Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಮ್ಮ ಬಿಕ್ಕಿ ಅತ್ರಳು

ಮಾನವ ಬಗೆದರು ದೇಹನ
ಮಾಯಾವಾದವು ಹಸಿರಬನ
ತರಗಲೆಯಂತ ಉದುರಿತು ಜೇವನ

ಮಾನವರ ಧ್ವನಿಗೆ ಬಿದ್ದ ಮೇಲೆ
ಒಂಟಿ ಮರದ ಕೂಂಬೆಯಲ್ಲಿ
ಕೋಗಿಲೆ ಹಾಡಲಿಲ್ಲಾ
ಇತರಿರಗೆ ಸಹ ಉಳಿಗಾಲವಿಲ್ಲಾ

ಯಾವ ನದಿಗಳು ಇಲ್ಲಾ!
ಝರಿಯ ಮಾತೇಕೆ?
ದಾಹ ತೀರಿಸಲು!
ರಣ ಬಿಸಲು ಸೆಟದೇಕೆ?

ನರಳುವ ಆ ... ಅಕ್ಷರದಲ್ಲಿ
ವಿಲವಿಲನೆ ಒದ್ದಾಟ
ರಕ್ತದ ಚೀಲದಲ್ಲಿ
ಸರಸರನೆ ಚೀರಾಟ

ಕಾಪಾಡವ ಪ್ರಕೃತಿ ವಗ ಮೂಲವಿಲ್ಲದೆ
ಗುಣಿತ್ತಾಕ್ಷರದಲ್ಲಿ ಕಾಲ ತಳ್ಲಿದೆ

- Shinan

12 Dec 2016, 05:12 pm

ಚಿಟ್ಟೆ

ಜಗದೊಳು ಜನ್ಮತಾಳಿದಾಗ,
ಜಿನುಗುಡುತ,ಮೌನವಾಗಿ,
ಸಂತಸದಿಂದ ಸಹಜಗಾಳಿಯಲ್ಲಿ ತೇಲಾಡುತ ಕುಣಿದಾಡುವುದು.
ಈ ಜಗವೇ ತನದೆಂದು ಹಿಗ್ಗುವುದು,
ಬಣ್ಣ ಬಣ್ಣದ ಮೈಯಲ್ಲಿ ಮಿಂಚುವುದು,
ಮುಗ್ದತೆ, ಸತ್ ಮನ,ಸದ್ ಬುದ್ ಬುದ್ದಿ ತನುವಲಿ ಮೆರೆಯುವುದು,
ಕ್ಷಣಮಾತ್ರದಲಿ ತನಗರಿಯದೆ ಸಾವು ಬರುವುದು,
ಈ ಜಗದಲಿ ಇದೆಯೇ ಅದಕೆ ಉಳಿಗಾಲ.

- Shilpa dhruva

12 Dec 2016, 04:54 pm

ನನಗೂ ಪಕ್ಕವಿದ್ದರೆ....!!!!

