Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಜೋಗದ ವೈಭೋಗವೋಂದು
ಜಲದ ಸೋಬಗಿನ ಸುಗ್ಗಿ
ಮನದುಂಬಿ ನೋಡಿ
ಸವಿದಂತೆ ಆಗುವದು
ಸಿಹಿ ಪಾಯಸ ಹುಗ್ಗಿ
ಜೋಗದಾಳಕ್ಕೆ ಇಳಿಯುವಾಗ
ಏನೋ ಬರಸೇಳೆತ
ಏರುವಾಗ ಸುರಿವ
ಮಳೆಯಲ್ಲೂ ಮೈ ಬೆವತ
ಜೋಗದೈಸಿರಿಯಲ್ಲಿ
ಎಲ್ಲ ನೂವು ಮರೆತ
ಹತ್ತಿನಿಂತೆ ಜೋಗದ
ಮೇರು ಪರ್ವತ
ಜೋಗದ ಗುಂಡಿಗೆ
ಆಕಾಶದಿಂದ ಸುರಿಯುತಿಹದು
ಮಲ್ಲಿಗೆ ಮಾಲೆಯ ದಂಡೆ
ಬಾನಿಂದ ಭೂಮಿಗೆ
ಜಾರುತಿದೆ ಚಂದ್ರನ ಸೆರಗು
ಜೋಗದ ಝರಿಯಾಗಿ
ನಕ್ಷತ್ರಗಳೆಲ್ಲ ಸೇರಿ
ಸೂರ್ಯನ ರಾಯಭಾರಿಯಾಗಿ
ಮಿನುಗುತಿವೆ ನಾಲ್ಕು ಜರಿ
ಕಾಮಧೇನು ಕ್ಷೀರಧಾರೆಯಾಗಿ
ಹರಿಯುತಿಹಳು ಶಿವನ ಜಡೆಯಿಂದ
ಧರೆಗೆ ಜೋಗದ ಜಲಧಾರೆಯಾಗಿ
ಕಾಮಧೇನುವಿನ ಕ್ಷೀರಧಾರೆ
ಹರಿಯುತಿಹುದು ಶಿವನ ಜಡೆಯಿಂದ
ಜೋಗದ ಜಲಧಾರೆಯಾಗಿ ಧರೆಗೆ
ಮಹೇಶ ಕಾಳಿ
- ಮಹೇಶ ಕಾಳಿ
09 Dec 2016, 08:49 pm
ಹೇಗೆ ತಿಳಿಯಲಿ ಓ ನನ್ನ ಧರೆ
ನಾ ಮೆಚ್ಚಿದೆ ನಿನ್ನ ಮನಸಾರೆ
ನಿನ್ನ ನೆಡೆ ನುಡಿ ಕಂಡು ಕಣ್ಣಾರೆ
ಹೇಗೆ ಮರೆಯಲಿ ಓ ನನ್ನ ತಾರೆ
-ಅಪ್ಪಣ್ಣಗೌಡ ಇಡಕನಹಳ್ಳಿ
- ಅಪ್ಪಣ್ಣಗೌಡ.ಐ.ಜೆ.
09 Dec 2016, 08:46 pm
ಪದಚೆಂದವಿದೆಎಂದು
ಬಳಸಬಾರದು ಎಂದು
ಬಳಸಬಾರದ ಕಡೆಗೆಲ್ಲ.
ರಮಣೀಯ ಪದದ ಸೊಗಸಿಗೆ
ಮನಸೋತ ಲೇಖಕನೊಬ್ಬ
ಅದ ಬಳಸದ ಕಡೆಗಳಿಲ್ಲ.
ಒಂದೊಮ್ಮೆ ಬರೆದನು
ಸಮೂಹ ಸಾವಿನ ಸಂತಾಪಕ್ಕೂ,
ಆ ಸಾವು ರುದ್ರರಮಣಿಯವೆಂದು.
ಅದ ಕಂಡವರು ಉಗಿದರು,
ಅವನಿಗೆ ಸಾವೂ ರಮಣೀಯವೇ ಎಂದು.
✍
- ಶೈಲಸುತೆ
09 Dec 2016, 08:21 pm
ಕಿರುಹರೆಯದ ಹೊತ್ತಿನಲಿ,
ಹುಡುಗಾಟದ ಮತ್ತಿನಲಿ,
ನೀ ಬರಿ ನೆನಪಾಗಿ ಹೋದದ್ದು
ಸರಿಯೇನೋ. . ಹುಡುಗ.
ಏಲ್ಲಾ ಹೊರಟಿದ್ದರೇನಾಯ್ತ?
ನಿನವ್ವ ಬೇಡ ಅಂದದಕ್ಕೂ
ಕಾರಣವಿತ್ತು.
