ಒಂಟಿಯಾಗಿರುವನೊಬ್ಬನ ಮನಸೊಂದು
ಮೂಲೆಯಲೆಲ್ಲೋ ಇರುವ ಕಸದ ಬುಟ್ಟಿಯಂತೆ…
ಆತ ತಾನೇ ಮೂಟೆಕಟ್ಟಿ ಎಸೆದ ಭಾವನೆಗಳ ರಾಶಿಯನು
ಆಗಾಗ ತಡಕಾಡುತ್ತಾನೆ …
ಸ್ವಚ್ಛ ಮನದಲ್ಲಿ ಹುಡುಕಲು
ಹಳೆಯದೇನೂ ಇಲ್ಲ,
ಹುಡುಕಿದರೆ ಕಸದಡಬ್ಬಿಗೆ
ಕೈಯಾಡಿಸಬೇಕು ತಾನೇ…?
ಈ ಮನೆ-ಮನಗಳರೆಡೂ
ಸ್ವಲ್ಪವಾದರೂ ಧೂಳಾಗುತ್ತಿರಬೇಕು,
ಬದುಕೆಂಬ ಬಕೇಟಿಗೆ ಸಾಂತ್ವನದ ನೀರುತುಂಬಿ
ಮನದ ನೆಲವನೊರೆಸುವ ಮಜವೇ ಬೇರೆ…
ಹರಕು ಬಟ್ಟೆಗೂ ಕರ್ಮ ಸಂತೃಪ್ತಿ ಸಿಗುವುದು…
ಗೆಳತಿ,
ಹಾಗಾಗಿ ನಾನು ಗಲೀಜು…
ಶಹರಕ್ಕೆ ಬಂದ ಮೊದಲಲ್ಲಿ
ಅಲ್ಲಿ ಇಲ್ಲಿ ಹೆಕ್ಕುತ್ತಿದ್ದ ಬೇಬರಸಿ
ಕಣ್ಣುಗಳಿಗೆ ಕುಕ್ಕಿದ್ದು
ಕಪ್ಪು ಕಾರಿನಿಂದ ಇಳಿದ
ಹೀಲ್ಡು ಚಪ್ಪಲಿಯ ನೀಳ ಕನ್ಯೆ…
ಅವಳ ತುಟಿ ಕೆಂಪು,
ಹೆಂಚಿನ ಮನೆಯ ರೆಡ್ಡಾಕ್ಸೈಡಿಗಿಂತ…
ಉಡಿಯೊಡ್ಡುವ ಉದ್ದ ಸೀರೆಗಿಂತ
ಮೊಳಕಾಲು ಮುಚ್ಚದ ಚಡ್ಡಿ ದುಬಾರಿ…
ಗಾಗಲ್ಲು ಹಾಕಿದ್ದಳು, ಗಲ್ಲ ಕಾಣದಂತೆ
ಸ್ಕಾರ್ಪು ಸುತ್ತಿದ್ದಳು,
ಜೋಗಮ್ಮನ ಉಗುರಿಗೆ ಬಣ್ಣ ಹಚ್ಚಿದ್ದಳು…
ಒಂದು ಕಡೆ ಗಬ್ಬೆದ್ದುನಾರುವ ಕೊಳಗೇರಿ,
ಇನ್ನೊಂದೆಡೆ ಘಮ್ಮೆನ್ನುವ ಐಸಿರಿ
ಬಲು ವಿಶೇಷ ಈ ಶಹರ!
ಅವಳ ವ್ಯಾನಿಟಿ ಬ್ಯಾಗು
ಅವಳ ಮುಖದ ಮೇಕಪ್ಪಿನ ಸೋಗು,
ಲಿಪ್ಸ್ಟಿಕ್ಕು ಫೌಂಡೇಷನ್ನು ನಡುವೆ
ಆ ಮಾತ್ರೆಗಳು ಏನರವು…!!?
ಮನಸ್ಸಿಗೆ ತುಂಬಾ ನೋವಾದಾಗ ಹೇಳಿಕಳ್ಳುವುದಕ್ಕೆ ಒಂದೊಳ್ಳೇ ಸ್ನೇಹಿತರಿರಬೇಕು ಆಗ ಸಾಯುವಂತ ನೋವಿದ್ದರೂ ಅದು ನೋವು ಎನಿಸುವುದಿಲ್ಲ
ನಾವು ಒಂಟಿ ಇದ್ದಾಗ ನಮ್ಮ ದುಖಃವನ್ನು ಯಾರು ನಮ್ಮ ನೋವನ್ನು ಹಂಚಿಕೊಳ್ಳದೇ ಇದ್ದಾಗ ಆಗುವ ನೋವು ದುಖಃ ಸಂಕಟ ಸಾವಿನ ಮನೆ ಬಾಗಿಲು ತಟ್ಟಿಸುತ್ತದೆ.
(ಮನುಷ್ಯನಿಗೆ ತುಂಬಾ ಮನಸಿಗೆ ನೋವು.ದುಖಃ.ಸಂಕಟ. ಆದಾಗ ಜೀವನವೇ ನಶ್ವರ ಎಂಬುದು ನೆನಪಾಗುವುದು).
ಜಗತ್ತು ವಿಶಾಲವಾಗಿದೆ. ಹೃದಯವನ್ನೂ
ವಿಶಾಲವಾಗಿಸಿಕೊಂಡರೆ, ಇಡೀ
ಜಗತ್ತನ್ನೇ ಹೃದಯದಲ್ಲಿ ತುಂಬಿಕೊಳ್ಳಬಹುದು.
*ನಾ ಒಲ್ಲೆ!* ಎಂದರೆ ಏನು ಮಾಡುವುದು?
ನಮ್ಮ ಹೃದಯಗಳು ಹೊರ ಪ್ರಪಂಚಕ್ಕೆ
ಮಿಡಿಯುವಂತಾ ಮೆತ್ತನೆಯ
ಚೆಂಡುಕಗಳಾಗಬೇಕು.
*ಸ್ಪಂದನೆಯೇ ಇಲ್ಲದ ಕಲ್ಲಾಗಬಾರದು.*