Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೆನಪಿನ ಅಲೆ..

ಮುಗ್ದ ಮನಸ್ಸಿನ ಮೌನ ಭಾವಕೆ
ಮಾತಿನ ಮುಳ್ಳು ಚುಚ್ಚಿ ...
ನೋಯಿಸಿದ ಪಾಪಿ ನಾನು..!
ಮನದ ಗಾಯಕ್ಕೆ ಮುಲಾಮು ಅಚ್ಚಿ ಸಂತೈಸಿದ ಪುಣ್ಯವಂತೆ ನೀನು.
ನೋವುಗಳ ನುಂಗಿ...
ನಲಿವುಗಳ ಹಂಚುವ ಗೆಳತಿ...
ನಿನಗೆ ನೀನೆ ಸಾಟಿ ..

ಹೇ ಮುಗ್ಧ ಹುಡುಗಿಯೇ ಕ್ಷಮಿಸಿ ಬಿಡು ನನ್ನ

- Mahesh Preethu

09 Dec 2016, 11:45 am

ಕೀಲಿ ಕೈ....

ಕೀಲಿ ಕೈ...

ನಿನಗೆ ಅಮೂಲ್ಯವಾದ ವಸ್ತವೊಂದನ್ನು
ಕಾಣಿಕೆಯಾಗಿ ನೀಡುತ್ತಿದ್ದೇನೆ ಗೆಳೆಯ....
ಚಿನ್ನ ,ಬೆಳ್ಳಿ,ಮುತ್ತು, ವಜ್ರದಿಂದಲು ಸಿಂಗರಿಸಿಲ್ಲ....

ನೀನು ಕಳೆದುಕೊಂಡರೆ ಸಿಗುವ
ವಸ್ತುವಲ್ಲ ಇದು
ನನ್ನ ಬಳಿಯು ಇರುವುದು ಒಂದೇ....

ನನ್ನ ಆಸೆ, ಕನಸು, ಕೋಪ, ದುಃಖ, ತುಮುಲ ಎಲ್ಲವನ್ನೂ
ನೀನು ಅರಿಯಬಹುದು...

ಎಲ್ಲ ವಸ್ತುಗಳಿಗಿಂತ ಅಮೂಲ್ಯವಾದದ್ದು
ಇದು ಇರುವ ನನ್ನ ಪುಟ್ಟ ಹೃದಯದ ಬೀಗದ ಕೈ
ಕ್ಷೇಮದಿಂದ ಕಾಪಾಡು ಗೆಳೆಯ....
ನಿಮ್ಮ
ಪ್ರಭ ಸಿರಿ...

- prabha siri

09 Dec 2016, 11:34 am

ವಿಪರ್ಯಾಸ

ನನ್ನಾಕೆಯ
ಹೆಸರು
ಸರಳ
ಆದರೆ
ಖರ್ಚು
ಧಾರಾಳ!

- Manjunath Swamy KM

09 Dec 2016, 11:30 am

ಮನದಾಳ

ನಾ ಹೇಳಲಾಗದ
ಎಷ್ಟೋ ಮಾತುಗಳು...
ಹೇಳಬಲ್ಲವು ಕಸದಬುಟ್ಟಿಯಲಿ
ಹರಿದು ಬಿಸಾಕಿರುವ ಕಾಗದಗಳು...
- ಸ.Kha.

- ಸ.Kha.

09 Dec 2016, 11:17 am

ಕನಸು

ನಸುಕಿನ ಕನಸಿಗೆ ಸತ್ಯದ ಎತ್ತರ
ನಿನ್ನಯ ಕನಸಿಗೆ ನೀನೇ ಉತ್ತರ
ನೀನಾಗದಿರು ನಿನ್ನಯ ಕನಸಿಗೆ ನಸುಕು
ನಸುಕನ್ನು ಅಳಿಸಿ ಉಜ್ವಲಿಸಲಿ ಬೆಳಕು..

- ಅನಾಮಿಕ

09 Dec 2016, 11:12 am

ಹನಿಗವನ

ಬಾನಂಗಳದಲ್ಲಿ ಹಾರುತ್ತಿದೆ ಹಕ್ಕಿ
ಬಾನಂಗಳದಲ್ಲಿ ಹಾರುತ್ತಿದೆ ಹಕ್ಕಿ,
ಹಕ್ಕಿಯಲ್ಲ ಅದು ಚುಕ್ಕಿ
ಹಾರುತ್ತಿದೆ ಮೈ ಮರೆತು ನಕ್ಕಿ.

