Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನವ್ವ..

ನಮಗಿಲ್ಲಿ ಯಾರಿಹರು
ಭುವಿಗೆ ಬಂದೊಡೆ
ಯಾರಿದ್ದರೂ ಇರದಿದ್ದರೂ
ನಮಗೆ ಸನಿಹದಿ ಇರುವಳು ನಮ್ಮ ತಾಯಿ...

ಚಿಕ್ಕವರಿದ್ದಾಗ ಪಾಲಿಸಲು-ಪೋಷಿಸಲು
ನಮ್ಮ ಹಸಿವಿನ ಕೂಗನ್ನು ತೀರಿಸಲು
ಸದಾಕಾಲ ನಮ್ಮೊಂದಿಗೆ ಇರುವಳು ಹಡೆದವ್ವ...


ಅತ್ತಾಗ ನಮ್ಮ ಕಣ್ಣಿರು ಒರೆಸುತ್ತ
ತನ್ನ ಜೀವನದ ಪರಿವಿಲ್ಲದೇ ನಮಗಾಗಿ
ಕೂಡಿಟ್ಟ ಹುಂಡಿ ಕಾಸನ್ನು ಕೈ ಚಾಚಿದಾಗ
ಕೊಟ್ಟು ಅದರಲ್ಲೆ ಸಂತಸ ಪಡೆಯುವಳು ನನ್ನವ್ವ..

ಹರೆಯಕೆ ಬಂದೊಡೆ ಮಗ
ಹಾಯಾಗಿರಲೆಂದು ಕೇಳುವಾ
ಮುಂಚೆಯೇ ಎಲ್ಲವನು ಕೈಯಲ್ಲಿಡುತ
ಮುಗುಳ್ನಕ್ಕು ತನ್ನ ಹಸಿವನು ಮರೆಮಾಚುವಳು ನನ್ನವ್ವ...


ಸುಂದರತೆ-ಕುರೂಪತೆಯ ಅರಿವಿಲ್ಲದ ಹಡೆದವ್ವ
ಮಗ ಇಚ್ಛಿಸಿದ ಸುಂದರಾಂಗಿಯ ಜೊತೆ
ಕಲ್ಯಾಣ ನೆರವೇರಿಸಿ ಆನಂದ ಪಡುವಳು ನನ್ನವ್ವ..

ಹರೆಯದಿ ಬಯಸಿ ಬಂದ ಸುಖವಾ ಕಡೆಗಣಿಸಿ
ಇಳಿ ವಯಸ್ಸಿನ ವಯೋಮಿತಿಯಲ್ಲಿಯೂ
ಕಂದನ ಕಾಳಜಿಯ ಬಯಸಿದವಳು ನನ್ನವ್ವ...

ಆಕಾಶದಲ್ಲಿನ ಧ್ರುವ ಚುಕ್ಕಿಯಂತೆ
ಸದಾಕಾಲ ಮಿನುಗುತಿರಲಿ
ಆಕೆಯ ಗಲ್ಲದ ಮೇಲಿನ ಮಚ್ಚೆ
ಅವರಿವರು ಎನ್ನದೆ ಎಲ್ಲರ ನಡುವೆ
ಸಮಾಜದಲ್ಲಿ ನಾನು ಎತ್ತರೆಕ್ಕೆರಲು
ನೆರವಾದವಳು ನನ್ನವ್ವ....

- Naveen

12 Dec 2016, 09:23 pm

ಪ್ರೀಯ ಪುಸ್ತಕ

ಓಲುಮೆಯ ನಲ್ಲನ ಪ್ರೇಮಕ್ಕಿಂತ ಮಧುರ. ಸನಿಹದ ಗಳತಿಯ ಸ್ನೇಹಕ್ಕಿಂತ ಸುಮಧುರ.
ಜನ್ಮದಾತ ಪಾಲಕರ ಪ್ರೀತಿಗಿಂತ ಹತ್ತಿರ.
ವೈಭೋಗದ ಜೀವನಕ್ಕಿಂತ ಮಹತ್ತರ.
ನನ್ನ ಪುಸ್ತಕದ ಸಂಭಂಧ.

- rukmini

12 Dec 2016, 08:59 pm

ಅಮ್ಮ ನಿ ಹುಟ್ಟಿದ ದಿನಕಾಗಿ!!

