Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕ್ಷಮೆಯಿರಲಿ

ಚುಮು ಚುಮು ಬೆಳ್ಳಂಬೆಳಗ್ಗಿನ ಸಮಯದಲ್ಲಿ
ಹಚ್ಚ ಹಸಿರ ಸೀರೆಯುಟ್ಟು ಕೆಂಪು ತಿಲಕವಿಟ್ಟು
ಮುತ್ತಿನ ಮಣಿಯನ್ನುಟ್ಟ ಮಹಾರಾಣಿ ನಮ್ಮನೆಲ್ಲ ಕ್ಷಮಿಸಿ ನಾವು ಮಾಡುವ ತಪ್ಪನ್ನು ತಿದ್ದವ್ವ ನನ್ನಡೆದವ್ವ

- ರನ್ನ ಮಹಾದೇವ

08 Dec 2016, 06:59 am

ನುಡಿಯ ವಿಷಯ.........

ಈಗ ಬದಲಾಯಿತೆಂಬುದೆ ಕಾಲವು
ಹಿಡಿಯುತಿದೆ ದೂಳು ಈ ನುಡಿಗೆ
ಹರಿವ ಜರಿಯಿಂದಿಳಿದು ಬರಬೇಕೆಂದು,
ರಬಸದಿಂದಿಳಿದು ತೋಳೆಯಬೇಕಿಂದು,
ಈ ನಾಡನು.ಆ ನೀರಿನ ರಬಸದಿಂ ನೋಡುತ.ಬೇರೆ ಭಾಷೆ ಕಲುಕೀಳುವುದು ಖಚಿತ ವಾಯಿತು....

- ಅದ್ಯತನ

06 Dec 2016, 10:45 pm

ಸ್ನೇಹ ಸಂಬಂಧ

ನುಡಿಯಲು ಪದಗಳ ಕೊರತೆ.,
ಆಲಿಸಲು ಸಂಪರ್ಕದ ನ್ಯೂನತೆ.,
ಸಂಧಿಸಲು ಸಮಯದ ಸಮಸ್ಯೆ.,
ತೊಡಕುಗಳೇ ತುಂಬಿದ ಸಂಬಂಧ.,
ಹೊಸ ತರಹದ ಆದರ್ಶದ ಅನುಬಂಧ.,
ನುಡಿಯದಿದ್ದರೂ, ಆಲಿಸದಿದ್ದರೂ,
ಸಂಧಿಸದಿದ್ದರೂ, ಅಳಿಸದ ಆತ್ಮಬಂಧ..

- ವಿಧಾತ್ರಿ ಹರಿತಸ್ಯ

06 Dec 2016, 11:22 am

ಕವಿ. ಕರೆಯೋಲೆ

ೱೱೱೱೱೱೱೱೱೱೱೱೱ
ನನ್ನ ಹೆಸರು *ಕವಿ*
ನನ್ನಾಕೆಯಿವಳು *ಕಲ್ಪನಾ*
ನಮ್ಮಿಬ್ಬರ ಮುದ್ದು ಮಗಳೇ
ಭಾವಾಂಬುಧಿ .... *ಕವನಾ*
ಇವಳ ಅಂದ ಚಂದ ಮೆಚ್ಚಿ
*ರಾಗ*ವೇಂದ್ರ ನೆಂಬವರನು
ಕರಪಿಡಿಯಲು ಬಂದಿಹನು
ಮೇಳ ತಾಳದೊಂದಿಗೆ.
ಆಮಂತ್ರಣ ನೀಡುತಿರುವೆ
ಬನ್ನಿರೆಲ್ಲ ಮದುವೆಗೆ,
ಸವಿಗಾನವು ಮೂಡಿ ಬರಲಿ
ವಧೂ-ವರರ ಪಾಲಿಗೆ!!
ೱೱೱೱೱೱೱೱೱೱೱೱೱೱೱ
✍ಮಲ್ಲಿಭಾಗವತ✍

