Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಒಲವು

ತಿಳಿಗೊಳಂ
ಮೀನಿರ್ಪ ಬಾನು..!
ಒಳಸುಳಿಯಿಂ
ನೀನಿರ್ಪ ನಾನು.!!!

- ಸಿಹಿಗಲ್ ಪ್ರಶಾಂತ

09 Dec 2016, 08:44 am

ಹರಕೆ

ದಿನದ ಕೊನೆಗೀವೆ
ನೀನಿತ್ತ ಖುಷಿ ನಿನಗೆ
ಹಂಚು ಅದನೀನು
ಅದರಗತ್ಯವಿರುವವಗೆ

ಮರಳಿಸೆನು ದುಃಖ
ಬೇಗುದಿ ಬೇಸರವ ಮರಳಿ
ಕೊನೆಯಾಗಲದರ
ಮರುಕಳಿಪ ಸರಪಳಿ

- ಗುರುಮೂರ್ತಿ ಬಾಲಚಂದ್ರ ಮೆಹೆಂದಳೆ

09 Dec 2016, 04:11 am

ಜಾರುವ ಕಾಲ

ಅಪ್ಪುವಮೊದಲೇ
ಮುಪ್ಪಡರಿ
ಮೌನ ಬಂಗಾರವಾಗಿ
ಮಾತು ಬೆಳ್ಳಿಯಾಗಿ
ಸಿಂಗಾರವೆಲ್ಲ
ಸಂತಾನವಾಗಿ
ಕಾಲನ ಕುಚೋದ್ಯದ
ವಸ್ತುವಾಗಿತ್ತೋ
ನವ ಯೌವ್ವನ

- ಗುರುಮೂರ್ತಿ ಬಾಲಚಂದ್ರ ಮೆಹೆಂದಳೆ

09 Dec 2016, 04:04 am

-ಅಗಣಿತನ ಗಣಿತ-

ಎಷ್ಟೊಂದು ಕರಾರುವಾಕ್ಕು
ಗಣಿತವೋ ಭೂಭ್ರಮಣೆಯೋ
ಪಂಚಾಂಗದ ಸಮಯಕ್ಕೇ ಸೂರ್ಯೋದಯ

ಗ್ರಹಣಗಳೂ ಮಾತುತಪ್ಪವು
ಯಾಕೆಂದರೆ ಅಲ್ಲಿ ಸಾಲವಿಲ್ಲ
ಬಡ್ಡಿಯಿಲ್ಲ ಆದರೂ ಶ್ಯೂರಿಟಿ ಖಂಡಿತವಿದೆ

ಯಾರಕಡೆಇದೆ ಲೆಡ್ಜರುಗಳು
ಸಾಂಕೇತಿಕವಾಗಿ ಚಿತ್ರಗುಪ್ತ
ಆದರೆ ರಾಮನದೋ ಕೃಷ್ಣನದೋ ಲೆಕ್ಕ?

