Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಗೆಳತಿಯ ಹಂಬಲ

ಕೊರೆಯುವ ಈ ಚಳಿಯಲ್ಲಿ,
ಬೀಸುವ ತಂಗಾಳಿಯಲ್ಲಿ,
ನಿನ್ನ ನೆನಪು ಕಾಡಿದೆ.
ಕವನ ಕಟ್ಟಿ ಹಾಡಿದೆ.

ಇರುಳು ಸರಿದು ಮಬ್ಬು ಕವಿದು
ರಗ್ಗು ಹೊದ್ದು ಮಲಗಲು,
ಕನಸ ಕದವ ತಟ್ಟಿ ಬಿಡುವೆ.
ಕರವ ಹಿಡಿದು ಬಳಿಗೆ ಸೆಳೆವೆ.

ಹೇಳೆ ಗೆಳತಿ ಎಂದು ಬರುವೆ
ಒಂಟಿತನವ ಒಡೆಯಲು?
ಒಲವ ಗೀತೆ ಹಾಡಲು,
ಬೆಚ್ಚಗಿನ ಬದುಕಾಗಲು.
:-ಜಿ.ನಾಗರಾಜ್ (ನಾದಲೀಲೆ)
9844742494

- NAGARAJ G

10 Dec 2016, 11:01 pm

ಕನಸು-ನೆನಪು

ಕದ ತಟ್ಟಿತು ಕನಸು ಮರೆಯುವಾಗ ಸವಿ ನೆನಪನು..
ಮರೆಮಾಚಿತು ನೆನಪು ಮುಂದೆ ಇರುವ ಕನಸನು...
ಕನಸುಗಳನ್ನು ಕಾಣಬೇಕೇ?
ನೆನಪುಗಳನ್ನು ಮರೆಯಬೇಕೇ??
ಕನಸು ಹಿಂದಿನ ನೆನಪೆ?
ನೆನಪು ಮುಂದಿನ ಕನಸೆ?
ತಿಳಿಯುವುದರೊಳಗೆ ಕನಸು ಕರಗಿತ್ತು...
ನೆನಪು ನಶಿಸಿತ್ತು...!!

- Kavana L S

10 Dec 2016, 10:10 pm

ಓ... ಸೂರ್ಯ!!

ಕತ್ತಲಲ್ಲಿ ಕಳೆದು ಹೋದ ಓ... ಸೂರ್ಯ,
ನಿನಗೊಂದಿಷ್ಟು ಕರುಣೆಯಿಲ್ಲವೆ?..
ಆ ಚಂದ್ರನೋ...ಬೆಳದಿಂಗಳು ಚೆಲ್ಲಿ,
ಮೋಸಮಾಡಿಬಿಟ್ಟ
ಆ ಚುಕ್ಕಿಗಳೋ... ಕಣ್ಣು ಮಿಟುಕಿಸಿ ಸನ್ನೆಮಾಡಿ,
ಮಾಯವಾದವು
ಆ ಸಾಗರದ ಅಲೆಗಳೋ... ಮೈ ಗೆ ಸೋಂಕಿಸಿ, ತಳ ಸೇರಿ ಬಸಿದು ಹೋದವು
ಆ ತಂಗಾಳಿಯೋ... ಆಸೆ ಹುಟ್ಟಿಸಿ, ಬಿರುಗಾಳಿಯಾಯಿತು
ಆ ಮಳೆಯೋ... ಮುತ್ತಟ್ಟು ಮೈ ಮರೆಸಿ, ಮಾಯವಾಯಿತು
ಆ ಇಬ್ಬನಿಯೋ... ಮುತ್ತು ಚೆಲ್ಲಿ , ಮತ್ತೆಲ್ಲಿ ಹುಡುಕಿದರು ಸಿಗದಾಯಿತು
ಆ ಕೋಗಿಲೆಯೋ... ಹಾಡು ನಿಲ್ಲಿಸಿ, ಮನಸ್ಸು ಭಾರ ಮಾಡಿ ಹಾರಿಹೋಯಿತು
ಆ ನವಿಲೋ... ಗೆಜ್ಜೆ ಬಿಚ್ಚಿ, ನನ್ನೆದೆಗೆಸೆದು ಕೇಕೆಹಾಕಿತು

