Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀನು

ಮಿನುಗು ತಾರೆಗಳ ನಡುವೆ
ನಗುವ ಚಂದಿರ ನೀನು!!
ಚಲಿಸೊ ಮೋಡವು ಕರಗಿ
ಹರಿವ ಧಾರೆಯು ನೀನು!!

ನಗುವ ಒಲುಮೆಯೇ ನಿನ್ನ
ಮೊಗದ ಹರುಷವು ಏನು!!
ಹಿಡಿದು ಬಾಹುಗಳಲ್ಲಿ ನನ್ನ
ಬಿಗಿದು ಬಂಧಿಸುವೆ ನೀನು!!

ಬೆದರಿ ಹೋಗುವೆ ನಾನು
ಗದರಿ ನಿಂತರೆ ನೀನು!!
ಗದರದೇ ಈ ಹೃದಯಕ್ಕೆ
ಎಂದೂ ಪ್ರಿಯವಾಗು ನೀನು!!

- ಪಿ.ಜಿ.ಜ್ಯೋತಿ

10 Oct 2016, 06:10 pm

ಕಣ್ಣ ಹನಿ

ಮೂಡಿದೆ ಇಬ್ಬನಿ
ಕಣ್ಣಿನ ಅಂಚಲಿ
ಮೋಡದಿ ಸುರಿಯದ
ಮಳೆಹನಿ ಕಣ್ಣಲಿ!!

ಇಂದು ಮಾತಾಡಲು
ಜೊತೆ ಯಾರಿಲ್ಲದೆ
ಮನ ಮೂಕಾಗಿದೆ
ಒಂಟಿತನ ಕಾಡಿದೆ!!

ಕನಸು ತಾ ಕರಗುತ
ನೆನಪು ಮರುಕಳಿಸುತ
ಹರಿವ ಧಾರೆ ಇದು
ತುಂಬಿ ಈ ಕಂಗಳ!!

ತಂದೆ ನೀ ವಿರಹವ
ಬಂದು ಈ ಹೃದಯಕೆ
ನೊಂದ ಭಾಶೆ ಇದು
ಉಕ್ಕಿ ಈ ಕಣ್ಣಲಿ!!

ಮೂಡಿದೆ ಇಬ್ಬನಿ
ಕಣ್ಣಿನ ‌ಅಂಚಲಿ
ಮೋಡದಿ ಸುರಿಯದ
ಮಳೆಹನಿ ಕಣ್ಣಲಿ!!

- ಪಿ.ಜಿ.ಜ್ಯೋತಿ

10 Oct 2016, 06:02 pm

ಚುಟುಕು

ಬರೆದ ಹಾಳೆ
ಹಳೆಯದಾದರೇನು
ಗೆಳತಿ
ಹೊಳೆವ ಹುಣ್ಣಿಮೆಯಂತೆ
ಬೆಳಗುತಿರುವೆ
ನೀನಲ್ಲಿ
ನಾ ಬರೆದ
ಒಂದೊಂದು
ಅಕ್ಷರಗಳಲ್ಲಿ.....

- ಅರೆಯೂರು ಚಿ. ಸುರೇಶ್

10 Oct 2016, 04:31 pm

ಚುಟುಕು

ಬರೆದ ಹಾಳೆ
ಹಳೆಯದಾದರೇನು
ಗೆಳತಿ
ಹೊಳೆವ ಹುಣ್ಣಿಮೆಯಂತೆ
ಬೆಳಗುತಿರುವೆ
ನೀನಲ್ಲಿ
ನಾ ಬರೆದ
ಒಂದೊಂದು
ಅಕ್ಷರಗಳಲ್ಲಿ.....

