Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬದಕು ಭಾವಂತರ

ಬದಕು ಭಾವಂತರ
ಬವಣೆ ನಿರಂತರ
ಮನದೊಳಗೆ ಅಂತರ
ಜಗದೊಳಗೆ ಅವಾಂತರ

ಜೀವನ ಸುಂದರ
ಸಿಹಿ ಕಹಿಗಳ ಹಂದರ
ಈ ಬಾಳು ಮಂದಾರ
ನಗುತ್ತಿರು ನೀ ಚಂದಿರ

ಬದಕು ಬಂಗಾರ
ಹೂ ಮುಳ್ಳುಗಳ ಶೃಂಗಾರ
ನವ ಮನಗಳ ಸಿಂಗಾರ
ಬದಕಬೇಡ ಹೇಂಗರ?

ಆದರೂ ಬದಕು ಬವಣೆ
ನಿರಂತರ ಶೋಷಣೆ
ದೇಹ ದೇಹಗಳ ಘರ್ಷಣೆ
ಜಗದೊಳಗೆ ಬರಿ ಸಂಘರ್ಷಣೆ

ರಚನೆ* ಆನಂದ ಎಸ್ ಪೂಜಾರಿ

- ಆನಂದ ಪೂಜಾರಿ

11 Dec 2016, 11:19 pm

ನಿರೀಕ್ಷೆ

ಅರ್ಥವಾಗದ ಮೌನ
‌ಸುರಿಯದ ಕಂಬನಿ
ಉಕ್ಕದ ಭಾವನೆ
ಬೆಸೆಯದ ಅನುಬಂಧ
ನನಸಾಗದ ಕನಸು
ಆದರೂ ಕಾಯುತಿರುವೆ
ಮೌನ ಮಾತಾಗಬಹುದೆಂದು
ಆನಂದ ಬಾಷ್ಪ ಸುರಿಸಬ಼ಹುದೆಂದು
ಭಾವನೆಗಳು ಹೊಮ್ಮಬಹುದೆಂದು
ಈ ಬಂಧನ ಹೊಸೆದುಕೊಳ್ಳಬಹುದೆಂದು
ಸ್ವಪ್ನ ಸಾಕಾರವಾಗಬಹುದೆಂದು
ಬಹುದೆಂದು....
.....‌‌‌‌‌‌‌...................ಕವಿರಾಜ

- kavita Rajesh

11 Dec 2016, 10:54 pm

ಬುಡಬುಡಿಕೆಯವ...

ಇವತ್ತು ಬುಡಬುಡಿಕೆಯವ ಬಂದಿದ್ದ
ಇಳಿ ವಯಸ್ಸು ಹರಕಂಗಿ
ಬಾಡಿದ ಮುಖ
ಹಣೆಯ ಕುಂಕುಮ ಅಳಿಸಿ
ಹಲವು ದಿನವಾಯ್ತೇನೋ
ಹೆಗಲ ಕಂಬಳಿಗೆ ಹಲವು ತೂತು

ನನ್ನೆದುರು ನಿಂತು ಸುಮ್ಮನೆ ದಿಟ್ಟಿಸಿದ
ಒಳ ಒಳಗೆ ಹೆದರಿಕೆ ನನಗೆ
ಕೆಟ್ಟದನ್ನು ಹೇಳಿಯಾನೆಂದು...

ವಿಷಾದದ ನಗೆನಕ್ಕು
ಮನವನೋದಿದವನಂತೆ
'ಹೆದರದಿರು ನುಡಿದಿಲ್ಲ 
ನಾನೆಂದೂ ಕೆಟ್ಟದನ್ನು
ನಿನ್ನ ಮಗನೊಬ್ಬ  ಅದ್ಭುತ ಎಂದಿದ್ದೆ,
ನಿಮ್ಮಪ್ಪನೆದುರು ನಿಂತು..
ಎಲ್ಲ ಅಪ್ಪಂದಿರಿಗೂ ಮಗ
ಅದ್ಭುತವೇ ಅಲ್ಲವೇ...'

ಹೊಸ ಧೋತರ ಬಗಲಕಿಸೆ ಅಂಗಿ
ಕಂಬಳಿಯ ತುಂಬ ಜೋಳವನು ತುಂಬಿ
ಹರಸಿ ಕಳಿಸಿದ್ದ ನಿನ್ನಪ್ಪ  ಹಿರಿಮನುಷ

ಒಳ್ಳೆಯದನೇ ನುಡಿಯುತ್ತ
ಒಳ್ಳೆಯದನೇ ಬಯಸುತ್ತ
ಹಲವು ತಲೆಮಾರಿನ ಬದುಕು
ಚೆಂದ ಸಾಗಿತ್ತು...

