Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕರೆ ತಂದು ನಿಲ್ಲಿಸಲೇ?..

ನಿಮ್ಮ,
ಪಲ್ಲಕ್ಕಿಗೆ ಹೆಗಲು ಕೊಟ್ಟು
ಮಂಚಕ್ಕೆ ಮೈ ಕೊಟ್ಟು
ಖಡ್ಗಕ್ಕೆ ಕೊರಳು ಕೊಟ್ಟು
ಘೋರಿಯೊಳಗೆ ನಿಟ್ಟುಸಿರುಬಿಟ್ಟು,
ಮಗ್ಗಲು ಬದಲಿಸಿದವರನು
ಕರೆ ತಂದು ನಿಲ್ಲಿಸಲೇ?.....

ರಚನೆ: ರೇವಣಸಿದ್ದ ಗೌಡರ.

- Revanasidda Goudar

10 Dec 2016, 07:26 pm

ಕನ್ನಡಿಗ...

ನಾನೊಬ್ಬ ಕನ್ನಡಿಗ
ಬರಿಯಲೊಲ್ಲೆ, ಒದಲೊಲ್ಲೆ
ಅದು ಸಂವಹನಕೆ ಮುಳ್ಳಂತೆ
ಗೌರವಕದು ಪೆಟ್ಟನಗೆ
ಆದರೂ
ಕನ್ನಡಿಗನೆಂದು ಸಾರುವೆ...!

- Praveen Melagiri

10 Dec 2016, 06:58 pm

ಯವ್ವಾ ಬೇ...

ನಾನ್ ಒಂದ ಕವಿತೆ ಹೇಳ್ತಿನಿ ಕೇಳ್...
ನೀನಂದ್ರ
ನನ್ನ ಬಿಕ್ಕಳಿಕೆ ನೀರಿನಂಗ್
ನಾನು ನಡೆಯುವಾಗಿನ ನನ್ನ ನೆರಳಿಂಗ್
ಅತ್ತರೆ ಕಣ್ಣೋರೆಸುವ ಕರವಸ್ತ್ರದಂಗ್
ತಪ್ಪು ಮಾಡಿದಾಗ ತಿದ್ದಿ ಹೇಳು ಸರಸ್ವತಿಯಂಗ್
ನೀನೆ ನನ್ನ ಸಹನೆ ಒಡಲು ಪ್ರೀತಿಯ ಮಡಿಲು
ಯವ್ವಾ ಬೇ....
ಪರಶುರಾಮ. ಪೇಟ್ಕರ್ ,ಲೋಕಾಪುರ
೭೪೧೧೩೪೦೫೩೧

- preethu

10 Dec 2016, 06:37 pm

ಪ್ರಣಯ ಪಕ್ಷಿಗಳು...

ಸಂಜೆಯ ಹೊಂಗಿರಣದ ಸವಿಯ ಸವಿದು ವಿರಮಿಸುತ್ತ ಕುಳಿತಿರುವ ಪ್ರೇಮಿಗಳು.....
ಸುಂದರ ಕ್ಷಣಗಳ ನೆನೆಯುತ ಪ್ರೀತಿಯ ಬೆಳಕನ್ನು ಚೆಲ್ಲುತಿಹ ಮನಸುಗಳು...
ಮನಸು ಒಪ್ಪಿಸಿ ಅದಲು ಬದಲು ಮಾಡಿಕೊಂಡ ಹೃದಯಗಳು...
ಎಲ್ಲೆಲ್ಲು ತುಂಬಿದೆ ಒಲವಿನ ಕಡಲು...
ಆಕೆಯ ಕಣ್ಣಲ್ಲಿ ಆತನು..ಆತನ ಕಣ್ಣಲ್ಲಿ ಆಕೆಯು ತುಂಬಿರಲು...
ಸುಂದರ ಅನಿಸುವುದು ಸೂರ್ಯನ ಕೆಂಪಾದ ಕಿರಣಗಳು...
ಆವರಿಸಲಿ ಎಂದು ಅಪೆಕ್ಷಿಸುತ್ತಿದೆ ಮನಸು ಚಂದ್ರನ ಬೆಳದಿಂಗಳು....