- ಮಲ್ಲಿಭಾಗವತ್ ಗುಡಿಬಂಡೆ

06 Dec 2016, 12:30 am

ಮುದ್ದು ಮನಸ್ಸು

ಹೇ ಚಿನ್ನ
ನಿನ್ನ ಪ್ರೀತಿಯ ಮೋಡಿಗೆ
ನಾ
ಬಿದ್ದೆ ಬಲೆಗೆ
ಸಿಲುಕಿದ ಮೀನಿನ ಹಾಗೇ
ಸೋತು ಹೋಯ್ತು
ಚಲುವೇ ನನ್ನ ಮನಸ್ಸು
ನಿನ್ನ ಅಂದ ಕಂಡಾಗ

- jaya

05 Dec 2016, 01:11 pm

ಪ್ರೀತಿಯ ಗೆಳತಿ

ನೊಂದ ಹೃದಯ

ನಿನ್ನ ವರಿಸಲೆಂದು ನಾನು
ಹಲವು ವರುಷ ನರಳಿ ಬೆಂದು
ಇಂದು ತಡೆಯಲಾರೆ ನನ್ನ
ಮನದ ದುಃಖವ.....

ನನ್ನ ಒಡಲಪಾಡ ಕೇಳದೇನೆ
ನಿನ್ನ ಪ್ರೀತಿ ಮಾಡಿ ಇಂದು
ಟಾಟಾ ಹೇಳಿ ಹೋಗಲೆಂದು
ಬಂದೆಯಾ.....

ಮನದಲೊಂದು ಮಾತಲೊಂದು
ಎಂಬ ಮಾತಿನಂತೆ ನೀನು
ನನ್ನ ಹೃದಯದಿಂದ ಎಲ್ಲೋ
ಓಡಿ ಬಿಟ್ಟೆಯಾ.....

ಏನೇ ಬರಲಿ ಯಾರೇ ಇರಲಿ
ನಿನ್ನ ಮಾತಿನಂತೆ ಕೇಳಿ
ನಡೆದ ನನ್ನ ಇಂದು ನೀನು
ಬೇಡವೆಂದೆಯಾ.....

ಪ್ರೀತಿಯೆಂದರೇನು ಎಂದು
ತಿಳಿಯದಾದೆ ಇಂದು ನಾನು
ಹಣದ ಆಸೆಗಾಗಿ ನನ್ನ
ಒಲ್ಲೆ ಎಂದೆಯಾ.....

ಏನೇ ಕೇಳು ನೀನು ನನಗೆ
ತಂದು ಕೊಡುವ ನನ್ನ ಇಂದು
ಹೆತ್ತ ಕರುಳಿನೆದುರಿನಲ್ಲಿ
ಬಿಕಾರಿ ಎಂದೆಯಾ.....

ಬಡವನೆಂದು ತಿಳಿದೂ ನೀನು
ನನ್ನ ಪ್ರೀತಿ ಮಾಡಿ ಈಗ
ನೀನು ಬಡವನೆಂದು ಹೇಳಿ
ಮುದುಡಿ ಕುಳಿತೆಯಾ.....

ಬಡವನಾದರೇನು ನಮ್ಮ
ಪ್ರೀತಿಗೆಲ್ಲಿ ಬಡತನ
ಧನಿಕನಲ್ಲಿ ಮಾತ್ರವೇನು
ಇರುವುದೀ ಗೆಳೆತನ.....

ಕರುಳು ಕಿತ್ತು ಕೊಟ್ಟರೂನು
ಅರ್ಥ ಮಾಡದಂಥ ನೀನು
ಪ್ರೀತಿ ಅಂದರೇನು ಒಂದು
ಚೂರು ಹೇಳ್ವೆಯಾ.....