ಅದೃಷ್ಟ ಅದೃಷ್ಟ ನಾ ಮಾಡಿರುವೆ
ನೀ ನಿಟ್ಟ ತುತ್ತಲ್ಲಿ ನಾ ಬೆಳೆದಿರುವೆ!!

ನಾನುಟ್ಟಿದ ದಿನದಂದು ನೀ ಅತ್ತಿರುವೆ ನೀನುಟ್ಟಿದ ದಿನವಿಂದು ನಾ ನಗುತಿರುವೆ!!
ನಡೆಯೋದು ತೊದಲೊದು ನೀ ಕಲಿಸಿರುವೆ
ನಿನ್ನಿಂದ ಕುಣಿದಾಡುತ ನಾ ನಗುತಿರುವೆ!!

ಅದೃಷ್ಟ ಅದೃಷ್ಟ ನಾ ಮಾಡಿರುವೆ
ನೀ ನಿಟ್ಟ ತುತ್ತಲ್ಲಿ ನಾ ಬೆಳೆದಿರುವೆ!!

ಕೂಡೋದು ಕಳೆಯೋದು ನೀ ಕಲಿತಿರುವೆ
ಅಮ್ಮ ನಿನ್ನೋಡಿ ಬದುಕೋದು ನಾ ಕಲಿತಿರುವೆ!!
ಅಂದು ನಾ ಹುಟ್ಟಿದ ದಿನಕ್ಕಾಗಿ ಸಿಹಿತಿನಿಸಿರುವೆ
ಇಂದು ನೀ ಹುಟ್ಟಿದ ದಿನಕ್ಕಾಗಿ  ಇದಬರೆರುವೆ!!

ಅದೃಷ್ಟ ಅದೃಷ್ಟ ನಾ ಮಾಡಿರುವೆ
ನೀ ನಿಟ್ಟ ತುತ್ತಲ್ಲಿ ನಾ ಬೆಳೆದಿರುವೆ!!

- ಭರತ್

12 Dec 2016, 08:49 pm

ಸಮಾಸ

ಅವಳಿಗೆ......
ಒಬ್ಬ ಇನಿಯ...
ಇನ್ನೊಬ್ಬ ನಲ್ಲ...!
ಇಬ್ಬರಿಗೂ ಅವಳು....
ದ್ವಂದ್ವ ಸಮಾಸ
ಆಕೆಯ ಗಂಡನನ್ನು ವಿಗ್ರಹಿಸಿದರೆ
ಅವನು ಬಹುವ್ರೀಸಮಾಸ!
""""""""""""""""""""""""""""""""""""""""
@ಬಸವಪ್ರಿಯ.

- ಬಲವಂತ ಮೋರಟಗಿ(ಬಸವಪ್ರಿಯ)

12 Dec 2016, 08:43 pm

ಬಾ ನನ್ನಲ್ಲಿಗೆ ನಿನಗಿದೆ ಮುಕ

ಮಸಣವು ಕರೆಯಿತು ‌ನನ್ನನು
ಬಾ ನನ್ನಲ್ಲಿಗೆ ನಿನಗಿದೆ ಮುಕ್ತಿ

ಅರಿತದ ಚೂರಿಗೆ
ಎದೆಯೊಡ್ಡಿ ನಿಲ್ಲಬೇಡ
ಸೆಳೆತದ ಪ್ರೀತಿಗೆ ಸೋತು
ಸೆರೆವಾಸ ಅನುಭವಿಸಬೇಡ
ಬಾ ನನ್ನಲ್ಲಿಗೆ ನಿನಗಿದೆ ಮುಕ್ತಿ

ದೂರದಿಂದ ಬಂದವನು
ಬಂಧುವಲ್ಲ ನಿನಗೆ
ಅತ್ತಿರದವ ನೆಂಟನಲ್ಲ
ಕೊನೆಯ ತನಕ ನಿನಗೆ
ಬಾ ನನ್ನಲ್ಲಿಗೆ ನಿನಗಿದೆ ಮುಕ್ತಿ

_ ಪುನೀತ್ ಸೋಮಿ

- _ ‌‌ಪುನೀತ್ ಸೋಮಿ

12 Dec 2016, 08:35 pm

ನಕ್ಷತ್ರಗಳು

ನಕ್ಷತ್ರಗಳೆಂದರೆ ನನಗೆ
ಎಲ್ಲಿಲ್ಲದ ಕುತೂಹಲ,ಆಸಕ್ತಿ
ಯಾಕೆಂದರೆ
ಅವುಗಳು -ರಾತ್ರಿಗಳಲ್ಲಿ
ಮಾತ್ರ ಮಿನುಗುತ್ತವೆ.