ತಿರುಗಾಟ ಎಂದರೇನೆ
ವಾಂತಿ ಮಾಡುತ್ತಿದ್ದ ನಿನಗೆ,
ಪ್ರವಾಸ ಸುತ್ತುವುದು
ಬಲು ತ್ರಾಸಾಗುತ್ತಿತ್ತು.
ನೀ ಇನ್ನಷ್ಟೂ ಕಾಟ ಕೊಟ್ಟಿದ್ದರವರು ಒಪ್ಪುತ್ತಿದ್ದರೇನೋ. . ?
ನೀ ಅವರ ಪ್ರೀತಿಯ ಏಕೈಕ ಕೂಸಲ್ಲವೇನೋ.. ?
ಕೊಟ್ಟವರು ಯಾರು
ನಿನಗಾ ಕೆಟ್ಟ ಸಲಹೆ. .?
ಬೇಕಿತ್ತೇ ನಿನಗದು
ಹನ್ನೇರಡರ ವಯಸಿನೊಳಗೆ. .?
ಅಮ್ಮ ಬರುವ ವೇಳೆಗೆ
ಸಾಯುವಾಟದ ನಾಟಕವಾಡಲು ಹೋಗಿ.
ತಡವಾಗಿ ಬಂದಮ್ಮನ
ಮಡಿಲು ಸೇರಿದೆಯಾ ಶವವಾಗಿ..
ಉರುಳು ಹಾಕದೆ ಕುತ್ತಿಗೆಗೆ
ಸುತ್ತಿಕೊಂಡ ಸೀರೆ
ಪ್ರಾಣ ತೆಗೆಯಿತೆಂದಾರದು
ವಿಧಿಯ ಕರೆ.
ಅಡ್ಡ ಕಂಬಕ್ಕೂ ಸಿರೇಯ
ಗಂಟು ಹಾಕಿರಲಿಲ್ಲ.
ನೀ ಹಾರಿದಾಕ್ಷಣ ಜಾರಿ
ಬರುವುದೆಂಬ ಉಪಾಯವಿತ್ತಲ್ಲ..
ಆದರೆ ನಿನ್ನಾಯಸ್ಸು
ಮುಗಿದಿರಬೇಕು.. .
ಅದಕೆಂದೆ ಆ ಹತ್ತಿಯ ಸೀರೆ
ಜಾರದೆಯೇ ಕುಳಿತಿರಬೇಕು..
ಬೇಕಿತ್ತೇ ನಿನಗೀ
ಸಾವಿನೊಂದಿಗಿನಾಟ
ಬದುಕಿಸಿಕೋ ಅಮ್ಮ
ಎಂಬ ಕೊನೆಯ ಅಳಲಾಟ.
ಶಾಲೆಯೇ ಪ್ರವಾಸವ ರದ್ದು
ಮಾಡಿದೆ ಕಂದ.
ಮತ್ತೆದ್ದು ಬಾನೀನು
ಆಶಿಕ ನೆಂಬ ಮುದ್ದು ಮುಖದಿಂದ. .. .
✍
- ಶೈಲಸುತೆ
09 Dec 2016, 08:10 pm
ಯಾವ್ಯಾವುದೋ ವೇಷ ನಟನ ಕಂಡಿಹೆಯೇ?
ಜೀವ ನಿರ್ಜೀವದಲು ಸಂಚರರಿಪನವನೆ
ಬಂದಿಹನೆ ಅನುಭವಕೆ ಕಾಣದವನು
ಒಂದೆನಾಟಕ, ಪಾತ್ರದವನೊಬ್ಬನೇ ಇರಲು ಜಗದಲ್ಲಿ
ವೇಷಕಳಚುವ ಮೊದಲೆ ಅರಿಯಬಹುದೇ?
- ಗುರುಮೂರ್ತಿ ಬಾಲಚಂದ್ರ ಮೆಹೆಂದಳೆ
09 Dec 2016, 07:49 pm
ದೇಶವನ್ನು ಕಾಯುತ್ತಾರೆ ನಮ್ಮ ಯೋಧರು
ವೀರಮರಣ ಹೊಂದುತ್ತಾರೆ ಮಹಾವೀರರು
ಚಳಿ,ಗಾಳಿ ಎಂಬುದನ್ನು ನೋಡದೆ ಕಾಯುತಾರೆ ದೇಶವ
ಕೊಡಬೇಕು ಅವರಿಗೆ ನಾವು ಗೌರವ.
- Krupa
09 Dec 2016, 07:46 pm
ನಡೆದು ಬಾ ಕರೆದೊಯ್ಯುವೆ
ನಿನ್ನ ನಾ ಬಾನಂಗಳದ ರಮ್ಯ ತಾಣಕೆ
ಇಲ್ಲಿ ನೋವಿಲ್ಲ ,ಅಳುವಿಲ್ಲ
ಪ್ರೀತಿಯ ತಂಗಾಳಿ ಆಡುವುದು
ನಿನ್ನೊಡನೆ..