- ಮಹೇಶ್..

10 Dec 2016, 06:34 pm

ಕಲ್ಪನೆಯ ಕವನ

ಕಲ್ಪನೆಯಲಿ ಕಂಡಳು ಕವನ...
ನೋಡಿ ಮೆಚ್ಚಿದೆ ಅವಳ ನಯನ..
ಬೇರೆಲ್ಲು ಹರಿಯಲಿಲ್ಲ ನನ್ನ ಗಮನ..
ಅವಳ ಬಳಿ ಹೋಗಲು ತುಡಿಯುತಿತ್ತು ನನ್ನ ಮನ...
ಆದರು ಒಂದು ಗೊಂದಲ ಇದು ಸ್ನೇಹಾನ ಇಲ್ಲ ಪ್ರೀತೀನ.....

- ಮಹೇಶ್..

10 Dec 2016, 06:26 pm

ಹನಿಗವನ

ಮುಂಜಾವಲಿ ತುಂಬುವ
ಕಾಂತಿಯ ಇಳೆಯಲಿ
ಮುಸ್ಸಂಜೆಯಲಿ ಕದಿಯುವ
ಶಾಂತಿಯ ಅವಳಲಿ
ವಿರಹದಲಿ ಕರಗುವ
ನಿಶೆಯ ಅಂತರಾಳದಲಿ...

- Indushekar Chinivar

10 Dec 2016, 06:18 pm

ದೂರಾದ ದಾರಿಯಲಿ ನಿಂತವನ ಸ್ವಗ

ಅಶರೀರವಾಣಿ ಮೌನವೊಂದನ್ನು
ಶೂನ್ಯಕ್ಕೆಸೆದು ಸುಮ್ಮನಾಗಿದೆ
ಆತ್ಮವಿನ್ನೂ ಕಂಪಿಸುತ್ತಿದೆ

ಒಬ್ಬಂಟಿಯ ಜೋಡಿ ಕಣ್ಣ ಹನಿಗಳು 
ಕೆನ್ನೆಗಿಳಿದು ಬರೆದಿವೆ
ಅಕ್ಷರವಾಗದ ಆರ್ತ ಅರ್ಥದ ನೋವಿನ ಓಲೆ
ತಲುಪಲಾರದ ವಿಳಾಸಕ್ಕೆ

ರಾತ್ರಿಯ ಕತ್ತಲು ಹಗಲಿನ ಬೆಳಕು
ತಬ್ಬಿಕೊಂಡಂತಿದೆ ಒಂದನ್ನೊಂದು 
ಇಳಿಸಂಜೆಯ ಹೊತ್ತಲಿ

ನೀ ಎಲ್ಲಿ ಹೋದೆಯೋ 
ನೆನಪುಗಳಲ್ಲಾದರೂ ಹುಡುಕಿಕೊಳ್ಳೋಣವೆಂದರೆ
ಹೋಗುವ ಮುನ್ನ ನೆನಪುಗಳ ಕಣ್ಣು ಕಿತ್ತು ಹೋದೆ

ಹೋದವಳ ಮನಸು ಹಗುರ
ಉಳಿದವನ ಬದುಕು ಹೆಣಭಾರ
ಯಾವತ್ತೂ ಈ ಬದುಕಿಗೆ ಎದಿರಾಗಬೇಡ
ಎದಿರಾದರೂ ನಗಬೇಡ
ನಿನ್ನ ನಗುವಿನ ಅರ್ಥ ಹುಡುಕುವ ಶಬ್ಧಕೋಶ
ನನ್ನ ಬದುಕಲ್ಲಿ ಉಳಿದಿಲ್ಲ  !
                               - ಜೀವ ಮುಳ್ಳೂರು
                                  8970922703

