Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಣ್ಣ

ನೀ ಹಿಂಗ್ಯಾಕೊ
ಜರಿತಿಯ ನನ್ನ
ತವರಾಗ ಅವನೆ
ನನ್ನ ಅಣ್ಣ!!

ನನ್ನ ನೆತ್ತಿ ಮುಟ್ಟಿ ಅವ
ಭಾಶೆಯ ಕೊಟ್ಟವ್ನೆ
ತಂಗಿ ನೀನವ್ವ
ಎಂದೂ ನನ್ನ ಕಣ್ಣ!!

ದೂರದ ಊರಾಗ
ಕಾಯುತ್ತ ಕುಂತವ್ನೆ
ಬೇಗ ಬಾರವ್ವ
ತಂಗಿ ಎಂದ ಅಣ್ಣ!!

ತಂಗೀಯ ಧಾರೆಗಾಗಿ
ತುಂಗೆಯ ನೀರ ತಂದ
ಮಂಗಳ ಕಾಲದಾಗ
ಚೆಂದಾಗಿ ಧಾರೆ ಎರೆದ!!

ಪೆಟ್ಟಿಗೆ ಹೊನ್ನ ಕೊಟ್ಟ
ತೊಟ್ಟಿಲ ಕಟ್ಟಿ ಕೊಟ್ಟ
ಹಿತ್ತಲ ಗಿಡಕೆಲ್ಲ
ನನ್ನಯ ಹೆಸರಿಟ್ಟ!!

ತವರಾಗ ಅವನೆ
ನನ್ನ ಅಣ್ಣ
ತೋಳ ಬಲದಾಗ
ಅವ ಭೀಮಣ್ಣ!!

- ಪಿ.ಜಿ.ಜ್ಯೋತಿ

08 Nov 2016, 06:33 pm

ಮನ್ನಿಸು

ಮನ್ನಿಸು ನನ್ನಯ ಪ್ರೇಮದ ಅರಸಿ
ಬಂದು ಬಿಡು ನೀ ನನ್ನನು ಅರೆಸಿ !!

ಕಾದಿರುವೆ ನಾ ಕಂಬನಿ ಸುರಿಸಿ
ನಲಿವ ಕೊಡು ನೀ ನೋವನು ಮರೆಸಿ!!

ಮುಗಿಲಿಗು ಮಿಗಿಲಾದ ಪ್ರೀತಿಯ ಹೊದಿಸಿ
ಬಂದು ಬಿಡು ನೀ ನನ್ನನು ಅರೆಸಿ !!

ಬಣ್ಣದ ಹಾಳೆಯ ಚಿತ್ರವ ಬಿಡಿಸಿ
ಬಣ್ಣಿಸುವೆ ನಾ ನಿನ್ನನು ಅರಸಿ!!

ಕಡಲಿನ ಅಲೆ ಅಲೆಯ ಸ್ವಾಗತ ಇರಿಸಿ
ಕಾದಿರುವೆ ನಾ ಕಂಬನಿ ಸುರಿಸಿ!!

- ಪಿ.ಜಿ.ಜ್ಯೋತಿ

08 Nov 2016, 05:57 pm

ನೀನು...ದೇವತೆ

ಬದುಕಿನ ದಾರಿಯಲಿ
ಹಸಿವಿನಿಂದ ಅಲೆಯುತಿದ್ದೆ
ಜ್ಞಾನದ ಹಸಿವಿನಿಂದ
ಅಲೆಯುತಿದ್ದೆ....

ಸಿಕ್ಕ ಜೀವಗಳೆಲ್ಲಾ
ನಕ್ಕು ಮುನ್ನಡೆಯುತಿದ್ದರೆ
ಅಕ್ಕರೆಯ ಮಾತಿಗೆ
ಹಾತೊರೆಯುತಿತ್ತು ಮನ...

ಎತ್ತ ತಿರುಗಿದರೂ
ಅಜ್ಞಾನದ ಕತ್ತಲು ತುಂಬಿ
ನನ್ನವರು ಪರರು ಯಾರೂ
ಕಾಣದಂತಾಗಿ
ಹೆಣದಂತೆ ಅಲೆಯುತಿದ್ದೆ....

ನೀ ಸಿಗುವತನಕ
ಬದುಕಿನ ದಾರಿ ಮಸುಕು
ಮಸುಕಾಗಿತ್ತು
ನೀನು ಪ್ರಕೃತಿಯಂತ
ಹೆಣ್ಣು ಆಶ್ರಯಕೊಟ್ಟೆ
ಅನ್ನವ ಕೊಟ್ಟೆ .........

