ಏನಾಗುತ್ತಿದೆ ಎಂಬುದ ಅರಿಯದ ಮನಸ್ಸು
ಗಾಢವಾದ ಸಿಹಿಯ ನೋವಿನಂಚಿನಲ್ಲಿದೆ ತುಸು
ಆ ಚೆಲುವೆಯು ನೆನಪಾಗುತಾ....
ಈ ಮನಸ್ಸೆಂಬ ಕಗ್ಗಲ್ಲಿಗೆ ವಿಕಾರ ಹೋಗಿ ಆಕಾರ ಬಂದಿದೆ,
ಅವಳು ದೂರ ಇರುವುದರಿಂದ
ವಿರಹದ ವೇದನೆ ಕಾರಂಜಿಯ ಬುಗ್ಗೆಯಂತೆ ಚಿಮ್ಮುತ್ತಿದೆ♡
ಮುದ್ದು ಮನಸ್ಸಿನ ಹುಡುಗಿ
ಹೂವಂತೆ ನಗು ಚೆಲ್ಲಿ, ಎಂದೆಂದಿಗೂ
ಬಾನಲ್ಲಿ ಮಿನುಗುವ ತಾರೆ
ಮುಂಜಾನೆ ಸೂರ್ಯನು
ಬೆಳದಿಂಗಳ ಚಂದ್ರನು, ಕಾದಿಹರು
ಈ ದಿನ ಶುಭಕೋರಲು
ನಿನ್ನ ಕಣ್ಣ ಬೆಳಕೆ ಅವರ ಪ್ರತಿಬಿಂಬ
ಗಾನ ನವೀನ ಸ್ವರಧರೀಣಿಗೆ
ಈ ದಿನ ಸಪ್ತ ಸ್ವರಗಳು ಸೇರಿ
ಮಡುವವು ಸಮ್ಮೇಳನ.
ಅಂಬರಕ್ಕೆ ಕೈ ಚಾಚಿ
ಕ್ಷತ್ರಿಯನ ಜೊತೆ ಹೋರಾಡಿ
ತಾಯಿ ಇಂದ ಬೇಡಿ ಪಡೆದು
ಪೋಣಿಸಿ ಬರೆದೆ ನಿನ್ನ ಹೆಸರು.....
ಹೊಸಥರ ನಗುವಳು ಏತಕೊ ಇವಳು ನನ್ನನು ಕಂಡಾಗ,
ಲೋಕವೆ ಕಾಣದು ನನ್ನಯ ಚೆಲುವೆ ಎದುರಲಿ ಇದ್ದಾಗ...
ಇನ್ನೂ ನೆನಪಿದೆ ಮೊದಲ ಸಲ ನೀನು ಕನಸಿಗೆ ಬಂದಾಗ,
ಕುಸುಮ ಸಂತೆಗೆ ನೀನೆ ಗಂಧವು ತುಸು ನಸುನಕ್ಕಾಗ...
ಹರಿಯುವ ತೊರೆಯು ಅರೆಕ್ಷಣ ನಿಂತು ನೋಡುವುದಿವಳಂದ,
ದುಂಬಿಗಳೆಲ್ಲವು ಸಾಲಲಿ ನಿಂತಿವೆ ಅರಸುತ ಮಕರಂದ...
ಬಿನ್ನಹ ಒಂದು ನಿನ್ನಲಿ ನಂದು ಆಲಿಸು ಮನಸಿಂದ,
ಕರೆಯುತ ನನ್ನ ಎನ್ನುತ ಚಿನ್ನ ಮೋಹಿಸು ಉಸಿರಿಂದ...
ಮುಗಿಲ ಕೆಳಗೆ ಮೋಡಗಳ ಪಯಣ
ಮೋಡಗಳ ಕೆಳಗೆ ಹಕ್ಕಿಗಳ ಪಯಣ
ಭೂಮಿಯ ಮೇಲೆ ನನ್ನ ಪಯಣ
ನೀ ಇರುವ ಕಡೆಗೆ.....
ಮುಗಿಲ ತುಂಬಾ ಹಕ್ಕಿಗಳ ಪಯಣ
ನನ್ನ ಎದೆಯ ತುಂಬಾ, ನಿನ್ನ
ಪ್ರೀತಿ ಪಡೆವ ತವಕದ ಪಯಣ...