- ಅರೆಯೂರು ಚಿ. ಸುರೇಶ್

10 Oct 2016, 04:28 pm

ಚುಟುಕು

ಅಚಾನಕ್ಕಾಗಿ ನಾನೇನಾದರು ನಿನ್ನ
ಮುಟ್ಟಿದರೆ ತಪ್ಪು ಭಾವಿಸಬೇಡ ಹುಡುಗಿ
ಏಕೆಂದರೆ ಬಾಲ್ಯದಿಂದಲೂ ನನಗೆ
'ಸಕ್ಕರೆ ಮಿಠಾಯಿ'ಯನ್ನು ಕಂಡಾಕ್ಷಣ
ಕೈ ಹಾಕುವ ಗೀಳಿದೆ........!!!

- ಅರೆಯೂರು ಚಿ. ಸುರೇಶ್

10 Oct 2016, 03:48 pm

ಚುಟುಕು

ನಿನ್ನ ಮುದ್ದಿಸುವ ಕ್ಯಾಮೆ
ಸಿಕ್ಕ ಮೇಲೆಯೇ,
'ಕಾಯಕವೇ ಕೈಲಾಸ '
ಅನ್ನುವ ಮಾತು ಕೂಡ
ಮಜವಾಗಿ ಕಂಡಿದ್ದು .......!!!

- ಅರೆಯೂರು ಚಿ. ಸುರೇಶ್

10 Oct 2016, 03:47 pm

ಚುಟುಕು

ಅವಳ ಮುದ್ದು ಕಣ್ಣುಗಳ ಬಗ್ಗೆ
ಅರ್ಧಂಬರ್ಧ ಕವಿತೆ ಬರೆದು
ಸಮಾಧಾನವಾಗದೆ
ಹಾಳೆಯನ್ನು ಡಸ್ಟ್ ಬಿನ್ ಗೆ ಎಸೆದೆ.
ಈಗ ಡಸ್ಟ್ ಬಿನ್ನಿನ ತುಂಬೆಲ್ಲಾ
ಹಾಲು ಬೆಳದಿಂಗಳು.........!!!

- ಅರೆಯೂರು ಚಿ. ಸುರೇಶ್

10 Oct 2016, 03:15 pm

ಆಷಾಡದ ಸಮಯ

ಹೃದಯದ ಬಡಿತದಲ್ಲಿ ಯಾರದ್ದೋ ನೆನಪು..
ಉಸಿರಾಡುವ ಉಸಿರಿನಲ್ಲಿ ಯಾರದ್ದೋ ಮಾತು..
ಕಣ್ಣೀರಿನ ಹನಿಯಲ್ಲಿ ಯಾರದ್ದೋ ಸ್ಪರ್ಶ..
ಖಂಡಿತ ಅದು.. ಆಷಾಡದಲ್ಲಿನ ದೆವ್ವದ ಸ್ಪರ್ಷ!

- ಪವನ್

10 Oct 2016, 01:20 pm

ಸೌಂದಯ೯ ಲೋಕ

ಆ ನಿನ್ನ ಸೌಂದಯ೯
ಲೋಕದಲ್ಲಿ
ನನ್ನನ್ನು
ಮರೆಮಾಚಿ ನೀ
ಎಲ್ಲಿ ಮಾರೆಯಾದೆಯೇ?

- ಶಿವಾ ಬಳಿಚಕ್ರ

10 Oct 2016, 08:01 am

ಬೇಸರವಾಯಿತು ಈ ಪ್ರೀತಿ

ಕಣ್ಣಿಲ್ಲದ ಜಗತ್ತಿನಲ್ಲಿ
ಒಬ್ಬಂಟಿತನ ನಾನು
ಓ ಹಸಿರೇ ನನ್ನುಸಿರು
ನಿಲ್ಲಿಸಲು ಬಯಸುವೆಯಾ?
ಪ್ರೀತಿಗೆ ಸಾವಿಲ್ಲ
ಪ್ರೀತಿಸೋಳಿಗೆ ನಿಯ್ಯತ್ತಿಲ್ಲ....

- ಶಿವಾ ಬಳಿಚಕ್ರ

10 Oct 2016, 07:11 am