ಪಾತರಗಿತ್ತಿಗಿದ್ದಷ್ಟು ಪಕ್ಕ ಇದ್ದರೆ;
ಹಾರಿ ಬಿಡುತ್ತಿದ್ದೆ ಆಕಾಶದೆತ್ತರಕ್ಕೆ
ಅಂಗೈಷ್ಟಗಲ ಹಾಯಿದೋಣಿಯದ್ದರೆ;
ದಾಟಿ ಬಿಡುತ್ತಿದ್ದೆ ಕಡಲುದ್ದಕ್ಕೂ
ಗೋದಿಹುಲ್ಲಿನಷ್ಟು ಹುಲ್ಲಾಗಿದ್ದರೂ;
ಬಿಟ್ಟು ಬಿಡುತ್ತಿದ್ದೆ ಹೊರಲಾರದಷ್ಟು ತೆನೆಹೊರೆಯ
ಮಿನಗು ದೀಪದಷ್ಟು ಬೆಳಕಾಗಿದ್ದರೂ;
ಬೆಳಗಿ ಬಿಡುತ್ತಿದ್ದೆ ಕತ್ತಲ ಲೋಕಕ್ಕೆ
ಕೀರಲು ಧ್ವನಿಯಷ್ಟು ಕಿರಚಲುಧ್ವನಿಯಿದ್ದರೂ;
ಚೀರಿ ಬಿಡುತ್ತಿದ್ದೆ ಅನ್ಯಾಯಕ್ಕೆ
ಬಳ್ಳಿಯಷ್ಟು ಚಿಕ್ಕದಾಗಿದ್ದರೂ;
ಚಾಚಿಕೊಂಡು ಬಿಡುತ್ತಿದ್ದೆ ಜಗದ ಚಾವಣಿಗೆ
ಗುಬ್ಬುಯಷ್ಟು ಪುಟ್ಟದಾಗಿದ್ದರೂ;
ಕಟ್ಟಿ ಬಿಡುತ್ತಿದ್ದೆ ಗೂಡೊಂದ ಈ ಲೋಕಕೆ
ಇರುವೆಯಷ್ಟು ಚಿಕ್ಕದಾಗಿದ್ದರೂ;
ದುಡಿದು ಬಿಡುತ್ತಿದ್ದೆ ಜಗಕುಟುಂಬಕ್ಕೆ
ಮಂದಗೇಡಿಯಷ್ಟು ಬುದ್ದಿವಂತನಾಗಿದ್ದರೂ;
ಬರೆದು ಬಿಡುತ್ತಿದ್ದೆ ತಾಯ ನುಡಿ ಲೋಕಕ್ಕೊಂದು ಹಾಡು

ರಚಣೆ: ರೇವಣಸಿದ್ದ ಗೌಡರ
ರಬಕವಿ-587324
Mobile:9008060918

- Revanasidda Goudar

12 Dec 2016, 02:09 pm

ಮಣ್ಣೊಳಗೆ ಮಣ್ಣಾದವರು

ಹಾಡು ಕಟ್ಟಿ ಹಂತಿ ಹೊಡೆದವರು ನಾವು
ಮಟ್ಟಿ ಹೊಡೆದು ಮೆಟ್ಟಿ ನಿಂತವರು ನಾವು
ಕವಣಿಗೆ ಕಲ್ಲು ಕಟ್ಟಿ ಕಾಳು ಉಳಿಸಿಕೊಂಡವರು ನಾವು
ಹೆಗಲಿಗೆ ನೊಗ ಕಟ್ಟಿ ನೆಲ ಊಳಿದವರು ನಾವು
ಮಳೆರಾಯನಿಗೆ ಕಾಡಿ ಬೇಡಿ ಬೆಳೆ ಉಳಿಸಿಕೊಂಡವರು ನಾವು
ಬಿಸಿಲಿಗೆ ಮೈ ಒಡ್ಡಿ ಬೆಳೆ ಬೆಳೆಸಿದವರು ನಾವು
ಮಣ್ಣಲ್ಲಿ ಮೈ ತೇದವರು ನಾವು
ನುಡಿಗೆ ನಾಲಿಗೆ ಮೇಲೆ ನೆಲೆ ಕೊಟ್ಟವರು ನಾವು
ನಾಡಿಗೆ ಬೆನ್ನೆಲುಬಾಗಿ ನಿಂತವರು ನಾವು
ನಾಡ ಬಂಡಿಗೆ ಗಾಲಿಯಾದವರು ನಾವು
ಬೇಡುವ ಕೈ ಗಿಂತ ನೀಡುವ ಕೈ ಲೇಸೆಂದವರು ನಾವು
ಸ್ವಾಭಿಮಾನಕ್ಕಾಗಿ ಉರುಳಿಗೆ ಕೊರಳು ಕೊಟ್ಟವರು ನಾವು
ಮನುಜರ ಹೊಟ್ಟೆ ತುಂಬಿಸಲು ಮಣ್ಣೊಳಗೆ ಮಣ್ಣಾದವರು ನಾವು

ರಚಣೆ:ರೇವಣಸಿದ್ದ ಗೌಡರ
ರಬಕವಿ-587314
Mobile:9008060918

- Revanasidda Goudar

12 Dec 2016, 01:37 pm

ಎಲ್ಲರೆದೆಯೊಳಗೂ ಪ್ರೇಯಸಿಯಿದ್

ಎಲ್ಲರೆದೆಯೊಳಗೂ
ಒಬ್ಬಳು ಪ್ರೇಯಸಿಯಿದ್ದಾಳೆ.
ಹೇಳಿಕೊಳ್ಳುವ ಮಹದಾಸೆ;
ಕ್ಷಮಿಸಿ, ಹೆಂಡತಿ ಜೊತೆಗಿದ್ದಾಳೆ..!

