Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕನಸು

ಕಣ್ಣೊಳಗಿನ ಆ ಕನಸು
ಮರೆಯಾಗಿ ಮರೆತಾಗ
ಮೌನವಾಯಿತು ಮನಸು

- adarsh

17 Nov 2016, 07:53 pm

ನಾ

ನಾ ಬಂಜರೆಂದುಕೊಂಡ ಎದೆಯೊಳಗೆ
ಕೈತೋಟವಾದರೂ ಮಾಡಬಹುದಿತ್ತು…
ಅರ್ಥವಿಲ್ಲದ ಪದಗಳ ಪೊಣಿಸುತ್ತ ಕುಳಿತೆ
ವಿಚಾರವಾದಿಯಂತೆ ಬಣ್ಣ ಬಳಿದುಕೊಂಡು…

ಅವಳು ಇವಳೆಂದು ಕನಸು ಕಾಣಲು
ನಾನು ಪ್ರೇಮಕವಿಯಾಗಿ ಉಳಿದಿರಲಿಲ್ಲ,
ಮಾಯಾಮೃಗಮಾನಸಿಯೊಬ್ಬಳ ಬೆನ್ನು ಬೀಳಲು
ನಾನೊಬ್ಬ ನುರಿತ ಬೇಟೆಗಾರನೂ ಅಲ್ಲ…

ಕಾಲು ಹಾದಿಯಲಿ ಹಳೆಯದೊಂದು ಉಗ್ಗ ಹಿಡಿದು
ಹಾಲೋಯ್ಯುವ ಹುಡುಗ
ದಾರಿಯುದ್ದಕ್ಕೂ ಹಾಡು ಗುನುಗಿದಂತೆ ನಾನು…
ಮಣ್ಣಿಗೆ ಮುತ್ತಿಕ್ಕಿದ ಚಪ್ಪಲಿಗೆ ನೀರಡಿಕೆಯಾಗಿತ್ತು,
ನಳದ ಕೆಳಗೆ ತೊಯಿಸಿಬಿಟ್ಟೆ…
ತೊರೆಯೊಂದರ ಬಳಿ ಕಲ್ಲು ತೇಲಿಸಲು ಯತ್ನಿಸುವಾಗ
ಜೊತೆಗೂಡಲು ಯಾರೂ ಇರಲಿಲ್ಲ,
ಹುಚ್ಚುಹುಡುಗನ ಮೂರ್ಖತನ ಕಂಡು
ಝರಿಯ ನೀರು ಆಗಾಗ ಗೊಣಗುತ್ತಿತ್ತು…

ನಾ ಕಂಡ ಒರತೆಯ ಸೆಲೆಗೆ ಆಗಾಗ ಬೊಗಸೆವೊಡ್ಡಿ
ಮೀನುಗಳನೆಲ್ಲ ಹೌಹಾರಿಸಿದ್ದೆ,
ಖಾಲೀ ಮನದ ತುಂಬ ಮೌನದ ಚಿಲಿಪಿಲಿ
ಮತ್ತೆ ಮತ್ತೆ ನೀರನ್ನು ಕದಡುತ್ತಿತ್ತು……
- ಪರಮೇಶ್ವರ

- ಒಂಟಿತೋಳ

17 Nov 2016, 12:47 am

ಲಬ್-ಡಬ್ ಎನ್ನುವ ಹೃದಯವಿದು..

ಹೇಳದೆ ಸುಳಿದ
ಮೋಹಕ ಕನಸೊಂದು
ಕಾಡಿದೆ ಮನವ
ಅನುಕ್ಷಣವು ಅವಳ ನೆನಪ
ಅಲೆಯ ಮೇಲೆ ತೇಲುತ...

ಲಬ್-ಡಬ್ ಎನ್ನುವ
ಹೃದಯವಿದು..
ಗಪ್-ಚಿಪ್ ಹಾಗಿದೆ
ಅವಳೆದುರಲಿ...
ಕ್ಷಣ ಕ್ಷಣವು ಮನವು ಕನವರಿಸಿದೆ ಅವಳೇಸರ....!!

- ಬಾನು ಅಡಿಗಾರ್

17 Nov 2016, 12:19 am

ಸಾರ್ಥಕ್ಯ..

ನನ್ನ ಕವನಗಳ ಸಾರ್ಥಕತೆ,
ಕೇಳಿದ ಹುಂಬನಿಗೆ.
"ನಾನು ಬದುಕಿದ್ದೆ ಎನ್ನುವುದರ ಸಾಕ್ಷ್ಯವಾಗುವುದು"
ಎಂದು ನನ್ನ ಅಕ್ಷರಗಳು
ಧೀರೋದ್ದಾತವಾಗಿ ಉತ್ತರಿಸುವವು.