- ಜೀವ ಮುಳ್ಳೂರು

10 Dec 2016, 05:21 pm

ಅವಳಿಗಾಗೆರಡು ಸಾಲುಗಳು

ನನ್ನವಳ ನೆನೆದು ನಾ ನನ್ನೊಳಗೆ ಕಳೆದುಹೋದೆ
ನನ್ನವಳು ನನ್ನೆದೆಯಮೇಲೆ
ಬೆರಳಲಿ ರಂಗೋಲಿ ಬಿಡಿಸಿದ ಕನಸು ಕಂಡೆ

ಕನಸದು ನಿಜವಾಗಲಿ ಎಂದುಕೊಂಡೆ
ಅವಳೆದೆಯ ಹಾಸಿ ಆಲಂಗಿಸಿ
ನನ್ನನ್ನು ಒಳಗೆಳೆದು ಬಾಗಿಲು ಹಾಕಿಕೊಂಡಳು

ಮನಸಿನ ಕನಸು ಒಳಗೆ ಅವಿತು ಬೆವೆತು
ಬೆಚ್ಚಗಾಗಿ ಬೆವರಾಯಿತು.
==================
*ಎಲ್ಲಾರ್ ಸೂರ್ಯ*

- ಸುರೇಶ ಎಲ್.ರಾಜಮಾನೆ

10 Dec 2016, 05:00 pm

ಸ್ನೇಹ ಇದು ಸ್ನೇಹ☆

ರೆಕ್ಕೆ ಬಂದಮೇಲೆ ನಾವು
ಕಲಿಯಲೆಂದು ಬಂದ ನಾವು

ರೆಕ್ಕೆ ಬಿಚ್ಚಿ ಹಾರುವಾಗ
ಅತ್ತ ಇತ್ತ ನೋಡುವಾಗ

ಹಕ್ಕಸ್ಮತ್ತಾಗಿ ಸಿಕ್ಕೆವು
ಸಕ್ಕತ್ತಾಗೆ ನಕ್ಕೆವು

ಸ್ನೇಹ ನಮ್ಮ ಸ್ನೇಹ
ಮರೆಯೋ ಹಾಗಿಲ್ಲ

- ಭರತ್

10 Dec 2016, 04:53 pm

ಹೊಟ್ಟೆ ತುಂಬಿಸದ ಕವನ

ನನ್ನ ಖಾಲಿ ತಲೆಯಲ್ಲಿ,
ಹೊಟ್ಟೆ ತುಂಬಿಸದ ಕವನ
ಗಪ್ ಚಿಪ್ ಮಲಗಿದೆ
ನನ್ನ ಲಬ್-ಡಬ್ ಸೌಂಡ್ ಮಾಡುವ ಹಾರ್ಟಲ್ಲಿ,
ಜೇಬು ತುಂಬಿಸದ ಕವನ
ಉಸಿರು ಬಿಗಿ ಹಿಡಿದು ಮೌನವಾಗಿ ಮಲಗಿದೆ
ನನ್ನ ದೃಷ್ಟಿ ಹೀನ ಕಣ್ಣುಗಳಿಗೆ,
ದಾರಿ ತೋರಿಸದ ಕವನ
ಕತ್ತಲೆ ಜೊತೆ ಕೈ ಕೈ ಜೋಡಿಸಿದೆ.
ವಸಂತರಾಜನಿಗೆ ಕೈ ಕೊಟ್ಟ ಕೋಗಿಲೆಯಂತೆ
ಹುಣ್ಣಿಮೆ ರಾತ್ರಿಗೆ ಕೈ ಕೊಟ್ಟ ಚಂದಿರನಂತೆ
ನನ್ನ ಕವನ....ನನ್ನ ಕವನ....ಕವನ...ಕವನ..ಕ.....

ರಚನೆ: ರೇವಣಸಿದ್ದ ಗೌಡರ
ಸಾ: ರಬಕವಿ-587314
Mobile:9008060918

- Revanasidda Goudar

10 Dec 2016, 04:41 pm