Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನದ ಮಾತು

ನಿನ್ನ ಹೊಗಳಲು ಪದಗಳ ಹುಡುಕುತಾ....
ಪದೇಪದೇ ಸೋತಿರುವೆನು...!
ನನ್ನ ಮನದ ಮಾತು ಹೇಳಲು..
ಉಸಿರ ಹಿಡಿದು ಕಾದಿರುವೆನು...!
ಎದುರು ನಿಲ್ಲು ನಿನ್ನ ಪ್ರತಿರೂಪವ..
ಎದೆಯ ಬಗೆದು ತೋರಿಸುವೆನು...!

(...Hamsakanthu...)

- Hamsakanthu

11 Dec 2016, 12:30 pm

ಮಣ್ಣು ಸುಟ್ಟು ಮಡಕೆಯಾಗಿ

ಮಣ್ಣು ಸುಟ್ಟು ಮಡಕೆಯಾಗಿ
ಹೊನ್ನು ಸುಟ್ಟು ಹೊಳಪಾಗಿ
ಕಲ್ಲು ಸುಟ್ಟು ಸುಣ್ಣವಾಗಿ
ಅಕ್ಕಿ ಬೆಂದು ಅನ್ನವಾಗಿ
ಕುರುಳು ಸುಟ್ಟು ವಿಭೂತಿಯಾಗಿ
ಆಸೆ, ಮೋಹ ಸುಟ್ಟು ಬುದ್ದನಾಗಿ
ಅಸೂಹೆ, ಕುಲ,ಜಾತಿ ಸುಟ್ಟು ಮನುಜನಾಗೆಂದ
ಗುರು ಬಸವಪ್ರಿಯ ರೇವಣಸಿದ್ದ

ರಚಣೆ: ರೇವಣಸಿದ್ದ ಗೌಡರ
ರಬಕವಿ-587314
Mobile:9008060918

- Revanasidda Goudar

11 Dec 2016, 11:50 am

ಆಕಾಶಕ್ಕೆ ಜೋಕಾಲಿ ಕಟ್ಟಿದ್ದೆ

ಆಕಾಶಕ್ಕೆ ಜೋಕಾಲಿ ಕಟ್ಟಿದ್ದೆ
ಜೀಕಿ ಜೀಕಿ ಚಂದ್ರನ ತರಬೇಕೆಂದಿದ್ದೆ
ಅಷ್ಟರಲ್ಲಿ......
ಕತ್ತಲೆ ಕರಗಿತ್ತು, ಜೋಕಾಲಿಯೂ ಹರದಿತ್ತು

ಸ್ವರ್ಗಕ್ಕೆ ಹೋಗಲೆಂದು ಪುಷ್ಪಕ ವಿಮಾನ ತಂದಿದ್ದೆ
ಕೂಗಿ ಕೂಗಿ ನಿನ್ನ ಕರದಿದ್ದೆ ಜೊತೆಯಾಗಿ ಬಾ ಎಂದು
ಅಷ್ಟರಲ್ಲಿ.....
ಪಕ್ಕ ಕಿತ್ತಿತ್ತು ,ಕನಸು ನುಚ್ಚುನೂರಾಗಿತ್ತು

ಸಿನೇಮಾ ಹೀರೋ ಆಗಬೇಕೆಂದಿದ್ದೆ
ಓಣಿ ಓಣಿಲಿ ಪೋಷ್ಟರ್ ಅಂಟಿಸಿದ್ದೆ
ಅಷ್ಟರಲ್ಲಿ....
ಪರದೆ ಹರದಿತ್ತು, ಕತ್ತಲೆ ಕವಿದಿತ್ತು

ರಚಣೆ: ರೇವಣಸಿದ್ದ ಗೌಡರ
ರಬಕವಿ-587314
Mobile:9008060918

- Revanasidda Goudar

11 Dec 2016, 11:30 am

ಕನ್ನಡ ಕವನ

ಗೀಚಿ ಗೀಚಿ ಬರೆದೆ ಬೀಚಿಯಾಂತಗಲ್
ಹುಡಿಕಿದರು ಹೊಳೆಯಲಿಲ್ಲ ಕನ್ನಡಪದಗಳ್
ಹಂಗೋ ಇಂಗೋ ಕದಡಿ ಕೆದಕಿ ಮನ
ಬರೆದೆ ಬಿಟ್ಟೇ ಈ ಕನ್ನಡ ಕವನ