ಪ್ರವೀಣ್ ವಿಪ್ರ

- ವಿಪ್ರ

16 Nov 2016, 04:42 pm

ಅಖಂಡ ಕರ್ನಾಟಕ

ಕರುಣಿಸು ಕರುನಾಡ ಬನಶಂಕರಿ,
ಕರಗಳಲಿ ಕನ್ನಡದ ಬಾವುಟವ,
ಕಾರ್ಯಗಳಲಿ ಕನ್ನಡದ ಪ್ರೇಮವ,
ಕಾಲಿಡುವೆಡೆಯಲಿ ಕನ್ನಡದ ಧೀರತನವ,
ನುಡಿಗಳಲಿ ಶಾರದೆಯ ಗಾನಾಮೃತವ.


ಹುಟ್ಟುವೆನು ನಾನ್ .
ಎರೆಹುಳುವಾದರೆ ನಿನ್ನ ಕಲ್ಪವೃಕ್ಷದಡಿಯಲ್ಲಿ.
ಸಲಗವಾದರೆ ನಿನ್ನ ಅಂಬಾರಿ ಹೊರುವೆನು..
ಏನಾದರೆನು ನಾನ್ ಕನ್ನಡಕ್ಕೆ ದುಡಿವುದು ,
ಎನ್ನ ನಕಶಿಕಾಂತದೊಳಡಗಿದ ಅಣು-ಅಣುವು ಕನ್ನಡಕೆ ಮಡಿವುದು...


ಸಾವಿರ ಸುದರ್ಶನರ ಚಕ್ರಕ್ಕಿಂತಧಿಕ
ವೇಗದಲಿ ನುಗ್ಗಿ..
ತಾಯ್ಗಂಡರ ತಲೆಗಳ ತರಿದು ಬಿಡುವೆನಮ್ಮ....
ಅಖಂಡ ಕರ್ನಾಟಕವನು ಉಳಿಸುವೆನು,
ನಿನ್ನ ಸಹ್ಯಾದ್ರಿ ಸೆರಗಿನ ಮೇಲಾಣೆ.


ಮರೆಯನು ನಾನ್
*ಅಖಂಡ ಕರ್ನಾಟಕ,ಭವ್ಯ ಭಾರತ*ವೆಂಬ ಘೋಷವಾಕ್ಯವ.
ವೀರಾಟ್ಟಹಾಸದಲಿ ಬಾನು-ಭುವಿ ಬೆಳಗಲಿದೆ *ಅಖಂಡ ಕರ್ನಾಟಕವು ಭವ್ಯಭಾರತದಲ್ಲಿ*.
ಇದನ್ನೇ ಮಾಡ್ವೆ.ಇಲ್ಲದ್ದಿದ್ದರೆ ಸಾಯ್ವೆ.



ಪ್ರವೀಣ್ ವಿಪ್ರ

- ವಿಪ್ರ

16 Nov 2016, 08:08 am

ಕವಿತೆಗೇಕೆ ಹೆಸರು

ಕವಿತೆಗೇಕೆ ಬೇಕು ಹೆಸರು,
ಕವಿಯ ಜೀವ ಮಿಡಿಯುತ್ತಿರಲು,
ಭಾವ-ಭಾಷೆ ಕಲೆತು ನಿಂತು,
ಹೊಮ್ಮುತ್ತಿರಲು ಕಾವ್ಯ ಸೃಷ್ಟಿ.


ಜನರು ಹೇಳ್ವ, ಹೆಸರ ಕೇಳಿ?
ಬೀಸುವುದೇನು ತಂಪು ಗಾಳಿ.


ಕವಿಗೇಕೆ? ಕಾವ್ಯನಾಮ,
ಕಾವ್ಯಸೃಷ್ಟಿ ಅವಂಗೆ ಮುಕ್ತಿಧಾಮ,
ನೋವು-ನಲಿವು,ಸೋಲು-ಗೆಲವು,
ಕಷ್ಟ-ನಷ್ಟ,ರೀತಿ-ನೀತಿಗಳ ಸಮುದ್ರದಲೆಯ ಸೀಳಿ,
ಆಳಮುಟ್ಟಿ ಹೆಕ್ಕಿ ತರಲು ರತ್ನವು,
ರತ್ನ ಅದುವೇ ಕಾವ್ಯವು.


ಜನರು ಹೇಳ್ವ ಹೆಸರ ಕೇಳಿ?
ಮಿಂಚುವನೇನು ದಿನವು ಭಾನು.


ಬದುಕು ಬಯಲುದಾರಿಯಲ್ಲಿ ಓಟ,
ದಿನವು ನಿತ್ಯ ಓಲುಮೆಯಾಟ,
ಬಯಲೊಳಡಗಿದೆ ದಾರಿಯು.
ದಾರಿಗೇಕೆ? ಬೇರೆ ಹೆಸರು,
*ಬಯಲುದಾರಿ*ಅಷ್ಟೇ ಅದರ ಹೆಸರು.


ಜೀವದೊಳಗೆ ಒಲುಮೆಯಿರಲು,
ಒಲುಮೆಯೊಳಗೆ ದೇವನಿರಲು,
ಅವನಿಗೇಕೆ ಒಂದು ಹೆಸರು,
ಒಲುಮೆ ಅದುವೆ ದೇವರು.