ರಚಣೆ:ರೇವಣಸಿದ್ದ ಗೌಡರ
ಸಾ: ರಬಕವಿ-587314
Mobile:9008060918

- Revanasidda Goudar

10 Dec 2016, 09:15 pm

ಉಳ್ಳವರ ಗೋಡೆಗೆ ಅಂದವಾದವರು

ಇಟ್ಟಿಗೆ ಬಟ್ಟಿಯಲಿ,
ಬದುಕು ಸುಟ್ಟುಕೊಂಡವರು ನಾವು
ಕನಸುಗಳನು,
ಸುಡುವ ಹಂಚಲ್ಲಿಟ್ಟು ಕರಗಿಸಿಕೊಂಡವರು
ಆಡುವ ಕಂದನ ಕೈ ಗೆ,
ಸುಡುವ ಇಟ್ಟಿಗೆ ಇಟ್ಟವರು
ಹಸಿದ ಹೊಟ್ಟಗಳನು,
ನೆಲಕ್ಕಿಟ್ಟು ಹೊಸೆದವರು
ಬಂಧು-ಬಾಂದವರ ಸಂಬಂಧ,
ಗಾಳಿಗೆ ತೂರಿದವರು
ಆಸೆ-ಆಕಾಂಕ್ಷೆಗಳನು,
ಪಟಮಾಡಿ ಹಾರಿಬಿಟ್ಟವರು
ಬದುಕಿನ ಎಲ್ಲ ಭಾವನೆಗಳನು,
ತೋರಣ ಮಾಡಿ ಕಟ್ಟಿದವರು
ಆದರೂ ನಾವು,
ಉಳ್ಳವರ ಗೋಡೆಗೆ ಅಂದವಾದವರು

ರಚಣೆ: ರೇವಣಸಿದ್ದ ಗೌಡರ
ಸಾ:ರಬಕವಿ-587314
Mobile: 9008060918

- Revanasidda Goudar

10 Dec 2016, 08:46 pm

ಕೊನೆಯ ನಿಲ್ದಾಣವಲ್ಲ ಇದುವೇ..

ಕೊನೆಯ ನಿಲ್ದಾಣವಲ್ಲ ಇದುವೇ
ಸಾಗಬೇಕಿದೆ ಇನ್ನು
ಇದೆ ಇನ್ನೊಂದು ನಿಲ್ದಾಣವು..
ಇನೆಷ್ಟು ನಿಲ್ದಾಣವೋ.....
ಸಾಗಬೇಕಿದೆ ನಾನು
ಬದುಕ ಬೇಕಲ್ಲ
ಬದುಕುವುದಕ್ಕೆ ಸಾಗುವುದು
ಸಾಗುತ್ತಾ ಬದುಕುವುದು
ತಿಳಿಯದಲ್ಲ ನನಗೆ
ತಿಳಿಯ ಬೇಕಿದೆ ನಾನು
ತಿಳಿಸುವವರು ಯಾರು
ಹುಡುಕ ಬೇಕಿದೆ ಅವರ..
ಆದರ್ಶ ಕಲಸೆ

- Adarsha kalse

10 Dec 2016, 08:31 pm

ಕನಸು-ನನಸು

ಪ್ರೊಜೆಕ್ಟರ್ ಬೆಳಕಲ್ಲಿ
ಛಾವಣಿಯಿಲ್ಲದ ಥೇಟರಿನಲ್ಲಿ
ಧುತ್ತೆಂದು ಪರದೆಯ ಮೇಲೆ ನೀ ಬಂದಾಗ
ಮಂಜಾದವೋ.. ಕಣ್ಣೆಲ್ಲ ಮಂಜಾದವೋ..

ಕಂದೀಲು ಬೆಳಕಿನಲಿ
ಮುರುಕು ಹಂಚಿನ ಮನೆಯ ಛಾವಣಿಯೊಳಗೆ
ಫಳ ಫಳನೆ ಹೊಳೆಯುವ ನಕ್ಷತ್ರವಾಗಿ ನೀ ಬಂದಾಗ
ಖುಷಿಯಾದವೋ ಮನವೆಲ್ಲ ಖುಷಿಯಾದವೋ

ಮುಚ್ಚಳವಿಲ್ಲದ ಮೋಡದೊಳಗೆ
ತಳವಿಲ್ಲದ ತಾಟಿನೊಳಗೆ
ಬುಡವಿಲ್ಲದ ಬದುಕಿನೊಳಗೆ
ಕಣಸು ಕಾಣಬೇಕು ನನಸಾಗಿಸಬೇಕು

ರಚಣೆ: ರೇವಣಸಿದ್ದ ಗೌಡರ
ಸಾ: ರಬಕವಿ-587315
Mobile: 9008060918

- Revanasidda Goudar

10 Dec 2016, 08:14 pm

ಸುಂದರ ಕಾಂತಿಯ ಬಾಲೆ!

ಸುಂದರ ಕಾಂತಿಯ ಬಾಲೆ!
ಏನು ನಿನ್ನ ಲೀಲೆ.

ನಿನ್ನ ನೋಡಿ ನನ್ನ ಮನಸ್ಸಿಗೆ ಅಂಟಿತಲ್ಲಾ ಕಲೆ,
ನನ್ನ ಹೃದಯದಲ್ಲಿ ಸುರಿಯಿತಲ್ಲಾ;
ನಿನ್ನ ಚಂದದ ಚಹರೆಯ ಮಳೆ.