ಆಗಿತ್ತೇ ಸೂಪರ್ ಕಂಪ್ಯೂಟ್ರು
ಆದ್ರೆ ಖರೇ ಕರೆಂಟೆಲ್ಲಿತ್ತೋ
ಎಷ್ಟೊಂದು ಕರಾರುವಾಕ್ಕು ಅಗಣಿತಂದು

- ಗುರುಮೂರ್ತಿ ಬಾಲಚಂದ್ರ ಮೆಹೆಂದಳೆ

08 Dec 2016, 10:52 pm

ಚೇತನ

ಆತ್ಮವಂತರ್ಗತವು
ಕೋಶ ಕೋಶಗಳಲ್ಲು
ಅಣು ರೇಣು ತೃಣ ಕಾಷ್ಟ
ಪರಿಪೂರ್ಣವು

ಜೀವ ನಿರ್ಜೀವದಲು
ಭವಭಾವರೂಪದೊಲು
ಅವಿಭಾಜ್ಯವಾಗಿತಾ
ಪ್ರಕಟಗೊಂಡಿಹುದು

ಕಂಡರೂ ತೋರ್ಗೊಡದೆ
ತೋರಿದರು ತಿಳಿಯದೇ
ಅರಿವಿನಾಳದೆ ಅವಿತ
ಅನುಭೂತಿಯಹುದು

- ಗುರುಮೂರ್ತಿ ಬಾಲಚಂದ್ರ ಮೆಹೆಂದಳೆ

08 Dec 2016, 10:50 pm

ಕನಸಲ್ಲು ಕಾಣಬಲ್ಲೆ ನಿನ್ನ ಹೆ

ಇಂದು
ನೀ ನನ್ನ
ಅಗಲಿ ಹೋದರೂ..
ನಿನ್ನ
ನೆನಪುಗಳಿಂದ
ಮಾಸಿ ಹೋದರೂ..
ಎಂದಾದರೂ
ನಾ ನಿನ್ನ
ನೆನಪುಗಳಲ್ಲಿ
ಮೂಡಿದರೆ
ಹುಡುಕದಿರು ನೀನನ್ನ..
ಮತ್ತೆಲ್ಲಿಯೂ..
ನಾನಿನ್ನ
ಕಣ್ಣಲ್ಲೇ ಇರುವೆ;
ಒಂದು ಹನಿ ಕಣ್ಣೀರಾಗಿ…!
ನೊಂದ ಜೀವ

- Mahesh Preethu

08 Dec 2016, 07:54 pm

ನನ್ನ ಮನಸಿನ ಮಾತು

ಹೇ...ಗೆಳತಿ...ಹೇಗಿದ್ದೀಯಾ...?
ಎಷ್ಟೊಂದು ದಿನ ಆಯ್ತು ನಿನ್ನನ್ನ ನೋಡಿ....? ಎಲ್ಲಿದ್ದೀಯ....? ಏನು ಮಾಡ್ತಿದ್ದೀಯಾ...?
ನಿನಗೆ ಹೀಗೆಲ್ಲ ನಾನು ಪ್ರಶ್ನೆ ಕೇಳಿ...ನಿನ್ನ ಉತ್ತರ ಕೇಳಿ....ನನಗೆ ತುಂಬಾ ಸಮಾಧಾನ ಆಯ್ತು...!
ನನ್ನ ಮನಸ್ಸಲ್ಲಿ ಆದ ಸಮಾಧಾನ ಸಂತೋಷ ...
ನಿನ್ನೆದುರಿಗೆ ವ್ಯಕ್ತಪಡಿಸೋದು...? ಹೆಗೇ...
ಎಷ್ಟು ಕಷ್ಟ ಅಂತ ನಿನಗೂ ಗೊತ್ತಾಗಬಹುದು ಅಂದ್ಕೋತೀನಿ...!!
ನಮ್ಮ ಹಿಂದಿನ ಸವಿ....ಪ್ರೀತೀನ ಯಾವತ್ತೂ ನೆನಪು ಮಾಡ್ಕೋಬೇಡ...!!
ಅವತ್ತು ಸವಿಯಾಗಿದ್ದ ....ಪ್ರೀತಿ ಇಂದಿಗೂ ನನಗೆ ಸವಿಯೇ...!!
ಆದರೆ ಅದೆ ಸಮಾಜಕ್ಕೆ ಹುಳಿಯ ವಾಸನೆ ಬರುತ್ತೆ....!!
ಅದು ಅವರ ಮೂಗಿನ ನೇರದ ನ್ಯಾಯಕ್ಕೆ ಅರ್ಥ ಆಗಲ್ಲ...!! ಹೋಗಲಿ ಬಿಡು..ಗೆಳತಿ...!!
ನೀನು ನನಗಿಂತ ಚೆನ್ನಾಗಿ ಬದುಕು ಕಟ್ಟಿಕೊಂಡದ್ದು ನಿಜವಾಗಿಯೂ ಒಂದು ಸಾಹಸವೇ ಹೌದು...!!
ಇನ್ನು ಏನು ಹೇಳೋಕು ಮನಸ್ಸು ತಡವರಿಸುತ್ತಿದೆ...ತೊದಲುತ್ತಿದೆ...!!
ನೀನು ಚೆನ್ನಾಗಿದ್ದೀಯಾ ಅನ್ನೋ ಒಂದು ಸಿಹಿ ಸತ್ಯ ಸಾಕು....!!
ನಾವೇನು ಪ್ರೀತಿಗಾಗಿ ತಾಜ್ ಮಹಲ್ ಕಟ್ಟಬೇಕಾಗಿರಲಿಲ್ಲ...ನಮ್ಮ ಬದುಕು ಕಟ್ಟಿಕೊಂಡರೆ ಸಾಕಿತ್ತು..!!
ಈ... ದಿನ ನಿನ್ನ ಬದುಕು ಹಸನಾಗಿದೆ....ಪರವಾಗಿಲ್ಲ...!!
ಸಾವಿನ ಹಾದಿಯಲಿ ಉಸಿರು ಹುಡುಕುವವನು ನಾನು...!!
ನಿನ್ನ ಬದುಕು ...ಹೀಗೆ...ಸುಂದರವಾಗಿರಲೆಂದೆ ನನ್ನ ಹಾರೈಕೆ....!!

