Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಚಂಡ.

ಕಡಲ ಧರೆಯಲಿ
ಅಬ್ಬರಿಸಿ ಬೊಬ್ಬಿರಿದ ಚಂಡ
ನಂತ ವ್ಯಾಘ್ರ " ವಾರ್ದ " ನನ
ಮಾರುತಕ್ಕೆ ತತ್ತರಿಸಿ ನಲುಗಿ ಸುಳಿ
ಗಾಳಿಗೆ ಮಡಿಲೊಳಗಿನ ದುಃಖ ಚೆನ್ನೈ
ನಗರಿಗರ ಮೋರೆಯ ನೋವ್ವು-ದುಮ್ಮಾನ
ಗಳಿಗೆ ನನ್ನದೋಿಂದಿಷ್ಟು ಕನಿಕರದ
ಹನಿ ಹನಿ ಕಣ್ಣೀರು.

ಭಗವಂತನೆಂಬ ಓ,
ನಮ್ಮೆಲ್ಲರ ಪ್ರಭುವೇ ನಿನಗೋಂದಿಷ್ಟು
ಕಾಳಜಿಯಿದ್ದಲ್ಲಿ ನನ್ನವರ ದುಗುಡ ಕೇಳಿ
ಉಳಿಸಿ ಬಿಡು ಇದೊಂದು ಬಾರಿಯೂ...

--ಭಾಮಿನಿ ಡಿ.ಕೆ .ಎಸ್

- bhamini. chitradurga

13 Dec 2016, 07:04 pm

ಹನಿ..

ಇಳಿ ಸಂಜೆಯಲಿ ,
ತನ್ನ ಕೆಂಪು ಕರದಲಿ‌
ಇಳೆಯ‌ ಗಲ್ಲವ ತಾಕಿ
'ಕಾಲವು ಕ್ಷಣ ನಿಲ್ಲಬಾರದೆ'
ಎಂದು ಆದಿತ್ಯ ಕೇಳಿದ ಸಂಜೆ...

- Indushekar Chinivar

13 Dec 2016, 06:03 pm

ರೈತನ ಕೄಷಿ

ದಟ್ಟವಾದ ಕಾಡಿನಿOದ ಸಾಕಾಗುವಷ್ಟು ಮಳೆ.
ಕಷ್ಟದಿOದ ರೈತ ಪಡೆದ ಬೇಕಾದ ಬೆಳೆ.
ದೊಡ್ಡ ಯOತ್ರ ಬOತು ತೆಗೆಯಲು ಕಳೆ.
ಗಡಗಡ ಶಬ್ದಕ್ಕೆ ನಡುಗಿಹೋಯಿತು ಇಳೆ.

ದನದ ಸಗಣಿಯೇ ಅOದು ರೈತನಿಗೆ ಆಧಾರ.
ರಾಸಾಯನಿಕವೇ ಇOದು ಅಲ್ಪಬೆಳೆಗೆ ಆಹಾರ.
ಸಾವಯವ ಕೄಷಿ ಮಾಡುವಾತನೇ ಬಲುಚತುರ.
ಶ್ರಮಪಟ್ಟು ಮುOದೆ ಬOದ ರೈತನಾಗುವ ಪ್ರಗತಿಪರ.

ಬೆಳೆಸಿದ ಬೄಹತ ಬೆಳೆಗೆ ಬಾಜಾರಿಲ್ಲ ಬೆಲೆಯಿಲ್ಲ.
ಮಧ್ಯವರ್ತಿಯ ಮೋಸಕ್ಕೆ ಮನ್ನಣೆ ಇದೆಯಲ್ಲ.
ಕOಗಾಲಾದ ಕOಗಳಲ್ಲಿ ಕಣ್ಣಿರಿಗೆ ಬರವಿಲ್ಲ.
ಜನನಾಯಕರ ಮಾತಕೇಳಿ ರೈತ ಕಿವುಡಾದನಲ್ಲ.

ಕೀಟಕ್ಕಾಗಿ ಕ್ರೀಮಿನಾಷಕದಿOದ ಭೂಮಿ ಹಾಳಾಯಿತು.
ಬೆಳೆ ಬೆಳೆಯದೆ ಪಡೆದ ಸಾಲ ತೀರದಾಯಿತು.
ಸ್ವಾರ್ಥದ ಜನರ ದಾಹ ತೀರದೆ ಅತಿಯಾಯಿತು.
ಬೆಳೆಯ ಜೊತೆಗೆ ರೈತನ ಶವ ಬೆOಕಿಯಲ್ಲಿ ಲೀನವಾಯಿತು.