- ವೆಂಕಟೇಶ್ ದೈಶಿ ವೇಮಗಲ್

11 Dec 2016, 11:14 am

ಕಿರಿಕೆಟ್ (ಕ್ರಿಕೆಟ್) ಪ್ರೀತ

ನೀ ತುಂಟ ಕಿರುನಗೆಯ ಬೀರೆ
ಬೌಲ್ಡ್ ಔಟ್ ಆದೆ ನಾನು
ಅವಸರಿಸಲು ಆದೆ
ರನ್ ಔಟ್ !!

ಎದೆಯುಬ್ಬಿಸಿ ಮುಂದೆ ನಡೆಯೆ
ಸ್ಟಂಪ್ ಔಟ್ ಆದೆ
ಹೊಡೆದುರುಳಿಸುವ ಆಸೆ
ಕ್ಯಾಚ್ ಔಟ್ನ ಭೀತಿ!!

ನೇರ ಎದುರಿಸಹೋಗಿ
ಆದೆ ಎಲ್ ಬಿಡಬ್ಲ್ಯೂ
ಕೊoಚ ವಿಚಲಿತಗೊಳೆ
ಆದೆ ಹಿಟ್ ವಿಕೆಟ್ !!

ಆಗಲಾರೆಯ ಗೆಳತಿ
ಹೃದಯಕೆ ಚೀಯರ್ ಗರ್ರ್ಲ
ಕಾದಿಹೆನು ನಾನಿಂದು
ಹಸಿರು ದೀಪದ ಕರೆಗೆ!!

ಟೆಸ್ಟ್ ಆಟಗಾರನಾಗುವ ಆಸೆ
ಅಡ್ಡಿ ಬಂತು ಟ್ವೇ0ಟಿ - ಟ್ವೇಂಟಿ
ಹೀಗಿತ್ತು ನನ್ನ ಪ್ರೇಮಾಯಣದ ಪರಿ
ಫಾರ್ಮ್ ಕಳೆದುಕೊ0ಡ
ಅಲ್ ರೌ0ಡರ್ ನಂತೆ !!


- ರಘುರಾಮ್ ಬೈ0ದೂರ್ .

- Raghuram Byndoor

11 Dec 2016, 10:30 am

ಮನ=ಕನ್ನಡ...

ಮನವು ತಾನೋಗೆದು ಕೆರಳಿ
ಕಂಪನ,ಕೊನೆಗೆ ಕೇಳಿಸುವುದು
ಈ ನುಡಿಗೇನೊಳಗೆ ನಿನ್ನ ಸಾಧ೯ನೆ
ಮನವು ಕೆರಳಿತು....
ಮನದ ಇಂಗಿತವ ಕಂಡಾದರೂ
ಸಾಧನೆಗೈಯಬೇಕೆಂಬ ಛಲ ಅಗತ್ಯ ಕನ್ನಡದಲ್ಲಿ

- ಅದ್ಯತನ

11 Dec 2016, 07:49 am

ಅಲ್ಪವಿರಾಮ

ಬಡತನವೆಂಬ ಜಟಿಲ ಹಗ್ಗವು
ದುಡಿದು ಮುರಿದ ರಟ್ಟೆ ಜಟ್ಟಿ ಹಿಡಿಯುತ್ತಿದ್ದರು,ಗಾಣದಿ ಆತನ ಮರುಗಿಸಿ
ಇಟ್ಟು,ಕನಸಲಿ,ಅವನಾಡುವ ಮಾತಲಿ,ಅವನ ಹಿಂದೆಯೇ ಬರಬಹುದೆಂಬ ಒಂದೇ ಭಯದಿಂದ
ರೈತ ನಗುಎಂಬ ಅಲ್ಪವಿರಾಮದಲ್ಲಿ ಬೇಯುತಿಹನು.....