ಅತಿಶಯವೆನಿಸುವ
ಆತ್ಮೀಯತೆ ತೋರಿದೆ
ಬದುಕ ದಾರಿಗೆ ದೀಪದ
ಬೆಳಕಾದೆ ನೀನು
ದೇವತೆ.......

- ಸಂತ ನಕ್ಕಲುಬಂಡೆ

07 Nov 2016, 08:32 pm

ತಾಯಿಯಾಗುವ ಹೆಣ್ಣಿನ ತವಕ

ಬಸಿರ ಬಯಕೆ ಇಂದು
ನನ್ನ ಉಸಿರ ಹಿಡಿದಿದೆ
ಹಸಿರ ತೋರಣದ ತವರಿನಲ್ಲಿಂದು
ನನ್ನ ಸೀಮಂತ ಸಂಭ್ರಮಿಸುತ್ತಿದೆ

ಕೂಸಿನ ಕನಸ ಕಾಣುವ ನನ್ನೀ
ಮಾಸಿದ ದಿನಗಳ ಅವದಿಯಲ್ಲಿ
ಸೂಸುವ ಗಂಧ ಕುಸುಮಗಳಲ್ಲಿಂದು
ಚೊಚ್ಚಲದ ಸೀಮಂತ ಕುಣಿದು ಕುಪ್ಪಳಿಸುತ್ತಿದೆ

ಹುಳಿ ಮಾವಿನ ಕಾಯಿಯ ರುಚಿ
ಕೆಂಪು ಮಣ್ಣಿನ ಗುಣದ ಶುಚಿ
ಡ್ವಾರಿ ಹುಳಿ ಹುಣಸಿ ಕಾಯಿಯಿಂದ
ಮಗುವಿನ ಮಕರಂದ ಕಂಗೊಳಿಸಬೇಕಾಗಿದೆ

ಹೆಣ್ಣಿಗೆ ಸಿಗುವ ಈ ಸಿರಿತನ
ಮಗುವಿಗಾಗಿಯೇ ಅವಳೆಲ್ಲಾ ತನುಮನ
ಅದರ ಏಳ್ಗೆಗಾಗಿಯೆ ಶ್ರಮಿಸುವಳು ಕೊನೆತನ
ಮಾತೃವಿನ ಮಡಿಲಿನಲ್ಲಿ ಮಗುವಿನ ಜನನ
ಇದು ತಾಯಿಯ ಸಾವಿರ ಪುಣ್ಯದ ಪ್ರತಿಪಲನ

ಇಂತಿ ನಿಮ್ಮ♡ಸ್ನೇಹ ಸಿಂಚನ♡
ನಾಗರಾಜ್ ಬಿ {9743216235}

- ನಾಗರಾಜ ಬಾಕೆ೯ರ್

07 Nov 2016, 07:09 pm

ಪ್ರವಾಸಿ

ಹಲವಾರು ಕನಸುಗಳನ್ನು
ನನಸು ಮಾಡಲು
ಬಂದಿಳಿದ ಮರುಭೂಮಿಗೆ..!

ಬಿಸಿಲು,ಚಳಿಯನ್ನು
ಲೆಕ್ಕಿಸದೆ ತನ್ನ ಜೀವನ ವನ್ನೆ
ಮುಡಿಪಾಗಿರಿಸಿದ ತನ್ನವರಿಗೆ..!

ಹಲವಾರು ಬಾರಿ ಹೋಗಿ
ಬಂದ ದೊಡ್ಡ ದೊಡ್ಡ
ಪೆಟ್ಟಿಗೆಗಳೊಂದಿಗೆ ತನ್ನೂರಿಗೆ..

ಜೀವನವನ್ನು ದಡ ಸೇರಿಸುವ
ಹೋರಾಟದಲ್ಲಿ ಕೊನೆಗೊಂದು
ದಿನ ಪೆಟ್ಟಿಗೆಯ ಒಳಗೆ ಮಲಗಿ ಹೋದ
ಇನ್ನೆಂದೂ ಮರಳಿ ಬಾರದ ಊರಿಗೆ...!

✒ಸಲ್ಮಾನ್ ಸಜೀಪ

- ಸಲ್ಮಾನ್ ಸಜೀಪ

07 Nov 2016, 11:36 am

ಭಾವ‌ ಬಿಂಬ

ಚಿತ್ರಕ್ಕೊಂದು ಭಾವ..