ಹಲವರಲ್ಲಿ ಕೆಲವರುOಟು ಎಲ್ಲದಕ್ಕೂ ಅಪವಾದ.
ಶ್ರಮದ ಖುಷಿಯಲ್ಲಿ ಫಲವ ತೆಗೆದ ಸಮ್ರದ್ಧ.
ತನ್ನ ನOಬಿ ಕಾಯಕ ಮಾಡುತ ಫಲದಾಯಕನಾದ.
ಪ್ರೀತಿಯಲ್ಲಿ ಎಲ್ಲರಿOದ ಪ್ರಣಾಮ ಪಡೆದ.

- rukmini

13 Dec 2016, 05:07 pm

ಹೂಮನದ ಹೆಣ್ಣೇ...

ಹೂಮನದ ಹೆಣ್ಣೇ
ನೀ ಅರಳೆಯ
ಮೊಗ್ಗಾಗಿ ಮುನಿದು
ನರಳಿ ನಲುಗುವೆಯಾ

ನವಿರಾದ ಭಾವಗಳ
ಅಂತರಾಳದಿ ಬಚ್ಚಿಟ್ಟು
ಸುಂದರ ಸ್ವಪ್ನಗಳ
ಪಕಳೆ ಅಡಿಯಲಿ ಕಾಪಿಟ್ಟು
ಮೌನದಿ ಕೊರಗುವೆಯಾ

ನೀ ಸೂಸುವ ಸುಗಂಧ
ಕನಸ ಬಿತ್ತುವ ಮೃದುಸ್ಪರ್ಶ
ಸವಿಮಾತ ಮಧುಪಾನ
ನಿನ್ನಂತರಂಗದ ಸ್ನೇಹಯಾನ
ನೀನೆ...
ಈ ಜೀವಕೆ ಕೋಮಲಗಾನ
ಈ ಜನ್ಮದ ಚೈತನ್ಯತಾಣ

ಓಹ್ ಹೂಮನದ ಹೆಣ್ಣೇ..
ನನಗಾಗಿ ಅರಳೆಯ‌...?

- Indushekar Chinivar

13 Dec 2016, 04:25 pm

ಕ್ಷಮೆಯಿರಲಿ ಹೂಗಳೆ...

ಹೊಸ ಹೊಂಬೆಳಕು
ಅಲ್ಲಲ್ಲ ಬರಿದೆ ಬೆಳಕು
ನಿಜ ನಗೆಯ ಸ್ವರೂಪ
ನೋವ ಜಯಿಸಿದ ಭಾವ ...
ಧರೆಗಿಳಿದ ವರ್ಷನು
ಸುರಿಸಿ ಅಮೃತ ಧಾರೆ
ಮರೆಸಿ ನಿನ್ನೆಲ್ಲ ನೋವು
ಸರಿಸಿದನೆ ಸಹಿಸಿದ ನೋವ ತೆರೆ ..
ಕ್ಷಮೆಯಿರಲಿ ಹೂಗಳೆ ನನ್ನಲಿ
ಸೈರಿಸುವಿರಿ ನಾನುಣಿಸುವ
ಭ್ರಮೆಯ ಭಾರ
ಅರಿಯದೆ ನಿಮ್ಮಂತರಾಳ
ಪ್ರತಿಯಾಗಿ ನೀವೀವಿರಿ
ಬರಿದೆ ಮುದವನು ,,,
ಬಿರಿದಿದೆ ಭಾವುಕ
ಹೃದಯದಾಳದ ಮನ
ಕಳಿಸಿದೆ ಕಣ್ಣೀರಧಾರೆ
ನಿಮ್ಮೊಡನೆ ಆತ್ಮನಿವೇದನೆಗೆ ..
ಮೇಘವೆ ,ವರ್ಷವೆ ವಂದನೆ
ಬಿಕ್ಕಿಸಿದೆ ಮನವನೆ
ತಂದೆ ಹಗುರ ಭಾವನೆ
ಕರುಣಾಳುವಿನ ಹರಿಕಾರ ನೀನೆ ...

