Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಜಾತಿಗಳ ಜಾತಕದ ನೆಲೆ ಎಲ್ಲಿ?

ಜಾತಿಗಳ ಜಾತಕದ ಭೀತಿಗೆ ಪ್ರೀತಿಯ ಮರಣವೇಕೆ?
ಕೂಡಿಬಾಳುವ ಮನಸ್ಸುಗಳ ನಡುವೆ ಜಾತಿ ಮಂತ್ರದ ವಿಷ ಬೀಜವೇಕೆ?
ಪ್ರೀತಿಸುವ ಹೃದಯಗಳಿಗೆ ಜಾತಿಯ ಗೋಡೆಗಳೇಕೆ?
ಜಾತಿಯ ಸೂತಕದ ಈ ಜನರಿಗೆ ಪ್ರೀತಿಯ ಜಲಪಾನ ಸೂತಕವ ಕಳೆಯಲಾದೀತೆ?
ಜಾತಿಯ ಕಣ್ಣು ಪೊರೆಯು ಕಳಚಿದಾಗ ಪ್ರೀತಿಯ ಬೆಳಕು ಕಾಣುವುದೊ ಜಾತಿ ಕುಲಗಳ ಭೀತಿಯ ಜಂತುಗಳೆ....

- Irayya Mathad

01 Oct 2016, 01:25 am

ಗೆಳೆತನ

ಓ ನನ್ನ ಪ್ರೀತಿಯ ಗೆಳತಿ ನಂದಾ
ನಾ ನಿನ್ನ ಒಲುಮೆಯ ಗೆಳತಿ ಸುನಂದಾ

ನೀ ನನ್ನ ಬಿಟ್ಟು ಹೋದಾಗ ಅಂದು
ನಾನಾಗ ಹೋದೆ ನೊಂದು
ನಿನ್ನ ಮುಖದಲ್ಲಿಯ ಆ ನಸುನಗು ಚಂದ
ನನ್ನ ಗೆಳೆತನ ಇನ್ನೂ ಅಂದ

ಹಲವು ವರುಷಗಳ ನಂತರ ಆದೇವು ನಾವು ಬೆಟ್ಟಿ
ನಮ್ಮ ಗೆಳೆತನ ಉಳಿದಿತ್ತು ಇನ್ನೂ ಗಟ್ಟಿ
ಒಬ್ಬರ ಮುಖ ಒಬ್ಬರು ನೋಡಿದಾಗ
ಮನದಲ್ಲಿ ಮೂಡಿತು ಸಂತೋಷ
ಒಬ್ಬರಿಗೊಬ್ಬರು ತೋಡಿಕೊಂಡೆವು ಹರುಷ
ಒಳ್ಳೆಯ ಗೆಳೆತನದಲ್ಲಿ ಎಂದೂ ಕಾಣದು ಹಗೆತನ
ಸಂಬಂಧಗಳಲ್ಲಿ ಮಿಗಿಲಾದದ್ದೇ ಗೆಳೆತನ

ನೆನಪಾದಾಗ ಆ ಗೆಳೆತನದ ಕ್ಷಣಗಳು
ಮರೆವೆ ನಾ ನನ್ನ ದುಃಖದ ಕ್ಷಣ.

ಸುನಂದಾ ಓಬಳೇಶ ಮಾದರ

- Lavanya .Oblesh. Madar

30 Sep 2016, 09:20 pm

ಭರವಸೆ

ಮಾಣಿಯಂತೆ ಮಣಿದರೆ
ಮಾಣಿಕ್ಯವ, ಧರಣಿಯಲ್ಲಿ
ದಣಿದರೆ ಬದುಕಲಿ
ಧಣಿಯಾಗಬಹುದು

- ಸಾ.ರಾ.ಜ್ಞಾ

30 Sep 2016, 07:15 pm

ಪದಗಳು ಸಾಲವು

ಅಮ್ಮ ನೀ ನನ್ನ ಹೆತ್ತೆ
ಮಡಿಲಲ್ಲಿ ಹೊತ್ತೆ

ತಿನ್ನಲು ಇಲ್ಲದ ಆ ದಿನದಾಗ
ನಿನ ಹಸಿವು ಬಿಟ್ಟೆ
ನಮಗೆಲ್ಲ ಕೊಟ್ಟೆ

ಗಂಡು ಮಗ ಬೇಕು
ಹೆಣ್ಣಾದರೆ ಬೇಡ ಅಂದರೆ ಅಪ್ಪ
ನನ್ನ ಹೆಣ್ಣು ಮಕ್ಕಳೇ ಮುತ್ತು ರತ್ನಗಳು
ಅಂದೆ ನನ್ನಮ್ಮ

ಹೇಗೆ ತೀರಿಸಲಿ ಈ ನಿನ್ನ ಋಣವ
ನೀ ಕೊಡುವ ಈ ಪ್ರೀತಿ
ಮರೆಯೆನು ನಾ ಅಮ್ಮ
ಮುಂದಿನ ಆ ಜನ್ಮಕೂ
ನೀ ಆಗು ನನ್ನಮ್ಮ ...

‌ Lavanya .O. Madar

- Lavanya .Oblesh. Madar

30 Sep 2016, 07:09 pm

ಜೀವ

ನನ್ನ ಜೀವ
ನಿನ್ನನ್ನು ಇಷ್ಟ ಪಡುವ ಜೀವ
ನೀನಿಲ್ಲದೆ ಇರದು ಈ ಜೀವ

ಪ್ರೀತಿಸಿದೆ ನಾನಿನ್ನ
ಜೊತೆಗಿರು ಓ ಚಿನ್ನ
ಎಂದೆಂದು ಉಸಿರಾಗಿ
ಇರುವೆನು ನೆರಳಾಗಿ

ಬಿಡದಿರು ನೀ ಕೈಯ
ಆಗದಿರು ನೀ ಮಾಯ
ಕನಸಿನ ಈ ಪಯಣ
ನನಸಾಗಲಿ ಇನ್ನ

ಓ ನನ್ನ ಜೀವ
ನೀ ನನ್ನ ಜೀವ....