ಕೊನೆಗಾಲದಲ್ಲೊಮ್ಮೆ ನೋಡ ಬಂದೆ
ನಿನ್ನಂಥವರನು
ನಾ ನುಡಿದ ನುಡಿಗಳು
ನಿಜವಾದವೇ ಎಂದು, ಕಣ್ತುಂಬಿಕೊಂಡ
ಒಳಗಿಂದ ಬಂದ ಮೊಮ್ಮಗನ ನೋಡುತ್ತ
ಮತ್ತೆ ನುಡಿದ
'ಇವನೆಂಥ ಚೆಂದ '

" ಹಕ್ಕಿ ನುಡಿದೈತೆ, ಒಳ್ಳೆಯ ಕಾಲ ಬರತೈತೆ"
ನುಡಿಯುತ್ತ ನಡೆದಿದ್ದ
ಬುಡಬುಡಿಕೆಯ ಬಾರಿಸುತ
ಗಮನವಿರಲಿಲ್ಲವನಿಗೆ
ತನ್ನ ಕೈ ಬುಡಬುಡಕೆ ದನಿ ಮಾಡದಿದ್ದುದು
ಹರಿದ ದಾರದ ಹಳೆಯ ಬುಡಬುಡಕೆಗೆ
ದನಿಯೆಂಬುದೆಲ್ಲಿ

ಭಾರ ಹೃದಯದಿ ನಿಂತಿದ್ದೆ ನಾನು..
ಭವಿಷ್ಯ ನುಡಿದಿದ್ದವಗೆ
ಭವಿಷ್ಯವಿಲ್ಲದುದ ನೆನೆಯುತ್ತ...

-ಡಾ. ಶಿವಾನಂದ ಕುಬಸದ

- ಡಾ.ಶಿವಾನಂದ ಕುಬಸದ

11 Dec 2016, 08:02 pm

ಮನಸೋಳಗೆ ಕುಳಿತಿರಲು ನೀನು

ಮನಸೊಳಗೆ ಕುಳಿತಿರಲು ನೀನು
ನನ್ನೊಳಗೆ ನನ್ನನ್ನೆ ಹುಡುಕುತಿರುವೆನು ನಾನು
ಸ್ನೇಹದ ಬಂಧನದಲ್ಲಿ ಬಂಧಿಸಿರಲು ನೀನು
ಕೇಳುವೆಯ ಪ್ರೀತಿಯ ಮಾತನ್ನು ಹೇಳಲು ನಾನು

ಸೇರುವೆಯ ನನ್ನ ನೀನು, ಕಾಯುತಿರುವೆನು ನಾನು
ತಿಳಿಯೆನು ನಾನು, ಏನೆಂದು ನೀನು
ಒಪ್ಪಲೇ ಬೇಕೆಂದು ನೋವ ಕೊಡೆನು
ಮಗುವಿನಂತೆ ಕಾಪಡುವೆನು ಒಪ್ಪಿ ಬಂದರೆ ನೀನು

ಮನಸ್ಸಿನ ಕನಸು ತಪ್ಪೇನೊ ತಿಳಿಯೆನು ನಾನು
ತಪ್ಪಿದ್ದರೆ ಮನ್ನಿಸಿ ಸರಿಯೆನು ತಿಳಿಸು ನೀನು
ಮನದ ಭಾವ ಬಿಚ್ಚಿಡುತಿಹೆ ನಿನ್ನೆದುರು ನಾನು
ಕಾಯುವೆನು ನಾನು ಒಪ್ಪಿ ಬರುವುದಾದರೆ ನೀನು

ತಿಳಿಯದೆ ಸೋತಿಹುದು ಮನಸು
ನಿನ್ನನೇ ಸೇರಲು ಕಾಯುತಿಹುದು ಕನಸು
ನಿನಗಾಗಿ ಕಾಯುತಿರಲು ಕನಸು ಮನಸು
ನೀನಾಗಿ ಬರುವೆಯ ಒಂದು ನನಸು

ನನ್ನ ಭಾವಗಳು ನೋಯಿಸಿದ್ದರೆ ಕ್ಷಮಿಸು
ಭಾವಗಳ ಮುಚ್ಚಿಟ್ಟು ಸೋತು ಸೋಲಿಸಲಾರೆನು
ಹೇಳು ನೀನು ಒಪ್ಪಿ ಬರುವೆಯೇನು
ಮನಸ್ಸು ತೆರೆದಿಟ್ಟು ಕಾಯುತಿರುವೆನು ನಾನು
.......

- ಶ್ರೀಕಾವ್ಯ

11 Dec 2016, 07:49 pm

ಸೂರ್ಯ ಎಂದರು ಎಲ್ಲರೂ

ಬಂಗಾರನೀರ ಮೈಗೆರಚಿಕೊಂಡು ಪಡುವಣದಡೆಗೆ ದವಡಿಸಿದನಷ್ಟೆ ;
ನಮ್ಮ ತೀರದ ಮಾತುಕತೆ ಕದ್ದಾಲಿಸಲು ನಾಳೆ ಬಂದರೂ ಬರಬಹುದು ಅದೇ ಜಾಗೆಗೆ...