ಪ್ರವೀಣ್ ವಿಪ್ರ

- ವಿಪ್ರ

15 Nov 2016, 11:49 pm

ಗಾಳಿ ಮಾತು

ಬಾಯಿಂದ ಬಾಯಿಗೆ ಬಂದ ಮಾತಿಗೆ ಕಿವಿಕೊಟ್ಟ ಗೆಳತಿ ನೀನು . ಆ ಗಾಳಿ ಮಾತಿಗೆ ಮನಸು ಕೊಟ್ಟು ಕೆಟ್ಟೆ ನೀ ಗೆಳತಿ .ಕೈಗೆ ಸಿಗದ ಗಾಳಿ ಉತ್ತರ ಸಿಗದ ಪ್ರಶ್ನೆ ಎರಡು ಒಂದೇ. ಕೇಳಬೇಡ ಗೆಳತಿ ಗಾಳಿ ಮಾತನ್ನ........ ಡಿ .ಆನಂದ. ನಕಲದಿನ್ನಿ

- anand.herur

15 Nov 2016, 08:28 pm

ಭಾವಗೀತೆ

ಭಾವಗೀತೆಯೊಂದು ಮೂಡಿ ಬಂತು
ಉದಯಯುಗದ ಕಾಲದಿ,
ಮೂಕನಾದೆ,ವಿನೀತಾನಾದೆ
ಅದರ ಲಯದ ಮಾಟದೀ,


ಭಾವದೊಡನೆ ಸೇರಿ ಒಲುಮೆ
ಹಾಡು ಹಸೆಯ ಏರಿತು,
ನೂರು ವೀಣೆ ತಂತಿ ಮಿಡಿದು
ನೂರು ಮನವ ಸೇರಿತು.


ಕತ್ತಲಿರುಳ ಬೆಳಕ ಮಾಡಿ,
ಭಾವಗೀತೆ ಬೆಳಗಿತು.
ಸೂರ್ಯ,ಚಂದ್ರ,ಚುಕ್ಕಿಗಳಿಗೆ
ಕಳೆಗೆ ಪ್ರಭೆಯ ನೀಡಿತು.


ಭಾವಗೀತೆ ಬರೆದ ನಾನು,
ಕಳೆದ ಭಾವಗಳ ಹುಡುಕುತಿಹೆ
ಅದೇಕೊ ಇಂದು ನಾನು
ಜಡದಂತೆ ಮಲಗಿಹೆ.



ಪ್ರವೀಣ್ ವಿಪ್ರ

- ವಿಪ್ರ

15 Nov 2016, 08:07 pm

ನಿನ್ನ ನಗೆಯ ಹಿಂದೆ..

ನಿನ್ನ ನಗೆಯ ಹಿಂದೆ ಸಾಗಿದೆ
ಈ ನನ್ನ ಭಾವನೆಗಳ ಹೂ ತೇರು
ಕಣ್ಮರೆಯಾಗದೆ ಉಳಿವುದು ಹೇಗೆ?
ನಾ ನಿನ್ನ ಕಣ್ಣೆದುರು..

ಬಯಕೆಯ ತಂತಿಗಳ ಮೀಟಿ
ಹೊಮ್ಮಿದೆ ನಿನ್ನ ಸೇರೊ ತವಕ..
ಕನಸಲು ಮನಸು ಬಯಸಿದೆ
ನಿನ್ನ ಸಾಂಗತ್ಯ ಸವಿಗಳಿಗೆಯ ಪುಳಕ..

- ಬಾನು ಅಡಿಗಾರ್

15 Nov 2016, 06:32 pm

ಹೊಸ ಹುಡುಗಿ

ಯಾರಿವಳು ಹೊಸ ಹುಡುಗಿ
ಎಂದೂ ಕಾಣದ ಬೆಡಗಿ!!
ನಿಂತವಳ ನೋಡುತ ತಿರುಗಿ
ಸಾಗಿದೆ ನನ್ನಯ ನಡಿಗೆ!!

ಸೂರ್ಯಾಸ್ತದ ರಂಗು
ಆ ಕೆನ್ನೆಯ ತುಂಬ!!
ಮಳೆ ಬಿಲ್ಲೆ ಮೈದುಂಬಿ
ನಿತಂತ ಸೊಗಸು!!

ಚಂದ್ರ ಮುಖಿಯು ಅವಳು
ಯಾವೂರ ಕನ್ನಿಕೆಯೋ!!
ಶೃಂಗಾರ ತುಂಬಿದ ಹೆಣ್ಣು
ಬೇಲೂರ ಬಾಲಿಕೆಯೋ!!

ಕ್ಷೀರ ಸಾಗರದಿ ಜನಿಸಿ
ಬಂದಂತ ದೇವತೆಯೋ!!
ತಿಂಗಳ ಬೆಳಕಲ್ಲಿ ಮುಳುಗೆದ್ದ
ಅಪರೂಪದ ಚಂದ್ರಿಕೆಯು!!

- ಪಿ.ಜಿ.ಜ್ಯೋತಿ

15 Nov 2016, 04:35 pm