Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ ಅರಸ

ಕಾಶ್ಮೀರದ ಕಣಿವೆಯಿ೦ದ ಕನ್ಯಕುಮಾರಿಯವರೆಗು
ಉಡುಕಿದೆ ಬಡಗಿಯ ಯಾರು ಸಿಗಲೇ ಇಲ್ಲ
ಆದರಿಂದ ನನ್ನ ಮನಸಿನಲ್ಲೆ ಕೆತ್ತಿದ ಕುರ್ಚಿಯ
ಅಲ್ಲೆ ಬಂದು ನೆಲೆಸೊ ನನ್ ಅರಸ

- ನೈದಿಲೆ

09 Dec 2016, 11:04 pm

ಮಾಯಜಿಂಕೆ

ಬಯಸದೇ ಬಂದೆ ನೀ ನನ್ನ ಕಣ್ಣ ಮುಂದೆ
ಆಮಂತ್ರೀಸದೇ ಬಂದೇ ನೀ ನನ್ನ ಪ್ರೇಮದ ಗುಡಿಗೆ
ಬಿತ್ತಿದೆ ಒಲವಿನ ಬೀಜವ
ಪ್ರೇಮದ ಮುಂಗಾರು ಶುರುವಾಗುವ ಹೊತ್ತಿಗೆ
ಮರೆಯಾದೆ ಏಕೆ? ಇಂದು ನೀ
ಒಲವಿನ ಲತೆ ಹೂ ಬಿಡುವ ಮುಂಚೆ
ಹೇ ನನ್ನ ಮಾಯಜಿಂಕೆಯೇ

- ಕೃಷ್ಣ

09 Dec 2016, 10:28 pm

ನುಡಿ ಕನ್ನಡ ನಡೆ ಕನ್ನಡ

ಬರೆದುಬಿಡು ಕನ್ನಡ ನುಡಿ ಕವನವ
ತಿಳಿಸಿಬಿಡು ಕನ್ನಡ ತಾಯಿಗೆ ನಮನವ
ಸೆಳೆದುಬಿಡು ಕನ್ನಡ ಮಕ್ಕಳ ಮನವ
ಹೇಳಿಬಿಡು ಕನ್ನಡ ಮನದ ತವಕವ
-ಅಪ್ಪಣ್ಣಗೌಡ ಇಡಕನಹಳ್ಳಿ

- ಅಪ್ಪಣ್ಣಗೌಡ.ಐ.ಜೆ.

09 Dec 2016, 10:26 pm

ಕವನ

ಧಾರಾಳವಾಗಿ ಬಳಸಿದೆ ಧನ
ಕಟ್ಟಿಸಿರುವೆ ನಿನಗೊಂದು ಭವನ
ಅದರ ಮುಂದೊಂದು ಉದ್ಯಾನವನ
ಎಲ್ಲಿದೆ? ಅನ್ನಬೇಡ, ಇದು ಬರೀ ಕವನ.!!

- Raj

09 Dec 2016, 10:17 pm

ವಿರಹ ವೇದನೆ.......

ನಾ ಜೇನಾದರೆ,
ನೀ ಹಾಲಾಗಿ ಒಂದಾಗು
ನಾ ಹಾಲಾದರೆ,
ನೀ ಅದರಲಿ ನೀರಾಗಿ ಬೆರೆತು ಬಿಡು !
ಸಾಕು,
ಇನ್ನು ಏಕೆ ಈ ನಾಚಿಕೆ ?
ಕಾಡುತ್ತಿಲ್ಲವೇ ? ನಿನಗೂ,
ನನ್ನೊಂದಿಗೆ ಮಾತನಾಡುವ ಬಯಕೆ ?

ವಿರಹ ವೇದನೆಯಲ್ಲಿ
ದಿನಗಳೆಯುವುದು
ಕಷ್ಟವಾಗಿದೆ ಎನಗೆ
ಇನಿಯನಿಗಿಂತ
ಜಗದ ಕಟ್ಟುಪಾಡುಗಳೇ
ಹೆಚ್ಚಾಗಿವೆಯೇ ನಿನಗೆ ?
ಈ ಜಗವನ್ನೊಮ್ಮೆ
ಮರೆತು ಬಿಡು !
ನನ್ನೊಂದಿಗೆ ,
ನೀನೊಮ್ಮೆ ಮಾತನಾಡು

ಬಿರುಕುಬಿಟ್ಟ ನೆಲ
ಬಾಯ್ದೆರೆದು ನೊಡುವಂತೆ
ಮುಗಿಲೆಡೆಗೆ ,
ನಾ ಕಾದಿರುವೆ ಕುತುಹಲದಿ !
ನಿನ್ನ ಧ್ವನಿಗೆಳಿಸಿ
ಸಿಂಚನವ ಮೂಡಿಸು ನನ್ನೊಳಗೆ !