- prajna

11 Dec 2016, 07:16 pm

*ಮೌನಗೌರಿ*

ತಿಳಿಯಲಿಲ್ಲವೇ ಗೆಳತಿ
ನನ್ನಯ ಪ್ರೀತಿ
ಅರ್ಥವಾಗಲಿಲ್ಲವೇ ಸಂಗಾತಿ
ನನ್ನ ಮನದ ನೋವಿನ ಸ್ಥಿತಿ!
ನೀನು ಹೊರಡುವೆನೆಂದಾಗ
ಸಾವಿರ ನೋವು ನನ್ನೆದೆಯಾಗ
ಸ್ತಬ್ದವಾಯ್ತು ನನ್ನ ಹೃದಯರಾಗ
ಒಂಟಿತನ ತುಂಬಿತ್ತೆನ್ನ ಮನದಾಗ
ನೀನು ಮೌನ ಸುಂದರಿಯೆನ್ನುವುದು
ನನ್ನ ಹೃದಯಕ್ಕೆ ಗೊತ್ತು
ನೀನು ಬರೀ ಮೌನವಾಗಿದ್ದರೆ
ನನ್ನ ಜೀವ ಹೇಗೆ ಬದುಕೀತು!
ಮೌನ ಮುರಿದು ಮಾತಾಡು

ಹೇಳು ನಿನ್ನ ಅಂತರ್ಯದ ಹಾಡು
ನಾನಿಲ್ಲಿವೇ ನಿನ್ನ ಜೋಡು
ಕಟ್ಟುವ ನಾವು ಪ್ರೇಮದಗೂಡು!
*****""*****"""*****""********
ಬಲವಂತ ಮೋರಟಗಿ.
ಬಸವಪ್ರಿಯ
‌‌‌‌@9740123673

- ಬಲವಂತ ಮೋರಟಗಿ(ಬಸವಪ್ರಿಯ)

11 Dec 2016, 06:36 pm

ಒಲವಿನ ರಂಗೋಲಿ

ಓ ನನ್ನ ಕಲ್ಪನೆಯ ರಮಣಿ
ತಿಳಿಯದೇ ನನ್ನ ತವಕಗಳ ಸರಣಿ?

ನಿನ ಮೊಗವ ಕಾಣುವ ತವಕ
ನೆನೆದಾಗಲೆಲ್ಲಾ ನಾ ಭಾವುಕ.

ಹೃದಯವೆಂಬ ಲತೆಗೆ
ಪ್ರೀತಿಯೆಂಬ ನೀರೆರೆದು ಪೋಷಿಸು,

ನನ್ನೆದೆಯ ಬಾನಿನಲಿ ಭಾವನೆಗಳ ಚುಕ್ಕೆಯಿಟ್ಟು ಒಲವಿನ ರಂಗೋಲಿ ಬಿಡಿಸು.

- Raj

11 Dec 2016, 05:20 pm

ಮತ್ತಿನ್ಯಾರು

ನನ್ನ ಹುಸಿಗೋಪದ ಹಿಂದಿನ ಹಸಿವ ಹುಡುಕಿ
ಉಣಬಡಿಸಿದೆ ನೀನು ;
ನೀ ಊಟ ಮಾಡಿದೆಯ ಎಂದು
ಕೇಳದೆ ಹೋದೆ ನಾನು

- prajna

11 Dec 2016, 02:54 pm

ಪೊರೆ

ಈ ಕಣ್ಣಿನ ಪೊರೆ
ಆ ವೇದಿಕೆ ತೆರೆ,
ಎರಡೂ ದುಷ್ಟಜಂತುಗಳು.
ಅವಳ ರೂಪದ
ದೃಶ್ಯ ಸಂಗಮ
ಆಗಲೇ ಇಲ್ಲ.
ತೆರೆ ಮುಚ್ಚಿತು.
ಪೊರೆ ಕುರುಡಾಯಿತು.
ಸುತ್ತಲೂ ಕತ್ತಲು.

- Madhusudana y n

11 Dec 2016, 01:40 pm

ಮನ್ಸಿನ್ಮಾತು

ಬಾಬೇಗ ಗೆಳ್ತಿ
ಯಾಕ್ ಹಿಂಗ್ ನೀ ಕಾಡ್ತಿ
ಇಲ್ಲೇನ ಹೇಳು ನಿನ್ಗ
ನನ್ಮ್ಯಾಲಿ ಪ್ರೀತಿ

ಹಗಲ್ಯಾಲ್ ನಾ ಕನ್ಸ
ಕಾಣ್ತಿನಿ ನೀ ಬಂದ್ಹಂಗ
ಬಂದು ನನ್ನೆದಿಗಿ ಒರಗಿ
ಪಿಸ್ಗುಟ್ಟಿ ಮಾತಾಡ್ದ್ಹಂಗ

ನಸ್ಕಿಲೇ ಮುಸ್ಕ
ತೆಗದ್ ನೋಡಿದ್ರ
ಅದೆಲ್ಲಿ ಹಾರಿ ಹೋಗ್ತಿಯೋ
ಗೊತ್ತಾಗ್ವಾತು
ಏನ್ ಹೇಳ್ ಇದು
ನಿನ್ನ ಹಕ್ಕಿಕತ್ತು.
==================
ಎಲ್ಲಾರ್ಸೂರ್ಯ*

- ಸುರೇಶ ಎಲ್.ರಾಜಮಾನೆ

11 Dec 2016, 01:09 pm