ಬಾ ಬಾನಂಗಳದ ಈ ರಮ್ಯ ತಾಣಕೆ..
ನೇಸರನ ಮೊದಲ ಕಿರಣಕೆ
ಉಲ್ಲಾಸದಿ ಬೆಳಗು ಅರಳುವುದು
ಶಶಿಯ ತಂಪು ಕರಗಳಲಿ
ಗಾಢ ನಿಶೆ ಹಾಗೆ ಕರಗುವಳು..
ಬಿಸಿಲೊಮ್ಮೆ ಸಿಟ್ಟಾಗಿ
ನೆರಳೊಮ್ಮೆ ನಕ್ಕು
ಹೀಗೆ ಇಲ್ಲಿ ನಿಲ್ಲದು ಭಾವಗಳು
ಇಲ್ಲಿ ನೋವಿಲ್ಲ ,ಅಳುವಿಲ್ಲ
ಪ್ರೀತಿಯ ತಂಗಾಳಿ ಆಡುವುದು
ನಿನ್ನೊಡನೆ..
ಬಾ ಬಾನಂಗಳದ ಈ ರಮ್ಯ ತಾಣಕೆ..
ದೂರ ದಿಗಂತದ ನೋಟಕೆ
ಸ್ವಚ್ಛ ನೀಲ ಕಣ್ ತಣಿಸುವುದು
ಅಲ್ಲಿ ರಂಗು ರಂಗಿನ ಹಕ್ಕಿಗಳು
ನೆಮ್ಮದಿಯ ಸಂದೇಶ ತರುತಿಹುದು
ಕನಸಲಿ ಕಂಡ ಒಲವು
ನನಸಾಗಿ ಮೂಡಿದ ಚೆಲುವು
ಸಂತಸದ ಸಂಜೆಯು ನಿರ್ಮಲವು
ಈ ನೈಜತೆ , ಸ್ವಪ್ನಲೋಕದ ಅನಾವರಣ
ಎಲ್ಲೆಲ್ಲೂ ಪ್ರೇಮಗಂಧದ ಪ್ರಸರಣ
ಇಲ್ಲಿ ಕಳೆದು ಹೋಗವ ನಾವು
ಸಂಕೋಚ ,ಭಯ ತೊರೆದು
ಎದಿರಿಲ್ಲ ,ತಡೆಇಲ್ಲ
ಇಲ್ಲಿ ಬೇರಾರಿಲ್ಲ
ಒಟ್ಟಾಗಿ ನಡೆವ
ಇರುವ ನಾವು ಹೀಗೆ...
ಇಲ್ಲಿ ನೋವಿಲ್ಲ ,ಅಳುವಿಲ್ಲ
ಪ್ರೀತಿಯ ತಂಗಾಳಿ ಆಡುವುದು
ನಿನ್ನೊಡನೆ..
ಬಾ ಬಾನಂಗಳದ ಈ ರಮ್ಯ ತಾಣಕೆ..
- Indushekar Chinivar
09 Dec 2016, 07:43 pm
ನನ್ನ ಮನ ಮಂದಿರದಲ್ಲಿ
ನಿಮ್ಮ ದೇ ರೂಪ
ಕಣ್ಣ ತುಂಬಾ ನಿಮ್ಮ ದೇ
ಪ್ರತಿ ಬಿಂಬ
ನನ್ನೊಳಗೆ ಆವರಿಸಿದೆ
ನಿಮ್ಮಂತರಂಗ
ಒಂದೇ ಒಂದು ಸ್ವಲ್ಪ
ಕಣ್ಣಲಿ ಕಣ್ಣು
ಬೆರೆಸಿ ನೋಡಿ
- kavita Rajesh
09 Dec 2016, 07:31 pm
ಯಾವ ಜನ್ಮದ ಋಣಾನುಬಂಧವೋ
ನೀ ನನ್ನ ಬಾಳಿನಲ್ಲಿ ಬಂದು
ಅತೀ ಆನಂದ ನೀಡಿದೆ
ಯಾವ ಜನ್ಮದ ಪಾಪ ಕರ್ಮವೋ
ನನ್ಮ ಮನಸ್ಸಿನಲ್ಲಿ ಎಂದೂ
ಮಾಯದ ಗಾಯ ಮಾಡಿದೆ.......
- Jayashri
09 Dec 2016, 06:30 pm
ನನಸಾಗದ ಕನಸಿನ ವ್ಯಾಮೋಹವ
ಹೇಳುವುದೇಗೆ
ಅದು ನನ್ನಲ್ಲೇ ಹುಟ್ಟಿ ನನ್ನಲ್ಲೇ
ಕೊನೆಯುಸಿರೆಳೆಯುವಾಗ...
...ಅನುಸರಸ್ವತಿ
- Anusha
09 Dec 2016, 05:33 pm