- Bharavi

13 Dec 2016, 03:57 pm

ಕವಿ- ಕತೆ

ಬೇಡ ಎನ್ನಬೇಡ
ನನ್ನ ಕವಿತೆ
ಬಾಡಿ ಹೋದೀತು
ಸಾಹಿತ್ಯ ಕತೆ

ಬೇಡವಾಯಿತೆ
ಭಾವನೆಗಳ ಮಾತು ಮಂಥನ
ಕೊನೆಯಾದೀತು
ನೋವು ನಲಿವುಗಳ ಕಥನ

ಬೇಸರವಾಯಿತೆ
ಮನದ ತುಮುಲಗಳ ಆಕ್ರಂದನ
ಮುದುಡಿ ಹೋದೀತು
ಮೃದು ಹೃದಯಕಮಲದ ಚೇತನ

ಹೊರೆಯಾಯಿತೆ
ಕಾವ್ಯ ಕನ್ನಿಕೆಯ ತಾಕಲಾಟ
ಮುದವ ನೀಡೀತು
ಅವಳೊಂದಿಗಿನ ಲಲಾಟ

ಕಹಿಯಾಯಿತೆ
ಸಿಹಿ ಸಾಲುಗಳ ಕಣ್ಣೋಟ
ಮಧುರವಾದೀತು
ಸಾಹಿತ್ಯದ ಜೇನೂಟ

ಬರೆಯದಿರಲಾರೆ
ನಾ ನಿನ್ನ, ಕವಿತೆ
ಬೇಸರವಾದರೂ
ನೀ ನನ್ನ ಹಣತೆ

✍ಚಂದ್ರಶೇಖರ ಹೆಗಡೆ
CRP ಗುಳೇದಗುಡ್ಡ ಪಶ್ಚಿಮ

- ಚಂದ್ರಶೇಖರ ಹೆಗಡೆ

13 Dec 2016, 03:50 pm

ಸಮಾನತೆ?

ಬರಗಾಲದ ಬಿಸಿಲಿನಲ್ಲಿ ಬಡವಾದ ದೇಹ
ಹರಿದ ಅOಗಿಯೊಳಗೆ ತೂರಿಕೊOಡಿದೆ.
ಪ್ರತಿ ಹೆಜ್ಜೆ ಇಡುವುದಕ್ಕೂ ತನ್ನ ಶಕ್ತಿಯೊOದಿಗೆ ಕಲಹ.
ಆದರೂ ಮಗು ಅಮ್ಮನ ಹಿOದೆ
ಓಡುತ್ತಿದೆ ತನಗೆ ತಿOಡಿ ಬೇಕೆOದು.
ಹಸಿದ ಕOಗಳ ಕೂಗು ಜಗತ್ತನ್ನೆ ಮರೆತಿದೆ.

ಅಪಾರ್ಟಮೇಂಟನಲ್ಲಿ ಕೊಬ್ಬಿದ ದೇಹ
ಚಿತ್ರವಿಚಿತ್ರ ಬಟ್ಟೆಯೊಳಗೆ ಸೇರಿಕೊOಡಿದೆ.
ಪ್ರತಿ ಹೆಜ್ಜೆ ಇಡುವುದಕ್ಕೂ ಸೋಮಾರಿತನದೊOದಿಗೆ ಕಲಹ.
ಆದರೂ ಮಗು ಅಮ್ಮನಿOದ ದೂರ ಓಡುತ್ತಿದೆ ತನಗೆ ತಿಂಡಿ ಬೇಡೆOದು.
ವಸ್ತುಗಳೊOದಿಗೆ ಮೈಮರೆತು ತನ್ನನ್ನೇ ಮರೆತಿದೆ.

ಸಮಾನರೆOದು ಹೇಳಲು ಸಾಕು ಒOದು ನಿಮಿಷ.
ಸಾಧಿಸಲಾಗಲ್ಲಿಲ್ಲ ಕಳೆದರೂ ಸಾವಿರ ಸಾವಿರ ವರುಷ.
ಕೆಲವರ ಹಬ್ಬದ ಆಚರಣೆಗೆ ನೆಪ ಹೊಸ ವರುಷ.
ಕOಗೆಟ್ಟ ಕೆಲವರಿಗೆ ಭೂಮಿಯ ತುOಬೆಲ್ಲಾ ವಿಷ.

ಸOವಿಧಾನಕೊಟ್ಟ ಮೊದಲ ಹಕ್ಕು
ನಮ್ಮೆಲ್ಲರ ಸಮಾನತೆ.
ಹೇಳಿ ಅತ್ಮೀಯರೆ,
ನಾವೆಲ್ಲರೂ ಸಮಾನರೇ?