- ಅಚ್ಚು

09 Dec 2016, 10:52 am

ನಾನಾಗುವಾಸೆ

ಊರ ಕೆರೆಯಿಂದ ನೀರ ತರುವ
ನೀರೆ ನೀನಾದರೆ
ನಿನ್ನ ಬೆವರ ಒರೆಸುವ ಸೀರೆ
ನಾನಾಗುವಾಸೆ
ಆ ವೈಯ್ಯಾರದ ನಡುವಿನ ಮೇಲಿನ ಬಿಂದಿಗೆ
ನಾನಾಗುವಾಸೆ
ಅದರೊಳಗಿನ ನೀರ ಹನಿ
ನಾನಾಗುವಾಸೆ
ಸೊಂಟದಿಂದ ಇಳಿದ ನೀರ ಬಿಂದು
ಅಲ್ಲಲ್ಲಿ ಜಾರಿ ಹಾದಿಯಲಿ ಬಿದ್ದಾಗ
ಅವರ ಮೇಲೂ ನಿನ್ನ ಪಾದ ಸ್ವರ್ಶ
ನೀ ನಡೆವ ಹಾದಿಯ ದೂಳು
ನಾನಾಗುವಾಸೆ

ಪ್ರಭಾಕರ್ ಎಂ.ಎಲ್.
ಮೈಸೂರು

- ಪ್ರಭಾಕರ್ ಎಂ.ಎಲ್.

09 Dec 2016, 10:50 am

ಕಂದ ಮತ್ತು ಚಂದ್ರ

ಬಾನಿಗೊಂದು ಏಣಿ ಹಚ್ಚಿ

ಚಂದ್ರನನ್ನೆ ಮುಟ್ಟಿದೆ!

ಸುತ್ತ ಮುತ್ತ ಆಡುತಿರುವ

ಚುಕ್ಕೆ ಬಳಗ ತಟ್ಟಿದೆ  !


ಬಿಸಿಲ ಧಗೆಗೆ ಬೆಂದ ಧರೆಗೆ

ತಂಪು ತರಲು ಕೇಳಿದೆ  !

" ನಿನ್ನ ಹಿಂದೆ ಬಂದು ಬಿಡುವೆ

ಹೊರಡು  ತಿರುಗಿ ನೋಡದೆ  !


- ಎಂದ ಚಂದ್ರ ಬರಲೆ ಇಲ್ಲ

ಎಷ್ಟು ಕಾದ್ರು ಭೂಮಿಗೆ  !

ಮತ್ತೆ ಏಣಿ ಹತ್ತಿ ಹೊರಟೆ

ಕರೆದು ತರಲು ಲಗುಬಗೆ !


ಕಾಲು ಜಾರಿ ಆಯ ತಪ್ಪಿ  

ಕೆಳಗೆ ನಾನು ಬೀಳಲು !

ಏಕೆ ಚೀರಿಕೊಂಡೆ      ಎಂದು

ಅಮ್ಮ ಬಂದು ಕೇಳಲು !


ಕನಸು ಕಂಡೆನೆಂದು ಹೇಳೆ

ಅಪ್ಪಿ ಮುತ್ತು  ಕೊಟ್ಟಳು !

ಎಲ್ಲರೆದರು ಹೇಳಿ ಹೇಳಿ

ಹಾಸ್ಯ ಮಾಡಿ ನಕ್ಕಳು!

- ಚಂದ್ರಗೌಡ ಕುಲಕರ್ಣಿ

09 Dec 2016, 09:52 am

ಕುಳ್ಳ ಮೂರ್ತಿ

ಡೊಳ್ಳು ಹೊಟ್ಟೆ ಕುಳ್ಳ ಮೂರ್ತಿ

ಬಂದ ನೋಡಿರೊ !

ಒಂಟಿ ಕೋರೆ  ಆನೆ ಮೊಗದ

ಚಂದ ನೋಡಿರೊ!