ಇನ್ನೂ ,
ಈ ನನ್ನ ವೇದನೆ
ಅರ್ಥವಾಗದೆ ಹೋದರೆ
ನಡೆ ನಿನ್ನ ಮನದಿಚ್ಛೆಯಂತೆ
ನಡೆ ನಿನ್ನ ಮನದಿಚ್ಛೆಯಂತೆ!!!
* * * * *
ಶಕೀಲ್ ಉಸ್ತಾದ್, ಹಟ್ಟಿ ಚಿನ್ನದ ಗಣಿ.

- ಶಕೀಲ್ ಉಸ್ತಾದ್

09 Dec 2016, 10:10 pm

ಹೃದಯದ ಅಲೆ

ಅಲೆ ಇಲ್ಲದ ನಿಂತ ನೀರಂತೆ ಮಂಕಾಗಿದೆ ಮನಸ್ಸು
ಕುರುಡು ಪ್ರೀತಿ ಹಿಂದೆ ಸಾಗಿ ಕಳೆದು ಹೋದ..
ಹೃದಯವ ಹುಡುಕದೆ ಬೀಡುವುದೆ ಲೇಸು

ಜೊತೆಯಾಗಿ ಕಳೆದ ಕ್ಷಣಗಳು ಉಳಿಯದೆ..
ಮಾಸಿ ಹೋಯಿತಿಂದು
ಪ್ರೀತಿ ಉಳಿಯದೆ ಹೋದ..
ಈ ಹೃದಯದ ಬಡಿತ ನಿಲ್ಲುವುದೆಂದು.

ರವೀಂದ್ರ ಬಿ.ಆರ್.

- ರವೀಂದ್ರ

09 Dec 2016, 10:00 pm

ದೀಪವು ಆರಿತು....

ದೀಪವು ಆರಿತು ಗಾಳಿಯ ರಭಸಕ್ಕೆ
ಮನಸ್ಸು ಮುರಿಯಿತು ಮಾತಿನ ಹೂಡತಕೆ
ಹಚ್ಚಬಹುದು ದೀಪವ ಬೆಂಕಿಯಿಂದ
ಸೇರಿಸಬಹುದೇ ಮನವ ಸಾಂತ್ವನದಿಂದ‌...

- siddarth

09 Dec 2016, 09:35 pm

ಜೀವನ

ಕಣ್ ತೆರೆದು ನೋಡು
ಕನಸು ಕರಗುವ ಮುನ್ನ...
ಗುರಿ ಮುಟ್ಟಿ ನೋಡು
ಕಿಚ್ಚು ಆರುವ ಮುನ್ನ ...
ಬದುಕಿದು ಮೂರು ದಿನದ ಆಟ
ಗೆದ್ದುಬಿಡು ನಿನ್ನಾಟ ಮುಗಿಯುವ ಮುನ್ನ...

- chikki

09 Dec 2016, 09:14 pm

ಜಾತಿ

ಜಗದ ಕತ್ತಲ
ಮೂಲೆಯಲಿ
ಬೆತ್ತಲಾಗಿಹ
ಜನಾಂಗಗಳು

ಗುಡಿ ಗೋಪುರ
ಮಂದಿರಗಳ
ಪ್ರವೇಶಿಸಲು ತಡಕಾಡುವ
ಜಾತಿಗಳು

ಮುಟ್ಟಿಸಿಕೊಳ್ಳದೆ ತುಸು ದೂರ
ಸಾಗುವ
ಬಿಳಿ ಗೋಡೆಯ ಕಪ್ಪು
ಕಲೆ

ಜಾತಿ ಧರ್ಮ ಜನಾಂಗಗಳಿಗೆ
ಈಗೀಗ ಬಿಸಿ
ರಕ್ತದ ಹಸಿ ಜ್ವಾಲೆ

ಕುಲ ಜಾತಿ ಚರಿತ್ರೆಯೂ
ಕಣ್ಣಿರಲೆ ತುಳಿದಿಹುದು
ನಮ್ಮ ಕತೆಯ...

ತುಸು ಸ್ವಾರ್ಥಿ ಧರ್ಮ ಹುಟ್ಟಿಸಿಹ
ಜಾತಿಗಳ ಬಲೆಯೊಳಗೆ ಸಿಲುಕಿಹ
ನಮ್ಮ ವ್ಯಥೆಯ??
ನಾಗರಾಜ್ ಬಾಳೆಗದ್ದೆ...

- Nagaraj Bhat Begadde

09 Dec 2016, 09:05 pm

ಮನಸು

ಅಂತರಂಗದ ತಳಮಳ
ಹರಿದು ಬರುತಿದೆ
ಪದಗಳ ರೂಪದಿ
ಕವಿತೆ ಬರೆದು
ತೆರೆದಿಡುತಿರುವೆ ಮನವ
ನಿಮ್ಮಂಗಳದಿ

- kavita Rajesh

09 Dec 2016, 08:51 pm