Kannada Poems
ಒಂದು ಎರಡು
ನಿರು ಬೇಕು...ಟಿವಿ
ಮೂರು ನಾಲ್ಕು
ಅರ್ಜಿ ಹಾಕು..
ಐದು ಆರು
ಕೋರ್ಟ್ ಹೊರಡು..
ಏಳು ಎಂಟು
ವಕೀಲರು ಉಂಟು..
ಒಂಬತ್ತು ಹತ್ತು
ಅಣೆಕಟ್ಟೆಯ ಬಾಗಿಲು ಎತ್ತು..
ಒಂದರಿಂದ ಹತ್ತು ಈಗಿತ್ತು
ತಮಿಳುನಾಡಿಗೆ ನೀರು ಹರಿದಿತ್ತು..!!!!
- ಸ್ನೇಹ ನಿರಂತರ....
04 Oct 2016, 09:29 pm
ಹೋಯಿತು ಮಳೆಗಾಲ
ಬಂದಿತ್ತು ಬರಗಾಲ
ಭುವಿಯು ಬರುಡಗಿ
ನೀರೋಡಲು ಬರಿದಾಗಿ
ರೋಧಿಸುತಿದೆ ಜೀವಸ೦ಕುಲ ಹನಿನೀರಿಗಾಗಿ...
- ತಾ೦ಡವ.
04 Oct 2016, 12:55 pm
ನನ್ ಹುಡ್ಗಿ ಕೊಟ್ಟ ಮುತ್ತಿಗೆ,
ನನ್ ಹುಡ್ಗಿ ಕೊಟ್ಟ ಮುತ್ತಿಗೆ
ನನ್ ಮನ್ಸು ಹಾರಾಡ್ತಿತ್ತು.
ಆದರೆ
ನನ್ ಹುಡ್ಗಿ ಅಪ್ಪ ಕೊಟ್ಟ ಹೇಟಿಗೆ,
ನನ್ ಹುಡ್ಗಿ ಅಪ್ಪ ಕೊಟ್ಟ ಹೇಟಿಗೆ
ಹಾರಾಡ್ತಿದ್ದ ಮನ್ಸು ಕೆಳಗ ಬಿತ್ತು.
ಲಕ್ಷ್ಮೀ.ಆರ್.ಆರ್.
- laxmi
03 Oct 2016, 09:16 pm
ನಲ್ಲೆ ಒ ನನ್ನ ನಲ್ಲೆ
ನೀ ನಿಲ್ಲದೆ ನಾನಿಲ್ಲವಲ್ಲೆ
ನಿ ನನ್ನ ಒಪ್ಪದಿದ್ದರು
ನಾ ನಿನ್ನ ಬಿಡಲೊಲ್ಲೆ
ಲಕ್ಷ್ಮೀ.ಆರ್.ಆರ್.
- laxmi
03 Oct 2016, 08:31 pm
ಚಂದ್ರನಂಗಳದ
ಬಂಗಾರದ ಜಿಂಕೆಯಂತೆ
ಪ್ರೀತಿಯ ಗಮ್ಮತ್ತು.
- ಸಾ.ರಾ.ಜ್ಞಾ
02 Oct 2016, 08:23 pm
ಪ್ರೀತಿ ಕೇವಲ
ಕ್ಷರವಾಗೋ
ವಸ್ತುವಾಗದೇ
ಅಕ್ಷರದಂತೆ
ಶಾಸ್ವತವಾಗಿರಲಿ
- ಸಾ.ರಾ.ಜ್ಞಾ
02 Oct 2016, 07:47 pm
ಜೀವನದಿ
ಮಹನೀಯರಾಗಲಿ
ಮಾದರಿ
ದೂರವಾಗಲಿ
ಅಹಂನ
ಮಹಾಮಾರಿ
- ಸಾ.ರಾ.ಜ್ಞಾ
02 Oct 2016, 07:23 pm
1** ರೈತ **
ರೈತ ಹೊಲದಲ್ಲಿ
ಉಡಿದುಂಬಿ ಬೇಡುವನು
ನಾ ಮಾಡಿದ್ದ ಶ್ರಮಕ್ಕೆ
ಫಲನೀಡು ಭೂತಾಯಿ ಎಂದು......!!
ಮುಗಿಲ ಕಡೆಗೆ ಮುಗಿದು
ಬೇಡುವೆನು.....!!
ಫಸಲನ್ನು ಉಳಿಸಲು
ಬಿರ-ಬಿರನೆ ಬಾರೋಎಂದು
ಬುತ್ತಿಗಂಟನ್ನು
ಬಿಚ್ಚುತ್ತಾ ಹೇಳುವೆನು
ಸಕಲ ಜೀವರಾಶಿಗೂ
ತುತ್ತನೀಡೊ....ಎಂದು.....!,
- vageesh
02 Oct 2016, 06:36 pm
ಬಿಸಿಲು ಇದು ಬರಿ ಬಿಸಿಲಲ್ಲ
ಬರದ ಛಾಯೆಯ ಬಿಸಿಲು
ಬಾಯಿ ತೆರೆದು ಬರುತಿದೆ
ಬಕಸುರನ೦ತೆ ಇಡಿ ಭೂಮಿಯ ನು೦ಗಲು...
- ತಾ೦ಡವ.
02 Oct 2016, 02:20 pm
ನಿಮ್ಮ ಲೇಖನಿಗೆ
ಅಭಿಮಾನಿ....ನಾ...!!
ನಿಮ್ಮ ಬರವಣಿಗೆಯಲ್ಲಿ
ಅರಳುವ ಕುಸುಮ ನಾ..!!
ನಿಮ್ಮ ಭಾವನೆಯಲ್ಲಿ
ಭಿತ್ತಾರಗೊಳ್ಳುವ ಪಲ್ಲವಿ ನಾ.
ಪಲ್ಲವಿಗೆ ಅನುಪಲ್ಲವಿಯಾದ
ಚರಣದ ಸಾಲು ನಾ......!!
ಒಟ್ಟಾರೆ ನಿನ್ನ.....!!
ಕರದ ಕಂಜರದಲ್ಲಿ...!!
ಬಿರಿಯುವ ಕವಿತೆಯ
ಸೌಗಂಧದ ಪುಷ್ಪ....ನಾ...!!
- vageesh
02 Oct 2016, 11:40 am