ಮನದ ಭಾವದ ಬಿಂಬ
ಬಿಂಬಿತವು ವದನದಾ ಮೇಲೆ..
ಭಾವಕುಂಚವು ಇಂದು
ತೋರುತಿದೆ ರೌದ್ರತೆಯ ಲೀಲೆ..

ನಗುಸೂಸೊ ನಯನದಲಿ
ಬಿರುಸು ಬಾಣದ ಕದನ..
ಮನದ ವಿಕೃತಿಯಿಂದ
ಮೊಗದಿ ರೌದ್ರತೆ ಜನನ..

ತಿಳಿಯಾದ ಮನದಲ್ಲಿ
ಭಾವ ಕಲಕಿದೆ ಇಂದು..
ಅದರ ರೂಪವ ನೋಡು
ಮುಖಭಾವದೊಳಗಿಂದು..

ಅಳುವಿಹುದು ನಗುವಿಗುದು
ನೋವಿನಾ ಕುರುವಿಹುದು..
ಆಸೆ-ನಿರಾಸೆಯ ಜೊತೆಗೆ
ಪ್ರೀತಿಯಾ ಕಲೆ ಇಹುದು..

ಕಂಡ ಕನಸನು ಕೊಂದು
ಕಂಬನಿಯ ಮಿಡಿದಿಯುದು..
ಮನದ ನೋವಿನ ಸೇಡ
ತೀರಿಸಲು ಹೆಣಗಿಹುದು..

ಪ್ರೀತಿ ಕಳೆದಿದೆ ಎಂದೋ
ಮನವು ಮರೆತಿದೆ ಎಂದೋ..
ಮತ್ತ ಕಲಕುವುದೇಕೆ
ಚಿತ್ತ ಕೋರದ ಬಯಕೆ..
©CRB

- ಭಾವ ಮೃದಂಗ

07 Nov 2016, 09:42 am

ಪಿಸುಮಾತು

ಆಡಲೇ ನಾ ನಿನ್ನೊಂದಿಗೆ ಪಿಸುಮಾತು
ನಾ ಆಡಿದರು ನೀ ಕೇಳಲೊಲ್ಲೆಯ ನನ್ನ ಮಾತು

ಅದೆಷ್ಟಿದೆಯೋ ನಿನಗೆ ನನ್ನ ಮೇಲೆ ಕೋಪ
ಆ ಕೋಪದ ಬದಲಿರಲಿ ನಿನಗೆ ಅಯ್ಯೊ ಪಾಪ
ಇದೇ ನಿನಗೆ ನಾ ಕೋಡುವ ಪ್ರೀತಿಯ ಶಾಪ

- ರನ್ನ ಮಹಾದೇವ

07 Nov 2016, 07:39 am

ಜೋಡಿ ಗಿಣಿಗಳು

ಜೋಡಿ ಗಿಣಿಗಳು ಕೂಡಿ ನಲಿದವು
ಕಾಡ ಮರಗಳ ಸುತ್ತಿ ಅಲೆದವು!!
ಹೂವು ಹಣ್ಣಿನ ಸ್ವಾದ ಹೀರುತ
ಪ್ರಣಯದಾಟದಿ ಮೈಯ ಮರೆತವು!!

ಬೇಟೆಗಾರನ ಬೇಟೆ ಮೋಡಿಗೆ
ಕೊರಳ ನೀಡಿ ತಾ ಸಿಕ್ಕಿ ಬಿದ್ದವು!!
ಪ್ರಣಯ ಪಕ್ಷಿಗೆ ವಿರಹ ಉಣಿಸಲು
ಹೆಣೆದ ಬಲೆಯದು ಕುಣಿಕೆ ಮಾದರಿ!!

ಪಾರು ಮಾಡಲು ಯಾರು ಬಾರದೆ
ದಾರಿ ಕಾಣದೆ ನೊಂದು ಕುಳಿತವು!!
ಬೇಟೆಗಾರನ ಕೈಗೆ ಸಿಲುಕಿ
ಊರ ರಾಜಗೆ ಮಾರಿ ಹೋದವು!!

ಚಂದ ಗಿಣಿಗಳ ಬಂಧಿ ಮಾಡಲು
ರತ್ನ ಪಂಜರ ತಂದ ರಾಜನು!!
ಒಂದು ಮಾಡುವ ಮನಸು ಮಾಡದೆ
ಬಂಧಿ ಮಾಡಿದ ಮುದ್ದು ಗಿಣಿಗಳ!!