ಎಲ್ಲರೆದೆಯೊಳಗೂ
ಒಬ್ಬ ಪ್ರಿಯಕರನಿರುತ್ತಾನೆ.
ಹೇಳಿಕೊಳ್ಳದೆ ಮೆಲುಕುವಾಸೆ;
ಕ್ಷಮಿಸಿ, ಗಂಡನಪ್ಪಿಕೊಂಡಿದ್ದಾನೆ..!

ಎಲ್ಲರೂ ಪರಿಪಕ್ವವಾಗುವ ಮುನ್ನ
ಬೆಂದು ನೊಂದಿದ್ದಾರೆ.
ಮೌನವ ಗಾನವಾಗಿಸಲು
ಕನ್ನಡಿಯೆದುರು ನಿಂತಿದ್ದಾರೆ.......

ಎಲ್ಲರೆದೆಯೊಳಗೂ.................!

*ಸಿಹಿಗಲ್ ಪ್ರಶಾಂತ, ಶಿವಮೊಗ್ಗ*

- ಸಿಹಿಗಲ್ ಪ್ರಶಾಂತ

12 Dec 2016, 12:57 pm

ಜಗದ ಭಾಂಧವ್ಯ

ಮನ ಮನದ ನಡುವೆ ಅಹಮ್ಮಿನ ಪರದೆ
ಸಖನ ಮನವನರಿಯದೆ ದೂರವೇಕೆ ಸರಿದೆ.
ಜಗದರಿವ ಭ್ರಮಿಸಿ ಬೀಗುವುದು ನಿಷ್ಪಲ
ಮನದರಿವನರಿತು ಬಾಳುವುದೆ ತತ್ಪಲ