- rukmini

13 Dec 2016, 01:35 pm

ಹೊಸ ಹೊಂಬೆಳಕು

ಹೊಸ ಹೊಂಬೆಳಕು
ಅಲ್ಲಲ್ಲ ಬರಿದೆ ಬೆಳಕು
ನಿಜ ನಗೆಯ ಸ್ವರೂಪ
ನೋವ ಜಯಿಸಿದ ಭಾವ ...
ಧರೆಗಿಳಿದ ವರ್ಷನು
ಸುರಿಸಿ ಅಮೃತ ಧಾರೆ
ಮರೆಸಿ ನಿನ್ನೆಲ್ಲ ನೋವು
ಸರಿಸಿದನೆ ಸಹಿಸಿದ ನೋವ ತೆರೆ ..
ಕ್ಷಮೆಯಿರಲಿ ಹೂಗಳೆ ನನ್ನಲಿ
ಸೈರಿಸುವಿರಿ ನಾನುಣಿಸುವ
ಭ್ರಮೆಯ ಭಾರ
ಅರಿಯದೆ ನಿಮ್ಮಂತರಾಳ
ಪ್ರತಿಯಾಗಿ ನೀವೀವಿರಿ
ಬರಿದೆ ಮುದವನು ,,,
ಬಿರಿದಿದೆ ಭಾವುಕ
ಹೃದಯದಾಳದ ಮನ
ಕಳಿಸಿದೆ ಕಣ್ಣೀರಧಾರೆ
ನಿಮ್ಮೊಡನೆ ಆತ್ಮನಿವೇದನೆಗೆ ..
ಮೇಘವೆ ,ವರ್ಷವೆ ವಂದನೆ
ಬಿಕ್ಕಿಸಿದೆ ಮನವನೆ
ತಂದೆ ಹಗುರ ಭಾವನೆ
ಕರುಣಾಳುವಿನ ಹರಿಕಾರ ನೀನೆ ...

- Bharavi

13 Dec 2016, 01:27 pm

ಅಮ್ಮ ತೋರುವ ದಾರಿ

ಭಯಪಡುವಾಗಲೂ ದಿಕ್ಕು ತೋಚದೆ ಕಂಗಲಾದಗಲೂ
ಅಮ್ಮನೆಂಬ ಮಮತೆಯ ಕೂಗು ಸದಾ ಜೊತೆಗಿದ್ದು ಕಾಪಾಡುವ ನೆರಳಾಗಿದ್ದರೆ
ಬದುಕೆ ಬಂಗಾರ, ಸತ್ಯ ಶೃಂಗಾರ
ನೋವ ನೆಲಳ ಮೀಟುವ ಮಹಾಪೂರ

-- ಬೀರು ದೇವರಮನಿ

- Beeru Devaramani

13 Dec 2016, 12:58 pm

ಶುಭೋದಯಕೆ ಸ್ವಾಗತ

ಚಿಂತಿ ಮಾಡಕೊಂತ ಯಾಕ ಕುಂತಿ..
ಜೀವನ ನೀ ನಡೆಸದೆ ಇದ್ದರೂ ನೀ ನಡೆಸಿದರೂ ತನ್ನ ಪಾಡಿಗೆ ಹಗಲಿರುಳ ತಳ್ಳಿ ನಡಿಯೋದ...
ಕಾಲಿಗಂಟಿಕೊಂಡ ಕಾಲ ಚಕ್ರ ನನ್ನ ನಿನ್ನ ಯಾವತ್ತು ಕಾಯೂದಿಲ್ಲ ...
ಮುಳ್ಳು ಬೇಲಿಗೆ ಮೈಲಿಗೆ ಅಂಟಿಕೊಂಡಿಲ್ಲ ...
ಬಿಸಿಲಿಗೆ ಬೆಂದ ಅರಳಿದ ಗುಲಾಬಿ ನಗುತ್ತಿದೆಯಲ್ಲ..
ಮುಳ್ಳು ಸಂಕಟಗಳಿಗೆ ಎದುರಾಗಿ ಬದುಕ ಸಾಗುತಲಿದೆ
ತಾಳಕೆ ತಕ್ಕಂತೆ ಹೆಜ್ಜೆ ಹಾಕಿ ಸುಂದರ ಬದುಕಿಗೆ ಸಾಕ್ಷಿಯಾದರೆ ಸಾಕು ಅದೇ ಸ್ವರ್ಗ
ನರಕಕ್ಕೆ ಕಿಚ್ಚು ಹತ್ತಿಸಿ ಬರುವ ಕಷ್ಟಗಳಿಗೆ ಬರೆ ಎಳೆದು ಕಳಿಸಿಬಿಡೋಣ....



-- ಬೀರು ದೇವರಮನಿ

- Beeru Devaramani

13 Dec 2016, 12:50 pm