ನಾ?...

- ಶಿವಾ ಬಳಿಚಕ್ರ

12 Sep 2016, 08:43 am