- ಜಿ. ಶಿವಪ್ಪ ನಾಯಕ

12 Dec 2016, 11:36 am

ಸಿಂಧೂರ ತಿಲಕ

ನನ್ನ ಪ್ರೀತಿ ನಿನ್ನ ಹಣೆಗೆ
ಸಿಂಧೂರ ತಿಲಕವಾಗಲಿ
ಆ ತಿಲಕ ನಮ್ಮ ಪ್ರೀತಿಯ
ಬಂಧನಕ್ಕೆ ಚಿಲಕವಾಗಲಿ

ನನ್ನ ಪ್ರೀತಿ ನಿನ್ನ ಕಣ್ಣಿಗೆ
ಕಾಡಿಗೆಯಾಗಲಿ
ಆ ಕಾಡಿಗೆ ನಮ್ಮ
ಪ್ರೀತಿಗೆ ಕಾವಲಾಗಲಿ

ನನ್ನ ಪ್ರೀತಿ ನಿನ್ನ ಕೈಗಳಿಗೆ
ಬಳೆಗಳಾಗಲಿ
ಆ ಬಳೆಗಳಲ್ಲಿ ನಮ್ಮ ಪ್ರೀತಿ
ಬಂಧಿಯಾಗಲಿ

ನನ್ನ ಪ್ರೀತಿ ನಿನ್ನ ಕಾಲ್ಬೆರಳಿಗೆ
ಕಾಲುಂಗರವಾಗಲಿ
ಆ ಉಂಗರ ನಮ್ಮ
ಪ್ರೀತಿಗೆ ಶ್ರಂಗಾರವಾಗಲಿ

ನನ್ನ ಪ್ರೀತಿ ನಿನ್ನ
ಮುಡಿಗೆ ಹೂವಾಗಲಿ
ಆ ಹೂ ನಮ್ಮ ಪ್ರೀತಿಗೆ
ಪರಿಮಳವಾಗಲಿ

ನನ್ನ ಪ್ರೀತಿ ನಿನ್ನ
ನಾಸಿಕಕೆ ನತ್ತಾಗಲಿ
ಆ ನತ್ತಿನ ಒಡತಿ ನನ್ನ
ಮನದ ಒಡತಿಯಾಗಲಿ

ನನ್ನ ಪ್ರೀತಿ ನಿನ್ನ
ಕೋರಳಿಗೆ ಮಾಂಗಲ್ಯವಾಗಲಿ
ಆ ಮಾಂಗಲ್ಯ ನಮ್ಮ
ಬಾಳಿಗೆ ಶುಭಮಂಗಳವಾಗಲಿ

ಮಹೇಶ ಕಾಳಿ

- ಮಹೇಶ ಕಾಳಿ

12 Dec 2016, 11:26 am

ಗೊತ್ತಿರದ ಗುಲಾಮರು

*ಗೊತ್ತಿರದ ಗುಲಾಮರು*

ಸೂರ್ಯ ಲೋಕದಿಂದ
ಧರೆಗೆ ಬಂದವಳಿಗೆ
ಭುವಿಯಲ್ಲಿ ಶಾಖವಂತೆ
ಉಪಯೋಗ ಬಾರದ
ಕಡಲು ಕುದಿಯುವ
ಕೆಂಡವಂತೆ ಇವಳಿಗೆ
ಸಹ್ಯಾದ್ರಿ ಮರಗಿಡಗಳು
ಮರಭೂಮಿಯ ಕಂಬದಂತೆ
ಗುಡಿ ಚರ್ಚಮಸಿದಿಗಳು
ಸತ್ತ ದೇವರ ಸಮಾದಿಗಳಂತೆ
ತಂಪು ನೀಡುವ ಚಂದಿರ
ಕೆಂಡಕಾರುವ ಬೆಂಕಿಯಚೆಂಡಂತೆ
ಗುಡ್ಡ ಬೆಟ್ಟ ಕಲ್ಲುಗಳು
ಹೆಣದ ರಾಶಿಯಂತೆ
ಉಕ್ಕಿ ಹರಿಯುವ ನದಿಯು
ಹೆಣ್ಣಿನ ರೋಧನೆಯಂತೆ
ಹಾರಾಡುವ ಹಕ್ಕಿಗಳು
ಕಣ್ಣುಕುಕ್ಕಲು ಬಂದಿವೆಯಂತೆ
ಈ ನರಪಿಳ್ಳೆಗಳು ಒಬ್ಬರಿಗೆ
ಒಬ್ಬರೂ ಗೊತ್ತಿರದ ಗುಲಾಮರಂತೆ

- ಆನಂದ ಪೂಜಾರಿ

11 Dec 2016, 11:27 pm

ಬಾ ಇನಿಯಾ ಮರಳಿ ಸನಿಹ

ಹೇಳಿ ಹೋಗು ಗೆಳೆಯ
ದೂರಾಗುವ ಮುನ್ನ
ಹೇಳಿ ಹೋಗು ಇನಿಯಾ
ಮನ ಕದಡಿದ ಕಾರಣ

ನನ್ನ ಬಾಳ ಪಯಣಕೆ
ಅಂಬಿಗ ಎಂದು ನಂಬಿದೆ
ನಡು ನೀರಲಿ ಬಿರುಗಾಳಿಗೆ ಬಿಟ್ಟು
ಈಜಿ ನೀ ದಡ ಸೇರಿದೆ ಗೊತ್ತಿಲ್ಲದೆ

ಕನಸಿನಲ್ಲು ನೆನೆಸಿರಲಿಲ್ಲ
ಮೈ ಮನ ದೋಚುವೆವೆಂದು
ಪ್ರೀತಿಯ ಆಳ ತಿಳಿಯದೆ
ಮೈ ಸುಖ ಬೇಡಿ ಕಾಡಿದೆ ಅಂದು

ಧರೆಯು ಸುಡುತ್ತಿದೆ ಇಂದು
ಒಡಲು ಉರಿಯುತ್ತಿದೆ ಬೆಂದು
ಕಡಲ ಬಳ್ಳಿ ಚಿಗುರುತ್ತಿದೆ ನೊಂದು
ನನ್ನ ಜೀವಕೆ ಜನ್ಮದಾತ ಯಾರೆಂದು?