-ಪದ್ಯಾಣ.

- padyana

12 Dec 2016, 08:03 pm

**ಜಯಂತಿ**

ಜಾತಿಯ ಹೆಸರಿನಲ್ಲಿ
ಆಚರಿಸುವುದು ಬೇಡ
ಮಹಾತ್ಮರ ಜಯಂತಿ
ಅದುವಲ್ಲಾ ನಮ್ಮ ಸಂಸ್ಕ್ರತಿ!
ಜೀವನದಲ್ಲಿ ಅಳವಡಿಸಿಕೊಳ್ಳಿ
ಮಹಾತ್ಮ ರು ಸಾರಿದ ನೀತಿ
ಅಂತರಾಳದಲ್ಲಿ ಅರಳಲಿ ‌ ಮಾನವೀಯ ಪ್ರೀತಿ!
ಆವಾಗ ಬಾಳಲ್ಲಿ ಕಾಣುವುದು
ಸಂತಸದ‌‌ ಸಂತೃಪ್ತಿ ಸಂಪ್ರೀತಿ!
‌‌‌‌ **ಬಸವಪ್ರಿಯ**
೯೭೪೦೧೨೩೬೭೩

- ಬಲವಂತ ಮೋರಟಗಿ(ಬಸವಪ್ರಿಯ)

12 Dec 2016, 07:17 pm

ಮಾನವಜನ್ಮ

ತಾಯಿಯ ಗರ್ಭದಿಂದ ಮಾನವರೂಪ ಜನ್ಮತಾಳಿ,
ತಾಯಿ-ತಂದೆಯ ಪ್ರೀತಿ-ಆರೈಕೆಗೆ ಪಾತ್ರರಾಗಿ,
ಪುಟ್ಟ ಪುಟ್ಟ ಹೆಜ್ಜೆಯಿಟ್ಟು,ಮಾತು ಕಲಿತು,
ಬಾಲ್ಯಾವಸ್ಥೆಯಲ್ಲಿ ಆಟವಾಡಿ,
ಯವ್ವನಾವಸ್ಥೆಯಲ್ಲಿ ಸ್ವಭಾವ-ಬುದ್ದಿ ಕಲಿತು,
ಜೀವನಾದಾರಕ್ಕೆ ಕೆಲಸ ಪಡೆದು,
ತನ್ನದೇ ಆದ ಸಂಸಾರ ಗಳಿಸಿ,
ತನ್ನ ಮಕ್ಕಳಿಗಾಗಿ ದುಡಿದು,
ಮುಪ್ಪನ್ನು ಪೂರೈಸುವುದೇ ಮಾನವಜನ್ಮ.

- Shilpa dhruva

12 Dec 2016, 06:43 pm

ಸ್ನೇಹ..

ಕನಸುಗಳು ನೂರಾರು
ಹಂಚಿಕೊಳ್ಳಲು ಜೊತೆ ಇರುವೆಯಾ..

ಸಾವಿರ ಯೋಚನೆ ನಡುವೆ
ಗುರಿಯೊಂದ ತಲುಪಲು
ನಿನ್ನಾಸರೆ ನೀಡುವೆಯಾ..

ಮನದಂಗಳದ ಕೈತೋಟದಲಿ
ಅರಳಿದ ಸ್ನೇಹ ಕುಸುಮವು ನೀ..
ಸದಾ ಹೀಗೆ ಇಲ್ಲಿ ನಗುತಾ ನಲಿವೆಯಾ...?

- Indushekar Chinivar

12 Dec 2016, 05:55 pm

ದೃಷ್ಠಿ

ಹರಿದಿದೆ ಸೀರೆಯ ಸೆರಗು
ನೀರೆ ...ಗೆ
ನೀರಿಗೆ ಬಂದರೂ ಕೊರಗು
ದಾರಿಗೆ ಬಂದರೆ
ದಾವಿಸಿ ಬರುವರು
ಕ್ಷೇಮಕ್ಕಲ್ಲ,
ನೋಡಲು ಮೈ ಬೆರಗು..!!
__________________
*ಎಲ್ಲಾರ್_ಸೂರ್ಯ*

- ಸುರೇಶ ಎಲ್.ರಾಜಮಾನೆ

12 Dec 2016, 05:39 pm