ಅವಲಂಬಿಸುವರು ಇತರರನು,
ಮಾಡುವರು ಸಸಾರವನು,
ಬರುವುದು ಸಂಕಷ್ಟ ನಿರೀಕ್ಷಿಸದೆ,
ಅನುಭವಿಸುವರು ತಾವೇ ಅಪೇಕ್ಷಿಸದೆ,
ಬೇಕಾ ಈ ಅವಲಂಬನೆ?
ಏತಕ್ಕಾಗಿ ಈ ಪರಾವಲಂಬನೆ?
ಎಲ್ಲರೂ ಬದುಕುವುದು ವಿಶಾಲವಾದ ಈ ಪ್ರಪಂಚದಲಿ,
ಇರುವುದು ಎಲ್ಲರಿಗೂ ಅವಕಾಶ ಈ ಜಗದಲಿ,
ತೋರಿಸಿ ಬದುಕಿ ಯೋಚಿಸದೆ,
ಸಾದಿಸಿ ಬದುಕಲಿ ಚಿಂತಿಸದೆ.
ನನ್ನೆದೆಯ ಹೊಂಗಾಡಿನಲ್ಲಿ
ನಿನ್ನದೆ ನೆನಪು ಗೆಳತಿ
ಮತ್ತೆ ಮತ್ತೆ ಬರುತೈತಿ
ನೋವನ್ನು ತರತೈತಿ!
ನಿನ್ನ ಮನದ ಮೌನದಲ್ಲಿ
ನನ್ನ ಜೀವ ತುಂಬೈತಿ
ನಿನ್ನ ಮಾತಿನಾಂತರ್ಯದಲ್ಲಿ
ನನ್ನೆದೆಯ ಹಾಡೈತಿ!
ನಿನ್ನ ಕಣ್ ನೋಟದಲ್ಲಿ
ಅದಮ್ಯ ಪ್ರೇಮ ಅರಳೈತಿ
ನಿನ್ನ ಪ್ರೇಮ ಸೆಳೆತದಲ್ಲಿ
ನನ್ನೆದೆಯ ಹಾಡೈತಿ!
ಕಾರಣವಾಯಿತು ನನ್ನ ಬಾಳಿಗೆ
ನಿನ್ನಯ ಪ್ರೀತಿಯ ಬೆಸುಗೆ
ಚಿಗುರೊಡಿಯಿತು ನನ್ನದೆಯಲ್ಲಿ
ಮಾಗಿದ ಕನಸ್ಸು
ಪ್ರೇರಣಯಲ್ಲವೇ ಅದಕ್ಕೆ
ನಿನ್ನ ಮೊಗ್ಗಿನ ಮನಸ್ಸು!
ಬದುಕಲಾರೆನು ನಾನು ಬರೀ ಭ್ರಮೆಯೊಳಗೆ.
ಹಿOಸೆ ನೀಡುತ ಕಾಡುವ ಪ್ರಶ್ನೆಗಳೆಷ್ಟೋ ಎದೆಯೊಳಗೆ.
ಹೊರಬOದಾಗ ಸಿಡಿಯುವುದು ಜ್ವಾಲಾಮುಖಿ.
ಮನದ ಮೌನ ಭಾವನೆಯ ಅOತರ್ಮುಖಿ.
ನನ್ನ ಉಸಿರು ಪ್ರೀತಿಸಿದ್ದು ಬರೀ ಹಸಿರನ್ನು.
ಅದು ಸಮ್ರದ್ಧ ನಾಡಿನ ಗOಧದ ಕಾಡು.
ಉತ್ಸಾಹ ಚಿಲುಮೆಯಾದ ಮನದ ಹಾಡು.
ಚಿಮ್ಮುತ್ತಿದೆ ರೋಷ ತಡೆಯಲಾಗುತ್ತಿಲ್ಲ.
ಬೆಳಕು ಕಾಣದಾಗಿದೆ ಕತ್ತಲೆಯ ಜಗದಲ್ಲೆಲ್ಲ.
ನುಡಿಯಲಾಗದ ನುಡಿ ಬರಹಕ್ಕೆ ಇಳಿದಿದೆ.
ಆಕಾಶದಲ್ಲಿನ ಮೋಡದ ವರ್ಷಧಾರೆ ಭುವಿಗಿಳಿದOತೆ.
ಬುದ್ದನ ಶಾOತಿ ಬೇಕೆOದು ಮನ ಬಯಸಿದೆ.
ಆದರೆ ಬುದ್ದನೊOದಿಗೆ ಆತನ ಶಾOತಿಯೂ ಹೊರಟು ಹೋಗಿದೆ.