ಬೇಸರದ ಸಂಜೆ ಇದು
ನೀನಿರದೆ ನೊಂದು ಕಂಬನಿ ಮೂಡಿಹುದು..
ಹೇ ಏಕಾಂತವೇ ದೂರ ಸರಿದು ಬಿಡು..
ನನ್ನವನ ಒಲವಿನಲಿ ಮೀಯಲು ಅನುಮತಿ ನೀಡು
ವಿರಹವೇ ದೂರ ಸರಿಯೇ
ಒಲವಿನೌತಣವ ಉಣಬಡಿಸೇ..
ಪ್ರೀತಿಯ ಅಮಲಿದು..
ಸುಂದರ ಸೋಲಿದು..
ಮೌನದ ಮಾತಿದು...
ಆನಂದದ ನೋವಿದು..
ಎಲ್ಲವೂ ನಿನ್ನಿಂದಲೇ..
ಎಲ್ಲವೂ ನಿನಗಾಗಿಯೇ...
ಕಾಲು ದಾರಿ ಅಲ್ಲಿ ಸಿಕ್ಕ
ಯುವತಿಯ ನುಡಿಯದು
ಅಂಗೈ ನೋಡಿ ನುಡಿದ ನುಡಿಯದು
ಕಾಲುಂಗುರ ತೊಡಿಸಿ
ಕಣ್ಣಿಗೆ ಕಾಡಿಗೆಯ ತೊಡಿಸಿ
ಹೂವನ್ನು ಮುಡಿಸಿ
ಕೈ ಹಿಡಿದು ನಡೆಸುವ ಅರಸ ನನ್ನವನಂತೆ....
__✍️Rajitha
ಕೊಟ್ಟು ಕಾಡಿಸುವ ಅವಸರ....
ಸಿಕ್ಕವರೆಲ್ಲ ಕೊನೆವರೆಗೂ ಉಳುವರೆ
ಸವಿಗನಸ ಕೂಡಿಟ್ಟು ತೆರಳುವರೆ
ಯಾಕಿದೂ ಕೊಟ್ಟು ಕಾಡಿಸುವ ಅವಸರ
ನಿನಗೆ ಪರಮಾತ್ಮ.....?
_✍️Rajitha
ಎಲೆಯೊಳ್ ಕಾಯ್ ಅವಿತಂತೆ ಮಗುವಿಗೆ ತಾಯ್ ಮಡಿಲ ಸ್ನೇಹ,
ಸಿಹಿಗೆ ನೊಣ ಮುತ್ತುವಂತೆ ಬೆಳೆಯುವುದು ಕಿನ್ನರ ಪಡೆಯ ಸ್ನೇಹ.
ಕಾಮನ ಬಿಲ್ಲಿನೊಳ್ ಬಣ್ಣ ಬೆರೆತಂತೆ ಮನಗಳ ಬೆಸೆಯುವ ಸ್ನೇಹ,
ಮಳೆಯಲ್ಲಿ ಮಾತ್ರ ಹೊಳೆಯದೆ ಸದಾ ಪೂರ್ಣ ಚಂದ್ರನಂತೆ ನಗುವುದು ಹೃದಯದಿ ಸ್ನೇಹ.
ಕಾಲ್ಪನಿಕ ಕನಸಿನ ಸ್ವಾರ್ಥಕ್ಕೆ ಮೂಡುವುದಲ್ಲ ಸ್ನೇಹ,
ಪಾಚಿ ಇರದ ತಿಳೀನೀರಿನಂತೆ ನಮ್ಮೊಳಗೆ ಸ್ವಚ್ಛವಾಗಿರುವುದೇ ಸ್ನೇಹ.
ಬರಡಾದ ಮನಕೆ ಹಸಿರಾಗೋ ಸ್ನೇಹ,
ಹಂಸಕೆ ಮರು ಜೀವ ಕೊಟ್ಟ ಬುದ್ಧನ ಪ್ರೀತಿಯಂತಿರಬೇಕು ನಮ್ಮ ಮಾನವೀಯ ಸ್ನೇಹ.
ಚಲಿಸುವ ಮೋಡಗಳಂತೆ ಚಂಚಲವಿರದ ನಮ್ಮ ಸ್ನೇಹ,
ಜಗಳಕ್ಕೆ ಮುನಿಯದೆ ತನ್ನವರ ಶ್ರೇಷ್ಠತೆಯ ಮೆರೆಸುವುದು ಸ್ನೇಹ.
ಐಶ್ವರ್ಯದ ಆಕರ್ಷಣೆಗೆ ಶರಣಾಗುವುದಿಲ್ಲ ಸ್ನೇಹ,
ಮುಳ್ಳು ಕಲ್ಲುಗಳಿದ್ದರೂ ಮುದುಡದೆ ಮನಕೆ ಮುದ ನೀಡುವುದು ಸ್ನೇಹ.
ಎರಡು ಹೃದಯದ ಭಾವಕೆ ಮಿಡಿಯುವುದು ಸ್ನೇಹ,
ಕೊನೆಯ ಉಸಿರು ಇರುವ ತನಕ ನಂಬಿದವರಿಗೆ ವಿಶ್ವಾಸದ ಹಾಲೆರೆವುದೇ ನಿಜವಾದ ಸ್ನೇಹ.
ನೋವಿಗೆ ಸ್ಪಂದಿಸಿದ
ಆತ್ಮೀಯ ಹೃದಯಗಳೇ.....
ಸೋತು ಕುಳಿತಾಗಲೆಲ್ಲ
ಧೈರ್ಯ ಹೇಳಿದ ಮನಸ್ಸುಗಳೇ....
ಕಷ್ಟ ನಷ್ಟಗಳು ಎದುರಾದಾಗ
ಸಹಾಯ ಮಾಡಿದ ಕೈಗಳೇ....
ಕಣ್ಣೀರು ಬಾರದಂತೆ ಕಾದು
ಸಾಂತ್ವನ ನೀಡಿದ ಜೀವಗಳೇ....
ನಿಮಗಿದೋ ನನ್ನ ಹೃದಯಪೂರ್ವಕ ಸ್ನೇಹಿತ ದಿನಾಚರಣೆಯ ಶುಭಾಶಯಗಳು.....