- Mahesh Preethu

08 Dec 2016, 07:40 pm

ಹೊರಟೆ....

ಹೊರಟೆ ಹೊರ ಹೋಗುವುದಕಲ್ಲ
ಹೊಳಗಿನ ಹುಡುಕಾಟಕ್ಕೆ.

ಹೊರಟೆ ಕಂಡಡಿಯುವುದಕಲ್ಲ
ಕಂಡಿದ್ದು ಕಂಡುಕೊಳಲು.

ಹೊರಟೆ ಕಾಸನ್ನು ಕಾಣುವುದಕಲ್ಲ
ಕಾಸಿನ ಬದಲು ಕೆಲಸಕ್ಕೆ.

ಹೊರಟೆ ಒನವಾಸಕಲ್ಲ
ಒನದ ಬನವ ಕಾಣಲು.

ಹೊರಟೆ ಹಸಿದವರ ಕಾಣುವುದಕಲ್ಲ
ಹಸಿವಿಗೆ ಅನ್ನನಿಡಲು.

ಹೊರಟೆ ನೊಂದವರ ನೋಡವುದಕಲ್ಲ
ನೋವನ್ನು ನಿವಾರಿಸಲು.

ಹೊರಟೆ ಪ್ರಸಿದ್ಧಿ ಪಡೆಯುವುದಕಲ್ಲ
ಪ್ರಸಿದ್ಧಿಯ ಹಿಂದಿನ ಶ್ರಮ ಓಡುವುದಕ್ಕೆ.

ಹೊರಟೆ ಸಾವು ನೋಡುವುದಕಲ್ಲ
ಸಾವಿನ ಸತ್ಯ ನೋಡುವುದಕ್ಕೆ.

-- ಈಶ,ಎಂ.ಸಿ.ಹಳ್ಳಿ.

- ಈಶ

08 Dec 2016, 03:47 pm

ಮನಸಿನ ಮಾತು

ಈ ಜೀವನ ಪೂರ್ತಿ ನಾ ನಿನೊಂದಿಗಿರುವೆ
ತುಸು ಪ್ರೀತಿಯ ನೀ ನೀಡುವೆಯ ..........
ಕಡಲಾಳದ ಮುತ್ತಿನಂತೆ ನಾ ನಿನ್ನ ಜೋಪಾನ ಮಾಡುವೆ
ಈ ಹ್ರದಯದ ಗೂಡಿನಲ್ಲಿ ನೀ ಮುತ್ತಿನಂತಿರುವೆಯ......
ನನ್ನ ಈ ಸರ್ವಸ್ವವನೇ ನಾ ನಿನಗೆ ನೀಡುವೆ
ನೀ ನನ್ನಯ ಉಸಿರಾಗಿರುವೆಯ........
ಈ ಉಸಿರು ನಿಂತರೂ ನಾ ನಿನ್ನ ಪ್ರೀತಿಸುವೆ
ಈ ಹ್ರದಯಕೆ ವಡತಿ ನೀ ನಾಗುವೆಯ.....!!!!!
ಮಹೇಶ್

- Mahesh Preethu

08 Dec 2016, 01:24 pm

ಮೊದಲ ಕವಿತೆ

ಕವಿತೆ.. ಇದು ನನ್ನ ಮೊದಲ ಕವಿತೆ
ಬರೆಯಬೇಕೆಂದು ಮೂಲೆಲಿ ಕುಳಿತೆ..
ಅವರಿವರ ನೋಡಿ ಸ್ವಲ್ಪ ಸ್ವಲ್ಪ ಕಲಿತೆ..
ಈ ಕವನವನ್ನ ಅವಳಿಗೆ ಹೇಳುವುದು ಒಳಿತೆ?


ಹೆಂಗೊ ತಲುಪಿಸಿದೆ ಯಾರಿಗೂ ಕಾಣದಂತೆ!
ಅವಳ ಉತ್ತರಕ್ಕೆ ಕಾದು ಕುಂತೆ!
ಅಯ್ಯೊ! ಪತ್ರದಲ್ಲಿ ಹೆಸರು ಬರೆಯೋದೆ ಮರೆತೆ!
ಮೊದಲ ಸಂದೇಶ ರವಾನೆಯಲ್ಲೆ ಸೋತೆ!

ಸಮಯ ಕೊಟ್ಟು ಓದಿದವರಿಗೆ ನನ್ನ ಕೃತಜ್ಞತೆ!

#ಪವನ್ಅರಸ್

- ಪವನ್ ಅರಸ್

08 Dec 2016, 12:10 pm