ಹರಿದ ಹೊಟ್ಟೆಗಾವು ಬಿಗಿದ

ಗಂಟು ನೋಡಿರೊ!

ಇಲಿಯ ಹತ್ತಿ ಸಾಗುತಿರುವ

ಕುಂಟು ನೋಡಿರೊ!


ಗೌರಿ ಮೈಯ ಬೆವರ ಮಗನ

ಸಿರಿಯ ನೋಡಿರೊ!

ದುಡಿದು ತಿಂಬ ರೈತ ಜನರ

ಸ್ವರವ ಕೇಳಿರೊ!


ಬಿತ್ತಿ ಬೆಳೆದ ಮೊದಲ ಜೀವಿ

ಚಲುವ ತಿಳಿಯಿರೊ !

ಸಕಲ ವಿದ್ಯೆಗಾದಿ ಪುರುಷ

ಒಲವ ಗಳಿಸಿರೊ!


ಮಣ್ಣ ಗುಣಕೆ ಬಣ್ಣ ಬಳೆದು

ಕಾಡಬೇಡಿರೊ!

ಕರಕಿ ಪತ್ರಿ ಕಡುಬು ಪ್ರಿಯನ

ಜಾಡನರಿಯಿರೊ!


ಗಣಕ ಮೀರೊ ವೇಗದೊಡೆಯ

ಗಣಪ ನೋಡಿರೊ!

ಬೆಡಗ ರೂಪ ತೊಟ್ಟುಕೊಂಡ

ಟೊಣಪ ಕಾಣಿರೊ !


ಚಂದ್ರಗೌಡ ಕುಲಕರ್ಣಿ

- ಚಂದ್ರಗೌಡ ಕುಲಕರ್ಣಿ

09 Dec 2016, 09:50 am

ಮುಟ್ಟಲ್ಲಿ ಮಲಿನಗೋಂಡು.

ಮುಟ್ಟಾದಳೆಂದು ಹಟ್ಟಿಯ ಆಚೆ ಇರಿಸಿದರಿ
ಮುಟ್ಟು ನೈಸರ್ಗಿಕ ನಿಯಮವೆಂಬದು ಮರೆತು
ಗುಟ್ಟಾಗಿ ನೆಡೆಯುವ ನಿಯಮಕೆ ಸೂತಕದ ಛಾಯವೇತಕೆ

ಮುಟ್ಟಲ್ಲಿ ಮಲಿನಗೋಂಡು ಹುಟ್ಟಿ ಬಂದರು
ಮುಟ್ಟು ಮುಟ್ಟು ಎಂದು ನಟ್ಟು ನಡವಲ್ಲಿ ಇಟ್ಟರಿ
ಸಂಪನ್ನಳಾದವಳನ್ನು ಮೆಟ್ಟಿ ನಿಲ್ಲಲು ಸಾಧ್ಯವೆ

ಓ ಅಜ್ಜಿ ಅಮ್ಮನವರೆ ನೀವು ಮುಟ್ಟಾದರಲ್ಲ
ಅದೆ ಕಜ್ಜಿಯ ತುರಿಕೆ ನಿನ್ನ ಕರಳು ಕುಡಿಗಳಿಗೇತಕೆ
ಓ ನಿಮ್ಮ ಅಂದಿನ ನೋವುಗಳಿಗೆ ಪ್ರತಿಕಾರವೆ?

ಅಕ್ಕ ಮುಟ್ಟಾದಳು ತಂಗಿ ಮುಟ್ಟಾದಳು
ನಕ್ಕು ನಗಾಡುತ್ತಿದ್ದಿದ್ದಾರೆ ನನ್ನವರು
ನನ್ನ ಹಣೆಗೆ ಹಚ್ಚಿದ ಮುಟ್ಟಿನ ತಿಲಕವ ಕಂಡೂ

ಮುಟ್ಟು ಎಂದರೆಯೇ ಅಪ್ಪಿಕೋ ಎಂದರ್ಥವಲ್ಲವೆ
ಗುಟ್ಟಾಗಿ ಏಕೆ ಅದನ್ನು ಮರೆಮಾಚುತಿರುವೆ


ಕರಿಯ ನಿಷಾದ.

- ka

09 Dec 2016, 09:13 am