ಶಹರಕ್ಕೆ ಬಂದ ಮೊದಲಲ್ಲಿ
ಅಲ್ಲಿ ಇಲ್ಲಿ ಹೆಕ್ಕುತ್ತಿದ್ದ ಬೇಬರಸಿ
ಕಣ್ಣುಗಳಿಗೆ ಕುಕ್ಕಿದ್ದು
ಕಪ್ಪು ಕಾರಿನಿಂದ ಇಳಿದ
ಹೀಲ್ಡು ಚಪ್ಪಲಿಯ ನೀಳ ಕನ್ಯೆ…
ಅವಳ ತುಟಿ ಕೆಂಪು,
ಹೆಂಚಿನ ಮನೆಯ ರೆಡ್ಡಾಕ್ಸೈಡಿಗಿಂತ…
ಉಡಿಯೊಡ್ಡುವ ಉದ್ದ ಸೀರೆಗಿಂತ
ಮೊಳಕಾಲು ಮುಚ್ಚದ ಚಡ್ಡಿ ದುಬಾರಿ…
ಗಾಗಲ್ಲು ಹಾಕಿದ್ದಳು, ಗಲ್ಲ ಕಾಣದಂತೆ
ಸ್ಕಾರ್ಪು ಸುತ್ತಿದ್ದಳು,
ಜೋಗಮ್ಮನ ಉಗುರಿಗೆ ಬಣ್ಣ ಹಚ್ಚಿದ್ದಳು…
ಒಂದು ಕಡೆ ಗಬ್ಬೆದ್ದುನಾರುವ ಕೊಳಗೇರಿ,
ಇನ್ನೊಂದೆಡೆ ಘಮ್ಮೆನ್ನುವ ಐಸಿರಿ
ಬಲು ವಿಶೇಷ ಈ ಶಹರ!
ಅವಳ ವ್ಯಾನಿಟಿ ಬ್ಯಾಗು
ಅವಳ ಮುಖದ ಮೇಕಪ್ಪಿನ ಸೋಗು,
ಲಿಪ್ಸ್ಟಿಕ್ಕು ಫೌಂಡೇಷನ್ನು ನಡುವೆ
ಆ ಮಾತ್ರೆಗಳು ಏನರವು…!!?
ಮನಸ್ಸಿಗೆ ತುಂಬಾ ನೋವಾದಾಗ ಹೇಳಿಕಳ್ಳುವುದಕ್ಕೆ ಒಂದೊಳ್ಳೇ ಸ್ನೇಹಿತರಿರಬೇಕು ಆಗ ಸಾಯುವಂತ ನೋವಿದ್ದರೂ ಅದು ನೋವು ಎನಿಸುವುದಿಲ್ಲ
ನಾವು ಒಂಟಿ ಇದ್ದಾಗ ನಮ್ಮ ದುಖಃವನ್ನು ಯಾರು ನಮ್ಮ ನೋವನ್ನು ಹಂಚಿಕೊಳ್ಳದೇ ಇದ್ದಾಗ ಆಗುವ ನೋವು ದುಖಃ ಸಂಕಟ ಸಾವಿನ ಮನೆ ಬಾಗಿಲು ತಟ್ಟಿಸುತ್ತದೆ.
(ಮನುಷ್ಯನಿಗೆ ತುಂಬಾ ಮನಸಿಗೆ ನೋವು.ದುಖಃ.ಸಂಕಟ. ಆದಾಗ ಜೀವನವೇ ನಶ್ವರ ಎಂಬುದು ನೆನಪಾಗುವುದು).
ಜಗತ್ತು ವಿಶಾಲವಾಗಿದೆ. ಹೃದಯವನ್ನೂ
ವಿಶಾಲವಾಗಿಸಿಕೊಂಡರೆ, ಇಡೀ
ಜಗತ್ತನ್ನೇ ಹೃದಯದಲ್ಲಿ ತುಂಬಿಕೊಳ್ಳಬಹುದು.
*ನಾ ಒಲ್ಲೆ!* ಎಂದರೆ ಏನು ಮಾಡುವುದು?
ನಮ್ಮ ಹೃದಯಗಳು ಹೊರ ಪ್ರಪಂಚಕ್ಕೆ
ಮಿಡಿಯುವಂತಾ ಮೆತ್ತನೆಯ
ಚೆಂಡುಕಗಳಾಗಬೇಕು.
*ಸ್ಪಂದನೆಯೇ ಇಲ್ಲದ ಕಲ್ಲಾಗಬಾರದು.*
ಕಾಣಿಸದೆ ಇರುವುದನ್ನು ನಂಬಿ ಕುರುಡರಾದಿರೆನಯ್ಯಾ
ಕಾಣಿಸಿದ ದೇವರನ್ನು ಹೋರ ಹಾಕಿದರಲ್ಲಯ್ಯಾ
ಹುಡುಕಿ ಹುಡುಕಿ ದಣಿವಾಯಿತ್ತದಯ್ಯಾ
ಆದರೂ ನಿಮಗೆ ಸಿಗನು ಆ ದೇವರಯ್ಯಾ
ಕಾಣಿಸಿದ ದೇವರಿಗೆ ಕೈ ಮುಗಿರಯ್ಯಾ
ತಂದೆ-ತಾಯಿಯೇ ಆ ದೇವರಯ್ಯಾ
ಅವರ ಸೇವೆಯೆ ದೇವರ ಸೇವೆಯಯ್ಯಾ
ಇದನ್ನು ಅರಿಯದಿರುವ ನೀನು ಎಂತಾ ಮನುಜನಯ್ಯಾ