Nagaraj Mudool Rock'S

- Nagaraj Mudool

05 Dec 2016, 12:41 am

ಮಿಡಿದ ಹ್ರದಯ

ಸ್ನೇಹವೆಂದು ಪರಿಚಿತನಾದೆ
ಪ್ರೀತಿಯೆಂದು ಸನಿಹವಾದೆ,
ಮನಸಿನಲ್ಲಿರುವ ಭಾವನೆ
ಹೇಳಲಾಗದೆ , ಬಚ್ಚಿಡಲು
ಆಗದೆ ಹೃದಯ ವಿಲ್ಲವಿಲ್ಲ
ಅಂತ ಗೋಳಾಡುತಿದೇ
ನೀ ನನಗಾಗಿ ಕಾಯದ್ದಿಯರು
ನಾ ನಿನಗಾಗಿ ಕಾಯುತಿರುವೆ
ಪ್ರೀತಿಯ ಚಂದ್ರಕೇ

- ಪ್ರದೀಪರಾಜ್

05 Dec 2016, 12:03 am

ಮೌನ

ಮದುವೆ ಮನೆಯಲ್ಲಿ ಎಷ್ಟು ಕಂಗೊಳಿಸುತ್ತೀರುವೇ
ನನ್ನ ಮನವ ಕಂಗೆಡಿಸಿ
ತುಸು ದೂರ ನಿಲ್ಲಲಾರೆ
ನಿನ್ನ ಬಳಿ ಅರೆಕ್ಷಣ
ಹರಸಲು ಬಂದಾ ನಾನು ಮೌನದ ಕಾರ್ಮೋಡವನ್ನು ಹೊತ್ತು
ಹೊರಟಿರುವೆ
ಕೇಳದಿರು ಎಲ್ಲಿಗೆ ?

ಎ ಜಿ ಶರಣ್

- ಎ ಜಿ ಶರಣ್

04 Dec 2016, 07:43 pm

ಲೈಫು ಇಷ್ಟೇನೇ

ಕಾಣದೇ ಇರೋದಕ್ಕೇನೇ ಮನಸು ಬಯಸೋದು,ಯಾಕೀ ಮನಸಿಗೆ ಯೋಚನೆಗಳು ಕಾಡುತ್ತವೆ ನೂರಾರು ನೆನಪುಗಳು ಮನಸಲ್ಲಿ,ನೆಮ್ಮದಿಯೇ ಇಲ್ಲವೇ ಈ ಜೀವನ.
ಲೈಫು ಇಷ್ಟೇನೇ?

- Mahesh Malkiwadeyar

04 Dec 2016, 04:25 pm

*ರೋಮಾಂಚನ*

ೱೱೱೱೱೱೱೱೱೱೱೱೱೱೱೱೱೱೱ
ಬಾಲಭಾನು ಕಿರಣ ಸೋಕಿ
ಇಳೆಯು ಪುಳಕಗೊಂಡು ತನ್ನ
ನಗೆಯನೆಲ್ಲ ಸುಮದಿ ತಂದು
ಮುಗಿಲನೊಮ್ಮೆ ನೋಡಲು,
ಇದನು ಕಂಡ ಹಕ್ಕಿಹಿಂಡು
ಹರ್ಷಗೊಂಡು ಗಗನಕೆರಗಿ
ಚಿಲಿಪಿಲಿಯುಲಿ ಮಾಡಲು,
ದೂರದ ಮಾಮರದೊಳಗಣ
ಕೋಗಿಲೆ ತಾ ಹಾಡುತಿರಲು,
ಚಂಗನೆಂದು ಜಿಗಿದ ಕರುವು
ಅಂಬಾ ಎಂದೆನ್ನುತಿರಲು,
ಅಪರೂಪಕೆ ಬೇಗನೆದ್ದ
ಮಲ್ಲಿಭಾಗವತನಿವನಿಗೆ
ರೋಮಾಂಚನವಾಯಿತು,
ಕವನವೊಂದು ಮಿಂಚಿತು.
ೱೱೱೱೱೱೱೱೱೱೱೱೱೱೱೱೱೱೱ
✍ಮಲ್ಲಿಭಾಗವತ✍

- ಮಲ್ಲಿಭಾಗವತ್ ಗುಡಿಬಂಡೆ

03 Dec 2016, 08:45 pm