Lavanya .O. Madar

- Lavanya .Oblesh. Madar

30 Sep 2016, 05:06 pm

ಮೀಸಲು

ಮೆಚ್ಚಿ ಮದುವೆಯಾದೆ ನಾನು
‌‌‌‌‌‌‌ ಕುಡಿಯಬೇಡ ನನ ಗಂಡ ನೀನು
ಕುಡಿದು ಕೆಡಬೇಡ

‌‌‌‌‌ ಹೆತ್ತ ತಂದೆ-ತಾಯಿಯ ಮರೆತು ನಾನು
ನೀನೇ ಎಲ್ಲ ಅಂದೆ
ಅಕ್ಕ-ತಂಗಿಯರ ಮರೆತು ನಾನು
ನಿನ್ನಲ್ಲಿ ಒಂದಾದೆ

ನನ್ನ ಜೀವ ನಿನ್ನ ಜೀವ
ಬೆರೆತು ಹೋದ ಮೇಲೆ

ನನ್ನ ಪಾಲಿನ ಎಲ್ಲರನ್ನು
ಮರೆತು ಹೋದೆ ನಾನು
ನನ್ನ ಮಕ್ಕಳು, ನನ್ನ ಗಂಡ
ಎಂದು ಅಂದೆ ನಾನು

ಸಾರಾಯಿಯೇ ಎಲ್ಲ ನನಗೆ
ಎಂದು ಅಂದೆ ನೀನು

ಇದ್ದರೆ ಇರಲಿ ಈ ಜೀವ ಮಕ್ಕಳ ಸಲುವಾಗಿ
ಹೋದರೆ ಹೋಗಲಿ ಈ ಜೀವ ಗಂಡನ ಸಲುವಾಗಿ

ಹೆತ್ತ ತವರಿಗೆ ಮಾಡಿದ ಮೋಸ
ಮೀಸಲಾಯ್ತು ನನಗೆ.


ಸುನಂದಾ .ಓ. ಮಾದರ

- Sunand .O. Madar

30 Sep 2016, 02:29 pm

ನಿನಗಾಗಿ.....ಕಾದಿರುವೆ

ನಿನ್ನ ಅಂದದ ತುಟಿಯ ನಸುನಗುವೀಗೆ,
ಕಳೆದುಹೋಗಿದೆ ಈ ಕ್ಷಣ ನಿನ್ನ ಪ್ರೀತಿಗೆ,
ಗೆಳತಿ ನಿನ್ನ ಕೆಶಗಳ ಅಲೇಯಲ್ಲಿನ ತಂಗಾಳಿಗೆ,
ಸತ್ತು ಬದುಕಿದಂತಾಗಿದೆ ಇ ಮನವು .............
ನಿನ್ನ ಸವಿಮಾತುಗಳ ಸೂಳಿವೀಗೆ,
ನಿಜವಾಗಿಯು ನಾ ಸಲಿಕಿ ಮರೆಯೆದೆನೇ.. ......
ನಿನ್ನ ಆ ಸೆಳೆವ ಕಣ್ಣುಗಳ ಪ್ರೀತಿಗೆ,
ಈ ಮನವು ಕಾದಿದೆ ಎಂದೆಂದಿಗೂ...ನಿನಗಾಗಿ...

- ಪ ವಿ

30 Sep 2016, 02:22 pm

ವಾದ

ಓ ಮನುಜ ಮಾಡದಿರು ನೀ ವಾದ
ಇಲ್ಲದಿದ್ದರೆ ನಿನ್ನ ಮಾತಲ್ಲಿ ಸ್ವಾದ
ಸ್ವಾದವಿಲ್ಲದ ವಾದ ಬೇಡೆನ್ನವದು ವೇದ.
ಈ ಸೂತ್ರ ಅರಿತಾಗ ನಿನ್ನ ಕಾರ್ಯ ಸದಾ ಸಿದ್ಢ

- Rahul marali

27 Sep 2016, 06:41 pm

ಸಮಾಜ ಸೇವೆ

ಕೋಟಿ ಸುರಿದು ಓಟು ಪಡೆದು
ಲೂಟಿ ಮಾಡುವ ಕೆಲಸಕ್ಕೆ
ಲೂಟಿಕೋರರು ಕೊಟ್ಟ ಹೆಸರು
" ಸಮಾಜ ಸೇವೆ "

- Sachin

27 Sep 2016, 03:49 am

ಶಿಕ್ಷಕ

ಇವನು ಶಿಕ್ಷಕ
ಇವನಿಗಾರು ರಕ್ಷಕ!!

ಇವನಿಂದಾನೆ ಜಗತ್ತು
ಇವನಿಗಿರುವ ನೋವು ಯಾರಿಗೊತ್ತು!!

ಎಲ್ಲರೂ ಹೇಳುವರೂ ನಮಸ್ತೆ
ಯಾರೀಗೂ ಇಲ್ಲ ಇವನಷ್ಟು ಸಮಸ್ಯೆ!!

ಆದರೂ ನಗುವನು ಹೊರಗ
ಇದ್ದರೂ ಜಂಜಡ ಒಳಗ!!

- ನವೀನಕುಮಾರ ಧರಣ್ಣಿ

25 Sep 2016, 02:17 pm