- ಅದ್ಯತನ

11 Dec 2016, 07:49 am

ವಿದಾಯ

ಕಣ್ ಹಾಯಿಸಿ ದಷ್ಟು ಕರಿ ಮೊಡಗಳು
ಅಗಲೊ ಈಗಲೊ ಸುರಿಬಹುದು
ಧಾರಕಾರದ ಸುರಿಮಳೆ....
ಹೋರಡು ಗೆಳತಿ.

ನಿಜ ಗೆಳೆಯ....
ಸುರಿಯಲಿ ಮಳೆ ರೊಯೈಂದು
ನಾನೇಕೆ ತೋಯೈಲಿ..
ಕೈಯಲಿ ಕೊಡೆಯಿರುವಾಗ.

ಮೊಡದ ಮಳೆ ನಿನ್ನ ತಾಕಲಾರದು
ನಿಜ ಗೆಳತಿ.
ನಮ್‌‌‌‌‌ ಅಗಲಿಕೆ ಯ ನೋವು
ನಿನ್ನ ಕಂಗಳಲ್ಲಿ ನೀರಾಗಿ ಹನಿ ಹನಿಯಾಗಿ
ನಿನ್ನ ತೋಯೈವುದನು .
ಹೇಗೆ ತಡೆಯುವೆ.
ಮನದ ಭಾರ ಕರಗುವವರೆಗೆ..

ಪ್ರಕಾಶ.ಟಿ.ಚಳಕೆರೆ

- Prakasha. T.Challakere

11 Dec 2016, 12:12 am

ಅರ್ಥವಿಲ್ಲದ ಜೀವನ..

ಅರ್ಥವಿಲ್ಲದ ಜೀವನ.. ಅರ್ಥವಿಲ್ಲದ ಜೀವನಕ್ಕೆ ಬೆಲೆ ಇಲ್ಲದ ಭಾವನೆಗಳ ನಡುವೆ ಬದುಕಿನ ಜಂಜಾಟ....
ಮನಸ್ಸಿನ ಮಾತು ಕೇಳುವ ಬದಲು ಕನ್ನಡಿಯ ಮುಂದೆ ನಿಂತು ಕಣ್ಣೀರು ಹಾಕುವುದು ಒಳ್ಳೆಯದು....
ಮನಸ್ಸಿನ ಮಾತು ಕೇಳಿದರೂ ಕೇಳಲಿಲ್ಲ ಎಂದು ನಟಿಸುವ ಕಂಗಳ ಮುಂದೆ ನಾಟಕವಾಡುವ ಪಾತ್ರಧಾರಿ ನಾನು.....

- Girish Bhat

11 Dec 2016, 12:01 am

ಬೆಳಕು

ನಿನ್ನ ಕಂಗಳ ಹೊಳಪಿನಲಿ
ಬೆಳಕಿನ ಕಿರಣ ಕಂಡೆ
ನಿನ್ನ ನಸು ನಗುವಿನಲಿ
ಭರವಸೆಯ ಆಸೆ ಕಂಡೆ
ನಿನ್ನ ಮುಗ್ಧ ಆಟಗಳಲಿ
ಕನಸು ನನಸಾದುದ ಕಂಡೆ
ನಿನ್ನ ನುಡಿ ಮುತ್ತು ಗಳಲಿ
ಹೆಮ್ಮೆಯ ಸಾಫಲ್ಯ ಕಂಡೆ
ನಿನ್ನ ಬೆಳವಣಿಗೆಯಲಿ
ಹಿಂದೆ ನಿಂತ ನನ್ನ ನೆರಳ ಕಂಡೆ
ನಿನ್ನ ಜೀವನ ಸುಖದಲಿ
ನನ್ನ ಗುರಿಯ ಕಂಡೆ
ಓ ನನ್ನ ಬೆಳಕೆ ಬೆಳಗಲಿ
ನಿನ್ನ ಹಿರಿಮೆ ಸದಾ ನನ್ನ ಹಾರೈಕೆ
ಸದಾ ನನ್ನ ಹಾರೈಕೆ

- kavita Rajesh

10 Dec 2016, 11:10 pm