ತನ್ನ ಕೋಣೆಯ ದ್ವಾರದೆದುರಿಗೆ
ಇಟ್ಟ ಪಂಜರ ಎರಡು ಬದಿಯಲಿ!!
ಊರ ರಾಜನ ಮೋಜಿನಾಟಕೆ
ಎದಿರು ಬದಿರಲಿ ನೊಂದ ಗಿಣಿಗಳು!!

ನೊಂದ ಗಿಣಿಗಳ ಮೂಕ ವೇದನೆ
ಕಂಡು ಮರುಗುವ ಮನಸು ಬಾರದೆ!!
ಎದುರಿಗಿದ್ದು ವಿರಹ ಕಾಡುವ
ಶಾಪಕೆಂದು ಮುಕ್ತಿ ಮನುಜನೆ!!

- ಪಿ.ಜಿ.ಜ್ಯೋತಿ

06 Nov 2016, 08:39 pm

ನನ್ನ ಗೆಳೆತನ

ಮೊದಲ ದಿನ ಕಾಲೇಜು
ನಾ ಸೇರಿದೆ
ನನ್ನ ಕಣ್ಣುಗಳು
ನಿನ್ನನ್ನು ನೋಡಿದೆ

ಕಾಲೇನಿನ ಮೊದಲ ಕಾರ್ಯಕ್ರಮ
ಶುರುವಾಗಿದೆ
ನಾ ಒಂದು ನಾಟಕ ಮಾಡಿದೆ
ಅಂದಿನಿಂದ ನನ್ನ ಜೀವನವೇ ಬದಲಾಗಿದೆ

ನಮ್ಮಿಬ್ಬರ ಗೆಳೆತನ ಶುರುವಾಗಿದೆ
ಗೆಳೆತನ ಎಂದರೆ ಅದೇ ಅದೇ
ಮದ್ಯ ಏನೋ ಬಿರುಕಾದಾಗ
ನೀ ಇನ್ನೋಬ್ಬರ ಗೆಳೆತನ ಮಾಡಿದೆ
ಆ ದಿನಗಳಲ್ಲಿ ನನ್ನ ಮನಸ್ಸು
ನೊಂದಿಗೆ

ನಾ ಮನಸ್ಸಲಿ ಅಂದೇ ಅಂದೆ
ನನ್ನ ಗೆಳೆತನ ನಿಜವಾಗಿದೆ
ನೀ ಎಲ್ಲೇ ಹೋದರೂ
ಮತ್ತೆ ಬರುವೆ ನಾನ್ನಲ್ಲಿಗೆ

ನನ್ನ ನಂಬಿಕೆ ನಿಜವಾಗಿದೆ
ನೀ ಮತ್ತೆ ಬಂದೆ ಮರೆಯದೆ
ನನ್ನ ಮನವು ಹಾಡಿದೆ, ಕುಣಿದಿದೆ
ಮತ್ತೆ ಎಂದಿದೆ ಗೆಳೆಯ ನೀ
ಬಂದೆ ನನ್ನ ಗೆಳೆಯ ನೀ ಬಂದೆ......

- Lavanya .Oblesh. Madar

06 Nov 2016, 07:27 pm

ನಕ್ಷತ್ರ!!!

⭐️⭐️⭐️⭐️⭐️⭐️
ನಕ್ಷತ್ರಗಳಾಗುತ್ತಾರಂತೆ ಸತ್ತವರೆಲ್ಲಾ!

ಒಮ್ಮೊಮ್ಮೆ ವಿಶಾಲ ಬಾನ ನೋಡುತ್ತಿದ್ದಾಗ ನಕ್ಷತ್ರಗಳು ಬಿದ್ದಂತೆ ಭಾಸವಾಗುವುದಲ್ಲಾ !

ಒಂದು ವೇಳೆ ಸತ್ತ ನಮ್ಮ ಪ್ರೀತಿಪ್ರಾತ್ರರು ಆ ಬೀಳುವ ನಕ್ಷತಳಾಗಿದ್ದು ನೋಡು ನೋಡುತ್ತಿದ್ದಂತೆ ಪುನಃ ಜಾರಿ ಈ ಭುವಿಗೆ ಬಂದು ಬಿಟ್ಟರೆ ಎಷ್ಟು ಚೆನ್ನಾಗಿರುತ್ತಲ್ಲಾ ?

- ಆಕಾಂಕ್ಷ ಶೇಖರ್.

⭐️⭐️⭐️⭐️⭐️

- Akanksha shekar

06 Nov 2016, 01:04 pm