- ವೇಣು ಆರ್ ಚಿನ್ನದೂರು

10 Dec 2016, 08:14 pm

ವೀರ ಪುತ್ರ

ಧೀರ ಯೋಧರು
ಶೂರ ಯೋಧರು
ನಮ್ಮ ಸೈನಿಕರು

ಶತ್ರುಗಳೆದಯ ನಡುಗಿಸುವರು
ಭಾರತ ಮಾತೆಯ ವೀರ ಪುತ್ರರು
ನಮ್ಮ ಕಾಯುವ ನಮ್ಮ ಸೈನಿಕರು

ಇಲ್ಲವರಿಗೆ ಮನೆಯವರ ಪ್ರೀತಿ
ಬಯಸಲೊಲ್ಲವರು ಕೀರ್ತಿ
ಇದು ನಮ್ಮ ಸೈನಿಕರ ನಿಜ ಮೂರ್ತಿ

ಕಾಯುವ ಕೈಗಳೆ ಸಾಯಿಸಿದಂತೆ ಮಾಡುವ
ಬದಲು ಸೈನಿಕರನ್ನೊಮ್ಮೆ ಭೇಟಿ ಮಾಡುವ
ಅವರ ಧೈರ್ಯಕ್ಕೊಂದು ಧೀರ್ಘ ಸಲಾಂ

ಜೈ ಹಿಂದ್...........
ಈ ಮೂಲಕ ಸೈನಿಕರನ್ನು ಗೌರವಿಸೋಣ.

- ರನ್ನ ಮಹಾದೇವ

10 Dec 2016, 07:51 pm

ನಮ್ಮ ಬಡತನ

ನಮ್ಮ ಬಡತನ:
ಬಂಡಿಯ ನೊಗಹೊತ್ತು ಎಳೆಯುವ ಅಮಾಯಕ ಎತ್ತಿನಂತೆ,
ಬಿರುಗಾಳಿಗೆ ಸಿಕ್ಕು ಗರಗಿಟ್ಟಲೆಯಾದ ಒಣ ಎಲೆಯಂತ,
ಮೂಟೆ ಹೊತ್ತು ಊರೂರು ಸುತ್ತುವ ಕತ್ತೆಯಂತೆ,
ಉಂಡವರು ಉಂಡೆಸೆದ ಎಲೆಯೊಳಗಿನ ಅನ್ನ ಅರಸುವಂತೆ,
ಒಡೆದು ಮಾಸಿದ ಕನ್ನಡಿ ನಮ್ಮ ಬಡತನ ನಮಗೆ ತೋರಿಸುವಂತೆ,
ಆಕಾಶಕ್ಕೆ ಎಸೆದ ಆಸೆಯ ಕಲ್ಲು ಮರಳಿ ಬಂದು ನಮಗೇ ಬಡಿಯುವಂತೆ,
ಯಜಮಾನರಿಗೆ ಅಂಗಳ ಅಂಚಿನಲ್ಲಿ ಕಾವಲು ಕಾಯುವ ಚಪ್ಪಲಿಯಂತೆ,
ನಮ್ಮವರ ಕಣ್ಣುಗಳ ಅಂಚುಗಳಲಿ ತುಂಬಿಕೊಂಡ ದುಃಖದ ಚಿತ್ರಗಳಿಗೆ ಮರಳಿ ಮರಳಿ ಜೀವ ಬಂದಂತೆ,
ನಮ್ಮ ಬಡತನ.....ನಮ್ಮ ಬಡತನ..........

ರಚನೆ: ರೇವಣಸಿದ್ದ ಗೌಡರ.

- Revanasidda Goudar

10 Dec 2016, 07:46 pm

ವೀರಯೋಧ

ಓ! ಅದೋ ಅಲ್ಲಿಹನು ಗಡಿನಾಡ ವೀರ
ಅವನಿಗೆ ಜನರ ಹಾರೈಕೆ ಅಪಾರ, ಅಪಾರ
ಶತ್ರುಗಳ ಶತ್ರುವೇ ಭುವಿಯ ಈ ವೀರ ಸದಾ ಮಿನುಗಲಿ ನಮ್ಮ ಸೂಪರ್, ಶೂರ.

ಹತ್ತಿರದಲಿ ಪ್ರೀತಿಯ ತಂದೆಯಿಲ್ಲ- ತಾಯಿಯಿಲ್ಲ
ಆದರೂ ಕೊಂಚ ದುಃಖವಿಲ್ಲ- ದುಗುಡವಿಲ್ಲ
ಕೆಚ್ಚೆದೆಯ ಈ ಮಲ್ಲ
ಎಲ್ಲರನು ಗೆಲ್ಲಬಲ್ಲ

ನೀಲಿಯಾಗಸಕೆ ಚಂದ್ರ ಶೋಭೆ
ಬ್ರುಹತ್ ಭೂಮಿಗೆ ಯೋಧ ಶೋಭೆ ಯೋಧನ ಕಾಪಾಡೆ ಹೇ! ಭಾರತಾಂಬೆ
ಅವನಿದ್ದರಲ್ಲವೇ? ತಾಯಿ ನಿನಗೆ ಪ್ರಭೆ.

- Ramachandra GL

10 Dec 2016, 07:28 pm