ಬಾ ಇನಿಯ ಮರಳಿ ಸನಿಹ
ನಿನ್ನಲಿಲ್ಲದೆ ತಾಳೇನು ಈ ವಿರಹ
ದೂರಾದರೆ ನೋವು ತರತರಹ
ನೀ ಬರೆದ ಬರಹ ಅಚ್ಚಾಗಿದೆ ಒಡಲಲಿ

ಓ ಹೃದಯಾ ನೋಡು ಮೊಗವ
ಅರುಳುವ ಮೊಗ್ಗು ಹೂವಾಗಿ
ಕಮರಿಹೋಗುವ ಮುನ್ನ ಬಾ
ನನ್ನ ಮುಡಿ ಸೇರು ಹೂಮಾಲೆಯಾಗಿ

- ಆನಂದ ಪೂಜಾರಿ

11 Dec 2016, 11:24 pm

ಎಲ್ಲಿದೆ ಬದುಕು?

ಎಲ್ಲಿದೆ ಸೊಗಸು ಈ ನರಜನ್ಮಕ್ಕೆ
ಎಲ್ಲಿದೆ ಬದಕು ಈ ಅಸುರ ಮನಕ್ಕೆ
ಏನು ಅರಿಯದ ಮಗ್ದ ಪ್ರಾಣಿಗಳು
ಬದುಕಿ ಬದುಕಿಸುತ್ತಿವೆ ಬಾಳನು
ನಕ್ಕು ನಲಿದು ನೂಕತ್ತಿವೆ ಕಾಲನು

ನಿರ್ಮಲ ಸ್ವಚ್ಚ ಮನಸ್ಸಿನ
ಗೋಡೆ ಕೆಡವಿ ಮೆರತ್ತಿಹನು
ಅಮುಲುಗಣ್ಣಿನಲ್ಲಿ ಜಗವ
ನೋಡುತ್ತಿಹ ಅಂಧಕಾರನು
ಪ್ರಕೃತಿ ಅಂದಕ್ಕೆ ಹಲುಬುತ್ತಿಹನು

ಕಾಡು ಪ್ರಾಣಿಗಳು ಕಾಡಿನಲ್ಲಿವೆ
ಸೃಷ್ಠಿ ಮಡಿಲಲ್ಲಿ ಮನೆಮಾಡಿವೆ
ಕಾಡುವ ಪ್ರಾಣಿಗಳು ನಾಡಿನಲ್ಲಿವೆ
ನಾಡಿನಲ್ಲಿ ನೆಲೆಯಿಲ್ಲದೆ ತಿರುಗತ್ತಿವೆ
ಎಷ್ಟು ತಿರುಗಿದರೂ ಬದುಕು ಕಟ್ಟಲಾಗಲಿಲ್ಲ

ಕಾಣದ ಲೋಕಕ್ಕೆ ಕಾಲಿಡುತ್ತಿರುವರು
ಕಂದಕದ ಕಡಲಲ್ಲಿ ತೀರದ ಪಯಣ
ಬಯಲು ಬೀರುಗಾಳಿಯ ಜೊತೆಗೆ ಕದನ
ತನ್ನವರನ್ನ ತಿಂದು ತೇಗಿ ದಣಿದು
ಅಹಂ ಕೋಟೆಯೊಳಗೆ ಬಿಕ್ಕುವನು

ದಕ್ಕದ ಪಕ್ಕದ ಗೋಡೆಗೆ ತೆಲೆಯಿಡುವನು
ಅಂದದ ಚೆಂದದ ಬಾಳಿಲಿ ತೆಲೆ ಹಿಡಿವನು
ಮನದ ಮಾತಿಗೆ ಪ್ರೀತಿ ದೀಪವನ್ನಿಟ್ಟು
ಅಲೆ ಅಲೆಯಾಗಿ ಅಲೆಯವನು
ಬದಕು ಸೊಗಸ ಸಂಚಾರಿಯಾಗಿ

- ಆನಂದ ಪೂಜಾರಿ

11 Dec 2016, 11:22 pm